Search
  • Follow NativePlanet
Share
» »ಇಂದಿಗೆ ಕಾರ್ಗಿಲ್ ಯುದ್ಧಕ್ಕೆ 19 ವರ್ಷ: ಕಾರ್ಗಿಲ್‌ನಲ್ಲಿ ಏನೇನಿದೆ ನೋಡಿದ್ದೀರಾ?

ಇಂದಿಗೆ ಕಾರ್ಗಿಲ್ ಯುದ್ಧಕ್ಕೆ 19 ವರ್ಷ: ಕಾರ್ಗಿಲ್‌ನಲ್ಲಿ ಏನೇನಿದೆ ನೋಡಿದ್ದೀರಾ?

ಕಾರ್ಗಿಲ್ ಯುದ್ಧ ನಡೆದು ಇಂದಿಗೆ 19 ವರ್ಷಗಳಾಯಿತು. ಜುಲೈ 26 , 1999ರಂದು ಭಾರತವು ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಯುದ್ಧದಲ್ಲಿ ವಿಜಯ ಸಾಧಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ. ಭಾರತೀಯ ಸೈನಿಕರ ಈ ವೀರತೆಯು ಇಡೀ ದೇಶವನ್ನೇ ಹೆಮ್ಮೆಯಿಂದ ಭೀಗುವಂತೆ ಮಾಡಿದೆ. 18 ಸಾವಿರ ಫೀಟ್ ಎತ್ತರದಲ್ಲಿ ಕಾರ್ಗಿಲ್‌ನಲ್ಲಿ ನಡೆದ ಯುದ್ಧದಲ್ಲಿ ದೇಶವು ಸುಮಾರು 527 ಸೈನಿಕರನ್ನು ಕಳೆದುಕೊಂಡಿದೆ. ಸುಮಾರು 1300ಕ್ಕೂ ಅಧಿಕ ಸೈನಿಕರು ಗಾಯಾಳುಗಳಾಗಿದ್ದರು.

ಈ ಕಾರ್ಗಿಲ್ ಯುದ್ಧದ ಬಗ್ಗೆ ಕೇಳಿದ್ದೇವೆಯೇ ಹೊರತು ಆ ಯುದ್ಧ ನಡೆದ ಸ್ಥಳದ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಕಾರ್ಗಿಲ್ ಯುದ್ಧದ ಈ ದಿನದಂದು ನಾವು ನಿಮಗೆ ಕಾರ್ಗಿಲ್‌ ಬಗ್ಗೆ ತಿಳಿಸಿಲಿದ್ದೇವೆ.

ಎಲ್ಲಿದೆ ಕಾರ್ಗಿಲ್ ?

ಎಲ್ಲಿದೆ ಕಾರ್ಗಿಲ್ ?

PC:Shyam.akirala

ಕಾರ್ಗಿಲ್ ಎನ್ನುವುದು ಜಮ್ಮುಕಾಶ್ಮೀರದ ಲಡಾಖ್ ಪ್ರಾಂತ್ಯದಲ್ಲಿರುವ ಒಂದು ಜಿಲ್ಲೆಯಾಗಿದೆ. ಇದು ಲಡಾಖ್‌ ಪ್ರಾಂತ್ಯದಲ್ಲಿ ಲೇಹ್‌ನಂತರದ ಎರಡನೇ ದೊಡ್ಡ ನಗರವಾಗಿದೆ. ಇದು ಶ್ರೀನಗರದಿಂದ 204 ಕಿ.ಮೀ ದೂರದಲ್ಲಿದೆ. ದೆಹಲಿಯಿಂದ 1047 ಕಿ.ಮೀ ದೂರದಲ್ಲಿದೆ.

 ಹೆಚ್ಚಿನವರು ಶಿಯಾ ಮುಸ್ಲಿಂ ಸಮುದಾಯಕ್ಕೆ ಸೇರಿದವರು

ಹೆಚ್ಚಿನವರು ಶಿಯಾ ಮುಸ್ಲಿಂ ಸಮುದಾಯಕ್ಕೆ ಸೇರಿದವರು

PC: Flyhigh megh

ಕಾರ್ಗಿಲ್ ಜನರು ಮಿಶ್ರ ಡಾರ್ಡ್ ಮತ್ತು ಟಿಬೆಟಿಯನ್ ಮೂಲದವರು. 14 ನೇ ಮತ್ತು 15 ನೇ ಶತಮಾನದವರೆಗೆ, ಈ ಪ್ರದೇಶದ ಜನರು ಟಿಬೆಟಿಯನ್ ಬೌದ್ಧಧರ್ಮದ ಅನುಯಾಯಿಗಳಾಗಿದ್ದರು. ಆದರೆ ಮುಸ್ಲಿಮ್ ದಾಳಿಕೋರರ ಹುಟ್ಟಿನಿಂದಾಗಿ, ಅನೇಕ ಜನರನ್ನು ಧರ್ಮಭ್ರಷ್ಟಗೊಳಿಸಲಾಯಿತು ಮತ್ತು ಇಸ್ಲಾಂಗೆ ಪರಿವರ್ತಿಸಲಾಯಿತು.. ಇಂದು ಇಲ್ಲಿನ ಹೆಚ್ಚಿನ ಜನಸಂಖ್ಯೆಯು ಶಿಯಾ ಮುಸ್ಲಿಂ ಸಮುದಾಯಕ್ಕೆ ಸೇರಿದೆ. ಆದರೆ ಅಲ್ಪಸಂಖ್ಯಾತ ಸಮುದಾಯಗಳು ಸುನ್ನಿ ಮುಸ್ಲಿಂ ಮತ್ತು ಟಿಬೆಟಿಯನ್ ವರ್ಗಗಳಿಗೆ ಸೇರಿದವುಗಳಾಗಿದೆ.

ಕಾರ್ಗಿಲ್ ವಾರ್ ಮೆಮೋರಿಯಲ್

ಕಾರ್ಗಿಲ್ ವಾರ್ ಮೆಮೋರಿಯಲ್

PC: Ashwin Kumar

ಪಾಕಿಸ್ತಾನದ ಸೈನ್ಯದ ಎದುರು ಭಾರತೀಯ ಸೈನಿಕರು ಸಾಧಿಸಿದ ವಿಜಯವನ್ನು ನೆನಪಿಟ್ಟುಕೊಳ್ಳಲು ಮತ್ತು ನಮ್ಮ ಕೆಚ್ಚೆದೆಯ ಯೋಧರಿಗೆ ಗೌರವ ಸಲ್ಲಿಸಲು, ಭಾರತೀಯ ಸೈನ್ಯವು ಯುದ್ಧದ ಸ್ಮಾರಕವನ್ನು ಡ್ರಾಸ್‌ನಲ್ಲಿ ನಿರ್ಮಿಸಿದೆ. ಇದು ಯುದ್ಧದ ಸಮಯದಲ್ಲಿ ಪ್ರಸಿದ್ಧವಾದ ಪ್ರಮುಖ ಸ್ಥಳವಾಗಿದೆ ಮತ್ತು ಈಗ ಈ ಸ್ಮಾರಕವನ್ನು ಕಾರ್ಗಿಲ್ ಯುದ್ಧ ಸ್ಮಾರಕ ಹಾಗೂ ಡ್ರಾಸ್ ಯುದ್ಧ ಸ್ಮಾರಕ ಎಂದು ವಿವಿಧ ಹೆಸರಿನಲ್ಲಿ ಕರೆಯಲಾಗುತ್ತದೆ.

ಹುತಾತ್ಮ ಯೋಧರ ಹೆಸರುಗಳಿವೆ

ಹುತಾತ್ಮ ಯೋಧರ ಹೆಸರುಗಳಿವೆ

PC:Darshancg

ಸ್ಯಾಂಡ್ಸ್ಟೋನ್ ಗೋಡೆಯು ಸ್ಮಾರಕದಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು, ಯುದ್ಧದಲ್ಲಿ ಜೀವವನ್ನು ಕಳೆದುಕೊಂಡ ಭಾರತೀಯ ಸೇನಾ ಸಿಬ್ಬಂದಿಗಳ ಹೆಸರುಗಳನ್ನು ತೋರಿಸುತ್ತದೆ . ಸ್ಮಾರಕಕ್ಕೆ ಹತ್ತಿರದಲ್ಲಿ ನೀವು ಒಂದು ಸ್ಮರಣಾರ್ಥ ಗಿಷ್ಟ್ ಅಂಗಡಿಯನ್ನು ನೋಡಬಹುದು.

ಎಲ್ಲಿದೆ ಈ ಯುದ್ಧ ಸ್ಮಾರಕ ?

ಎಲ್ಲಿದೆ ಈ ಯುದ್ಧ ಸ್ಮಾರಕ ?

PC: Vinodtiwari2608

ಕಾರ್ಗಿಲ್ ಯುದ್ಧ ಸ್ಮಾರಕವು ಟೋಲೋಲಿಂಗ್‌ನ ತಪ್ಪಲಿನಲ್ಲಿರುವ ಡ್ರಾಸ್ ಕಣಿವೆಯಲ್ಲಿದೆ. ಲೆಹ್ ನಿಂದ ಕಾರ್ಗಿಲ್‌ಗೆ ಭೇಟಿ ನೀಡಿದಾಗ ನೀವು ಸ್ಮಾರಕವನ್ನು ಭೇಟಿ ಮಾಡಬಹುದು. ಇದು ಪ್ರಸಿದ್ಧ ಟೈಗರ್ ಹಿಲ್‌ನ ಅಡ್ಡಲಾಗಿ ನಗರ ಕೇಂದ್ರದಿಂದ 5 ಕಿ.ಮೀ ದೂರದಲ್ಲಿದೆ.

ಯಾವಾಗ ಭೇಟಿ ನೀಡುವುದು ಸೂಕ್ತ ?

ಯಾವಾಗ ಭೇಟಿ ನೀಡುವುದು ಸೂಕ್ತ ?

PC:Ashwin Kumar

ಭೇಟಿ ನೀಡುವ ಸಮಯ: ಭಾನುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ 10:00 ರಿಂದ 12:00 ರವರೆಗೆ ಮತ್ತು 02:00 ರಿಂದ 05:00 ರವರೆಗೆ ಈ ಯುದ್ಧ ಸ್ಮಾರಕವು ಪ್ರವಾಸಿಗರ ಭೇಟಿಗಾಗಿ ತೆರೆದಿರುತ್ತದೆ. ಮೇ ನಿಂದ ಸೆಪ್ಟೆಂಬರ್‌ ವರೆಗೆ ಇಲ್ಲಿಗೆ ಭೇಟಿ ನೀಡಲು ಸೂಕ್ತ ಕಾಲವಾಗಿದೆ.

ಇತರ ಪ್ರವಾಸಿ ತಾಣಗಳು

ಇತರ ಪ್ರವಾಸಿ ತಾಣಗಳು

PC:Ashoosaini2002

ಕಾರ್ಗಿಲ್ ಟ್ರೆಕ್ಕಿಂಗ್, ಕ್ಯಾಂಪಿಂಗ್, ಪರ್ವತಾರೋಹಣ, ರಿವರ್ ರಾಫ್ಟಿಂಗ್ ಮುಂತಾದ ಸಾಹಸ ಚಟುವಟಿಕೆಗಳಿಗೆ ಉತ್ತಮ ತಾಣವಾಗಿದೆ. ಈ ಪ್ರದೇಶದಲ್ಲಿ ಪ್ರಮುಖ ಪ್ರವಾಸಿ ಆಕರ್ಷಣೆಗಳೆಂದರೆ ನನ್ ಮತ್ತು ಕುನ್ ಶಿಖರಗಳು, ಮುಲ್ಬೆಕ್, ಝನ್ಸ್ಕಾರ್ ವ್ಯಾಲಿ ಇತ್ಯಾದಿ. ಸ್ಥಳೀಯ ಆಕರ್ಷಣೆಗಳಲ್ಲಿ ಪಶ್ಮಿನಾ ಶಾಲುಗಳು, ಸ್ಥಳೀಯ ಕಾರ್ಪೆಟ್‌ಳು, ಒಣಗಿದ ಏಪ್ರಿಕಾಟ್ ಇತ್ಯಾದಿ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Jivinjohn

ವಿಮಾನ ಮೂಲಕ: ಕಾರ್ಗೀಲ್‌ಗೆ ಹೋಗಲು ಸಮೀಪದ ವಿಮಾನ ನಿಲ್ದಾಣವೆಂದರೆ ಲೇಹ್. ದೆಹಲಿ, ಚಂಡೀಗಡ್, ಶ್ರೀನರ ಹಾಗೂ ಜಮ್ಮುವಿನಿಂದ ಲೇಹ್‌ಗೆ ಸಾಕಷ್ಟು ವಿಮಾನಗಳಿವೆ.
ರೈಲು ಮಾರ್ಗ: ಕಾರ್ಗೀಲ್‌ಗೆ ಸಮೀಪದ ರೈಲು ನಿಲ್ದಾಣವೆಂದರೆ ಜಮ್ಮು ತವಿ.
ರಸ್ತೆ ಮಾರ್ಗ: ರಸ್ತೆ ಮೂಲಕ ಹೋಗುವುದಾದರೆ ಶ್ರೀನಗರ-ಲೇಹ್ ಮಾರ್ಗದ ಮೂಲಕ ಹೋಗಬಹುದು. ಇದು ಜೂನ್‌ನಿಂದ ನವಂಬರ್‌ವರೆಗೆ ತೆರೆದಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X