Search
  • Follow NativePlanet
Share
» » ದುಂಬಿಯಂತೆ ಬಂದು ಅಸುರನನ್ನು ಸಂಹರಿಸಿದ ದುರ್ಗೆಯ ಸನ್ನಿಧಿಯೇ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ

ದುಂಬಿಯಂತೆ ಬಂದು ಅಸುರನನ್ನು ಸಂಹರಿಸಿದ ದುರ್ಗೆಯ ಸನ್ನಿಧಿಯೇ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಕಟೀಲು ದೇವಸ್ಥಾನಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ದಿನಿತ್ಯ ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡಿ ತಾಯಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತಾರೆ. ನಂದಿನಿ ನದಿಯ ಮಧ್ಯಭಾಗದಲ್ಲಿ ಈ ದೇವಾಲಯವಿದೆ.

ಪೌರಾಣಿಕ ಕಥೆ

ಪೌರಾಣಿಕ ಕಥೆ

PC:Premnath Kudva

ಲೋಕಕಂಟಕರಾಗಿ ಮೆರೆಯುತ್ತಿದ್ದ ಶುಂಭಾನಿಶಂಭರನ್ನು ದೇವಿ ಸಂಹರಿಸಿದ್ದಳು. ಶುಂಭಾನಿಶಂಭರ ಮಂತ್ರಿಯಾಗಿದ್ದ ಅರುಣಾಸುರನು ರಾಕ್ಷಸರ ನಾಯಕನಾಗಿ ಋಷಿಮುನಿಗಳ ತಪಸ್ಸನ್ನು ಭಂಗ ಪಡಿಸಲಾರಂಭಿಸಿದ. ಭೂ ಲೋಕದಲ್ಲಿ ಯಜ್ಞ, ಯಾಗಗಳು ನಡೆಯದಿದ್ದಾಗ ಭೂ ಲೋಕದಲ್ಲಿ ಮಳೆ ಬೆಳೆ ಇಲ್ಲದೆ ಭೀಕರ ಕ್ಷಾಮ ತಲೆದೋರುತ್ತದೆ.

130 ವರ್ಷದಿಂದ ಹಸಿರು ಪಟಾಕಿ ತಯಾರಿಸುತ್ತಿರುವ ಈ ಹಳ್ಳಿಗೆ ಹೋಗಿದ್ದೀರಾ?

ಕಾಮಧೇನುಗಾಗಿ ದೇವಲೋಕಕ್ಕೆ ಹೋದ ಮಹರ್ಷಿ

ಕಾಮಧೇನುಗಾಗಿ ದೇವಲೋಕಕ್ಕೆ ಹೋದ ಮಹರ್ಷಿ

ಜನರ ದಾರುಣ ಸ್ಥಿತಿಯಿಂದ ವಿಚಲಿತರಾದ ಜಾಬಾಲಿ ಮಹರ್ಷಿಗಳು, ದೇವತೆಗಳನ್ನು ತೃಪ್ತಿಗೊಳಿಸಿ ತನ್ಮೂಲಕ ಮಳೆ ಸುರಿಯುವಂತೆ ಮಾಡಲು ಒಂದು ಯಜ್ಞವನ್ನು ನಡೆಸಲು ನಿಶ್ಚಯಿಸಿದರು. ಅದಕ್ಕಾಗಿ ಅವರು ದೇವಲೋಕಕ್ಕೆ ತೆರಳಿ ಯಜ್ಞಕ್ಕೆ ಸಹಾಯಕವಾಗುವಂತೆ ಕಾಮಧೇನುವನ್ನು ತಮ್ಮೊಡನೆ ಕಳುಹಿಸಿ ಕೊಡಲು ದೇವೇಂದ್ರನಲ್ಲಿ ವಿನಂತಿಸಿದರು.

ಭೂ ಲೋಕಕ್ಕೆ ತೆರಳು ನಿರಾಕರಿಸಿ ನಂದಿನಿ

ಭೂ ಲೋಕಕ್ಕೆ ತೆರಳು ನಿರಾಕರಿಸಿ ನಂದಿನಿ

ಆದರೆ ಕಾಮಧೇನುವು ವರುಣ ಲೋಕಕ್ಕೆ ತೆರಳಿದ್ದರಿಂದ ಅವಳ ಬದಲಿಗೆ ಅವಳ ಮಗಳಾದ ನಂದಿನಿಯನ್ನು ಉದ್ದೇಶಿತ ಯಜ್ಞಕ್ಕೆ ಕರೆದೊಯ್ಯಲು ದೇವೇಂದ್ರನು ಅನುಮತಿಸಿದನು. ಅದಕ್ಕಾಗಿ ಮಹರ್ಷಿಗಳು ನಂದಿನಿಯ ಬಳಿಗೆ ತೆರಳಿ ತಮ್ಮೊಡನೆ ಬರುವಂತೆ ವಿನಂತಿಸಿದಾಗ ಅವಳು ಭೂಲೋಕವನ್ನು ಹಾಗೂ ಭೂಲೋಕದ ಜನರನ್ನು ನಿಂದಿಸಿ, ಮಹರ್ಷಿಗಳೊಡನೆ ಬರಲು ನಿರಾಕರಿಸಿದಳು.

ಕೋಲಾರದ ಈ ಗರುಡನ ದರ್ಶನ ಪಡೆದ್ರೆ ಅದೃಷ್ಟ ಪ್ರಾಪ್ತಿಯಾಗುತ್ತಂತೆ!

ನಂದಿನಿಗೆ ಶಾಪವಿತ್ತ ಮಹರ್ಷಿ

ನಂದಿನಿಗೆ ಶಾಪವಿತ್ತ ಮಹರ್ಷಿ

ಇದರಿಂದ ಮನನೊಂದ ಮಹರ್ಷಿಗಳು ಭೂಲೋಕದಲ್ಲಿ ನದಿಯಾಗಿ ಹರಿಯುವಂತೆ ನಂದಿನಿಯನ್ನು ಶಪಿಸಿದರು. ನಂದಿನಿಯು ಕ್ಷಮಿಸುವಂತೆ ಪ್ರಾರ್ಥಿಸಿದಾಗ ಕರುಣಾಪೂರ್ಣರಾದ ಮಹರ್ಷಿಗಳು ಶಾಪವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸುವಂತೆ ಸೂಚಿಸಿದರು.

ನದಿಯಾಗಿ ಹರಿದ ನಂದಿನಿ

ನದಿಯಾಗಿ ಹರಿದ ನಂದಿನಿ

ಅದರಂತೆಯೇ ನಂದಿನಿಯು ನಡೆದುಕೊಂಡಾಗ ಪ್ರತ್ಯಕ್ಷಳಾದ ಆದಿಶಕ್ತಿಯು ಋಷಿವಾಕ್ಯವನ್ನು ಸುಳ್ಳಾಗಿಸುವುದು ಅಸಾಧ್ಯವಾದ್ದರಿಂದ ನಂದಿನಿಯು ನದಿಯಾಗಿ ಹರಿಯಲೇಬೇಕೆಂದೂ, ಮುಂದೆ ತಾನೇ ಅವಳ ಮಗಳಾಗಿ ಜನಿಸಿ ಶಾಪದಿಂದ ಮುಕ್ತಿಯನ್ನು ಕೊಡುವುದಾಗಿಯೂ ಅಭಯವನ್ನಿತ್ತಳು. ಇದರಿಂದ ಸಮಾಧಾನಗೊಂಡ ನಂದಿನಿಯು ಮಾಘ ಶುಧ್ಧ ಪೂರ್ಣಿಮೆಯಂದು ಕನಕಗಿರಿಯಿಂದ ನದಿಯಾಗಿ ಹರಿದಳು. ಇದರಿಂದ ಭೂಮಿಯು ಮತ್ತೆ ಹಸುರಿನಿಂದ ಕಂಗೊಳಿಸಲಾರಂಭಿಸಿತು.

ಐದು ಮುಖ, ಐದು ಶರೀರವುಳ್ಳ ಬೆಂಗಳೂರಿನ ಪಂಚಮುಖ ಗಣೇಶನ ದರ್ಶನ ಪಡೆದಿದ್ದೀರಾ?

ವರ ಪಡೆದ ಅರುಣಾಸುರ

ವರ ಪಡೆದ ಅರುಣಾಸುರ

ಇತ್ತ ಅರುಣಾಸುರನು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ತನಗೆ ತ್ರಿಮೂರ್ತಿಗಳಿಂದಾಗಲೀ, ದೇವತೆಗಳಿಂದಾಗಲೀ, ಪುರುಷರಿಂದ ಅಥವಾ ಸ್ತ್ರೀಯರಿಂದಲಾಗಲೀ, ಚತುಷ್ಪದಿಗಳಿಂದಲಾಗಲೀ, ಷಟ್ಪದಿಗಳಿಂದಲಾಗಲೀ ಮರಣ ಬಾರದಂತೆ ವರವನ್ನು ಪಡೆದಿದ್ದನು.

ಆದಿಶಕ್ತಿಯ ಮೊರೆಹೋದ ತ್ರಿಮೂರ್ತಿಗಳು

ಆದಿಶಕ್ತಿಯ ಮೊರೆಹೋದ ತ್ರಿಮೂರ್ತಿಗಳು

ಸರಸ್ವತೀ ದೇವಿಯೂ ಕೂಡ ಅವನಿಗೆ ಗಾಯತ್ರೀ ಮಂತ್ರವನ್ನುಪದೇಶಿಸಿ ಅನುಗ್ರಹಿಸಿದ್ದಳು. ಇವೆಲ್ಲವುಗಳಿಂದ ಅತ್ಯಂತ ಬಲಿಷ್ಠನಾದ ಅವನು ದೇವಲೋಕಕ್ಕೆ ಆಕ್ರಮಣ ನಡೆಸಿ ಅದನ್ನು ತನ್ನ ವಶಪಡಿಸಿಕೊಂಡನು. ತಮ್ಮ ನೆಲೆಯನ್ನು ಕಳೆದುಕೊಂಡ ದೇವತೆಗಳು ತ್ರಿಮೂರ್ತಿಗಳ ಜೊತೆಗೂಡಿ ಸ್ವರ್ಗವನ್ನು ಮರಳಿ ವಶಪಡಿಸಿ ಕೊಡುವಂತೆ ಆದಿಶಕ್ತಿಯನ್ನು ಮೊರೆಹೊಕ್ಕರು.

ಬೆಂಗಳೂರು ಸಮೀಪವಿರುವ ಮಾರಿಬೆಟ್ಟಕ್ಕೆ ಹೋಗಿದ್ದೀರಾ?

ದರ್ಪದಿಂದ ಮೆರೆದ ಅರುಣಾಸುರ

ದರ್ಪದಿಂದ ಮೆರೆದ ಅರುಣಾಸುರ

ದೇವಿಯು, ಅರುಣಾಸುರನು ಗಾಯತ್ರೀ ಮಂತ್ರವನ್ನು ಉಪಾಸಿಸುವಷ್ಟು ಸಮಯ ತನಗೂ ಅವನನ್ನು ವಧಿಸುವುದು ಅಸಾಧ್ಯವೆಂದು ಹೇಳಿ, ದೇವಗುರು ಬೃಹಸ್ಪತಿಗಳ ಸಹಾಯದಿಂದ ಅವನನ್ನು ಗಾಯತ್ರೀ ಮಂತ್ರಪಠಣದಿಂದ ವಿಮುಖ ನನ್ನಾಗಿ ಮಾಡುವಂತೆ ತಿಳಿಸಿದಳು. ಅದರಂತೆಯೇ ಅರುಣಾಸುರನಲ್ಲಿಗೆ ತೆರಳಿದ ಬೃಹಸ್ಪತಿಗಳು ಅವನನ್ನು ಉಪಾಯದಿಂದ ಗಾಯತ್ರೀ ಮಂತ್ರದಿಂದ ವಿಮುಖನನ್ನಾಗಿಸಿದರು. ಇದರಿಂದ ಅರುಣಾಸುರನು ತಾನು ದೇವರಿಂದಲೂ ದೊಡ್ಡವನೆಂದು ಭಾವಿಸಲಾರಂಭಿಸಿದನು. ಋಷಿ ಮುನಿಗಳ ಯಜ್ಞವನ್ನು ಹಾಳುಗೆಡವಿ, ಎಲ್ಲರೂ ತನ್ನನ್ನೇ ಆರಾಧಿಸಬೇಕೆಂದು ಆಜ್ನೆ ವಿಧಿಸಿದನು

ಮೋಹಿನಿಯ ರೂಪ

ಮೋಹಿನಿಯ ರೂಪ

ಅಟ್ಟಹಾಸ ಮಿತಿಮೀರಿದಾಗ ದೇವತೆಗಳಿಗೆ ಇತ್ತ ಮಾತಿನಂತೆ ದೇವಿಯು ಮೋಹಿನಿಯ ರೂಪವನ್ನು ತಾಳಿ ಅರುಣಾಸುರನ ಉದ್ಯಾನದಲ್ಲಿ ಸುತ್ತಾಡಲಾರಂಭಿಸಿದಳು. ಅರುಣಾಸುರನ ಮಂತ್ರಿಗಳಾದ ಚಂಡ ಪ್ರಚಂಡರು ಅವಳನ್ನು ನೋಡಿ, ಅರುಣಾಸುರನಿಗೆ ಅವಳ ಸೌಂದರ್ಯದ ಬಗ್ಗೆ ತಿಳಿಸಿದರು. ಅರುಣಾಸುರನು ಅವಳನ್ನು ಮದುವೆಯಾಗಲು ಉದ್ದೇಶಿಸಿ ಅವಳ ಬಳಿಗೆ ತೆರಳಿದನು. ತನ್ನ ಒಡೆಯರಾಗಿದ್ದ ಶುಂಭ ನಿಶುಂಭರನ್ನು ವಧಿಸಿದವಳು ಅವಳೇ ಎಂದು ತಿಳಿದು ಅವಳ ಮೇಲೆ ದಾಳಿ ಮಾಡಿದನು.

ತುಮಕೂರಿನ ದೇವರಾಯನ ಬೆಟ್ಟದಲ್ಲಿರುವ ನರಸಿಂಹನ ದರ್ಶನ ಪಡೆದಿದ್ದೀರಾ?

ದುಂಬಿ ರೂಪ ತಾಳಿದ ದೇವಿ

ದುಂಬಿ ರೂಪ ತಾಳಿದ ದೇವಿ

ಆಗ ದೇವಿಯು ಅಲ್ಲಿಯೇ ಸಮೀಪದಲ್ಲಿದ್ದ ಬಂಡೆಯೊಂದರಲ್ಲಿ ಅಂತರ್ಧಾನಳಾದಳು. ಅರುಣಾಸುರನು ಕೋಪದಿಂದ ಆ ಬಂಡೆಯನ್ನು ತನ್ನ ಖಡ್ಗದಿಂದ ಒಡೆಯಲು ಅದರಿಂದ ಸಾವಿರಾರು ಸಂಖ್ಯೆಯಲ್ಲಿ ಹೊರಟ ದುಂಬಿಗಳು ಅವನನ್ನು ಕಚ್ಚಲಾರಂಭಿಸಿದವು. ದೇವಿಯು ಒಂದು ದೊಡ್ಡದಾದ ದುಂಬಿಯ ರೂಪವನ್ನು ತಾಳಿ ಅರುಣಾಸುರನನ್ನು ಕಚ್ಚಿ ಕೊಂದಳು.

ಈ ದೇವಸ್ಥಾನಕ್ಕೆ ಬಂದ 48 ದಿನಗಳಲ್ಲಿ ಮಾನಸಿಕ ರೋಗ ಗುಣವಾಗುತ್ತಂತೆ !

ದುರ್ಗಾ ಪರಮೇಶ್ವರೀ

ದುರ್ಗಾ ಪರಮೇಶ್ವರೀ

ಭ್ರಮರದ ರೂಪವನ್ನು ತಾಳಿದ್ದರಿಂದ ಭ್ರಾಮರಿ ಎಂದು ಪ್ರಖ್ಯಾತಿಯನ್ನು ಪಡೆದಳು. ದೇವತೆಗಳು, ಜಾಬಾಲಿ ಮಹರ್ಷಿಗಳು ದೇವಲೋಕದ ಕಲ್ಪವೃಕ್ಷದಿಂದ ತಂದ ಎಳನೀರಿನಿಂದ ರೌದ್ರ ರೂಪ ದಲ್ಲಿದ್ದ ದೇವಿಗೆ ಅಭಿಷೇಕವನ್ನು ಮಾಡಿ ಶಾಂತರೂಪವನ್ನು ಹೊಂದುವಂತೆ ಪ್ರಾರ್ಥಿಸಿದರು. ಅದರಂತೆಯೇ ದೇವಿಯು ನಂದಿನಿ ನದಿಯ ಮಧ್ಯದಲ್ಲಿದ್ದ ಒಂದು ಪುಟ್ಟ ದ್ವೀಪದಲ್ಲಿ ಲಿಂಗ ರೂಪದಲ್ಲಿ ದುರ್ಗಾ ಪರಮೇಶ್ವರೀ ಎಂಬ ಹೆಸರಿನಿಂದ ಉದ್ಭವಿಸಿದಳು.

ಕಟೀಲು ಎಂಬ ಹೆಸರು ಬಂತು

ಕಟೀಲು ಎಂಬ ಹೆಸರು ಬಂತು

ನಂದಿನಿಯ ಶಾಪ ವಿಮೋಚನೆಯಾಯಿತು. ನಂದಿನಿಯ ಕಟಿ (ಸೊಂಟ/ನಡು) ಭಾಗದಲ್ಲಿರುವ ಇಳೆ (ಭೂಮಿ) ಯಲ್ಲಿ ದೇವಿಯು ಉದ್ಭವಿಸಿದ ಕಾರಣ ಆ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರಾಯಿತು. ಪುಷ್ಪಾಲಂಕಾರ ಪೂಜೆ ಎಂದರೆ ದೇವರಿಗೆ ಇಷ್ಟ ಎನ್ನುವುದು ಭಕ್ತರ ನಂಬಿಕೆ. ಮಲ್ಲಿಗೆ ಹೂ ದೇವರಿಗೆ ಪ್ರೀಯವಂತೆ. ಆದರೆ ಸಂಪಿಗೆ ಹೂವನ್ನು ಇಲ್ಲಿ ದೇವರಿಗೆ ಅರ್ಪಿಸಲಾಗುವುದಿಲ್ಲ.

ಬೆಂಕಿಯ ಕಾಳಗ

ಬೆಂಕಿಯ ಕಾಳಗ

ಪಟ್ಟೆ ಸೀರೆ ದೇವಿಗೆ ಏನಾದರೂ ಕೋರಿಕೊಂಡು ಪಟ್ಟೆಸೀರೆಯ ಹರಕೆ ನೀಡಿದ್ರೆ ದೇವಿ ಆ ಕೋರಿಕೆಯನ್ನು ಈಡೇರಿಸುತ್ತಾಳೆ ಎನ್ನುವುದು ಭಕ್ತರ ನಂಬಿಕೆ. ಹಾಗಾಗಿ ಇಲ್ಲಿ ಪ್ರತಿದಿನ ಸಾಕಷ್ಟು ಪಟ್ಟೆ ಸೀರೆ ಸೇವೆಗಳು ಕಾಣಸಿಗುತ್ತವೆ. ದುರ್ಗಾಪರಮೇಶ್ವರಿಯ ಜೊತೆಗೆ ಪರಿವಾರ ದೇವತೆಗೂ ಪೂಜೆ ನಡೆಯುತ್ತದೆ. ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇನ್ನೂ ಎಪ್ರಿಲ್ ತಿಂಗಳಲ್ಲಿ ವಾರ್ಷಿಕ ಪೂಜೆಯೂ ಅದ್ದೂರಿಯಾಗಿ ನಡೆಯುತ್ತದೆ. ಜಾತ್ರೆಯ ಸಂದರ್ಭದಲ್ಲಿ ಬೆಂಕಿಯ ಕಾಳಗ ಇಲ್ಲಿನ ಮತ್ತೊಂದು ವಿಶೇಷ. ನಿತ್ಯವೂ ಅನ್ನದಾಸೋಹವನ್ನು ನೀಡುತ್ತದೆ. ಅಕ್ಕ ಪಕ್ಕದ ಊರಿನ ಮಕ್ಕಳಿಗೆ ಅಕ್ಷರದಾಸೋಹವನ್ನೂ ನೀಡುತ್ತಿದೆ ಈ ಕ್ಷೇತ್ರ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more