Search
  • Follow NativePlanet
Share
» »ಕರ್ನಾಟಕದಲ್ಲಿಯ ಚಲನಚಿತ್ರದ ಸೆಟ್ಟಿಂಗ್ ತರಹದ ತಾಣಗಳನ್ನು ನೋಡೋಣ ಬನ್ನಿ!

ಕರ್ನಾಟಕದಲ್ಲಿಯ ಚಲನಚಿತ್ರದ ಸೆಟ್ಟಿಂಗ್ ತರಹದ ತಾಣಗಳನ್ನು ನೋಡೋಣ ಬನ್ನಿ!

ಚಲನಚಿತ್ರ ಸೆಟ್ಟಿಂಗ್ ನ ಅನುಭವವನ್ನು ಕೊಡುವ ಕರ್ನಾಟಕದ ಪ್ರವಾಸಿ ತಾಣಗಳು

ಚಲನಚಿತ್ರಕ್ಕೆ ಸೆಟ್ಟಿಂಗ್ ಮಾಡುವುದು ಸಾಮಾನ್ಯ ಸಂಗತಿ. ಕರ್ನಾಟಕದಲ್ಲಿ ನೀವು ಬೆಂಗಳೂರಿನಲ್ಲಿರಿ ಅಥವಾ ಉಡುಪಿಯಲ್ಲಿರಿ ಅಥವಾ ಎಲ್ಲಿಯೇ ಇರಿ ಕೆಲವು ಸ್ಥಳಗಳು ಚಿತ್ರಗಳ ಸೆಟ್ಟಿಂಗ್ ಮಾದರಿಯಲ್ಲಿರುತ್ತವೆ. ಇವು ಕೇವಲ ಸುಂದರವಾದ ಭೂದೃಶ್ಯಗಳು ಮಾತ್ರವಾಗಿರದೆ ನೈಸರ್ಗಿಕ ಸೌಂದರ್ಯಗಳನ್ನೂ ಒಳಗೊಂಡಿದ್ದು ಕರ್ನಾಟಕವನ್ನು ಪ್ರವಾಸೀ ಹಾಟ್ ಸ್ಪಾಟ್ ಮಾಡಿವೆ. ಭಾರತೀಯ ಚಲನಚಿತ್ರಗಳಿಗೆ ಅನುಕೂಲವಾಗುವಂತಹ ಹಲವಾರು ಸ್ಥಳಗಳನ್ನು ಕರ್ನಾಟಕವು ಹೊಂದಿದ್ದು ಇವು ವಾರಾಂತ್ಯದಲ್ಲಿ ಭೇಟಿ ಕೊಡಲು ಸೂಕ್ತವಾಗಿರುವ ತಾಣಗಳೂ ಆಗಿವೆ.

ಇಲ್ಲಿರುವ ಐದು ತಾಣಗಳು ಚಲನಚಿತ್ರಗಳಲ್ಲಿ ನಾವು ನೋಡುವ ದೃಶ್ಯಗಳ ತುಣುಕುಗಳಂತೆ ಕಾಣುತ್ತವೆ.

ಗುಂಡ್ಲುಪೇಟೆ

ಗುಂಡ್ಲುಪೇಟೆ

ಗುಂಡ್ಲುಪೇಟೆಯು ತನ್ನ ನೈಸರ್ಗಿಗೆಕ ಸೌಂದರ್ಯತೆ ಮತ್ತು ಐತಿಹಾಸಿಕ ಮಹತ್ವಗಳಿಂದಾಗಿ ಭಾರತಾದ್ಯಂತದ ಪ್ರವಾಸಿಗರನ್ನು ತನ್ನೆಡೆಗೆ ಆಕರ್ಷಿಸುತ್ತದೆ. ಕೇರಳ ಗಡಿಯಲ್ಲಿರುವ ಈ ಸ್ಥಳವು ಅತ್ಯಂತ ಹೆಸರುವಾಸಿಯಾದ ಪ್ರವಾಸಿ ತಾಣವಾಗಿದೆ. ಇಲ್ಲಿ ಹಲವಾರು ಚಲನಚಿತ್ರ ಮತ್ತು ಟಿ.ವಿ ಧಾರವಾಹಿಗಳನ್ನು ಈ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ. ಗುಂಡ್ಲುಪೇಟೆಯು ಸುಂದರವಾದ ವಿಶಾಲವಾದ ಪ್ರದೇಶಗಳಲ್ಲಿ ಮಾರಿಗೋಲ್ಡ್ ಮತ್ತು ಸೂರ್ಯಕಾಂತಿ ತೋಟಗಳನ್ನು ಹೊಂದಿದೆ. ನೀವು ಸರಿಯಾದ ಋತುವಿನಲ್ಲಿ ಅಲ್ಲಿಗೆ ಹೋದರೆ ನೀವು ಪ್ರತಿ ಮೂಲೆಯಲ್ಲೂ ರೀಲ್‌ಗಳನ್ನು ತಯಾರಿಸುವಂತೆ ಅನಿಸುತ್ತದೆ. ಮತ್ತು ನೀವು ಎಲ್ಲೋ ಸಿನೇಮಾ ಸೆಟ್ಟಿಂಗ್ ಗೆ ಬಂದ ಅನುಭವವನ್ನುಂಟು ಮಾಡುತ್ತದೆ. ಈ ಸ್ಥಳಗಳು ನಿಮ್ಮ ಇನ್ಸ್ಟಾಗ್ರಾಂ ಪ್ರೊಫ಼ೈಲ್ ಗೆ ಉತ್ತಮ ಫೋಟೊಗಳನ್ನು ನೀಡುತ್ತದೆ.

ಇಲ್ಲಿಗೆ ಭೇಟಿಗೆ ಉತ್ತಮ ಸಮಯ: ಜೂನ್ ನಿಂದ ಸೆಪ್ಟಂಬರ್

 ಯಾಣ

ಯಾಣ

ಸಿನೇಮಾ ಸೆಟ್ಟಿಂಗ್ ನ ಅನುಭವ ನೀಡುವ ಇನ್ನೊಂದು ಅತ್ಯುತ್ತಮವಾದ ಸ್ಥಳವೆಂದರೆ ಅದು ಯಾಣ. ಕರ್ನಾಟಕದ ಇನ್ನೊಂದು ಸಣ್ಣ ಹಳ್ಳಿಯಾಗಿರುವ ಇದು ಸ್ವಚ್ಚತೆಗೆ ಹೆಸರುವಾಸಿಯಾಗಿದೆ ಮತ್ತು ಎರಡು ಕಲ್ಲಿನ ರಚನೆಗಳನ್ನು ಇಲ್ಲಿ ಕಾಣಬಹುದಾಗಿದ್ದು, ಯಾಣದ ಈ ಬಂಡೆಗಳನ್ನು . ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರವೆಂಬ ಹೆಸರಿನಿಂದ ಕರೆಯಲ್ಪಡುತ್ತವೆ. ಈ ಎರಡು ಸ್ಫಟಿಕದಂತಹ ಏಕಶಿಲೆಗಳು ಹಿಂದೂ ಭಕ್ತರು ಮತ್ತು ಸಾಹಸಿಗಳ ಗಮನ ಸೆಳೆಯುತ್ತಿವೆ. ಗೋಕರ್ಣದಿಂದ 50 ಕಿಮೀ ದೂರದಲ್ಲಿರುವ ಈ ಸ್ಥಳದ ಪ್ರಮುಖ ಆಕರ್ಷಣೆಯಾಗಿದ್ದು, ಇದು ಯಾವುದೇ ಮಾಲಿನ್ಯವನ್ನು ಹೊಂದಿಲ್ಲ ಮತ್ತು ಆದ್ದರಿಂದ ಇದು ಪಿಕ್ನಿಕ್, ವಿಶ್ರಾಂತಿ ಅಥವಾ ಛಾಯಾಗ್ರಹಣಕ್ಕೆ ಸೂಕ್ತವಾದ ಸ್ಥಳವಾಗಿದೆ.

ಭೇಟಿ ನೀಡಲು ಉತ್ತಮ ಸಮಯ: ಅಕ್ಟೋಬರ್ ನಿಂದ ಜನವರಿ.

ಹೆರಿಟೇಜ್ ವೈನರಿ, ರಾಮನಗರ

ಹೆರಿಟೇಜ್ ವೈನರಿ, ರಾಮನಗರ

ಇನ್ನೊಂದು ನಯನಮನೋಹರ ತಾಣವೆಂದರೆ ರಾಮನಗರದಲ್ಲಿರುವ ಮತ್ತು ಹೆಚ್ಚು ಪ್ರಚಲಿತ ಹೆರಿಟೇಜ್ ವೈನರಿಯಾಗಿದ್ದು, ಇದು ಬೆಂಗಳೂರಿನಿಂದ ಸುಮಾರು 60 ಕಿಮಿ ದೂರದಲ್ಲಿದೆ. ಇಲ್ಲಿ ಹಲವಾರು ಚಟುವಟಿಕೆಗಳನ್ನು ನೀವು ಮಾಡಬಹುದಾಗಿದ್ದು ಇವುಗಳ ಜೊತೆಗೆ ದ್ರಾಕ್ಷಿ ತೋಟಗಳ ಪ್ರಯಾಣ ಮಾಡಬಹುದಾಗಿದೆ. ವೈನರಿ ಟೂರ್‌ಗಳನ್ನು ಒಳಗೊಂಡಂತೆ ಈ ಸ್ಥಳದಲ್ಲಿ ನೀವು ಮಾಡಬಹುದಾದ ಹಲವು ಚಟುವಟಿಕೆಗಳಿವೆ, ಅವುಗಳು ತಯಾರಿಸಿದ ವಿವಿಧ ರೀತಿಯ ವೈನ್‌ಗಳನ್ನು ಮಾಡುವ ವಿಧಾನಗಳನ್ನು ನೋಡಲು ಅನುಮತಿಸುವ ರುಚಿಯ ಸೆಷನ್‌ಗಳನ್ನು ಒಳಗೊಂಡಿದ್ದು, ಇಲ್ಲಿ ನಿಮಗೆ ರುಚಿ ನೋಡಲು ಅವಕಾಶ ಮಾಡಿಕೊಡುತ್ತಾರೆ. ಇಲ್ಲಿ ಕಡು ವೈನ್ ಅನ್ನು ಮುಖ್ಯವಾಗಿ ತಯಾರಿಸಲಾಗುತ್ತದೆ. ಇಲ್ಲಿಯ ಅತ್ಯುತ್ತಮವಾದ ವಿಷಯವೆಂದರೆ ಭಾರತದಲ್ಲಿ ಕರ್ನಾಟಕವು ಒಟ್ಟು 14% ಹುಲಿಗಳ ಸಂಖ್ಯೆಯನ್ನು ಹೊಂದಿರುವುದರಿಂದ ಇದಕ್ಕಾಗಿ ಇಲ್ಲಿಯ ಲಾಭದ ಕೆಲವು ಭಾಗವನ್ನು ಈ ಅಭಯಾರಣ್ಯಗಳಲ್ಲಿ ವಿನಿಯೋಗಿಸುತ್ತಾರೆ. ಪಾರಂಪರಿಕ ವೈನರಿ ಸುಲಾ ಅಡಿಯಲ್ಲಿ ಬರುತ್ತದೆ ಎಂಬುದು ತಿಳಿದುಕೊಳ್ಳಬೇಕಾದ ಸಂಗತಿ.

ಶಿವಮೊಗ್ಗ

ಶಿವಮೊಗ್ಗ

ಶಿವಮೊಗ್ಗ ಚಲನಚಿತ್ರ ಚಿತ್ರೀಕರಣಕ್ಕೆ ಸೂಕ್ತವಾದ ಅತ್ಯಂತ ಸೂಕ್ತವಾದ ಸ್ಥಳವಾಗಿದೆ. ಶಿವಮೊಗ್ಗವು ಹಲವಾರು ಪಾರಂಪರಿಕ ಕಟ್ಟಡಗಳು ಮತ್ತು ಸ್ಥಳಗಳನ್ನು ಹೊಂದಿದ್ದು, ಇವು ಸಿನೇಮ ಚಿತ್ರೀಕರಣ ಮಾಡಲು ಉಪಯೋಗಿಸಬಹುದಾದಂತವುಗಳಾಗಿವೆ. ಈ ಸ್ಥಳವು ಅತ್ಯಂತ ಸುಂದರವಾಗಿದ್ದು ಇದು ಹಲವಾರು ಹಚ್ಚ ಹಸುರಿನ ಸ್ಥಳಗಳು ಮತ್ತು ಸರೋವರಗಳನ್ನು ಹೊಂದಿದ್ದು ಈ ಸ್ಥಳವನ್ನು ಸಿನೆಮ ಅಥವಾ ಮಾಲ್ಗುಡಿ ಡೇಸ್ ನಂತಹ ಟಿ.ವಿ ಧಾರಾವಾಹಿಗಳ ಚಿತ್ರಿಕರಣಕ್ಕೆ ಆದರ್ಶಪ್ರಾಯವಾಗಿದೆ. ಜಗತ್ಪ್ರಸಿದ್ದ ಜೋಗ ಜಲಪಾತವು ಈ ಸ್ಥಳದಲ್ಲಿಯೇ ಇದ್ದು ಈ ಸ್ಥಳದಲ್ಲಿ ಹಲವಾರು ಚಿತ್ರಗಳ ಚಿತ್ರೀಕರಣ ಮಾಡಾಲಾಗಿರುವುದನ್ನು ನಾವು ಕಾಣಬಹುದಾಗಿದೆ.

ಈ ಸ್ಥಳಕ್ಕೆ ಭೇಟಿ ಕೊಡಲು ಸೂಕ್ತ ಸಮಯ ಅಕ್ಟೋಬರ್ ನಿಂದ ಮಾರ್ಚ್.

ಮಿರ್ಜಾನ್ ಕೋಟೆ

ಮಿರ್ಜಾನ್ ಕೋಟೆ

ಮಿರ್ಜಾನ್ ಕೋಟೆಯು ಕರ್ನಾಟಕದ ಗೋಕರ್ಣಾದಿಂದ ಸುಮಾರು 21 ಕಿ.ಮೀ ದೂರದಲ್ಲಿರುವ ಸುಂದರವಾದ ಬೆಟ್ಟದ ಮೇಲೆ ನಿರ್ಮಿತವಾಗಿದ್ದು, ಒಂದು ಅತ್ಯಂತ ಪ್ರಸಿದ್ದ ಪ್ರವಾಸಿ ಆಕರ್ಷಣೆಯೆನಿಸಿದೆ. ಈ ಸ್ಥಳಕ್ಕೆ ಜಗತ್ತಿನಾದ್ಯಂತದ ಹಲವಾರು ಸಂಖ್ಯೆಯಲ್ಲಿ ಸಂದರ್ಶಕರು ಭೇಟಿ ನೀಡುತ್ತಾರೆ. ಈ ಕೋಟೆಯು ದಟ್ಟವಾದ ಕಾಡುಗಳಿಂದ ಆವೃತವಾಗಿದ್ದು ಟ್ರಕ್ಕಿಂಗ್ ಮತ್ತು ವನ್ಯಜೀವು ಛಾಯಾಗ್ರಹಣ ನಡೆಸಲು ಅತ್ಯಂತ ಸೂಕ್ತವಾದ ಸ್ಥಳವಾಗಿದೆ ಅಲ್ಲದೆ ಈ ಸ್ಥಳವು ಚಲನಚಿತ್ರಕ್ಕೆ ಹಾಕಿದ ಸೆಟ್ಟಿಂಗ್ ನಂತೆ ಕಾಣುತ್ತದೆ. ಈ ಕೋಟೆಯ ಸಮೀಪದಲ್ಲಿ ಜಲಪಾತಗಳಿದ್ದು, ಅವುಗಳಲ್ಲಿ ಕೆಲವು ಒಂದಕ್ಕೊಂದು ಅತೀ ಸಮೀಪದಲ್ಲಿದ್ದು, ಇಲ್ಲಿಗೆ ನೀವು ಕಾಲು ಒದ್ದೆ ಮಾಡಿಕೊಳ್ಳದೇ ಅಥವಾ ಯಾವುದೇ ಗಲೀಜು ಮಾಡಿಕೊಳ್ಳದೆ ಜಲಪಾತದ ತಪ್ಪಲಿನವರೆಗೆ ಹೋಗಿ ಫೋಟೋ ಕ್ಲಿಕ್ಕಿಸಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X