Search
  • Follow NativePlanet
Share
» »ಕೊಡೈಕೆನಾಲ್‍ನಲ್ಲಿ ದೆವ್ವಗಳ ಗುಹಾ ರಹಸ್ಯ!

ಕೊಡೈಕೆನಾಲ್‍ನಲ್ಲಿ ದೆವ್ವಗಳ ಗುಹಾ ರಹಸ್ಯ!

ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಯಾವುದಾದರೂ ಸುಂದರವಾದ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಅನ್ನಿಸುತ್ತದೆ. ಯಾವ ಸ್ಥಳಕ್ಕೆ ಭೇಟಿ ನೀಡುವುದು ಎಂದು ಅಲೋಚಿಸಿದಾಗ ಮೊದಲಿಗೆ ನೆನಪಾಗುವುದೇ ಅದ್ಭುತವಾದ ಸ್ಥಳ ಕೊಡೈಕೆನಾಲ್. ಕೊಡೈಕೆನಾಲ್‍ನಲ್ಲಿ ಒಂದು ದೆವ್ವಗಳ ಗುಹೆ ಇದೆ ಎಂಬುದು ನಿಮಗೆ ಗೊತ್ತ? ಆ ಗುಹೆಯ ಹಿಂದೆ ಇದೆ ಒಂದು ನಂಬಲಾಗದ ರಹಸ್ಯ. ಹಾಗಾದರೆ ಆ ಗುಹೆಯ ರಹಸ್ಯದ ಬಗ್ಗೆ ತಿಳಿಯೋಣ.

ಎಲ್ಲಿದೆ?

ಎಲ್ಲಿದೆ?

ಸುಂದರವಾದ ಗಿರಿಧಾಮಗಳನ್ನು ಹೊಂದಿರುವ ಕೊಡೈಕೆನಾಲ್ ಇರುವುದು ತಮಿಳುನಾಡು ರಾಜ್ಯದಲ್ಲಿ. ಇಲ್ಲಿ ಹೆಚ್ಚಾಗಿ ನವ ದಂಪತಿಗಳು ಭೇಟಿ ನೀಡುತ್ತಿರುತ್ತಾರೆ. ಬೆಂಗಳೂರಿನಿಂದ ಕೊಡೈಕೆನಾಲ್‍ಗೆ ಸುಮಾರು 465 ಕಿ.ಮೀ ದೂರದಲ್ಲಿದೆ.

ಕೊಡೈಕೆನಾಲ್ ನದಿ

ಕೊಡೈಕೆನಾಲ್ ನದಿ

ಕೊಡೈಕೆನಾಲ್ ನದಿ
ಕೊಡೈಕೆನಾಲ್ ಪಟ್ಟಣ ಕೇಂದ್ರದಲ್ಲಿ ಒಂದು ನದಿ ಇದೆ. ಇದು 1863 ರಲ್ಲಿ ನಿರ್ಮಾಣ ಮಾಡಲಾಯಿತು. ಅಂದರೆ ಇದೊಂದು ಮಾನವ ನಿರ್ಮಿತವಾದ ನದಿಯಾಗಿದೆ. 60 ಎಕರೆಗಳ ಸವಿಸ್ತಾರವಾಗಿ ಇರುವ ಈ ನದಿಯು ಒಂದೊಂದು ಭಾಗದಲ್ಲಿ ವಿಭಿನ್ನವಾದ ಮಾದರಿಯಾಗಿ ಕಾಣುತ್ತದೆ. ಈ ನದಿಯಲ್ಲಿ ಬೋಟುಗಳ ವಿಹಾರ ಕೂಡ ಆನಂದಿಸಬಹುದಾಗಿದೆ.

ಕೋಕರ್ಸ್ ವಾಕ್

ಕೋಕರ್ಸ್ ವಾಕ್


ಇದು ಒಂದು ಪರ್ವತದಲ್ಲಿನ ಸಣ್ಣದಾಗಿರುವ ಒಂದು ಖಾಲಿ ಸ್ಥಳವಾಗಿದೆ. ಈ ಸ್ಥಳಕ್ಕೆ ಕಾಲ್ನಡಿಗೆಯ ಮೂಲಕ ನಡೆದುಕೊಂಡು ಹೋದರೆ ಸುತ್ತಲಿನ ಪ್ರಕೃತಿಯ ದೃಶ್ಯಗಳನ್ನು ಕಾಣಬಹುದು.

ಸೆಂಟ್ ಮೇರಿ ಚರ್ಚ್

ಸೆಂಟ್ ಮೇರಿ ಚರ್ಚ್

ಈ ಸೆಂಟ್ ಮೇರಿ ಚರ್ಚ್ ಸುಮಾರು 150 ವರ್ಷಗಳ ಹಿಂದಿನದು. ವಿಶೇಷವೆನೆಂದರೆ ಕೊಡೈಕೆನಾಲ್‍ನ ಮೊಟ್ಟ ಮೊದಲನೇ ಚರ್ಚ್ ಇದಾಗಿದೆ.

ಪಂಪಾರ್ ಜಲಪಾತ

ಪಂಪಾರ್ ಜಲಪಾತ

ಈ ಜಲಪಾತವು ಕೊಡೈಕೆನಾಲ್ ಪಟ್ಟಣದ ಕೊನೆಯ ಭಾಗದಲ್ಲಿದೆ. ಇಲ್ಲಿನ ಜಲಪಾತವನ್ನು ಕಾಣಲು ಅದೆಷ್ಟು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

ಗ್ರಿನ್ ವ್ಯಾಲಿ ವ್ಯೂ

ಗ್ರಿನ್ ವ್ಯಾಲಿ ವ್ಯೂ

ಒಂದು ಪರ್ವತದ ಮೇಲೆ ನಾವು ನಿಂತು ನೋಡಲು ಅವಕಾಶವಾಗಿ ಒಂದು ಸ್ಥಳವನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲಿಂದ ನೋಡಿದರೆ ವಿಶಾಲವಾದ ಪಾತಳ, ಹಚ್ಚ ಹಸಿರಿನಿಂದ ಕೂಡಿದ ವೃಕ್ಷಗಳು, ಪರ್ವತಗಳು ಇವೆಲ್ಲವೂ ಪ್ರವಾಸಿಗರಿಗೆ ಆಕರ್ಷಿಸುತ್ತದೆ.

ಗುಣ ಗುಹಾ

ಗುಣ ಗುಹಾ

ರಸ್ತೆಯ ಅಂಚಿನಲ್ಲಿನ ಒಂದು ದಟ್ಟವಾದ ವೃಕ್ಷಗಳ ಕೆಳಗೆ ಸುಮಾರು 200 ಹೆಜ್ಜೆ ಇಟ್ಟರೆ, ಅಲ್ಲಿನ ಮರಗಳ ಮಧ್ಯೆದಿಂದ ಕೆಳಗೆ ಇಳಿಯುತ್ತಾ ಹೋದರೆ ಒಂದು ಚಿಕ್ಕದಾದ ಗುಹೆ ಕಾಣುತ್ತದೆ. ಆದರೆ ಅದನ್ನು ನಾವು ಸಮೀಪದಿಂದ ಕಾಣಲು ಆಗುವುದಿಲ್ಲ. ಆ ಸ್ಥಳಕ್ಕೆ ಹೋಗಬಾರದು ಎಂದು ಭದ್ರತೆ ಏರ್ಪಾಟು ಮಾಡಿದ್ದಾರೆ. ಸ್ಥಳೀಯರು ಇದನ್ನು ದೆವ್ವಗಳ ಗುಹೆ ಎಂದು ಕೆರಯುತ್ತಾರೆ.

ಪೈನ್ ವೃಕ್ಷಗಳ ಅರಣ್ಯ

ಪೈನ್ ವೃಕ್ಷಗಳ ಅರಣ್ಯ

ಕೇವಲ ಮಂಜಿನಿಂದ ಕೂಡಿದ ಈ ಪ್ರವಾಸಿ ಸ್ಥಳದಲ್ಲಿ ಕೇವಲ ಪರ್ವತದಲ್ಲಿ ಮಾತ್ರ ಬೆಳೆಯುವ ಪೈನ್ ವೃಕ್ಷಗಳು ಇಲ್ಲಿನ ಮತ್ತೊಂದು ವಿಶೇಷ. ಒಂದೇ ಸ್ಥಳದಲ್ಲಿ ಸುಮಾರು 1 ಕಿ.ಮೀ ವಿಸ್ತೀರ್ಣದಲ್ಲಿ ದಟ್ಟವಾಗಿ ಬೆಳೆದಿರುತ್ತದೆ. ಈ ಸ್ಥಳದಲ್ಲಿ ಹಲವಾರು ಚಿತ್ರಗಳ ಚಿತ್ರಿಕರಣ ನಡೆದಿದೆ.

ಶಾಂತಿ ವ್ಯಾಲಿ

ಶಾಂತಿ ವ್ಯಾಲಿ

ಇದು ದಟ್ಟವಾದ ವೃಕ್ಷಗಳಿಂದ ಕೂಡಿರುವ ವಿಶಾಲವಾದ ಶಾಂತಿ ವ್ಯಾಲಿಯಾಗಿದೆ.

ಕುರಿಂಜಿ ಆಂಡವರ್ ದೇವಾಲಯ

ಕುರಿಂಜಿ ಆಂಡವರ್ ದೇವಾಲಯ

ಈ ದೇವಾಲಯವು ಕೊಡೈಕೆನಾಲ್‍ಗೆ ದೂರದಲ್ಲಿದೆ. ಈ ದೇವಾಲಯದಲ್ಲಿ ಸುಬ್ರಹ್ಮಣ್ಯಶ್ವೇರ ಸ್ವಾಮಿಯು ನೆಲೆಸಿದ್ದಾನೆ. 1930 ರಲ್ಲಿ ಈ ಪ್ರದೇಶದಲ್ಲಿ ನಿವಾಸವಿದ್ದ ಒಬ್ಬ ಯುರೋಪಿಯನ್ ಮಹಿಳೆಗೆ ಈ ಸ್ವಾಮಿಯು ಕನಸ್ಸಿನಲ್ಲಿ ಕಾಣಿಸಿ ಆರ್ಶೀವಾದ ನೀಡಿದರಂತೆ. ಅದಕ್ಕೆ ಕೃತಜ್ಞತೆಗಾಗಿ ಆಕೆಯು ಈ ದೇವಾಲಯವನ್ನು ನಿರ್ಮಾಣ ಮಾಡಿದಳು ಎಂದು ಸ್ಥಳೀಯರು ಹೇಳುತ್ತಾರೆ. ಹಲವಾರು ವರ್ಷಕ್ಕೆ ಮಾತ್ರ ಬಿಡುವ ಹೂವಿಗಾಗಿ ಈ ದೇವಾಲಯವು ಪ್ರಸಿದ್ಧಿ ಹೊಂದಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more