Search
  • Follow NativePlanet
Share
» »ಅತಿಶಕ್ತಿವಂತವಾದ ನಾಗ ದೋಷ ಪರಿಹಾರದ ಪುಣ್ಯಕ್ಷೇತ್ರ!

ಅತಿಶಕ್ತಿವಂತವಾದ ನಾಗ ದೋಷ ಪರಿಹಾರದ ಪುಣ್ಯಕ್ಷೇತ್ರ!

ಸಾಮಾನ್ಯವಾಗಿ ಮನುಷ್ಯರ ಜಾತಕದಲ್ಲಿ ಹಲವಾರು ದೋಷಗಳು ಇರುವುದು ಸಾಮಾನ್ಯವೇ. ಹಾಗಿರುವಾಗ ದೋಷವನ್ನು ಪರಿಹಾರ ಮಾಡಿಕೊಳ್ಳದ್ದಿದ್ದಾರೆ ದೊಡ್ಡ ದೊಡ್ಡ ಅನಾಹುತವಾಗುವುದರಲ್ಲಿ ಅನುಮಾನವೇ ಇಲ್ಲ. ಆ ದೋಷಗಳಲ್ಲಿ ಮುಖ್ಯವಾಗಿ ನಾಗ ದೋಷ ಕೂಡ ಆಗಿವೆ. ಅವುಗಳೆಂದರೆ ರಾಹು ದೋಷ ಹಾಗು ಕೇತು ದೋಷ ಎಂದೇ ಹೇಳಬಹುದು.

ಆ ದೋಷಗಳನ್ನು ಪರಿಹಾರ ಮಾಡಿಕೊಳ್ಳುವ ಸಲುವಾಗಿ ಹಲವಾರು ಮಂದಿ ದೇವಾಲಯಕ್ಕೆ ತೆರಳುವುದುಂಟು. ಹಾಗಾದರೆ ಈ ಪುಣ್ಯಕ್ಷೇತ್ರವು ನಾಗ ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ಉತ್ತಮವಾದ ದೇವಾಲಯ ಎಂದೇ ಹೇಳಬಹುದು.

ಹಾಗಾದರೆ ಆ ದೇವಾಲಯ ಎಲ್ಲಿದೆ? ಆ ದೇವಾಲಯವಾದರೂ ಯಾವುದು? ಆ ದೇವಾಲಯದ ಮಹಿಮೆ ಏನು? ಎಂಬ ಹಲವಾರು ಪ್ರಶ್ನೆಗೆ ಉತ್ತರವನ್ನು ಲೇಖನದ ಮೂಲಕ ತಿಳಿಯೊಣ.

ಎಲ್ಲಿದೆ ನಾಗದೋಷ ಪರಿಹಾರ ಮಾಡುವ ಆ ದೇವಾಲಯ?

ಎಲ್ಲಿದೆ ನಾಗದೋಷ ಪರಿಹಾರ ಮಾಡುವ ಆ ದೇವಾಲಯ?

ಆ ಮಹಿಮಾನ್ವಿತವಾದ ದೇವಾಲಯವು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಪ್ರಸಿದ್ಧವಾದ ದೇವಾಲಯವಾಗಿದೆ. ಇದೊಂದು ಹಿಂದೂ ದೇವಾಲಯವಾಗಿದ್ದು, ಅತ್ಯಂತ ಪ್ರಸಿದ್ದಿಯನ್ನು ಪಡೆದಿದೆ. ಆ ದೇವಾಲಯವೇ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ. ಈ ದೇವಾಲಯವು ನಾಗಾರಾಧನೆ ಮಾಡುವುರದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ.

ನಾಗದೋಷ ಪರಿಹಾರದ ಕ್ಷೇತ್ರ

ನಾಗದೋಷ ಪರಿಹಾರದ ಕ್ಷೇತ್ರ

ಪೂರ್ವ ಈ ಗ್ರಾಮವನ್ನು "ಕುಕ್ಕೆ ಪಟ್ಟಣ" ಎಂದು ಕರೆಯುತ್ತಿದ್ದರು. ಕ್ರಮವಾಗಿ ಈ ದೇವಾಲಯವು ಕೂಡ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಎಂದು ಪ್ರಸಿದ್ಧಿಯನ್ನು ಪಡೆಯಿತು. ಇಲ್ಲಿನ ಗುಡಿಯಲ್ಲಿ ನಾಗದೋಷ ಪರಿಹಾರವನ್ನು ಮಾಡಿಕೊಂಡರೆ ಜೀವನದಲ್ಲಿ ಯಾವುದೇ ರೀತಿಯ ಬಾಧೆಯನ್ನು ಅನುಭವಿಸುವುದಿಲ್ಲ ಎಂದು ನಂಬಲಾಗಿದೆ. ಅಷ್ಟೇ ಅಲ್ಲದೇ ಸಂತಾನ ಇಲ್ಲದೇ ಇರುವವರು ಕೂಡ ಈ ಸ್ವಾಮಿಯ ದರ್ಶನ ಮಾಡಿದರೆ ಸಕಲ ಪಾಪಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಭಕ್ತರದ್ದು.


www.itslife.in

ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಸ್ಥಳ ಪುರಾಣ

ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಸ್ಥಳ ಪುರಾಣ

ಎಷ್ಟೊ ಸಾವಿರ ವರ್ಷಗಳ ಚರಿತ್ರೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಹಲವಾರು ದೇವಾಲಯಗಳಿವೆ. ಅವುಗಳಲ್ಲಿ ಕೆಲವು ದೇವಾಲಯಗಳು ಭಕ್ತರು, ರಾಜರು ಹೀಗಿ ದೇವರ ಮೇಲೆ ಭಕ್ತಿ ಹೊಂದಿರುವವರು ನಿರ್ಮಾಣ ಮಾಡಿದರು. ಮತ್ತೆ ಉಳಿದ ದೇವಾಲಯಗಳನ್ನು ದೇವತೆಗಳೇ ಸ್ವಯಂ ಭೂವಾಗಿ ನೆಲೆಸಿದರು ಎಂದು ನಂಬಲಾಗಿದೆ.

www.itslife.in

ಕಾರ್ತಿಕೇಯ ನೆಲೆಸಿರುವ ಈ ಕ್ಷೇತ್ರ

ಕಾರ್ತಿಕೇಯ ನೆಲೆಸಿರುವ ಈ ಕ್ಷೇತ್ರ

ಹಾಗೆ ನೆಲೆಸಿದ ದೇವಾಲಯಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ಕೂಡ ಒಂದಾಗಿದೆ. ಕುಮಾರಸ್ವಾಮಿ ಎಂದರೆ ಸುಬ್ರಹ್ಮಣ್ಯ ಸ್ವಾಮಿ. ಕಾರ್ತಿಕೇಯ ನೆಲೆಸಿರುವ ಈ ಕ್ಷೇತ್ರದಲ್ಲಿ ಪರಶುರಾಮ ಕ್ಷೇತ್ರ ಕೂಡ ಒಂದಾಗಿದೆ. ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಕುರಿತು "ಸ್ಕಂದ ಪುರಾಣ" ದಲ್ಲಿನ ಸನತ ಕುಮಾರ ಸಂಹಿತದಲ್ಲಿ ಸಹ್ಯಾದ್ರಿಕೊಂಡದಲ್ಲಿನ ತೀರ್ಥಕ್ಷೇತ್ರದ ಮಹಾಮಣಿ ಪುರಾಣದಲ್ಲಿ ತಿಳಿಸಲಾಗಿದೆ.


www.itslife.in

ತಾರಕಾದಿ ಅಸುರರು

ತಾರಕಾದಿ ಅಸುರರು

ಪೂರ್ವದಲ್ಲಿ ತಾರಕಾದಿ ಇಬ್ಬರು ಅಸುರರನ್ನು ಸುಬ್ರಹ್ಮಣ್ಯೇಶ್ವರ ಸ್ವಾಮಿಯು ತನ್ನ ಶಕ್ತಿ ಆಯುಧದಿಂದ ಸಂಹಾರ ಮಾಡುತ್ತಾರೆ. ತನ್ನ ಆಯುಧವನ್ನು ಇಲ್ಲಿನ ಧಾರಾನದಿಯಲ್ಲಿ ಶುಭ್ರಗೊಳಿಸಿಕೊಂಡನು ಎಂದು ಪುರಾಣಗಳು ಹೇಳುತ್ತವೆ.

www.itslife.in

ವಾಸುಕಿ

ವಾಸುಕಿ

ಆ ನಂತರ ಕುಮಾರಧಾರ ಪರ್ವತ ಶ್ರೇಣಿಯಲ್ಲಿ ಗಣಪತಿ ಹಾಗು ಇನ್ನು ಹಲವಾರು ದೇವತೆಗಳ ಜೊತೆಗೆ ಕುಮಾರಸ್ವಾಮಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಇಂದ್ರನು ತನ್ನ ಕುಮಾರಿಯನ್ನು ವಿವಾಹ ಮಾಡಿಕೊ ಎಂದು ಕೇಳಿಕೊಂಡಾಗ ಆತನು ವಿವಾಹಕ್ಕೆ ಅಂಗೀಕಾರ ಮಾಡುತ್ತಾನೆ. ತದನಂತರ ವಾಸುಕಿ ಕೋರಿಕೆಯ ಮೇರೆಗೆ ಈ ಪ್ರದೇಶದಲ್ಲಿ ತನ್ನ ಜೊತೆಗೆ ಅಲ್ಲಿಯೇ ನೆಲೆಸಲು ಅಂಗೀಕಾರವನ್ನು ನೀಡುತ್ತಾನೆ.


www.itslife.in

ಗುಪ್ತ ಕ್ಷೇತ್ರ

ಗುಪ್ತ ಕ್ಷೇತ್ರ

ಪರಶುರಾಮ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲೊಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯಸ್ವಾಮಿ ಕ್ಷೇತ್ರವು ಪುರಾಣ ಹಾಗು ಇತಿಹಾಸದ ಕಾಲದಿಂದಲೂ ನಾಗಾರಾಧನೆಗೆ ಪ್ರಸಿದ್ಧಿಯನ್ನು ಪಡೆದಿದೆ. ಈ ಕ್ಷೇತ್ರವನ್ನು ಗುಪ್ತ ಕ್ಷೇತ್ರ ಎಂದೂ ಕೂಡ ಕರೆಯುತ್ತಾರೆ. ಇಲ್ಲಿ ಮುಕ್ತಿಕಾ ಪ್ರಸಾದ ಅತ್ಯಂತ ಶ್ರೇಷ್ಟವಾದುದಾಗಿದೆ.

www.itslife.in

ಕುಮಾರಧಾರ

ಕುಮಾರಧಾರ

ಈ ಕ್ಷೇತ್ರದಲ್ಲಿ ಒಂದು ಪವಿತ್ರವಾದ ತೀರ್ಥವಿದೆ. ಆ ಮಹಾ ತೀರ್ಥದಲ್ಲಿ ಸ್ನಾನ ಮಾಡಿದವರಿಗೆ ಕುಷ್ಠರೋಗದಂತಹ ಭಯಾನಕವಾದ ವ್ಯಾಧಿಗಳು ನಯವಾಗುತ್ತದೆ ಎಂದು ನಂಬಲಾಗಿದೆ. ಇಷ್ಟೇ ಅಲ್ಲದೇ ಸರ್ಪದೋಷದಿಂದ ಉಂಟಾಗುವ ಸಂತಾನ ಹೀನತೆ, ಚರ್ಮವ್ಯಾಧಿ, ದೃಷ್ಟಿ ಮಾಂದ್ಯ ಇನ್ನು ಹಲವಾರು ಸರ್ವ ದೋಷಗಳಿಗೆ ಈ ಕ್ಷೇತ್ರ ಅತ್ಯಂತ ಪುಣ್ಯ ಪ್ರಧಾನವಾಗಿದೆ.

www.itslife.in

ನಾಗದೇವತೆಗಳ ಆರಾಧನೆ

ನಾಗದೇವತೆಗಳ ಆರಾಧನೆ

ಸರ್ಪದೋಷದ ಹಲವಾರು ತೊಂದರೆಗಳಿಗೆ ನಾಗಪ್ರತಿಷ್ಟೆ, ಆಶ್ಲೇಷ ಬಲಿ, ಹರಕೆಗಳು ಇನ್ನು ಹಲವಾರು ನಾಗದೇವತೆಗಳ ಆರಾಧನೆಗಳ ಮೂಲಕ ತನ್ನ ಎಲ್ಲಾ ದೋಷಗಳನ್ನು ಈ ಕ್ಷೇತ್ರದಲ್ಲಿ ಪರಿಹಾರ ಮಾಡಿಕೊಳ್ಳಬಹುದಾಗಿದೆ. ಮುಖ್ಯವಾಗಿ ವಿವಾಹಗಳಲ್ಲಿ ಆಗುವಂತಹ ತೊಂದರೆಗಳನ್ನು ಈ ದೇವಾಲಯದ ನಾಗಗಳ ಆರಾಧನೆಗಳ ಮೂಲಕ ಪರಿಹಾರ ಮಾಡಿಕೊಳ್ಳಬಹುದು ಎಂದು ಹೇಳಲಾಗುತ್ತದೆ.

www.itslife.in

ಸರ್ಪ ಸಂಸ್ಕಾರ

ಸರ್ಪ ಸಂಸ್ಕಾರ

ಇಲ್ಲಿನ ಸರ್ಪ ಸಂಸ್ಕಾರವು ಬಹಳ ಶ್ರೇಷ್ಟ ಮತ್ತು ಪ್ರಸಿದ್ಧ. ಸರ್ಪದೋಷದಿಂದ ಬಳಲುತ್ತಿರುವವರು ಈ ಪವಿತ್ರವಾದ ಕ್ಷೇತ್ರಕ್ಕೆ ಬಂದು ಸರ್ಪ ಸಂಸ್ಕಾರ ಮತ್ತು ನಾಗ ಪ್ರತಿಷ್ಟೆಯನ್ನು ನೇರವೇರಿಸುತ್ತಾರೆ. ಹಾಗೆಯೇ ಇಲ್ಲಿ ಹಲವಾರು ದೇವಾಲಯಗಳು ಕೂಡ ಇವೆ. ಕುಮಾರಧಾರ ನದಿ ಅತ್ಯಂತ ಪವಿತ್ರವಾದ ನದಿಯಾಗಿದೆ.

www.itslife.in

ಜಾತಕದ ದೋಷಗಳು

ಜಾತಕದ ದೋಷಗಳು

ಮಾನವನ ಪ್ರತಿಯೊಬ್ಬರ ಜಾತಕದಲ್ಲಿಯೂ ದೋಷಗಳು ಇರುವುದು ಸಾಮಾನ್ಯವಾದುದು. ಆದರೆ ಕೆಲವರಲ್ಲಿ ಮಾತ್ರ ರಾಹು ಹಾಗು ಕೇತುಗಳ ಪ್ರಭಾವ ಹೆಚ್ಚಾಗಿರುವುದರಿಂದ ಜೀವನದಲ್ಲಿ ನಡೆಯುವ ಎಲ್ಲಾ ಕಾರ್ಯಗಳಿಗೂ ತೊಂದರೆಯಾಗುತ್ತಿರುತ್ತದೆ. ಹಾಗಾಗಿ ಸರ್ಪದೋಷ, ಕಾಳಸರ್ಪದೋಷ ಇತ್ಯಾದಿ ದೋಷಗಳನ್ನು ಇಲ್ಲಿ ಪರಿಹಾರ ಮಾಡಿಕೊಡುತ್ತಾರೆ.

www.itslife.in

ಪ್ರಸಿದ್ಧಿ

ಪ್ರಸಿದ್ಧಿ

ಈ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ಅತ್ಯಂತ ಪ್ರಾಚೀನವಾದ ಹಾಗು ಮಹಿಮಾನ್ವಿತವಾದ ಶ್ರೀ ಕ್ಷೇತ್ರವಾಗಿದೆ. ಈ ದೇವಾಲಯಕ್ಕೆ ಕೇವಲ ದೇಶದ ಮೂಲೆ ಮೂಲೆಗಳಿಂದ ಅಲ್ಲದೇ ವಿದೇಶಗಳಿಂದಲೂ ಕೂಡ ಭೇಟಿ ನೀಡಿ ತಮ್ಮ ಕುಜ ಹಾಗು ರಾಹು ದೋಷಗಳನ್ನು ಪರಿಹಾರ ಮಾಡಿಕೊಳ್ಳುತ್ತಾರೆ.

www.itslife.in

ಭಕ್ತಿಯನ್ನು ಮತ್ತಷ್ಟು ಹಿಮ್ಮಡಿಗೊಳಿಸುತ್ತದೆ

ಭಕ್ತಿಯನ್ನು ಮತ್ತಷ್ಟು ಹಿಮ್ಮಡಿಗೊಳಿಸುತ್ತದೆ

ಸುಬ್ರಹ್ಮಣ್ಯ ದೇವಾಲಯದ ಹೊರಗೆ ಹಾಗು ಒಳಗೆ ಭಕ್ತಿಯನ್ನು ಮತ್ತಷ್ಟು ಹಿಮ್ಮಡಿಗೊಳಿಸುತ್ತದೆ. ಒಂದು ಎತ್ತರವಾದ ವೇದಿಕೆಯ ಮೇಲೆ ಸುಬ್ರಹ್ಮಣ್ಯಸ್ವಾಮಿಯ ಜೊತೆಗೆ ವಾಸುಕಿ ವಿಗ್ರಹಗಳನ್ನು ಕೂಡ ಕಾಣಬಹುದಾಗಿದೆ. ಹಿಂದೂ ಪುರಾಣಗಳ ಪ್ರಕಾರ ಮತ್ತೊಂದು ನಾಗರಾಜನಾದ ಆದಿಶೇಷನ ವಿಗ್ರಹವನ್ನು ಕೂಡ ಗರ್ಭಗುಡಿಯಲ್ಲಿ ಕಾಣಬಹುದು. ಗರ್ಭಾಲಯಕ್ಕೆ ಹಾಗು ಮಂಡಪದ್ವಾರದ ಮಧ್ಯಕ್ಕೆ ಬೆಳ್ಳಿಯ ಗರುಡಸ್ತಂಭವನ್ನು ಕಾಣಬಹುದು.

ಸುಬ್ರಹ್ಮಣ್ಯ ಸ್ವಾಮಿ ಹಾಗು ನಾಗ ರಾಜ ವಾಸುಕಿಯ ನಿಲಯ

ಸುಬ್ರಹ್ಮಣ್ಯ ಸ್ವಾಮಿ ಹಾಗು ನಾಗ ರಾಜ ವಾಸುಕಿಯ ನಿಲಯ

ಕುಮಾರಧಾರ ನದಿ ಮೇಲೆ ಇರುವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ಅತ್ಯಂತ ಪವಿತ್ರವಾದುದು ಎಂದೇ ಭಾವಿಸಲಾಗುತ್ತದೆ. ಈ ದೇವಾಲಯದ ಸುತ್ತಲೂ ನದಿಗಳು, ಪರ್ವತಗಳು, ಅರಣ್ಯಗಳು ಮುಖ್ಯವಾಗಿ ಕುಮಾರ ಪರ್ವತಗಳನ್ನು ಕಾಣಬಹುದು. ಈ ದೇವಾಲಯವು ಶಿವನ 2 ನೇ ಕುಮಾರನಾದ ಕಾರ್ತಿಕೇಯ ಎಂದು ಕರೆಯುವ ಸುಬ್ರಹ್ಮಣ್ಯ ಸ್ವಾಮಿ ಹಾಗು ನಾಗ ರಾಜ ವಾಸುಕಿಯ ನಿಲಯವಾಗಿದೆ.

www.itslife.in

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ವಿಮಾನ ಮಾರ್ಗದ ಮೂಲಕ
ಈ ಪವಿತ್ರವಾದ ಕ್ಷೇತ್ರವು ನಮ್ಮ ಕರ್ನಾಟಕದಲ್ಲಿಯೇ ಇದ್ದು, ಸಮೀಪದಲ್ಲಿನ ವಿಮಾನ ನಿಲ್ದಾಣವೆಂದರೆ ಅದು ಮಂಗಳೂರು ವಿಮಾಣ ನಿಲ್ದಾಣವಾಗಿದೆ.

ರೈಲ್ವೆ ನಿಲ್ದಾಣದ ಮೂಲಕ
ದೇವಾಲಯದಿಂದ ಸುಮಾರು 7 ಕಿ.ಮೀ ದೂರದಲ್ಲಿ ರೈಲ್ವೆ ನಿಲ್ದಾಣವಿದೆ. ಇಲ್ಲಿಂದ ಸುಲಭವಾಗಿ ದೇವಾಲಯಕ್ಕೆ ತಲುಪಬಹುದಾಗಿದೆ.

ರಸ್ತೆ ಮಾರ್ಗದ ಮೂಲಕ
ಬೆಂಗಳೂರು, ಮಂಗಳೂರಿನಿಂದ ಸುಬ್ರಹ್ಮಣ್ಯಸ್ವಾಮಿ ದೇವಾಲಯದವರೆವಿಗೆ ಹಲವಾರು ಸರ್ಕಾರಿ ಬಸ್ಸುಗಳ ಸೇವೆಗಳು ಇವೆ. ಇಲ್ಲಿಂದ ಸುಲಭವಾಗಿ ದೇವಾಲಯಕ್ಕೆ ತೆರಳಬಹುದಾಗಿದೆ. ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಸುಮಾರು 280 ಕಿ.ಮೀ ದೂರದಲ್ಲಿದೆ.

ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಶಿವಾಲಯವಿದು!!

ತಿರುಮಲದಲ್ಲಿದೆ ಬಂಗಾರದ ಬಾವಿ !

ಭಾರತ ದೇಶದಲ್ಲಿಯೇ ಅತ್ಯಂತ ದೊಡ್ಡ ಚೋರ್ ಬಜಾರ್ ಎಲ್ಲಿದೆ ಗೊತ್ತ?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more