
ಕೇರಳದ ಜನತೆಗೆ ಕೇರಳ ಸರ್ಕಾರವು ದೀಪಾವಳಿ ಸಂದರ್ಭದಲ್ಲಿ ಒಂದು ಖುಷಿಯ ವಿಚಾರವನ್ನು ತಿಳಿಸಿದೆ.ಅದೇನೆಂದರೆ ಕೇರಳದಲ್ಲಿ ಈವರೆಗೂ ಇದ್ದ ಬೋಟ್‌ಗಿಂತಲೂ ಅತ್ಯಧಿಕ ವೇಗದ ಬೋಟ್‌ನ್ನು ಬಿಡುಗಡೆ ಮಾಡಿದೆ. ಈ ಮೂಲಕ ಪ್ರವಾಸಿಗರಿಗೆ ಕೇರಳದಲ್ಲಿ ಸುತ್ತಾಡುವುದು ಇನ್ನಷ್ಟು ಸುಲಭವಾಗಲಿದೆ.

ವೇಗ 120
ಕೇರಳ ಸರ್ಕಾರವು ಈ ವರೆಗಿನ ಅತ್ಯಂತ ಸ್ಪೀಡ್ ಬೋಟ್‌ನ್ನು ಲಾಂಚ್ ಮಾಡಿದ್ದು, ಅದರ ಹೆಸರು ವೇಗ 120. ಇದು ಏರ್ನಾಕುಲಂ, ಕೊಟ್ಟಾಯಂ, ಅಳಪ್ಪಿಯನ್ನು ಜೋಡಲಿದೆ. ಕೇರಳದ ಮುಖ್ಯಮಂತ್ರಿ ಕಾರ್ಯಲಯವು ಈ ವಿಷ್ಯವನ್ನು ಟ್ವಿಟ್ ಮಾಡಿದೆ.
ಇಲ್ಲಿ ತಮ್ಮ ಕೋರಿಕೆ ಈಡೇರಿದರೆ ಮಣ್ಣಿನ ಗೊಂಬೆಯನ್ನು ಹರಕೆ ಸಲ್ಲಿಸುತ್ತಾರೆ ಭಕ್ತರು

ಗಂಟೆಗೆ 25 ಕಿ.ಮೀ
ಈ ಬೋಟ್ ಗಂಟೆಗೆ 25 ಕಿ.ಮೀ ವೇಗದಲ್ಲಿ ಚಲಿಸಲಿದೆ. ಹಾಗಾಗಿ ಏರ್ನಾಕುಲಂ ಹಾಗೂ ವಯೋಕಾಂ ನಡುವಿನ ಪ್ರಯಾಣ ಬರೀ 90 ನಿಮಿಷದಲ್ಲಿ ಪೂರ್ಣಗೊಳ್ಳುತ್ತದೆ.

ಈವರೆಗಿನ ಬೋಟ್‌ನ ವೇಗ ಗಂಟೆಗೆ 14ಕಿ.ಮೀ
ಈ ವರೆಗೆ ಕೇರಳದಲ್ಲಿದ್ದ ಬೋಟ್‌ನ ವೇಗ ಪ್ರತಿಗಂಟೆಗೆ 14 ಕಿ.ಮೀ. ಹಾಗಾಗಿ ವೇಗ 120 ಬಂದ ನಂತರ ಪ್ರತಿದಿನ ನದಿ ಮೂಲಕ ಪ್ರಯಾಣಿಸುವವರಿಗೆ ಬಹಳ ಉಪಕಾರಿಯಾಗಲಿದೆ. ಈ ಸ್ಪೀಡ್ ಬೋಟ್‌ನ್ನು ಫೀಡರ್ ಬೋಟ್ ಮೂಲಕ ಏರ್ನಾಕುಲಂ, ಕೊಟ್ಟಾಯಂ, ಅಳಪ್ಪಿಯನ್ನು ಜೋಡಲಾಗುತ್ತದೆ.
ಕೇದಾರನಾಥದಲ್ಲಿ ಮೋದಿ ದೀಪಾವಳಿ ಆಚರಣೆ ಹೇಗಿದೆ ನೋಡಿದ್ದೀರಾ?

ಎಷ್ಟು ಜನರು ಪ್ರಯಾಣಿಸಬಹುದು
ಈ ಬೋಟ್‌ನಲ್ಲಿ ಎಸಿಯೂ ಇದೆ. ಒಟ್ಟಾರೆ 120 ಮಂದಿ ಏಕಕಾಲದಲ್ಲಿ ಈ ಬೋಟ್‌ನಲ್ಲಿ ಪ್ರಯಾಣಿಸಬಹುದು. 40 ಮಂದಿ ಎಸಿ ಕ್ಯಾಬಿನ್‌ನಲ್ಲಿ ಕುಳಿತರೆ, ಇನ್ನು 40 ಮಂದಿ ಸಾಮಾನ್ಯ ಕ್ಯಾಬಿನ್‌ನಲ್ಲಿ ಕುಳಿತುಕೊಳ್ಳಬಹುದು.

ಟಿಕೇಟ್ ಎಷ್ಟು
ಈ ಬೋಟ್‌ನಲ್ಲಿ ನೀವು ಎಸಿ ಕ್ಯಾಬಿನ್‌ನಲ್ಲಿ ಪ್ರಯಾಣಿಸಬೇಕೆಂದಿದ್ದರೆ 80ರೂ. ಟಿಕೇಟ್ ಪಡೆಯಬೇಕು. ಇನ್ನೂ ಸಾಮಾನ್ಯ ಕ್ಯಾಬಿನ್‌ನಲ್ಲಿ ಪ್ರಯಾಣಿಸುವುದಾದರೆ 40 ರೂ. ಟಿಕೇಟ್ ಪಡೆಯಬೇಕು.
ಕಳಸದಲ್ಲಿ ಒಡಮೂಡಿರುವ ಮೂಡಿಗೆರೆಯ ಕಳಶೇಶ್ವರನ ದರ್ಶನ ಮಾಡಿದ್ದೀರಾ?

ವೇಗ 120 ನಿರ್ಮಾಣ
ಈ ಬೋಟ್‌ನ್ನು ನವಗತಿ ಮರೈನ್ ಡಿಸೈನ್ ಮತ್ತು ನಿರ್ಮಾಣ ಏಜೆನ್ಸಿ ನಿರ್ಮಿಸಿದೆ. ಇದು ಎಲ್ಲಾ ರೀತಿಯ ಸುರಕ್ಷತಾ ಮಾನದಂಡಗಳನ್ನು ಒಳಗೊಂಡಿದೆ. ಇದು ಸಕ್ರಿಯ ಅಗ್ನಿಶಾಮಕ ವ್ಯವಸ್ಥೆಯನ್ನು ಹೊಂದಿದೆ ಮತ್ತು ಅದರ ಎಂಜಿನ್ ಕೊಠಡಿ ಸಂಪೂರ್ಣವಾಗಿ ನಿರೋಧಕವಾಗಿದೆ.

ದಿನನಿತ್ಯ ಪ್ರಯಾಣಿಕರಿಗೂ ಅನುಕೂಲ
ಕೇರಳ ಪ್ರವಾಸಿಗರಿಗಷ್ಟೇ ಅಲ್ಲದೆ, ದಿನನಿತ್ಯ ಕೇರಳದಲ್ಲಿ ನದಿಮೂಲಕ ಪ್ರಯಾಣಿಸುವ ಜನರಿಗೂ ಅನುಕೂಲವಾಗಲಿದೆ. ಆದಷ್ಟು ಬೇಗ ತಾವು ತಲುಪಬೇಕಾದ ತಾಣವನ್ನು ತಲುಪಬಹುದು.