Search
  • Follow NativePlanet
Share
» »7000 ಮರಗಳನ್ನು ಹೊಂದಿರುವ ಲೋದಿ ಗಾರ್ಡನ್‌ನಲ್ಲಿ ಏನೇನಿದೆ ಗೊತ್ತಾ?

7000 ಮರಗಳನ್ನು ಹೊಂದಿರುವ ಲೋದಿ ಗಾರ್ಡನ್‌ನಲ್ಲಿ ಏನೇನಿದೆ ಗೊತ್ತಾ?

ಹೊಸದಿಲ್ಲಿ ರೈಲ್ವೆ ನಿಲ್ದಾಣದಿಂದ 6.5 ಕಿ.ಮೀ ಮತ್ತು ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ 5 ಕಿ.ಮೀ ದೂರದಲ್ಲಿ ಲೋದಿ ಗಾರ್ಡನ್ ಲೋದಿ ರಸ್ತೆಯಲ್ಲಿದೆ. ಈ ಸಂರಕ್ಷಿತ ಸಂಕೀರ್ಣವು ಹಲವಾರು ಐತಿಹಾಸಿಕ ಸ್ಮಾರಕಗಳು, ಗೋರಿಗಳು ಮತ್ತು ಮಸೀದಿಗಳು, ಲೋದಿ ಮತ್ತು ಸಯ್ಯಿದ್ ರಾಜವಂಶಗಳಿಗೆ ಸೇರಿದೆ. ದೆಹಲಿಯಲ್ಲಿ ಭೇಟಿ ನೀಡುವ ಜನಪ್ರಿಯ ಸ್ಥಳಗಳಲ್ಲಿ ಇದು ಕೂಡ ಒಂದು.

 90 ಎಕರೆಯಲ್ಲಿರುವ ಉದ್ಯಾನವನ

90 ಎಕರೆಯಲ್ಲಿರುವ ಉದ್ಯಾನವನ

PC:Anupamg

ಲೋದಿ ಗಾರ್ಡನ್ ಇದು ದೆಹಲಿಯಲ್ಲಿರುವ ಉದ್ಯಾನವನ. ಸುಮಾರು 90 ಎಕರೆ ವ್ಯಾಪ್ತಿಯ ಜಾಗದಲ್ಲಿ ನಿರ್ಮಿಸಲಾಗಿದೆ. ಇದು ಭಾರತದ ಪುರಾತತ್ವ ಇಲಾಖೆಯ ಸಂರಕ್ಷಿತ ಪ್ರದೇಶವಾಗಿದೆ. ಲೋದಿ ಸಮಾಧಿ ಮತ್ತು ಮೊಹಮ್ಮದ್ ಷಾ ನ ಗೋರಿಗಳನ್ನು ಹೊಂದಿರುವ ಪ್ರಮುಖವಾದ ಸ್ಥಳವಾಗಿದೆ. ಈ ಗೋರಿಗಳನ್ನು ಹೊರತುಪಡಿಸಿ, ಬಾರ್ ಗುಂಬಜ್ ಮತ್ತು ಶೀಶ್ ಗುಂಬಜ್ ಗಳನ್ನು ಇಲ್ಲಿ ಕಾಣಬಹುದು.

7000 ಮರಗಳು

7000 ಮರಗಳು

PC:Vssun

ಸುಂದರವಾದ ಲೋದಿ ಉದ್ಯಾನವನ್ನು ಎರಡು ದೆಹಲಿ ಸುಲ್ತಾನರ ರಾಜವಂಶಗಳು, 15 ಮತ್ತು 16 ನೇ ಶತಮಾನಗಳಲ್ಲಿ ಸಯಯಿಡ್ಸ್ ಮತ್ತು ಲೋದಿಸ್ ನಿರ್ಮಿಸಿದರು. ಲೋದಿ ಗಾರ್ಡನ್ ಹಲವಾರು ಜಾತಿಗಳ 7000 ಮರಗಳನ್ನು ಹೊಂದಿದೆ. ಪ್ರತಿಯೊಂದೂ ಸರಿಯಾಗಿ ಲೇಬಲ್ ಮಾಡಿದೆ. ಇತ್ತೀಚೆಗೆ ಬೊನ್ಸೈ ಉದ್ಯಾನವನವನ್ನು ಈ ಉದ್ಯಾನವನಕ್ಕೆ ಸೇರಿಸಲಾಗಿದೆ. ಇದು ಬೋನ್ಸೈಗಳ ಅತ್ಯುತ್ತಮ ಆಯ್ಕೆಯಾಗಿದೆ . ಚಿಟ್ಟೆ ಸಂರಕ್ಷಣಾ ಕೇಂದ್ರ, ಗಿಡಮೂಲಿಕೆ ಉದ್ಯಾನ, ಲಿಲ್ಲಿ ಕೊಳ ಮತ್ತು ಗುಲಾಬಿ ಉದ್ಯಾನವನ್ನು ಇದು ಹೊಂದಿದೆ.

ಲೋದಿ ಉದ್ಯಾನವನ

ಲೋದಿ ಉದ್ಯಾನವನ

ಇಲ್ಲಿನ ಎಲ್ಲಾ ರಚನೆಗಳು 15 ನೇ ಶತಮಾನದ ಸಮಯದಲ್ಲಿ ಉತ್ತರ ಭಾರತದ ಪ್ರಮುಖ ಭಾಗವನ್ನು ಆಳುತ್ತಿದ್ದ ಲೋದಿ ಮತ್ತು ಸಯ್ಯಿದ್ ಸಾಮ್ರಾಜ್ಯ ಆಡಳಿತಗಾರರ ಅವಧಿಯ ಅದ್ಬುತವಾದ ವಾಸ್ತು ಶಿಲ್ಪವನ್ನು ಹೊಂದಿವೆ.. ಲೋದಿ ಉದ್ಯಾನವನಗಳು, ಸಫ್ದರ್ಜಂಗ್ ಗೋರಿ ಮತ್ತು ಖಾನ್ ಮಾರುಕಟ್ಟೆ ನಡುವೆ ಇದೆ. ಆರೋಗ್ಯ ಪ್ರಜ್ಞೆ ಹೊಂದಿರುವ ದೆಹಲಿಗರಿಗೆ ಇದೊಂದು ಅಚ್ಚುಮೆಚ್ಚಿನ ತಾಣ. ಅಲ್ಲದೇ, ಬೆಳಿಗ್ಗೆ ಮತ್ತು ಸಂಜೆ ಕಾಲ್ನಡಿಗೆಯಲ್ಲಿ ಈ ಉದ್ಯಾನವನದಲ್ಲಿ ಸುತ್ತಬಹುದು. ಇಲ್ಲಿರುವ ಕೆಲವು ಸಮಾಧಿಗಳ ವಿವರಗಳು ಹೀಗಿವೆ...

ಸಿಕಂದರ್ ಲೋದಿಯ ಸಮಾಧಿ

ಸಿಕಂದರ್ ಲೋದಿಯ ಸಮಾಧಿ

PC:IRAC

ಸಿಕಂದರ್ ನ ಈ ಸಮಾಧಿಯು 1517 ರಲ್ಲಿ ಅವನ ಮಗ ಇಬ್ರಾಹಿಂ ಲೋದಿಯಿಂದ ನಿರ್ಮಿಸಲ್ಪಟ್ಟಿತು. ಸರಳ ಆಯತಾಕಾರದ ಮಂದಿರವಾಗಿದ್ದು ಇದನ್ನು 1866 ರಲ್ಲಿ ಬ್ರಿಟಿಷರು ಪುನರುಜ್ಜೀವಿತಗೊಳಿಸಿದರು. ಬಾಬರ್ ಇಬ್ರಾಹಿಂ ಲೋದಿ ಸೋಲಿನ ವಿವರಗಳೊಂದಿಗಿನ ಒಂದು ಶಾಸನವನ್ನು ಇದರ ಮೇಲೆ ಬರೆಸಲಾಯಿತು.

 ಮೊಹಮ್ಮದ್ ಷಾನ ಗೋರಿ

ಮೊಹಮ್ಮದ್ ಷಾನ ಗೋರಿ

PC:Daderot

ಲೋದಿ ಉದ್ಯಾನವನದಲ್ಲಿ ಬಹಳ ಹಿಂದೆಯೇ ನಿರ್ಮಿಸಲಾದ ಗೋರಿಯಾಗಿದೆ. ಈ ಗೋರಿಯನ್ನು ಸಯ್ಯದ್ ರಾಜವಂಶದ ಕೊನೆಯ ದೊರೆ ಮೊಹಮ್ಮದ್ ಷಾ ಅವರ ಗೌರವಾರ್ಥವಾಗಿ 1444 ರಲ್ಲಿ ಅಲಿ-ಅ-ಉದ್-ದ್ದಿನ್ ಆಲಂ ಷಾ ಎಂಬವನು ನಿರ್ಮಿಸಿದ್ದನು.

ಬಾರಾ ಗುಂಬಜ್

ಬಾರಾ ಗುಂಬಜ್

PC : Daderot

ರಚನೆಯ ಹೆಸರಿನ ಅರ್ಥ ಒಂದು ದೊಡ್ಡ ಗುಮ್ಮಟ ಮತ್ತು ಪಕ್ಕದಲ್ಲಿ ಮೂರು ಗುಮ್ಮಟಾಕಾರದ ಮಸೀದಿಯ ಒಂದು ಪ್ರವೇಶ ಎಂದು ಅರ್ಥೈಸಲಾಗುತ್ತದೆ. ಇಲ್ಲಿನ ಗೊಮ್ಮಟ ಹಾಗೂ ಮಸೀದಿಗಳು ಸಿಕಂದರ್ ಲೋದಿ ಆಳ್ವಿಕೆಯಲ್ಲಿ 1494 ರಲ್ಲಿ ಕಟ್ಟಲಾಗಿತ್ತು.

ಶೀಶ್ ಗುಂಬಜ್

ಶೀಶ್ ಗುಂಬಜ್

PC: Daderot

ಶೀಶ್ ಗುಂಬಜ್ ನ ಅರ್ಥ ಗಾಜಿನ ಮಸೀದಿ (ಮಹಲು) ಇದರ ನಿರ್ಮಾಣಕ್ಕೆ ಗಾಜಿನ ಅಂಚುಗಳನ್ನು ಬಳಸಲಾಗಿದ್ದರಿಂದ ಈ ಹೆಸರು ಬಂದಿದೆ. ಈ ಗುಮ್ಮಟವು ಒಂದು ಕುಟುಂಬದ ಅವಶೇಷಗಳನ್ನು ಹೊಂದಿದೆ ಆದರೆ ಅದು ಯಾರಿಗೆ ಸಂಬಂಧಿಸಿದ್ದು ಎನ್ನುವುದರ ಬಗ್ಗೆ ಗುರುತುಗಳಿಲ್ಲ. ಶೀಶ್ ಗುಂಬಜ್ ಅನ್ನೂ ಕೂಡ ಸಿಕಂದರ್ ಆಳ್ವಿಕೆಯಲ್ಲಿಯೇ ಕಟ್ಟಲಾಗಿದೆ.

ತಲುಪುವುದು ಹೇಗೆ?

ಆಧುನಿಕ ವಿಮಾನ ನಿಲ್ದಾಣದೊಂದಿಗೆ ದೆಹಲಿಯು ಉತ್ತರ ಭಾರತದ ಪ್ರಮುಖ ಗೇಟ್ವೇ ನಗರವಾಗಿದೆ. ಪ್ರಪಂಚದಲ್ಲಿನ ಎಲ್ಲಾ ಪ್ರಮುಖ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ದೆಹಲಿಯ ಮೂಲಕ ಹಾರುತ್ತವೆ. ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಕೇಂದ್ರ ದೆಹಲಿಯ 23 ಕಿಮೀ ನೈರುತ್ಯದಲ್ಲಿದೆ ಮತ್ತು ಪಾಲಮ್ನಲ್ಲಿನ ದೇಶೀಯ ಟರ್ಮಿನಲ್ ಅಂತರರಾಷ್ಟ್ರೀಯ ಟರ್ಮಿಲ್‌ನಿಂದ 5 ಕಿಮೀ ದೂರದಲ್ಲಿದೆ.

ದೆಹಲಿಯು ಭಾರತದ ಎಲ್ಲ ಭಾಗಗಳಿಗೆ ಎಕ್ಸ್ಪ್ರೆಸ್ ರೈಲುಗಳನ್ನು ಹೊಂದಿರುವ ಭಾರತೀಯ ರೈಲು ಜಾಲದ ಕೇಂದ್ರವಾಗಿದೆ. ನಗರವು ನವದೆಹಲಿ ಮತ್ತು ಹಳೆಯ ದೆಹಲಿಯಲ್ಲಿ ಎರಡು ಪ್ರಮುಖ ರೈಲು ನಿಲ್ದಾಣಗಳನ್ನು ಹೊಂದಿದೆ. ಕೊನ್ನಾಟ್ ಪ್ಲೇಸ್ ಮತ್ತು ಮುಖ್ಯ ದೆಹಲಿ ನಿಲ್ದಾಣದ ವಾಕಿಂಗ್ ಅಂತರದಲ್ಲಿ ಹೊಸ ದೆಹಲಿ ನಿಲ್ದಾಣವು ಕೊನಾಟ್ ಪ್ಲೇಸ್ನಿಂದ ಸುಮಾರು 7 ಕಿ.ಮೀ ದೂರದಲ್ಲಿದೆ. ದೆಹಲಿಯು ದೇಶದ ಎಲ್ಲಾ ಭಾಗಗಳಿಗೆ ಎಕ್ಸ್ಪ್ರೆಸ್ ರೈಲುಗಳನ್ನು ಒದಗಿಸುತ್ತದೆ.

ಉತ್ತರಪ್ರದೇಶ, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ತಾನದ ಎಲ್ಲಾ ಪ್ರಮುಖ ಸ್ಥಳಗಳಿಂದ ಬಸ್ಸುಗಳು ದೆಹಲಿಗೆ ಬರಲು ಲಭ್ಯವಿದೆ. ಬೇಸಿಗೆಯ ತಿಂಗಳುಗಳಲ್ಲಿ ಹವಾನಿಯಂತ್ರಿತ ಬಸ್‌ಗಳನ್ನು ಶಿಫಾರಸು ಮಾಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more