Search
  • Follow NativePlanet
Share
» »ಮೋಟಾರ್ ಬೈಕ್ ಸವಾರಿಗೆ ಲಡಾಖ್ ನ ರಸ್ತೆಗಳು ಉತ್ತಮವಾದ ಸ್ಥಳವೆಂದು ಗುರುತಿಸಲ್ಪಟ್ಟಿದೆ ಮತ್ತು ಬೈಕ್ ಸವಾರಿಗೆ ಹೇಗೆ ಸಿದ

ಮೋಟಾರ್ ಬೈಕ್ ಸವಾರಿಗೆ ಲಡಾಖ್ ನ ರಸ್ತೆಗಳು ಉತ್ತಮವಾದ ಸ್ಥಳವೆಂದು ಗುರುತಿಸಲ್ಪಟ್ಟಿದೆ ಮತ್ತು ಬೈಕ್ ಸವಾರಿಗೆ ಹೇಗೆ ಸಿದ

ಲಡಾಖ್ ನ ಬೈಕ್ ಪ್ರವಾಸ ದ ಬಗ್ಗೆ ಒಂದು ಸಮಗ್ರ ಮಾರ್ಗದರ್ಶಿ ಇಲ್ಲಿದೆ. ಲಡಾಖ್ ನಲ್ಲಿನ ಬೈಕಿಂಗ್ ಬಗ್ಗೆ ಮತ್ತು ಹೊಸದರ ಬಗ್ಗೆ ಎಲ್ಲವನ್ನೂ ಓದಿ,ಉಮ್ಮಿಂಗ್ಲಾ ಪಾಸ್ ನಲ್ಲಿ ಅತ್ಯಧಿಕ ಮೋಟಾರ್ ಸವಾರಿ ಮಾಡಬಹುದಾದ ರಸ್ತೆಗಳು

By Manjula Balaraj Tantry

ಒಂದು ಹೊಸ ಅಭಿವೃದ್ದಿಯನ್ನು ಲಡಾಖ್ ನ ನೆಲದಲ್ಲಿ ಮಾಡಲಾಗಿದೆ. ಬಾರ್ಡರ್ ಆರ್ಗನೈಸೇಶನ್ (ಬಿಆರ್ ಓ) ಜಗತ್ತಿನಲ್ಲಿಯೇ ಹೆಚ್ಚಿನ ಮೋಟಾರ್ ಬೈಕ್ ಸವಾರಿಯ ರಸ್ತೆಗಳನ್ನು ಇಲ್ಲಿ ನಿರ್ಮಿಸಿತು. ಇದು 19,300 ಅಡಿಗಳ ಭಾರೀ ಎತ್ತರದಲ್ಲಿದ್ದು; ಅತ್ಯಂತ ಶ್ಲಾಘನೀಯ ಸಾಧನೆಗಳ ಪಟ್ಟಿಗೆ ಸೇರ್ಪಡೆಯಾಗಿದೆ.

"ಪ್ರಾಜೆಕ್ಟ್ ಹಿಮ್ಯಾಂಕ್" ಅಡಿಯಲ್ಲಿ ರಚಿಸಲ್ಪಟ್ಟ ಇದು 86 ಕಿಲೋಮೀಟರ್ ಉದ್ದದ ರಸ್ತೆಯಾಗಿದ್ದು, ಇದು ಉಮಿಂಗ್ಲಾ ಟಾಪ್ ಮೂಲಕ ಹಾದುಹೋಗುತ್ತದೆ ಮತ್ತು ಲೇಹ್ ಯಿಂದ ಸುಮಾರು 230 ಕಿ.ಮೀ ದೂರವಿರುವ ಚಿಸುಮ್ಲೆ ಮತ್ತು ಡೆಮ್ಚಾಕ್ ಎಂಬ ಎರಡು ಹಳ್ಳಿಗಳನ್ನು ಸಂಪರ್ಕಿಸುತ್ತದೆ.

ಎಲ್ಲಾ ಪ್ರಾಣಾಂತಿಕಗಳ ಸಂಭವಕ್ಕೆ ವಿರುದ್ಧವಾಗಿ, ಬಿಆರ್ ಓ ಖರ್ದಂಗ್ ಲಾ ಪಾಸ್ (17,900 ಅಡಿ), ಚಾಂಗ್ಲಾ ಪಾಸ್ (17,695) ಮತ್ತು ಇನ್ನಿತರ ರಸ್ತೆಗಳಂತಹ ಇತರ ಪ್ರಭಲ ರಸ್ತೆಗಳನ್ನು ಯಶಸ್ವಿಯಾಗಿ ಅದೇ ಯೋಜನೆಯಡಿಯಲ್ಲಿ ಇಲ್ಲಿ ನಿರ್ಮಿಸಿದೆ.

ಲಡಾಖ್ ಪ್ರತಿ ಬೈಕ್ ಸವಾರರ ಕನಸಿನ ತಾಣವಾಗಿದ್ದು, ಈ ರಸ್ತೆಗಳು ಭಾರಿ ಅಪಾಯಕಾರಿ ಭೂಪ್ರದೇಶದಲ್ಲಿ ನಿರ್ಮಿಸಿರುವುದರಿಂದ ಬೈಕ್ ಸವಾರರಿಗೆ ಅತ್ಯಂತ ಪ್ರಭಲವಾದ ಸವಾಲುಗಳಲ್ಲಿ ಒಂದಾಗಿದೆ. ಇದರಲ್ಲಿ ಸವಾರಿಯನ್ನು ಮಾಡುವುದು ಜೀವನದ ಒಂದು ರೋಮಾಂಚಕಾರಿ ಅನುಭವವಾಗಿದೆ. ನೀವು ಲಡಾಖ್ ನ ರಸ್ತೆಗಳಲ್ಲಿ ಪ್ರವಾಸಕ್ಕೆ ಹೋಗಲು ಯೋಜಿಸುತ್ತಿದ್ದರೆ, ನೀವು ಹುಡುಕುತ್ತಿರುವ ಸಮಗ್ರ ಮಾರ್ಗದರ್ಶಿ ಇಲ್ಲಿದೆ.

ಲಡಾಖ್ ಗೆ ಬೈಕ್ ಮೂಲಕ ಪ್ರಯಾಣ ಮಾಡಲು ಸೂಕ್ತ ಸಮಯ

ಲಡಾಖ್ ಗೆ ಬೈಕ್ ಮೂಲಕ ಪ್ರಯಾಣ ಮಾಡಲು ಸೂಕ್ತ ಸಮಯ

PC: Jochen Westermann

ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಸಮಯವು ಲಡಾಖ್ ಗೆ ಬೈಕ್ ಮೂಲಕ ಪ್ರವಾಸ ಕೈಗೊಳ್ಳಲು ಸೂಕ್ತ ಸಮಯ. ಇದು ಯಾಕೆಂದರೆ ಈ ಸಮಯದಲ್ಲಿ ಹವಾಮಾನವು ಆಹ್ಲಾದಕರವಾಗಿರುತ್ತದೆ. ಮತ್ತು ಈ ಸಮಯವು ವರ್ಷದ ಅತ್ಯಂತ ಕಡಿಮೆ ಚಳಿ ಇರುವ ಸಮಯವಾಗಿದೆ. ಹಿಮಾಲಯದ ಚಳಿಯುಕ್ತ ವಾತಾವರಣಕ್ಕೆ ಬೇಕಾಗುವ ಚಳಿಗಾಲದ ಉಡುಗೆಗಳು, ಜಾಕೆಟ್ ಗಳು, ಉತ್ತಮ ಗುಣಮಟ್ಟದ ಶೂಗಳು ಮುಂತಾದುವುಗಳನ್ನು ಹೊಂದಿಸಿಕೊಳ್ಳಿ.

ಮೂಲಭೂತ ವಿವರಗಳು

ಮೂಲಭೂತ ವಿವರಗಳು

ಈ ಪ್ರವಾಸದ ಅವಧಿಯು ನೀವು ಕವರ್ ಮಾಡಲು ಬಯಸುವ ಸ್ಥಳಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ, ಜೊತೆಗೆ ನೀವು ಪ್ರಯಾಣವನ್ನು ಪ್ರಾರಂಭಿಸುವ ಸ್ಥಳವನ್ನು ಅವಲಂಬಿಸಿರುತ್ತದೆ.ಈ ಪ್ರವಾಸವನ್ನು ಮುಗಿಸಲು ಕಡಿಮೆಯೆಂದರೂ 15 ದಿವಸಗಳ ಕಾಲ ಬೇಕಾಗುವುದು.

ನೀವು ಎರಡು ಮಾರ್ಗಗಳನ್ನು ಆಯ್ಕೆ ಮಾಡಬಹುದು - ಶ್ರೀನಗರದಿಂದ ಲೇಹ್ ಅಥವಾ ಮನಾಲಿಯಿಂದ ಲೇಹ್ ಗೆ ಹೋಗಲು ಸಾಧ್ಯವಿದೆ, ಇವೆರಡೂ ಪೂರ್ಣಗೊಳ್ಳಲು ಒಂದೇ ಸಮಯವನ್ನು ತೆಗೆದುಕೊಳ್ಳುತ್ತದೆ.

ನೀವು ಬೈಕ್ ಪ್ರವಾಸವನ್ನು ಕೈಗೊಳ್ಳುವ ಮೊದಲು ಕೆಲವು ವಿಷಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು.

1.ಸರಿಯಾದ ಬೈಕನ್ನು ಆಯ್ಕೆ ಮಾಡುವುದು.

1.ಸರಿಯಾದ ಬೈಕನ್ನು ಆಯ್ಕೆ ಮಾಡುವುದು.

ನೀವು ಮಾಡುತ್ತಿರುವ ಪ್ರಯಾಣವು ಕಷ್ಟಕರವಾದ ರಸ್ತೆಗಳಲ್ಲಿ ಆದ್ದರಿಂದ ನಿಮ್ಮ ಬೈಕ್ ಕೆಲವು ಹಂತಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಆದುದರಿಂದ ನೀವು ಒಂದು ಉತ್ತಮವಾದ ಬೈಕನ್ನು ಆರಿಸಿಕೊಳ್ಳಬೇಕು. ರೋಯಲ್ ಎನ್ಪೀಲ್ಡ್, ರಾಯಲ್ ಎನ್ಫೀಲ್ಡ್ ಹಿಮಾಲಯನ್, ಕೆಟಿ ಎಮ್ ಡ್ಯೂಕ್, ಇತ್ಯಾದಿಗಳು ನಿಮ್ಮ ಪ್ರಯಾಣಕ್ಕೆ ಸೂಕ್ತವಾದ್ ಬೈಕುಗಳಾಗಿರುತ್ತವೆ. ನೀವು ಬೇರೆಯವರಿಂದ ಬೈಕನ್ನು ತರುವಿರೆಂದಾದರೆ, ಅದರ ಮಾಲೀಕರಿಂದ ಎನ್ ಒ ಸಿ ಪಡೆಯ ಬೇಕು, ಲೇಹ್ ನಲ್ಲಿ ಇದನ್ನು ತೋರಿಸಬೇಕಾಗುವುದು.

2) ಬಾಡಿಗೆಗೆ ಬೈಕ್

2) ಬಾಡಿಗೆಗೆ ಬೈಕ್

ಮನಾಲಿ ತನಕ ನೀವು ವಿಮಾನದಲ್ಲಿ ಪ್ರಯಾಣ ಮಾಡುವುದರಿಂದ ಹೆಚ್ಚು ಗದ್ದಲ ಮುಕ್ತ ಪ್ರಯಾಣಮಾಡಬಹುದು ಮನಾಲಿಯ ತುಂಬಾ ಬಾಡಿಗೆ ಬೈಕುಗಳು ಸಿಗುತ್ತವೆ. ಅದರ ಬಾಡಿಗೆ ಸುಮಾರು ರೂ 1200 ರಿಂದ ರೂ 1800 (ದಿನಕ್ಕೆ?) ಇರುತ್ತದೆ. ಇಲ್ಲಿ ಬೈಕು ಸಾಲವನ್ನು ಪಡೆಯಲು ಅವಕಾಶವಿದೆ, ಮರುಪಾವತಿ ಮಾಡಬಹುದಾದ ಠೇವಣಿ ರೂ 12,000 ರಿಂದ 18,000 ರೂ.

ಹೀಗೆ ಹೋಗುವಾಗ ನಿಮ್ಮ ಐಡಿ ಮತ್ತು ಚಾಲಕರ ಪರವಾನಗಿಯನ್ನು ಕೊಂಡೊಯ್ಯಿರಿ ಮತ್ತು ಮಾಲಿನ್ಯ ಪ್ರಮಾಣಪತ್ರ, ವಿಮಾ ಪತ್ರಗಳು ಮುಂತಾದ ಬೈಕು ದಾಖಲೆಗಳನ್ನು ಬಾಡಿಗೆ ಬೈಕ್ ನೀಡುವವರು ನೀಡುತ್ತಿದ್ದಾರೆಯೆ ಎಂದು ಖಚಿತಪಡಿಸಿಕೊಳ್ಳಿ. ಯಾವುದೇ ಗೇರುಗಳು, ದೋಷಪೂರಿತ ಸರಪಳಿ, ಟೈರ್, ಇತ್ಯಾದಿ ಬೈಕು ಬಾಡಿಗೆ ಪಡೆಯುವ ಮುಂಚೆ ಪರೀಕ್ಷಿಸುವುದು ಮತ್ತೊಂದು ಮುಖ್ಯವಾದ ಅಂಶವಾಗಿದೆ.

ದೈನಂದಿನ ವೇತನದ ಆಧಾರದ ಮೇಲೆ ನೀವು ಮೆಕ್ಯಾನಿಕ್ ಅನ್ನು ಬಾಡಿಗೆಗೆ ಪಡೆಯಬಹುದು. ಸಾಮಾನ್ಯವಾಗಿ, ಬೈಕು ಬಾಡಿಗೆ ನೀಡುವ ಸಂಸ್ಥೆಗಳು ಮೆಕ್ಯಾನಿಕ್ ಅನ್ನು ಕೂಡಾ ಕಳುಹಿಸುತ್ತವೆ, ಅವು ಹಾಗೆ ಮಾಡದಿದ್ದರೆ, ನೀವೇ ಒಬ್ಬ ಮೆಕ್ಯಾನಿಕ್ ಅನ್ನು ಬಾಡಿಗೆಗೆ ಪಡೆಯಬಹುದು.

3) ಎತ್ತರದ ಪ್ರದೇಶ ಹತ್ತುವುದರಿಂದ ಅನಾರೋಗ್ಯ ಕಾಡಲಿದೆಯೇ ಎಂದು ಪರಿಶೀಲಿಸಿಕೊಳ್ಳಿ

3) ಎತ್ತರದ ಪ್ರದೇಶ ಹತ್ತುವುದರಿಂದ ಅನಾರೋಗ್ಯ ಕಾಡಲಿದೆಯೇ ಎಂದು ಪರಿಶೀಲಿಸಿಕೊಳ್ಳಿ

PC: Sistak

ಲಡಾಖ್ ಒಂದು ಪರ್ವತ ಮರುಭೂಮಿಯಾಗಿದ್ದು, ನೀವು ಮೊದಲು ಎಂದಿಗೂ ಮಾಪನ ಮಾಡದಂತಹ ಎತ್ತರದಲ್ಲಿರುವ ಒಂದು ಪ್ರದೇಶ. ಆದುದರಿಂದ ನಿಮಗೆ ಎತ್ತರದ ಪ್ರದೇಶಕ್ಕೆ ಹೋಗುವಾಗ ಉಂಟಾಗುವ ಕಾಯಿಲೆಗಳಾದ ತಲೆನೋವು, ನಾಸಿಯಾ, ವಾಕರಿಕೆ ತೀವ್ರ ಹೃದಯಬಡಿತ, ಅಥವಾ ಸುಸ್ತಾಗುವುದು ಮುಂತಾದ ಲಕ್ಷಣಗಳಿವೆಯೇ ಎಂದು ಗಮನಿಸಿಕೊಳ್ಳಿ.

4) ಇನ್ನರ್ ಲೈನ್ ಪರ್ಮಿಟ್ (ಐಎಲ್ಪಿ) ಪಡೆದುಕೊಳ್ಳಿ

4) ಇನ್ನರ್ ಲೈನ್ ಪರ್ಮಿಟ್ (ಐಎಲ್ಪಿ) ಪಡೆದುಕೊಳ್ಳಿ

ಜಮ್ಮು ಮತ್ತು ಕಾಶ್ಮೀರವು ಇನ್ನೂ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಚುಶುಲ್, ಲೋಮಾ, ಚಾಂಗ್ಥಾಂಗ್ ಮುಂತಾದ ಕೆಲವು ಪ್ರದೇಶಗಳಿಗೆ ಸರ್ಕಾರದಿಂದ -ಜಾರಿಗೊಳಿಸಲ್ಪಟ್ಟ ಇನ್ನರ್ ಲೈನ್ ಪರ್ಮಿಟ್ ನ (ಐಎಲ್ಪಿ) ಅಗತ್ಯವಿರುತ್ತದೆ.

ಇದು ಪ್ಯಾಂಗೊಂಗ್ ಟಸ್ಸೊ ಮತ್ತು ನುಬ್ರಾ ಕಣಿವೆಯ ಸ್ಥಳಗಳಿಗೆ ಸಹ ಮೊದಲು ಅಗತ್ಯವಾಗಿತ್ತು ಆದರೆ ಈಗ ಅದನ್ನು ವಿನಾಯಿತಿ ಕೊಡಲಾಗಿದೆ.

ಒಂದು ಐಎಲ್ಪಿಗೆ ಬೇಸ್ ನ ವೆಚ್ಚವು ಪ್ರತಿ ವ್ಯಕ್ತಿಗೆ 200 ರೂ. ನಂತರ 30 ರೂ.ಗಳನ್ನು ದೈನಂದಿನ ಆಧಾರದ ಮೇಲೆ ವನ್ಯಜೀವಿ ರಕ್ಷಣೆಗಾಗಿ ದಾನ ಮತ್ತು ಶುಲ್ಕದ ಕೊಡುಗೆಗಳಿಗೆ ನೀಡಬೇಕಾಗುವುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X