Search
  • Follow NativePlanet
Share
» »ಕೊಲುಕ್ಕುಮಲೈ : ಅತಿ ಎತ್ತರದ ಚಹಾ ಸವಿಯುವಿರಾ?

ಕೊಲುಕ್ಕುಮಲೈ : ಅತಿ ಎತ್ತರದ ಚಹಾ ಸವಿಯುವಿರಾ?

By Vijay

ಕೇರಳದ ಪ್ರಖ್ಯಾತ ಪ್ರವಾಸಿ ತಾಣವಾದ ಮುನ್ನಾರ್ ನಿಂದ ಕೇವಲ ಅರ್ಧ ಘಂಟೆ ಪ್ರಯಾಣಾವಧಿಯಷ್ಟು ದೂರ ಚಲಿಸಿದರೆ ಸಾಕು ನೀವೊಂದು ಅದ್ಭುತ, ರೋಮಾಂಚನಗೊಳಿಸುವ ಸ್ಥಳಕ್ಕೆ ಬಂದಿರುತ್ತಿರಿ. ಮೂಲವಾಗಿ ಇದೊಂದು ಚಹಾ ಬೆಳೆಯುವ ತೋಟ. ಇದರ ವಿಶೇಷತೆ ಎಂದರೆ ಜಗತ್ತಿನ ಅತಿ ಎತ್ತರ ಪ್ರದೇಶದಲ್ಲಿ ಚಹಾ ಬೆಳೆಯಲಾಗುವ ತೋಟ ಹೊಂದಿರುವ ಎಸ್ಟೇಟ್ ಇದು.

ಚಿತ್ರಕೃಪೆ: Earth-Bound Misfit, I

ಮುನ್ನಾರ್ [ಮುನ್ನಾರ್ ಹಿಂದಿರುವ ರಹಸ್ಯ]ಬೆಟ್ಟಗಳು ಹಾಗೂ ಪ್ರದೇಶದ ಸೌಂದರ್ಯವನ್ನು ಸವಿಯುವಾಗ ಇದನ್ನೂ ಸಹ ಆನಂದಿಸಬಹುದು. ದಶಕಗಳಷ್ಟು ಹಳೆಯದಾದ ಚಹಾ ಕಾರ್ಖಾನೆಯೂ ಸಹ ಈ ಪ್ರದೇಶದಲ್ಲಿದೆ. ಕೊಲುಕ್ಕುಮಲೈ ಎಂಬ ಹೆಸರಿನ ಈ ಸ್ಥಳವು ಚಹಾ ಕಾರ್ಖಾನೆಗೆ ಬಹಳ ಜನಪ್ರಿಯವಾಗಿದ್ದು ಇದರ ಇತಿಹಾಸ, ಹಿನ್ನಿಲೆ ಕುರಿತು ತಿಳಿಯ ಬಯಸಿದ್ದಲ್ಲಿ ಮಾರ್ಗದರ್ಶಕರೂ ಸಹ ಇಲ್ಲಿ ದೊರೆಯುತ್ತಾರೆ.

ಅತಿ ಎತ್ತರದಲ್ಲಿ ಇಲ್ಲಿ ಚಹಾ ಬೆಳೆಯಲಾಗುವುದರಿಂದ ಇಲ್ಲಿನ ಚಹಾ ವಿಶೇಷ ಬಣ್ಣ, ಗುಣ ಹಾಗೂ ರುಚಿ ಹೊಂದಿರುವುದರಲ್ಲಿ ಸಂಶಯವೆ ಇಲ್ಲ. ಅಲ್ಲದೆ ಪ್ರದೇಶವು ಪ್ರಾಕೃತಿಕ ಸೊಬಗಿಗೂ ಕೂಡ ಹೆಸರುವಾಸಿಯಾಗಿದೆ. ಇಲ್ಲಿ ಚಹಾ ಅನ್ನು ಆಧುನಿಕ ರೀತಿ ಬಳಸದೆ ಸಾಂಪ್ರದಾಯಿಕ ಶೈಲಿಯಲ್ಲೆ ಉತ್ಪಾದಿಸಲಾಗುತ್ತದೆ. ಇಲ್ಲಿರುವ ಚಹಾ ರುಚಿ ಕೇಂದ್ರದಲ್ಲಿ ವಿವಿಧ ರೀತಿಯ ಚಹಾ ಅನ್ನು ಸೇವಿಸಿ ಆನಂದಿಸಬಹುದು.

ಚಿತ್ರಕೃಪೆ: Earth-Bound Misfit, I

ಸಮುದ್ರ ಮಟ್ಟದಿಂದ 7900 ಅಡಿಗಳಷ್ಟು ಎತ್ತರದಲ್ಲಿರುವ ಕೊಲುಕ್ಕುಮಲೈ ತಮಿಳುನಾಡು ಗಡಿ ಭಾಗದ ಸಮತಟ್ಟಾದ ಭೂಮಿಯ ಅದ್ಭುತ ನೋಟವನ್ನು ಕರುಣಿಸುತ್ತದೆ. ಚಹಾ ತೋಟಗಳ ದಟ್ಟ ಹಸಿರಿನಿಂದ ಆವರಿಸಿರುವ ಇಳಿಜಾರು ಪ್ರದೇಶಗಳು ಭೇಟಿ ನೀಡುವವರ ಉತ್ಸಾಹವನ್ನು ಇಮ್ಮಡಿಗೊಳಿಸುತ್ತದೆ.

ಅಲ್ಲಲ್ಲಿ ಚಹಾ ತೋಟಗಳ ಮಧ್ಯದಲ್ಲಿರುವ ಮಾರ್ಗಗಳಲ್ಲಿ ನಡೆಯುತ್ತ, ಸುವಾಸನೆಯುಕ್ತ ಚಹಾ ಎಲೆಗಳ ಪರಿಮಳವನ್ನು ಹೀರುತ್ತ ನಡೆದಾಡುವಾಗ ಮನದ ಎಲ್ಲ ಒತ್ತಡಗಳು ಕರಗಿ ಅಪಾರವಾದ ಆನಂದ, ಸಂತಸ ಉಂಟಾಗುವುದರಲ್ಲಿ ಯಾವುದೆ ಸಂಶಯವಿಲ್ಲ. ನಿಮ್ಮೊಳಗಿನ ಸಾಹಸಿ ಭಾವನೆಯನ್ನು ಪ್ರೇರೆಪಿಸಬೇಕಿದ್ದರೆ ಮೊನಚಾದ ಇಳಿಜಾರುಳ್ಳ ಭೂಭಾಗದ ಮೇಲಿನಿಂದ ಕೆಳಕ್ಕಿಳಿಯುತ್ತ ಸಮತಟ್ಟಾದ ಪ್ರದೇಶಕ್ಕೆ ತೆರಳುವುದು. ಈ ನಡಿಗೆ ಒಂದು ರೀತಿಯ ರೋಮಾಂಚನವನ್ನುಂಟು ಮಾಡುತ್ತದೆ.

Kolukkumalai tea at highest point
https://www.flickr.com/photos/127509719@N03/15136876765

ಚಿತ್ರಕೃಪೆ: Husena MV

ಇನ್ನು, ಕೊಲುಕ್ಕುಮಲೈ ಮುನ್ನಾರ್ ತಾಣದಿಂದ ಕೇವಲ 38 ಕಿ.ಮೀ ಗಳಷ್ಟು ದೂರದಲ್ಲಿದೆ. ಬೆಟ್ಟದ ತುದಿ ತಲುಪಲು ಬಾಡಿಗೆ ಜೀಪುಗಳು, ಟ್ಯಾಕ್ಸಿಗಳು ಮುನ್ನಾರ್ ನಿಂದ ಪಡೆಯಬಹುದಾಗಿದ್ದು ಸುಲಭವಾಗಿ ಕೊಲುಕ್ಕುಮಲೈ ಬೆಟ್ಟವನ್ನು ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X