Search
  • Follow NativePlanet
Share
» »ಪಿಶಾಚಿಯಿಂದ ತಪ್ಪಿಸಿಕೊಳ್ಳೋ ತಾಖತ್ತು ನಿಮಗಿದ್ಯಾ ? ಹಾಗಾದ್ರೆ ಖೂನೀ ನದಿಗೊಮ್ಮೆ ಹೋಗಿ

ಪಿಶಾಚಿಯಿಂದ ತಪ್ಪಿಸಿಕೊಳ್ಳೋ ತಾಖತ್ತು ನಿಮಗಿದ್ಯಾ ? ಹಾಗಾದ್ರೆ ಖೂನೀ ನದಿಗೊಮ್ಮೆ ಹೋಗಿ

ದೆಹಲಿಯಂತಹ ಬ್ಯುಸಿ ನಗರ ಕೂಡಾ ಭಯಾನಕ ನಗರಗಳಲ್ಲೊಂದಾಗಿರುತ್ತದೆ ಎಂದು ನೀವ್ಯಾವತ್ತಾದರೂ ಊಹಿಸಿದ್ದೀರಾ? ಹೌದು ದಿನವಿಡೀ ಜನಜಂಗುಳಿಯಿಂದ ಕೂಡಿರುವ ದೆಹಲಿಯಲ್ಲಿ ಈ ಪ್ಯಾರನಾರ್ಮಲ್ ಆಕ್ಟಿವಿಟಿಗಳು ಏನು ಹೊಸತಲ್ಲ. ದೆಹಲಿಯಲ್ಲಿನ ಈ ಹಾಂಟೆಡ್ ಸ್ಥಳಗಳಲ್ಲಿ ನೀವು ಯಾವತ್ತಾದರೂ ಭೇಟಿ ನೀಡಿದ್ದೀರಾ? ಆ ಸ್ಥಳಗಳು ಯಾವುವು ಅನ್ನೋದು ನಿಮಗೆ ಗೊತ್ತಾ?

ಇಲ್ಲವೆಂದಾದಲ್ಲಿ, ನೀವು ನಿಮ್ಮ ಸ್ವಂತ ನೆರಳನ್ನೂ ಸಹ ನೋಡಿ ಭಯಪಡುವ ಓರ್ವ ವ್ಯಕ್ತಿಯಾಗಿದ್ದರೆ ಈ ಸ್ಥಳಕ್ಕೆ ಭೇಟಿ ನೀಡಲೇ ಬೇಕು. ಈ ಮೆಟ್ರೋಪಾಲಿಟನ್ ನಗರದಲ್ಲಿ ಖೂನೀ ನದಿ ಎನ್ನುವ ಒಂದು ಸ್ಥಳವಿದೆ. ಇದು ದೆಹಲಿಯಲ್ಲಿನ ಒಂದು ಚರ್ಚಾವಿಷ್ಯವಾಗಿದ್ದು, ಅದರ ರಹಸ್ಯತೆಗೆ ಸಂಬಂಧಿಸಿದಂತೆ ಹಲವಾರು ಘಟನೆಗಳಿವೆ. ಈ ಸ್ಪೂಕಿ ಸ್ಪಾಟ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ.

ಖೂನಿ ನಾಡಿನ ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳು

ಖೂನಿ ನಾಡಿನ ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳು

ದೆಹಲಿಯ ಕೇಂದ್ರಭಾಗದಲ್ಲಿ ನೆಲೆಗೊಂಡಿಡಿರುವ ಈ ಸ್ಥಳವಯ ರೋಹಿಣಿ ಜಿಲ್ಲೆಯಲ್ಲಿದೆ. ಖೂನೀ ನದಿ ಮರಗಳಿಂದ ಮತ್ತು ಹಸಿರು ಸಸ್ಯಗಳಿಂದ ಆವೃತವಾಗಿರುವ ಒಂದು ಸಣ್ಣ ಹರಿವನ್ನು ಹೊಂದಿದೆ. ಇದು ಒಂದು ಭಯಾನಕ ಸ್ಥಳವಾಗಿದೆ ಎಂದು ನಂಬಲಾಗಿದೆ. ಏಕೆಂದರೆ ಆ ಪ್ರದೇಶದಲ್ಲಿ ವಾಸಿಸುವ ಸ್ಥಳೀಯರು ಹಲವಾರು ನಿಗೂಢ ಘಟನೆಗಳನ್ನು ಎದುರಿಸಿದ್ದಾರೆ. ಆದರೆ ಈ ಘಟನೆಗಳನ್ನು ಸಾಬೀತುಪಡಿಸಲು ದೃಢವಾದ ಪುರಾವೆಗಳು ಕಂಡುಬಂದಿಲ್ಲ.

ಇಲ್ಲಿನ ದೇವಿಗೆ ಸಾತ್ವಿಕ ಪಶು ಬಲಿ ನೀಡಲಾಗುತ್ತದಂತೆ; ಏನಿದರ ವಿಶೇಷತೆಇಲ್ಲಿನ ದೇವಿಗೆ ಸಾತ್ವಿಕ ಪಶು ಬಲಿ ನೀಡಲಾಗುತ್ತದಂತೆ; ಏನಿದರ ವಿಶೇಷತೆ

ಚಿತ್ರವಿಚಿತ್ರ ಘಟನೆಗಳು

ಚಿತ್ರವಿಚಿತ್ರ ಘಟನೆಗಳು

ಖೂನೀ ನದಿಯ ಸುತ್ತಮುತ್ತ ನಡೆಯುವ ಚಿತ್ರವಿಚಿತ್ರ ಘಟನೆಗಳು ಈ ಪ್ರದೇಶದಲ್ಲಿ ವಾಸಿಸುವ ಹೆಚ್ಚಿನ ಜನರನ್ನು ಹೆದರಿಸುತ್ತದೆ. ಆದ್ದರಿಂದ, ಸೂರ್ಯಾಸ್ತದ ನಂತರ ಈ ಕೊಳದ ಸುತ್ತಲೂ ಯಾರೂ ಕೂಡಾ ಸುಳಿಯುವುದಿಲ್ಲ.

ನದಿಯನ್ನು ಮುಟ್ಟಿದ್ರೆ ಏನಾಗುತ್ತಾರೆ

ನದಿಯನ್ನು ಮುಟ್ಟಿದ್ರೆ ಏನಾಗುತ್ತಾರೆ

ಖೂನೀ ನದಿಯ ನೀರನ್ನು ಯಾರಾದರೂ ಸ್ಪರ್ಶಿಸಿದರೆ ಅವರನ್ನು ನೀರೋಳಗೆ ಸೆಳೆಯುತ್ತದೆ. ಸ್ಥಳೀಯರ ಪ್ರಕಾರ, ಇಂತಹ ಘಟನೆಗಳು ಬಹಳಷ್ಟು ಬಾರಿ ನಡೆದಿವೆ. ಹೆಚ್ಚಿನವು ಆತ್ಮಹತ್ಯೆಗಳಿಗೆ ಸಂಬಂಧಿಸಿವೆ. ಖೂನೀ ನದಿ ನೀರಿನೊಳಗೆ ಇಳಿದವರು ಯಾರೂ ಜೀವಂತವಾಗಿ ಹಿಂದಿರುಗಿಲ್ಲ. ಬದಲಿಗೆ, ಅವರು ದೆವ್ವಗಳಾಗಿ ತಿರುಗಾಡುತ್ತಾರೆ.

ಶಿವನ ಎದೆ ಮೇಲೆ ನಿಂತಿರುವ ಕಾಳಿ ; ತಂತ್ರ ಮಂತ್ರಗಳಿಗೆ ಫೇಮಸ್ ಈ ಮಂದಿರಶಿವನ ಎದೆ ಮೇಲೆ ನಿಂತಿರುವ ಕಾಳಿ ; ತಂತ್ರ ಮಂತ್ರಗಳಿಗೆ ಫೇಮಸ್ ಈ ಮಂದಿರ

ಆಳ ಕಡಿಮೆ ಇದ್ರೂ ಮುಳುಗಿ ಸಾಯ್ತಾರೆ ಜನ

ಆಳ ಕಡಿಮೆ ಇದ್ರೂ ಮುಳುಗಿ ಸಾಯ್ತಾರೆ ಜನ

ಆಳ ಕಡಿಮೆ ಇದ್ರೂ ಮುಳುಗಿ ಸಾಯ್ತಾರೆ ಜನಖೂನೀ ನದಿ ಸುತ್ತಮುತ್ತಲು ಸಾಯಂಕಾಲದ ಸಮಯದಲ್ಲಿ ಯಾರಾದರೂ ಅಳುವ ಶಬ್ದಗಳು ಕೇಳಿಸುತ್ತದೆ. ಈ ನೈಸರ್ಗಿಕ ತಾಣವನ್ನು ದುಃಸ್ವಪ್ನಗೊಳಿಸುವ ಪ್ರಮುಖ ಕಾರಣವೆಂದರೆ, ಇತರ ಸರಾಸರಿ ನದಿಗಳಿಗೆ ಹೋಲಿಸಿದರೆ ಈ ನದಿಯ ಆಳ ತುಂಬಾ ಕಡಿಮೆ . ಆದರೂ, ಇಲ್ಲಿ ಜನರು ಮುಳುಗಿ ಸಾಯುತ್ತಿದ್ದಾರೆ ಎನ್ನುವುದು ವಿಚಿತ್ರ. ಈ ರಹಸ್ಯವು ಇನ್ನೂ ಭೇಧಿಸಲಾಗದ ಕಗ್ಗಂಟಾಗಿಯೇ ಉಳಿದಿದೆ.

ಖೂನೀ ನದಿಗೆ ನೀವು ಯಾಕೆ ಭೇಟಿ ನೀಡಬೇಕು?

ಖೂನೀ ನದಿಗೆ ನೀವು ಯಾಕೆ ಭೇಟಿ ನೀಡಬೇಕು?

ನಿಗೂಢತೆಯನ್ನು ಹೊಂದಿರುವ ಜಾಗವನ್ನು ಅನ್ವೇಷಿಸಬೇಕೆಂದಿದ್ದಲ್ಲಿ ಖೂನೀ ನದಿ ನಿಮ್ಮ ತಾಣವಾಗಿದೆ. ಪ್ರೇತ ಕಥೆಗಳಿಂದ ಯಾವಾಗಲೂ ಆಕರ್ಷಿತರಾಗಿರುವ ಮತ್ತು ನಿಗೂಢ ಸ್ಥಳಗಳನ್ನು ಗೋಜುಬಿಡಿಸುವವರಲ್ಲಿ ನೀವೂ ಒಬ್ಬರಾಗಿದ್ದರೆ, ನೀವು ಖೂನೀ ನದಿಗೆ ಭೇಟಿ ನೀಡಲೇಬೇಕು. ಆದಾಗ್ಯೂ, ಈ ಪ್ರದೇಶದಲ್ಲಿ ಸಾವಿನ ಹಲವಾರು ಘಟನೆಗಳು ನಡೆದಿರುವುದರಿಂದ ನೀವು ಜಾಗ್ರತೆಯಿಂದಿರಬೇಕು. ಅಂತಹ ಸ್ಥಳಗಳಲ್ಲಿ ನಿಮ್ಮನ್ನು ನೀವು ನಿಭಾಯಿಸಲು ಸಾಧ್ಯವಿಲ್ಲವೆಂದಾದರೆ ಅಲ್ಲಿಗೆ ಹೋಗುವ ಕಲ್ಪನೆಯನ್ನು ಮರೆತುಬಿಡುವುದು ಸೂಕ್ತವಾಗಿದೆ.

ಖೂನೀ ನದಿಗೆ ತಲುಪುವುದು ಹೇಗೆ ?

ಖೂನೀ ನದಿಗೆ ತಲುಪುವುದು ಹೇಗೆ ?

ದೆಹಲಿಯ ಮಧ್ಯಭಾಗದಲ್ಲಿರುವ ಈ ಸ್ಥಳವು ದೆಹಲಿಯ ಎಲ್ಲಾ ಇತರ ಪ್ರಮುಖ ನಗರಗಳು ಮತ್ತು ಪಟ್ಟಣಗಳೊಂದಿಗೆ ಎಲ್ಲಾ ವಿಧಾನಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ರೈಲು, ರಸ್ತೆ ಮತ್ತು ವಿಮಾನದ ಮೂಲಕ ಸುಲಭವಾಗಿ ತಲುಪಬಹುದು. ಆದ್ದರಿಂದ, ನೀವು ಖೂನೀ ನದಿ ಪ್ರದೇಶವನ್ನು ರಸ್ತೆಯ ಮೂಲಕ ಅನುಕೂಲಕರವಾಗಿ ಅನುಸರಿಸಬಹುದು. ಹೇಗಾದರೂ, ನೀವು ವಿಮಾನ ಅಥವಾ ರೈಲು ಪ್ರಯಾಣ ವೇಳೆ, ನೀವು ಕ್ರಮವಾಗಿ ವಿಮಾನನಿಲ್ದಾಣ ಮತ್ತು ನಿಲ್ದಾಣದಿಂದ ದೆಹಲಿಯ ರೋಹಿಣಿ ಜಿಲ್ಲೆಯ ಕ್ಯಾಬ್ ಹಿಡಿಯಲು ಅಗತ್ಯವಿದೆ. ಒಮ್ಮೆ ನೀವು ಪ್ರದೇಶವನ್ನು ತಲುಪಿದರೆ ನಂತರ ಅಲ್ಲಿ ಯಾರನ್ನಾದರೂ ಖೂನೀ ನದಿ ಮಾರ್ಗವನ್ನು ಕೇಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X