Search
  • Follow NativePlanet
Share
» »ಅದ್ಭುತ ಶಿವಲಿಂಗ; ಇಲ್ಲಿ ಅಭಿಷೇಕ ಆಗುತ್ತದೆ ಆದ್ರೆ ಯಾರಿಗೂ ಕಾಣೋದಿಲ್ಲ

ಅದ್ಭುತ ಶಿವಲಿಂಗ; ಇಲ್ಲಿ ಅಭಿಷೇಕ ಆಗುತ್ತದೆ ಆದ್ರೆ ಯಾರಿಗೂ ಕಾಣೋದಿಲ್ಲ

ನೀವು ದೇವರ ನಾಡು ಕೇರಳ ಧಾರ್ಮಿಕ ಸ್ಥಳಗಳನ್ನು ಭೇಟಿ ನೀಡುವುದಾದರೆ ಇಲ್ಲಿನ ಶಿವ ಮಂದಿರದ ಬಗ್ಗೆ ತಿಳಿದಿರಲೇ ಬೇಕು. ಈ ಶಿವ ಮಂದಿರದ ದರ್ಶನ ಮಾಡಿಲ್ಲವೆಂದಾದರೆ ನಿಮ್ಮ ಯಾತ್ರೆಯು ಪೂರ್ಣವಾಗುವುದಿಲ್ಲ. ಸುಮಾರು 1000 ವರ್ಷ ಹಳೆಯ ಈ ಮಂದಿರವು ಕೇರಳದ ಹಳೆಯ ಮಂದಿರಗಳಲ್ಲಿ ಈ ಮಂದಿರವನ್ನೂ ಸೇರಿಸಲಾಗಿದೆ. ಈ ಮಂದಿರವು ತ್ರಿಶೂರ್‌ನ ಕೇಂದ್ರದಲ್ಲಿ ಸ್ಥಾಪಿತವಾಗಿದೆ. ಉತ್ಕೃಷ್ಟ ವಾಸ್ತುಕಲೆಗೆ ಪ್ರಸಿದ್ಧಿ ಹೊಂದಿದೆ. ಇದು ಕೇರಳದ ಪ್ರಾಚೀನ ಶೈಲಿಯನ್ನು ದರ್ಶಿಸುತ್ತದೆ.

ಪ್ರಾಕೃತಿಕ ಸೌಂದರ್ಯದಿಂದ ಕೂಡಿರುವ ವಡಕುನಾಥನ್ ಮಂದಿರ ಭಕ್ತರಿಗೆ ಆಧ್ಯಾತ್ಮಿಕ ಹಾಗೂ ಶಾಂತಿಪೂರ್ಣತೆಯನ್ನು ಒದಗಿಸುತ್ತದೆ. ಈ ಲೇಖನದಲ್ಲಿ ನೀವು ಶಿವನ ಪ್ರಾಚೀನ ಮಂದಿರದ ಬಗ್ಗೆ ತಿಳಿಯಿರಿ.

ಸಂಕ್ಷಿಪ್ತ ಇತಿಹಾಸ

ಸಂಕ್ಷಿಪ್ತ ಇತಿಹಾಸ

PC: Rkrish67

ಈ ಮೊದಲೇ ಹೇಳಿರುವಂತೆ ಇದೊಂದು ಪ್ರಾಚೀನ ದೇವಾಲಯವಾಗಿದ್ದು, ಸುಮಾರು 1000 ವರ್ಷಗಳ ಇತಿಹಾಸ ಹೊಂದಿದೆ ಎನ್ನಲಾಗುತ್ತದೆ. ಮಲಯಾಳಂ ಇತಿಹಾಸಕಾರ ವಿವಿಕ್‌ ವಾಲತ್ ಪ್ರಕಾರ ಈ ಮಂದಿರವು ಒಂದು ಪೂರ್ವ ದ್ರಾವಿಡ ದೇವ ಸ್ಥಳವಾಗಿತ್ತು. ನಂತರ ಈ ಮಂದಿರವನ್ನು 6ನೇ ಶತಮಾನದ ನಂತರ ಅಸ್ಥೀತ್ವಕ್ಕೆ ಬಂದ ಧರ್ಮ ಸಂಪ್ರದಾಯಗಳ ಪ್ರವಾವಕ್ಕೆ ಬಂದಿತು. ಇದರಲ್ಲಿ ಬೌದ್ಧ ಧರ್ಮ, ಜೈನ ಧರ್ಮ ಹಾಗೂ ವೈಷ್ಣವ ಧರ್ಮ ಶಾಮೀಲಾಗಿದೆ. ಕೇರಳ ಇನ್ನೊಂದು ಹಳೇಯ ದೇವಸ್ಥಾನವಾದ ಪರಮೆಕ್ಕವ್ ಭಗವತಿ ಮಂದಿರವೂ ಕೂಡಾ ಇದೇ ದೇವಸ್ಥಾನದ ಒಳಗೆ ಇತ್ತು.

ಪೌರಾಣಿಕ ವದಂತಿಗಳು

ಪೌರಾಣಿಕ ವದಂತಿಗಳು

PC: Rameshng

ಈ ಮಂದಿರದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಲವು ಪೌರಾಣಿಕ ವದಂತಿಗಳಿವೆ. ಅದರಲ್ಲಿ ಪರಶುರಾಮನೂ ಸೇರಿಕೊಂಡಿದ್ದಾನೆ. ವಡಕುನಾಥನ್ ಮಂದಿರದ ಉತ್ಪತ್ತಿ ಬಗ್ಗೆ ಬ್ರಹ್ಮಾಂಡ ಪುರಾಣದಲ್ಲಿ ವರ್ಣಿಸಲಾಗಿದೆ. ಈ ಮಂದಿರವು 1000 ವರ್ಷ ಹಳೆಯದಾಗಿರುವುದರಿಂದ ಇದಕ್ಕೆ ಸಂಬಂಧಿಸಿದ ಸರಿಯಾದ ಆಧಾರಗಳಿಲ್ಲ. ಆದರೂ ಈ ಮಂದಿರವು ಶಿವನ ಅಂಶವಾದ ಪರಶುರಾಮನಿಂದ ಸ್ಥಾಪಿಸಲಾಗಿರುವುದು ಎನ್ನಲಾಗುತ್ತದೆ.

ಪರಶುರಾಮ

ಪರಶುರಾಮ

PC: Charley Brown

ನರಸಂಹಾರದ ನಂತರ ತನ್ನನ್ನು ಶುದ್ಧಗೊಳಿಸಲು ಹಾಗೂ ಕರ್ಮವನ್ನು ತೊಳೆಯಲು ಒಂದು ಯಜ್ಞವನ್ನು ಮಾಡುತ್ತಾನೆ. ನಂತರ ದಕ್ಷಿಣೆಯ ರೂಪದಲ್ಲಿ ಬ್ರಾಹ್ಮಣರಿಗೆ ಎಲ್ಲಾ ಭೂಮಿಯನ್ನು ನೀಡುತ್ತಾನೆ. ಪರಶುರಾಮನಿಗೆ ತಪಸ್ಸು ಮಾಡಲು ಹೊಸ ಸ್ಥಳದ ಶೋಧನೆಯಲ್ಲಿರುತ್ತಾನೆ. ಆಗ ಪರಶುರಾಮ ಸಮುದ್ರ ದೇವತಾ ವರುಣನಲ್ಲಿ ತನಗೆ ತಪಸ್ಸು ಮಾಡಲು ಸಮುದ್ರದ ಬಳಿ ಎಲ್ಲಾದರೂ ಒಂದು ತುಂಡು ಜಾಗವನ್ನು ಕರುಣಿಸುವಂತೆ ಬೇಡುತ್ತಾನೆ. ಇನ್ನೊಂದು ಕಥೆಯ ಪ್ರಕಾರ ಯಜ್ಞದ ಕೊನೆಗೆ ಕೆಲವು ಸಂತರು ಪರಶುರಾಮನಲ್ಲಿ ಬಂದು ತಮಗೆ ಸ್ವಲ್ಪ ಜಾಗ ಕರುಣಿಸುವಂತೆ ಕೋರುತ್ತಾರೆ. ಪರಶುರಾಮನು ವರುಣ ದೇವತೆಯಲ್ಲಿ ಬೇಡುತ್ತಾನೆ. ವರುಣನು ಒಂದು ವಸ್ತುವನ್ನು ಕೊಟ್ಟು ಅದನ್ನು ಸಮುದ್ರದಲ್ಲಿ ಎಸೆಯುವಂತೆ ಹೇಳುತ್ತಾನೆ. ಪರಶುರಾಮ ಎಸೆದ ಆ ಜಾಗದಲ್ಲಿ ಒಂದು ಬೃಹತ್ ಸುಂದರವಾದ ಕ್ಷೇತ್ರ ನಿರ್ಮಾಣವಾಗುತ್ತದೆ. ಅದನ್ನೇ ಕೇರಳ ಎನ್ನಲಾಗುತ್ತದೆ.

ಮಂದಿರದ ರಚನೆ

ಮಂದಿರದ ರಚನೆ

PC- Challiyan

ಸುಮಾರು 9 ಎಕರೆ ಕ್ಷೇತ್ರಗಳಲ್ಲಿ ಇರುವ ವಡಕುನಾಥನ್ ಮಂದಿರವು ನಗರದ ಕೇಂದ್ರದಲ್ಲಿ ಒಂದು ಎತ್ತರದ ಬೆಟ್ಟದ ಮೇಲೆ ಇದೆ. ಈ ಪ್ರಾಚೀನ ಮಂದಿರವು ಒಂದು ವಿಶಾಲವಾದ ಕಲ್ಲಿನ ಗೋಡೆಯಿಂದ ಕೂಡಿದೆ. ಒಳಗಿನ ಮಂದಿರ ಹಾಗೂ ಹೊರಗಿನ ಗೋಡೆಯ ಮಧ್ಯೆ ಒಂದು ಉಧ್ಯಾನವನವಿದೆ. ಭಕ್ತರಿಗೆ ದೇವಸ್ಥಾನದ ಒಳಗೆ ಪ್ರವೇಶವು ಪೂರ್ವ ಹಾಗೂ ಪಶ್ಚಿಮ ಗೋಫುರಗಳ ಮೂಲಕ ಆಗುತ್ತದೆ. ಗೋಳಾಕಾರದ ಗ್ರೈನೆಟ್ ಗೋಡೆಯು ಇಲ್ಲಿನ ಒಳಗಿನ ಮಂದಿರ ಹಾಗೂ ಹೊರಗಿನ ಮಂದಿರವನ್ನು ಬೇರ್ಪಡಿಸುತ್ತದೆ.

ಇಲ್ಲಿರುವ ದೇವತೆಗಳು

ಇಲ್ಲಿರುವ ದೇವತೆಗಳು

PC- Adarsh Padmanabhan

ಈ ದೇವಾಲಯದಲ್ಲಿನ ಮುಖ್ಯ ದೇವರೆಂದರೆ ಶಿವ. ಶಿವನನ್ನು ಇಲ್ಲಿ ವಿಶಾಲ ಶಿವಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ. ಧಾರ್ಮಿಕ ಪರಂಪರೆಯ ಅನುಸಾರವಾಗಿ ಶಿವನಿಗೆ ತುಪ್ಪದ ಅಭಿಷೇಕವನ್ನು ಮಾಡಲಾಗುತ್ತದೆ. ಶಿವಲಿಂಗವು ಸಂಪೂರ್ಣವಾಗಿ ತುಪ್ಪದಿಂದ ಕೂಡಿರುವುದರಿಂದ ಶಿವಲಿಂಗವು ಕಾಣಿಸೋದಿಲ್ಲ. ಪಾರಂಪರಿಕ ಧಾರಣೆ ಪ್ರಕಾರ ಈ ಶಿವಲಿಂಗವು ಮಂಜಿನಿಂದ ಆವೃತವಾಗಿರುವ ಕೈಲಾಶ ಪರ್ವತವನ್ನು ಪ್ರತಿನಿಧಿಸುತ್ತದೆ ಎನ್ನಲಾಗುತ್ತದೆ.

ಏಕೈಕ ಶಿವ ಮಂದಿರ

ಏಕೈಕ ಶಿವ ಮಂದಿರ

PC:Kjrajesh

ಶಿವಲಿಂಗ ಕಾಣಿಸದೇ ಇರುವಂತಹ ಏಕೈಕ ಶಿವ ಮಂದಿರ ಇದಾಗಿದೆ. ಭಕ್ತರಿಗೆ ಇಲ್ಲಿ ಕೇವಲ 16 ಫೀಟ್‌ ಎತ್ತರದಲ್ಲಿ ಆವರಿಸಿರುವ ತುಪ್ಪದ ಗೋಪುರವೇ ಕಾಣಿಸುತ್ತದೆ. ಇಲ್ಲಿ ಅಭಿಷೇಕಕ್ಕೆ ಬಳಸಲಾಗುವ ತುಪ್ಪಕ್ಕೆ ಯಾವುದೇ ಪರಿಮಳ ಇರುವುದಿಲ್ಲ. ಈ ತುಪ್ಪವು ಬೇಸಿಗೆಗಾಲದಲ್ಲೂ ಕರುಗುವುದಿಲ್ಲವಂತೆ.

ಕುಂಭಕರ್ಣನ ಮಗನನ್ನು ಶಿವ ಸಂಹರಿಸಿದ್ದು ಇಲ್ಲೇ

ಪ್ರವೇಶಿಸುವುದು ಹೇಗೆ?

ಪ್ರವೇಶಿಸುವುದು ಹೇಗೆ?

PC- Joseph Lazer

ವಡಕುನಾಥನ್ ಮಂದಿರ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿದೆ. ಇಲ್ಲಿಗೆ ನೀವು ವಿಮಾನದ ಮೂಲಕ ಹೋಗುವುದಾದರೆ ಕೊಚ್ಚಿ ಏರ್‌ಪೋರ್ಟ್ ಸಮೀಪದಲ್ಲಿದೆ. ಇನ್ನು ರೈಲು ಮೂಲಕ ಹೋಗುವುದಾದೆ ತ್ರಿಶೂರ್ ರೈಲ್ವೆ ಸ್ಟೇಶನ್ ಮೂಲಕ ಹೋಗಬಹುದು. ದೇಶದ ದೊಡ್ಡ ನಗರಗಳಿಂದ ಇಲ್ಲಿಗೆ ರಸ್ತೆ ಮಾರ್ಗವೂ ಚೆನ್ನಾಗಿದೆ. ಬಸ್‌ ವ್ಯವಸ್ಥೆಗಳೂ ಇವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X