Search
  • Follow NativePlanet
Share
» »ಕಾಶಿ ತೊರೆದು ಶಿವನು ಮುಂದೆ ಇಲ್ಲಿ ನೆಲೆಸುತ್ತಾನಂತೆ!

ಕಾಶಿ ತೊರೆದು ಶಿವನು ಮುಂದೆ ಇಲ್ಲಿ ನೆಲೆಸುತ್ತಾನಂತೆ!

By Vijay

ಹೌದು ನೀವು ಓದುತ್ತಿರುವುದು ಅಕ್ಷರಶಃ ನಿಜ. ಹೀಗೆಂದು ಈ ದೇವಾಲಯದ ದಂತಕಥೆ ಸಾರುತ್ತದೆ. ಈ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ನಂಬಿಕೆಯಾಗಿದೆ. ನಿಮಗೆಲ್ಲ ಗೊತ್ತಿರುವ ಹಾಗೆ ಶಿವನ ಪರಮ ನೆಚ್ಚಿನ ತಾಣವಾಗಿದೆ ಕಾಶಿ ಅಥವಾ ಇಂದು ಪ್ರಮುಖವಾಗಿ ಗುರುತಿಸಲ್ಪಡುವ ಉತ್ತರ ಪ್ರದೇಶ ರಾಜ್ಯದ ಪರಮ ಧಾರ್ಮಿಕ ಕ್ಷೇತ್ರ ವರಾಣಸಿ.

ಇದು ಸಾಮಾನ್ಯ ಕ್ಷೇತ್ರವಲ್ಲ, ಭಾರತದ ಆಧ್ಯಾತ್ಮಿಕ ರಾಜಧಾನಿ!

ಈ ಕ್ಷೇತ್ರದಲ್ಲಿ ಶಿವನು ವಿಶ್ವನಾಥನಾಗಿ ನೆಲೆಸಿದ್ದು ಸಕಲ ಭಕ್ತಾದಿಗಳನ್ನು ಹರಸುತ್ತಿದ್ದಾನೆ. ಆದರೆ ನಿಮಗೆ ಗೊತ್ತೆ, ಕೆಲವು ಪುರಾಣ-ಪುಣ್ಯ ಕಥೆಗಳಲ್ಲಿ ವಿವರಿಸಿರುವಂತೆ ಮುಂದೊಂದು ದಿನ ಜಲ ಪ್ರಳಯವಾದ ಸಂದರ್ಭದಲ್ಲಿ ಈಗಿನ ಕಾಶಿಯು ನೀರಲ್ಲಿ ಮುಳುಗುತ್ತದಂತೆ! ಹೀಗಾದ ಸಂದರ್ಭದಲ್ಲಿ ಕಾಶಿಯಲ್ಲಿ ನೆಲೆಸಿರುವ ಈ ವಿಶ್ವನಾಥನು ಪ್ರಸ್ತುತ ಲೇಖನದಲ್ಲಿ ತಿಳಿಸಲಾದ ದೇವಾಲಯದಲ್ಲಿ ಬಂದು ನೆಲೆಸುತ್ತಾನಂತೆ!

ಕಾಶಿ ತೊರೆದು ಶಿವನು ಮುಂದೆ ಇಲ್ಲಿ ನೆಲೆಸುತ್ತಾನಂತೆ!

ಚಿತ್ರಕೃಪೆ: Atudu

ಅಂದರೆ ಇನ್ನೊಂದು ನಂಬಿಕೆಯ ಪ್ರಕಾರ, ಕಲಿಯುಗದ ಕೊನೆಯ ಅರ್ಧ ಭಾಗದಲ್ಲಿ, ಕಾಶಿಯಲ್ಲಿ ವಿಶ್ವನಾಥನಾಗಿ ನೆಲೆಸಿರುವ ಶಿವನು ಕಾಶಿಯು ಮುಳುಗಿದ ನಂತರ ನೇರವಾಗಿ ಈ ದೇವಾಲಯಕ್ಕೆ ಬಂದು ತನ್ನ ಪತ್ನಿಯೊಡನೆ ನೆಲೆಸುತ್ತಾನಂತೆ. ಕಥೆ ಹೀಗಿದ್ದರೂ ಪ್ರಸ್ತುತ ಕಾಶಿ ವಿಶವನಾಥ ದೇವಾಲಯವೆಂದೆ ಇಂದು ಇದು ಕರೆಯಲ್ಪಡುತ್ತದೆ ಹಾಗೂ ಈ ಪ್ರದೇಶದ ಪ್ರಮುಖ ಧಾರ್ಮಿಕ ಆಕರ್ಷಣೆಯಾಗಿದೆ.

ಈ ದೇವಾಲಯವಿರುವ ತಾಣವೆ ಉತ್ತರಕಾಶಿ. ಉತ್ತರಾಖಂಡ ರಾಜ್ಯದಲ್ಲಿರುವ ಉತ್ತರಕಾಶಿ ಜಿಲ್ಲೆಯ ಉತ್ತರಕಾಶಿ ಪಟ್ಟಣದಲ್ಲಿ ಈ ದೇವಾಲಯವಿದೆ. ಹೆಸರೆ ಸೂಚಿಸುವಂತೆ ಇದು ಪ್ರಸ್ತುತ ಕಾಶಿ ಇರುವ ಸ್ಥಳದ ಉತ್ತರದ ದಿಕ್ಕಿನಲ್ಲಿರುವ ವಿಶ್ವನಾಥನ ನಿಲಯವಾಗಿರುವುದರಿಂದ ಇದಕ್ಕೆ ಉತ್ತರದ ಕಾಶಿ ಅಥವಾ ಉತ್ತರಕಾಶಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಕಾಶಿ ತೊರೆದು ಶಿವನು ಮುಂದೆ ಇಲ್ಲಿ ನೆಲೆಸುತ್ತಾನಂತೆ!

ಉತ್ತರಕಾಶಿಯ ನಿಸರ್ಗ ಸೌಂದರ್ಯ, ಚಿತ್ರಕೃಪೆ: Barry Silver

ಭಾಗೀರತಿ ನದಿಯ ತಟದಲ್ಲಿ ನೆಲೆಸಿರುವ, ಪ್ರಾಕೃತಿಕ ಸೊಬಗಿನಿಂದ ನಳನಳಿಸು, ದಟ್ಟ ಪರ್ವತಗಳಿಂದ ಕೂಡಿರುವ ಉತ್ತರಕಾಶಿಯು ಕೇವಲ ಧಾರ್ಮಿಕ ಪ್ರವಾಸಿಗರಿಗೆ ಮಾತ್ರವಲ್ಲ ನಿಸರ್ಗಪ್ರಿಯ ಪ್ರವಾಸಿಗರನ್ನೂ ಸಹ ಸಾಕಷ್ಟು ಆಕರ್ಷಿಸುತ್ತದೆ. ಇಲ್ಲಿ ಪ್ರಮುಖವಾಗಿ ಕಾಶಿ ವಿಶ್ವನಾಥನ ದೇವಾಲಯಕ್ಕೆ ಭೇಟಿ ನೀಡಲಾಗುತ್ತದೆ.

ಪವಿತ್ರಮಯವಾದ ನಾಲ್ಕು ಧಾಮಗಳ ತೀರ್ಥಯಾತ್ರೆ ಅಥವಾ ಚಾರ್ ಧಾಮ್ ಯಾತ್ರೆ ಮಾಡುವಾಗ ಸಾಮಾನ್ಯವಾಗಿ ಈ ಸ್ಥಳದ ಮೂಲಕವಾಗಿಯೂ ಹಾದು ಹೋಗಬೇಕಾಗಿರುವುದರಿಂದ ಧಾರ್ಮಿಕ ಪ್ರವಾಸಿಗರು ಈ ದೇವಾಲಯಕ್ಕೂ ಸಹ ಭೇಟಿ ನೀಡುತ್ತಾರೆ. ಹಾಗಾಗಿ ಅಧಿಕೃತ ಚಾರ್ ಧಾಮ್ ಅಲ್ಲದಿದ್ದರೂ ಆ ಯಾತ್ರೆಯ ಒಂದು ಭಾಗವಾಗಿ ಉತ್ತರಕಾಶಿಯ ವಿಶ್ವನಾಥನ ದೇವಾಲಯವು ಪ್ರಸಿದ್ಧಿ ಪಡೆದಿದೆ.

ಕಾಶಿ ತೊರೆದು ಶಿವನು ಮುಂದೆ ಇಲ್ಲಿ ನೆಲೆಸುತ್ತಾನಂತೆ!

ತ್ರಿಶೂಲ, ಚಿತ್ರಕೃಪೆ: Atudu

ಇನ್ನೊಂದು ವಿಚಾರವೆಂದರೆ ಇಲ್ಲಿರುವ ಶಿವನ ತ್ರಿಶೂಲ. ಆರು ಮೀಟರ್ ಎತ್ತರದ 90 ಸೆ.ಮೀ ವ್ಯಾಸ ಹೊಂದಿರುವ ಈ ತ್ರಿಶೂಲವು ಕಾಶಿ ವಿಶ್ವನಾಥನ ದೇವಾಲಯದ ಕೌತುಕಮಯ ಆಕರ್ಷಣೆಯಾಗಿದೆ. ದುರ್ಗೆಯು ರಾಕ್ಷಸರನ್ನು ಸಂಹರಿಸಲೆಂದು ಎಸೆದ ತ್ರಿಶೂಲ ಇದಾಗಿದೆಯೆಂದು ಹೇಳಲಾಗುತ್ತದೆ.

ವಿಶ್ವನಾಥನ ಹೊರತಾಗಿ ಕಾಶಿಯ ಇತರೆ ಪ್ರಸಿದ್ಧ ದೇವಾಲಯಗಳಿವು!

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ನಿಮ್ಮೆಲ್ಲ ದೈಹಿಕ ಶಕ್ತಿಯನ್ನು ವ್ಯಯಿಸಿದರೂ ಈ ತ್ರಿಶೂಲವನ್ನು ಅಲ್ಲಾಡಿಸಲು ಸಾಧ್ಯವಿಲ್ಲ! ಆದರೆ ಕೇವಲ ಒಂದು ಬೆರಳನ್ನು ಅದಕ್ಕೆ ಒತ್ತಿ ಹಿಡಿದಾಗ ಅದರಲ್ಲಿ ಕಮ್ಪನವುಂಟಾಗುವುದನ್ನು ತಿಳಿಯಬಹುದಂತೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X