Search
  • Follow NativePlanet
Share
» »ದಶಾವತಾರ ದೇವಾಲಯ ಎಲ್ಲಿದೆ ಗೊತ್ತ?

ದಶಾವತಾರ ದೇವಾಲಯ ಎಲ್ಲಿದೆ ಗೊತ್ತ?

ದಿಯೋಗಡ್ ಪಟ್ಟಣವು ಉತ್ತರ ಪ್ರದೇಶ ರಾಜ್ಯಕ್ಕೆ ಸಂಬಂಧಿಸಿದೆ. ಇದು ಮಧ್ಯ ಪ್ರದೇಶದಲ್ಲಿನ ಗ್ವಾಲಿಯರ್ ನಗರಕ್ಕೆ ಸಮೀಪದಲ್ಲಿಯೇ ಇದೆ. ಈ ಪಟ್ಟಣವು ಗುಪ್ತರ ಕಾಲದ ಸ್ಮಾರಕಗಳಿಗೆ ಪ್ರಸಿದ್ಧಿ ಹೊಂದಿದೆ. ಇದರ ಹಿಂದೆ ಇರುವ ಬೆಟ್ವಾ ನದಿ, ಅಲ್ಲಿನ ಕೋಟೆ,

By Sowmyabhai

ದಿಯೋಗಡ್ ಪ್ರವಾಸವು ಪ್ರವಾಸಿಗರಿಗೆ ಪುರಾತನವಾದ ಸ್ಮಾರಕಗಳು, ದೇವಾಲಯಗಳನ್ನು ಕಾಣಬಹುದಾಗಿದೆ. ಇಲ್ಲಿರುವ ದಶಾವತಾರ ದೇವಾಲಯವು ದೇಶದಲ್ಲಿಯೇ ಪ್ರಸಿದ್ಧವಾದುದು. ಈ ದೇವಾಲಯವು ಪ್ರಸ್ತುತ ಶಿಥಿಲಾವಸ್ಥೆಯಲ್ಲಿದ್ದು, ಅನೇಕ ದೇವರ ವಿಗ್ರಹಗಳನ್ನು ಇಲ್ಲಿ ಕಾಣಬಹುದಾಗಿದೆ. ಹಾಗೆಯೇ ಇಲ್ಲಿ ದಿಯೋಗಡ್ ಕೋಟೆ ಮತ್ತೊಂದು ಪ್ರಮುಖವಾದ ಆಕರ್ಷಣೆ ಎಂದೇ ಹೇಳಬಹುದು. ಇದನ್ನು ಒಂದು ಕಾಲದಲ್ಲಿ ಕೀರ್ತಿಗಿರಿ ದುರ್ಗ ಎಂದು ಕರೆಯುತ್ತಿದ್ದರು. ಕೋಟೆಯ ಸಮೀಪದಲ್ಲಿ ಅನೇಕ ಜೈನ ದೇವಾಲಯಗಳು ಕೂಡ ಇವೆ. ಇಲ್ಲಿ ದಿಯೋಗಡ್ ಆರ್ಕಿಯಾಲಜಿಕಲ್ ಮ್ಯೂಸಿಯಂ ಕೂಡ ಪ್ರತ್ಯೇಕವಾಗಿ ಕಾಣಬಹುದು. ಹೀಗೆ ಎಷ್ಟೋ ಪ್ರವಾಸಿ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದಾಗಿದೆ.

ದಿಯೋಗಡ್ ಪಟ್ಟಣವು ಉತ್ತರ ಪ್ರದೇಶ ರಾಜ್ಯಕ್ಕೆ ಸಂಬಂಧಿಸಿದೆ. ಇದು ಮಧ್ಯ ಪ್ರದೇಶದಲ್ಲಿನ ಗ್ವಾಲಿಯರ್ ನಗರಕ್ಕೆ ಸಮೀಪದಲ್ಲಿಯೇ ಇದೆ. ಈ ಪಟ್ಟಣವು ಗುಪ್ತರ ಕಾಲದ ಸ್ಮಾರಕಗಳಿಗೆ ಪ್ರಸಿದ್ಧಿ ಹೊಂದಿದೆ. ಇದರ ಹಿಂದೆ ಇರುವ ಬೆಟ್ವಾ ನದಿ, ಅಲ್ಲಿನ ಕೋಟೆ, ಇನ್ನು ಅನೇಕ ಜೈನ ಹಾಗು ಹಿಂದೂ ಕ್ಷೇತ್ರಗಳು ಈ ಪಟ್ಟಣಕ್ಕೆ ಮತ್ತಷ್ಟು ಐತಿಹಾಸಿಕ ಸ್ಥಳಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ.

1.ಘಾಟ್‍ಗಳು, ದಿಯೋಗಡ್

1.ಘಾಟ್‍ಗಳು, ದಿಯೋಗಡ್

PC:byron aihara

ದಿಯೋಗಡ್‍ನಲ್ಲಿನ ಬೆಟ್ವಾ ನದಿ ತೀರದಲ್ಲಿನ ಮೂರು ಪ್ರಧಾನವಾದ ಘಾಟ್‍ಗಳಿವೆ. ಅವುಗಳೆಂದರೆ ಸಹಾರ ಘಾಟ್, ರಾಜ್ ಘಾಟ್, ಸಿದ್ಧಿ ಗುಫಾ ಮಾರ್ಗದಲ್ಲಿ ಘಾಟ್.

2.ಸಿದ್ಧಿ ಕಿ ಗುಫಾ, ದೇವ್ ಘರ್

2.ಸಿದ್ಧಿ ಕಿ ಗುಫಾ, ದೇವ್ ಘರ್

PC: byron aihara

ಸಿದ್ಧಿ ಕಿ ಗುಫಾ ಅಷ್ಟು ಸಾಧಾರಣವಾಗಿ ಇರುತ್ತದೆ. ಸಿದ್ಧಿ ಗುಹೆಯಲ್ಲಿ ಋಷಿಗಳು ಇರುತ್ತಿದ್ದರು. ಈ ಗುಹೆಯ ಮೂಲಕ ಮೈದಾನ ಪ್ರದೇಶದಿಂದ ನದಿಗೆ ಸೇರಿಕೊಳ್ಳಬಹುದು. ಈ ಗುಹೆಯ ಕಲ್ಲಿನ ಭಾಗದಲ್ಲಿ ಮಹಿಷಾಸುರ ಮರ್ದಿನಿ ಶಿಲ್ಪ ಕೂಡ ಕೆತ್ತನೆ ಮಾಡಿದ್ದಾರೆ. ಈ ಗುಹಾ ಮಾರ್ಗದಿಂದಲೇ ಘಾಟ್‍ಗೆ ತೆರಳಬೇಕು.

3.ನಹೋರ್ ಘಾಟ್, ದಿಯೋಗಡ್

3.ನಹೋರ್ ಘಾಟ್, ದಿಯೋಗಡ್

PC: Ed Sentner

ಬೆಟ್ವಾ ನದಿ ಸಮೀಪದಲ್ಲಿ ನಹೋರ್ ಘಟ್ ಇದೆ. ಈ ಪ್ರದೇಶದಲ್ಲಿ ಗುಪ್ತರ ಕಾಲದ ಅನೇಕ ಶಿಲ್ಪಗಳು, ಶಾಸನಗಳು ಕಾಣಿಸುತ್ತವೆ. ಮೂರು ಘಟ್‍ನಲ್ಲಿ ನಹೋರ್ ಘಾಟ್ ಚೆನ್ನಾಗಿ ಪ್ರಸಿದ್ಧಿ ಹೊಂದಿದೆ. ಇಲ್ಲಿ ಅನೇಕ ದೇವತಾ ಮೂರ್ತಿಗಳು, ಲಿಂಗಗಳು ಕೂಡ ದರ್ಶಿಸಿಸಬಹುದು.

4.ರಾಜ್ ಘಾಟ್, ದಿಯೋಗಡ್

4.ರಾಜ್ ಘಾಟ್, ದಿಯೋಗಡ್

PC: Malaiya

ರಾಜ್ ಘಾಟ್, ದೆವ್ ಘರ್‍ನಲ್ಲಿ ಮೂರು ಘಟ್ಟದಲ್ಲಿ ಒಂದು. ಇದರ ಜೊತೆ ಹೋದರೆ ಕೂಡ ಬೆಟ್ವಾ ನದಿ ಸೇರಿಕೊಳ್ಳಬಹುದು. ರಾಜ್ ಘಾಟ್ ಹೌಸ್‍ನಲ್ಲಿ ಅನೇಕ ಶಿಲ್ಪಗಳು ಗುಪ್ತ ಕಾಲದ್ದು ಎಂದು ನೋಡಬಹುದು. ಈ ಘಾಟ್‍ಗೆ ಆರ್ಕಿಯಾಲಜಿಕಲ್ ಪ್ರಾಧಾನ್ಯತೆ ಇದೆ.

5.ದಿಯೋಗಡ್ ಆರ್ಕಿಯಾಲಾಜಿಕಲ್ ಮ್ಯೂಸಿಯಂ, ದಿಯೋಗಡ್

5.ದಿಯೋಗಡ್ ಆರ್ಕಿಯಾಲಾಜಿಕಲ್ ಮ್ಯೂಸಿಯಂ, ದಿಯೋಗಡ್

PC:: jess n

ಗುಪ್ತರ ಕಾಲದಲ್ಲಿ ದಿಯೋಗಡ್ ವೈಭವವಾಗಿ ಇತ್ತು ಎಂದು ಅಲ್ಲಿಗೆ ಹೋದ ಹುಡುಕಾಟದಲ್ಲಿನ ಆರ್ಕಿಯಾಲಾಜಿಕಲ್ ಅಧಿಕಾರಿಗಳು ಧೃಡೀಕರಿಸಿದ್ದಾರೆ. ಈ ಹುಡುಕಾಟದಲ್ಲಿ ಗುಪ್ತರ ರಾಜರ ಕಾಲದ ವೈಭವ ಚಿಹ್ನೆಗಳು ಬೆಳಕಿಗೆ ಬಂದಿವೆ. ಅವುಗಳೆಲ್ಲವನ್ನು ಅಲ್ಲಿನ ಮ್ಯೂಸಿಯಂನಲ್ಲಿ ಭದ್ರಪಡಿಸಿದ್ದಾರೆ.

6.ಜೈನ ದೇವಾಲಯ

6.ಜೈನ ದೇವಾಲಯ

PC: Ed Sentner

ಜೈನ ದೇವಾಲಯ ದಿಯೋಗಡ್ ಕೋಟೆಗೆ ಸಮೀಪದಲ್ಲಿ, ಬೆಟ್ವಾ ನದಿ ತೀರದಲ್ಲಿದೆ. ಇಲ್ಲಿ ನಿರ್ಮಾಣ ಮಾಡಿದ ದೇವಾಲಯವನ್ನು ಕೂಡ ಕ್ರಿ.ಶ 8 ರಿಂದ 9 ನೇ ಶತಮಾನದ ಕಾಲದ್ದು ಎಂದು ಹೇಳುತ್ತಾರೆ. ಈ ದೇವಾಲಯದ ಶಿಲ್ಪಗಳ ಶೈಲಿ ಪುರಾತನವಾದ ಭಾರತ ದೇಶದ ಶಿಲ್ಪ ಕಲೆಗಳಿಗೆ ನಿದರ್ಶನವಾಗಿರುತ್ತದೆ. ದೇವಾಲಯದ ಗೋಡೆಯ ಮೇಲೆ ಅನೇಕ ಮೂರ್ತಿಗಳು ಕೆತ್ತನೆ ಮಾಡಿದ್ದಾರೆ.

7.ಕೀರ್ತಿಗಿರಿ ದುರ್ಗಾ ಕೋಟೆ, ದಿಯೋಗಡ್

7.ಕೀರ್ತಿಗಿರಿ ದುರ್ಗಾ ಕೋಟೆ, ದಿಯೋಗಡ್

PC: telugu native planet

ಕೀರ್ತಿಗಿರಿ ದುರ್ಗಾ ಕೋಟೆಯನ್ನು ಚಂಡೇಲಾ ರಾಜನಾದ ಕೀರ್ತಿ ವರ್ಮನ್ ಕ್ರಿ.ಶ 1057ರಲ್ಲಿ ನಿರ್ಮಾಣ ಮಾಡಿದರು. ಕೋಟೆಯ ಒಳಗೆ, ಹೊರಗೆ ಮಧ್ಯಯುಗದ ಅನೇಕ ಜೈನ ದೇವಾಲಯಗಳು (31 ಜೈನ ದೇವಾಲಯಗಳು) ಕಾಣಿಸುತ್ತವೆ. ಕೋಟೆಗೆ ಹಾತಿ ದರ್ವಾಜಾ, ದೆಹಲಿ ದರ್ವಾಜಾ ಎಂಬ 2 ಪ್ರವೇಶಗಳು ಕೂಡ ಇವೆ.

8.ದಶಾವತಾರ ದೇವಾಲಯ, ದಿಯೋಗಡ್

8.ದಶಾವತಾರ ದೇವಾಲಯ, ದಿಯೋಗಡ್

PC: telugu native planet

ದಿಯೋಗಡ್‍ನಲ್ಲಿನ ದಶಾವತಾರ ದೇವಾಲಯವು ದೇಶದಲ್ಲಿನ ಪುರಾತನವಾದ ಹಾಗು ಚಾರಿತ್ರಿಕವಾದ ದೇವಾಲಯ ಎಂದು ಭಾವಿಸುತ್ತಾರೆ. ಗುಪ್ತರ ಕಾಲದಲ್ಲಿ ನಿರ್ಮಾಣ ಮಾಡಿದ ಈ ದೇವಾಲಯದಲ್ಲಿ ವಿಷ್ಣು ಮೂರ್ತಿಯು ನೆಲೆಸಿದ್ದಾನೆ. ಇದರಲ್ಲಿ ವಿಷ್ಣು ಮೂರ್ತಿ 10 ಅವತಾರಗಳನ್ನು, ಪ್ರಾಂಗಣದಲ್ಲಿ ಗಂಗಾ, ಯಮುನಾ ದೇವತೆಗಳ ಕೆತ್ತನೆಯ ಶಿಲ್ಪಗಳನ್ನು ಕೂಡ ಕಾಣಬಹುದು. ಉತ್ತರ ಭಾರತ ದೇಶದಲ್ಲಿ ಮೊದಲು ಈ ದೇವಾಲಯದ ಶಿಖರವನ್ನು ನಿರ್ಮಾಣ ಮಾಡಿದರು.

9. ಹೇಗೆ ತಲುಪಬೇಕು?

9. ಹೇಗೆ ತಲುಪಬೇಕು?

PC:Vishal Khare

ವಾಯು ಮಾರ್ಗದ ಮೂಲಕ: ದಿಯೋಗಡ್‍ನ ಸಮೀಪದಲ್ಲಿರುವ ವಿಮಾನ ನಿಲ್ದಾಣವೆಂದರೆ ಅದು ಗ್ವಾಲಿಯರ್ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣವು ದಿಯೋಗಡ್‍ಗೆ ಸುಮಾರು 235 ಕಿ.ಮೀ ದೂರದಲ್ಲಿದೆ. ದೇಶದಲ್ಲಿನ ಅನೇಕ ಪ್ರಧಾನವಾದ ನಗರಗಳಿಗೆ ಸಂಪರ್ಕ ಸಾಧಿಸುತ್ತದೆ. ಇಲ್ಲಿಂದ ಕ್ಯಾಬ್ ಅಥವಾ ಖಾಸಗಿ ವಾಹನದಲ್ಲಿ ಪ್ರಯಾಣಿಸಿ ದೇವ್ ಘರ್‍ಗೆ ಸೇರಿಕೊಳ್ಳಬಹುದು.

ರೈಲ್ವೆ ಮಾರ್ಗದ ಮೂಲಕ
ದಿಯೋಗಡ್‍ಗೆ ಸಮೀಪದಲ್ಲಿ ರೈಲ್ವೆ ನಿಲ್ದಾಣ ಲಲಿತ್ಪೂರ್ ರೈಲ್ವೆ ನಿಲ್ದಾಣ. ದೆಹಲಿ, ಪಾಟ್ನಾ, ಅಲಹಾಬಾದ್, ಮುಂಬೈ ಇನ್ನು ಅನೇಕ ನಗರಗಳಿಂದ ರೈಲು ಇಲ್ಲಿಗೆ ಭೇಟಿ ನೀಡುತ್ತಿರುತ್ತವೆ.

ರಸ್ತೆ ಮಾರ್ಗದ ಮೂಲಕ
ದಿಯೋಗಡ್‍ಗೆ ಸೂಕ್ತವಾದ ರಸ್ತೆ ಮಾರ್ಗವಿದೆ. ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಸಮೀಪದ ಪ್ರದೇಶದಿಂದ ದಿನನಿತ್ಯವು ನಡೆಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X