Search
  • Follow NativePlanet
Share
» »ಉತ್ತರ ಪ್ರದೇಶದಲ್ಲಿನ ಭಯಂಕರವಾದ ಖರ್ಕೋಡ ಕೋಟೆ...

ಉತ್ತರ ಪ್ರದೇಶದಲ್ಲಿನ ಭಯಂಕರವಾದ ಖರ್ಕೋಡ ಕೋಟೆ...

ನಮ್ಮ ದೇಶದ ಜೊತೆ ಜೊತೆಗೆ ಪ್ರಪಂಚದಲ್ಲಿ ಅನೇಕ ದೇಶಗಳಲ್ಲಿ ಪುರಾತನವಾದ ಕಟ್ಟಡಗಳಲ್ಲಿ, ಕೋಟೆಗಳಲ್ಲಿ, ಎಷ್ಟೊ ರಹಸ್ಯಗಳು ಇವೆ. ಅವುಗಳು ಕೆಲವು ಬಾರಿ ತಿಳಿಯುತ್ತದೆ, ಇನ್ನು ಕೆಲವು ಬಾರಿ ತಿಳಿಯುವುದಿಲ್ಲ. ಅದರಲ್ಲಿಯೂ ರಹಸ್ಯಗಳನ್ನು ಕೆಲವು ಮಂ

By Sowmyabhai

ಈ ಕೋಟೆ ಎಷ್ಟು ಭಯಂಕರವಾಗಿ ಕಾಣಿಸುತ್ತದೆಯೋ ಇಂತಹ ಕೋಟೆಗಳನ್ನು ಹಾಗು ನಿರ್ಮಾಣ ಶೈಲಿಯನ್ನು ಹೆಚ್ಚಾಗಿ ಉತ್ತರ ಭಾರತ ದೇಶದಲ್ಲಿಯೇ ಕಾಣಿಸುತ್ತದೆ. ಹಾಗೆಯೇ ಈ ಕೋಟೆಯು ಉತ್ತರ ಪ್ರದೇಶದಲ್ಲಿನ ಝಾನ್ಸಿಗೆ 70 ಕಿ.ಮೀ ದೂರದಲ್ಲಿರುವ ಖರ್ಕೋಡ ಕೋಟೆ ಇದೆ. ಇದು ಅತ್ಯಂತ ಪುರಾತನವಾದ ಕೋಟೆ ಇದಾಗಿದೆ.

ಈ ಕೋಟೆಯ ಬಗ್ಗೆ ಜನರು ಏನು ಮಾತನಾಡಿಕೊಳ್ಳುತ್ತಾರೆ ಎಂದರೆ, ಈ ಕೋಟೆಯ ಒಳಗೆ ಹೋಗುವವರು ಮತ್ತೆಂದಿಗೂ ಆ ಕೋಟೆಯ ಒಳಗೆಯೇ ಯಾರಿಗೂ ತಿಳಿಯದೇ ಮಾಯವಾಗುತ್ತಾರೆ ಎಂದು ಹೇಳುತ್ತಾರೆ.

ಅಸಲಿಗೆ ಆ ಕೋಟೆ ಏನು? ಇದರ ರಹಸ್ಯವೇನು ಎಂಬುದನ್ನು ಒಮ್ಮೆ ಲೇಖನದ ಮೂಲಕ ತಿಳಿದುಕೊಳ್ಳೋಣ.

ನಮ್ಮ ದೇಶದ ಜೊತೆ ಜೊತೆಗೆ ಪ್ರಪಂಚದಲ್ಲಿ ಅನೇಕ ದೇಶಗಳಲ್ಲಿ ಪುರಾತನವಾದ ಕಟ್ಟಡಗಳಲ್ಲಿ, ಕೋಟೆಗಳಲ್ಲಿ, ಎಷ್ಟೊ ರಹಸ್ಯಗಳು ಇವೆ. ಅವುಗಳು ಕೆಲವು ಬಾರಿ ತಿಳಿಯುತ್ತದೆ, ಇನ್ನು ಕೆಲವು ಬಾರಿ ತಿಳಿಯುವುದಿಲ್ಲ. ಅದರಲ್ಲಿಯೂ ರಹಸ್ಯಗಳನ್ನು ಕೆಲವು ಮಂದಿ ಛೇದಿಸಿದರೆ, ಇನ್ನು ಕೆಲವು ರಹಸ್ಯವಾಗಿಯೇ ಉಳಿಯುತ್ತದೆ.

1.ಕೋಟೆ ಎಲ್ಲಿದೆ?

1.ಕೋಟೆ ಎಲ್ಲಿದೆ?

ಈ ಖರ್ಕೋಡ ಕೋಟೆಯು ಒಂದು ಪುರಾತನವಾದ ಕೋಟೆಯಾಗಿದ್ದು, ಉತ್ತರ ಪ್ರದೇಶದಲ್ಲಿದೆ. ಇದೊಂದು ಭಯಾನಕವಾದ ಕೋಟೆ ಎಂದು ಸ್ಥಳೀಯರು ಹೇಳುತ್ತಿರುತ್ತಾರೆ. ಈ ಕೋಟೆಯ ಒಳಗೆ ಹೋದರೆ ಮತ್ತೆಂದಿಗೂ ಹಿಂದಿರುಗುವುದಿಲ್ಲ ಎಂದು ಹೇಳುತ್ತಾರೆ.

2.ಈ ಕೋಟೆಯನನ್ನು ಏನೆಂದು ಕರೆಯುತ್ತಾರೆ?

2.ಈ ಕೋಟೆಯನನ್ನು ಏನೆಂದು ಕರೆಯುತ್ತಾರೆ?

ಇದೊಂದು ಭಯಂಕರವಾದ ಕೋಟೆಯಾಗಿದ್ದು, ಇದನ್ನು ಭಯಾನಕ ಖರ್ಕೋಡ ಕೋಟೆ ಎಂದೇ ಅಲ್ಲಿನ ಪ್ರಜೆಗಳು ಕರೆಯುತ್ತಾರೆ. ನೋಡಲು ಸುಂದರವಾಗಿದ್ದರು ಕೂಡ ಅದರದೇ ಆದ ರಹಸ್ಯವನ್ನು ಅದು ಅಡಗಿಸಿಕೊಂಡಿದೆ.

3.ಕೋಟೆಯ ರಹಸ್ಯ

3.ಕೋಟೆಯ ರಹಸ್ಯ

ಈ ಕೋಟೆಯಲ್ಲಿ ಯಾರಿಗೂ ತಿಳಿಯದ ಒಂದು ರಹಸ್ಯ ಇದೆ ಎಂದು ಅಲ್ಲಿನ ಜನರು ಭಾವಿಸುತ್ತಾರೆ. ಆ ರಹಸ್ಯವನ್ನು ಭೇದಿಸಲು ಪ್ರಯತ್ನ ಕೂಡ ಯಾರು ಹೆಚ್ಚಾಗಿ ಮಾಡುವುದಿಲ್ಲ ಎಂದು ಕೂಡ ಹೇಳುತ್ತಾರೆ.

4.ಕೋಟೆಯ ಒಳಗೆ ಹೋದವರು ಏನಾಗುತ್ತಾರೆ?

4.ಕೋಟೆಯ ಒಳಗೆ ಹೋದವರು ಏನಾಗುತ್ತಾರೆ?

ಆ ರಹಸ್ಯವನ್ನು ಭೇದಿಸಲು ಯಾಕೆ ಯಾರು ಧೈರ್ಯ ಮಾಡುವುದಿಲ್ಲವೆಂದರೆ, ಈ ಕೋಟೆಯ ಒಳಗೆ ಹೋದವರು ಮತ್ತೆ ಎಂದಿಗೂ ಹೊರಗೆ ಬರುವುದಿಲ್ಲವಂತೆ. ಅಪಾಯವನ್ನು ಉಂಟು ಮಾಡುವ ಈ ಸ್ಥಳಕ್ಕೆ ಯಾರು ಕೂಡ ಕಣ್ಣೆತ್ತಿ ಕೂಡ ನೋಡಲು ಇಷ್ಟ ಪಡುವುದಿಲ್ಲ.

5.ಕೋಟೆಯ ವಿಶೇಷತೆ

5.ಕೋಟೆಯ ವಿಶೇಷತೆ

ಈ ಕೋಟೆಯ ವಿಶೇಷತೆ ಏನೆಂದರೆ ಭೂಮಿಯ ಮೇಲೆಯೇ ಕಾಣಿಸುತ್ತದೆ. ಆದರೆ ಆ ಕೋಟೆಯ 2 ಅಂತಸ್ತು ಮಾತ್ರ ಭೂಮಿಯ ಅಂತರ್ ಭಾಗದೊಳಗೆ ಇರುತ್ತದೆ. ಹೌದು ಈ ಕೋಟೆಯ 2 ಅಂತಸ್ತು ಮೇಲೆಯೇ ಅಲ್ಲದೇ ಕೆಳಗೆ ಕೂಡ ನಿರ್ಮಾಣ ಮಾಡಿದ್ದಾರೆ.

6.ಅತ್ಯಂತ ರಹಸ್ಯವಾಗಿ ನಿರ್ಮಾಣ ಮಾಡಿದ ಕೋಟೆ

6.ಅತ್ಯಂತ ರಹಸ್ಯವಾಗಿ ನಿರ್ಮಾಣ ಮಾಡಿದ ಕೋಟೆ

ಈ ದಿನಗಳಲ್ಲಿ ಅಂಡರ್ ಗ್ರೌಂಡ್ ಪಾರ್ಕಿಂಗ್‍ಗಾಗಿ ಯಾವ ವಿಧವಾಗಿ ಅಪಾರ್ಟ್‍ಮೆಂಟ್‍ಗಳಲ್ಲಿ ನಿರ್ಮಾಣ ಮಾಡುತ್ತಾರೆಯೋ ಅದೇ ರೀತಿ ಇಲ್ಲಿಯೂ ಕಾಣಬಹುದು. ಆ ಕಾಲದಲ್ಲಿಯೇ 2 ಅಂತಸ್ತುಗಳ ಭವನವನ್ನು ಅಂಡರ್ ಗ್ರೌಂಡ್‍ನಲ್ಲಿ ರಹಸ್ಯವಾಗಿ ನಿರ್ಮಾಣ ಮಾಡಿರುವುದು ಆಶ್ರ್ಚಯವೇ ಸರಿ.

7.ನಿಧಿ ನಿಕ್ಷೇಪಗಳನ್ನು ಹೊಂದಿರುವ ಕೋಟೆ

7.ನಿಧಿ ನಿಕ್ಷೇಪಗಳನ್ನು ಹೊಂದಿರುವ ಕೋಟೆ

ಈ ಅಂತರ್ ಭಾಗದಲ್ಲಿರುವ ಈ 2 ಅಂತಸ್ತುಗಳ ಕೊಠಡಿಗಳಲ್ಲಿ ಕೆಲವು ಗೋಡೆಯ ಒಳಗೆ ಎಷ್ಟೊ ಬೆಲೆಬಾಳುವ ವಜ್ರ, ಬಂಗಾರ, ನಿಧಿ ನಿಕ್ಷೇಪಗಳು ಕೂಡ ಇರುತ್ತವೆ ಎಂದು ಅಲ್ಲಿನ ಸುತ್ತಮುತ್ತದ ಪ್ರದೇಶದಲ್ಲಿರುವ ಪ್ರಜೆಗಳು ಬಲವಾಗಿ ನಂಬುತ್ತಾರೆ.

8.ಇಲ್ಲಿ ನಡೆದ ಒಂದು ಘಟನೆ?

8.ಇಲ್ಲಿ ನಡೆದ ಒಂದು ಘಟನೆ?

ಆದರೆ ಯಾರು ಕೂಡ ಆ ಪ್ರದೇಶಕ್ಕೆ ಹೋಗುವುದಕ್ಕೆ ಧೈರ್ಯ ಮಾಡುವುದಿಲ್ಲ. ಆದರೆ ವಿವಾಹವನ್ನು ಮುಗಿಸಿಕೊಂಡು ವಾಪಸ್ಸು ಆಗುತ್ತಿದ್ದ ಮದುವೆಯ ಗುಂಪೊಂದು ಈ ಕೋಟೆಯನ್ನು ನೋಡಿದರಂತೆ. ಅದರ ಒಳಗೆ ಹೋಗಿ ಫೋಟೊಗಳನ್ನು ಹಿಡಿದುಕೊಳ್ಳಬೇಕು ಎಂದು ಆ ಗುಂಪು ಒಳಗೆ ಹೋದರಂತೆ...

9.ಆ ಗುಂಪು ಎಲ್ಲಿ?

9.ಆ ಗುಂಪು ಎಲ್ಲಿ?

ಆ ವಿಧವಾಗಿ ಮದುವೆಯ ಗುಂಪು ಈ ಕೋಟೆಯನ್ನು ಹೊರಗಿನಿಂದ ನೋಡಿ ಆನಂದವಾಗಿ ಒಳಗೆ ಹೋದರು. ಆ ಕೋಟೆಯ 2 ಅಂತಸ್ತು ಹೊಂದಿರುವ ಕೊಠಡಿಗಳಲ್ಲಿ ಹೋದರಂತೆ. ಅದರಂತೆ ಇನ್ನೆಂದಿಗೂ ಹೊರಗೆ ಬಂದೇ ಇಲ್ಲ ಎಂದು ಹೇಳುತ್ತಾರೆ ಅಲ್ಲಿನವರು.

10.ಯಾರು ಹೇಳಲಾಗದ ರಹಸ್ಯ

10.ಯಾರು ಹೇಳಲಾಗದ ರಹಸ್ಯ

ಅವರೆಲ್ಲಾ ಸುಮಾರು 60 ಮಂದಿ ಇದ್ದರಂತೆ. 60 ಮಂದಿ ಇದ್ದರು ಕೂಡ ಅಂತರ್ ಭಾಗದಲ್ಲಿದ್ದ ಆ 2 ಅಂತಸ್ತಿಗೆ ಏಕೆ ಹೋದರು? ಹೋಗಿ ಯಾವ ವಿಧವಾಗಿ ಮಾಯವಾದರು ಎಂಬುದು ಇಂದಿಗೂ ರಹಸ್ಯವಾಗಿಯೇ ಉಳಿದಿರುವ ಸಂಗತಿಯೇ ಆಗಿದೆ.

11.ಕೋಟೆಯ ರಹಸ್ಯವೇನು?

11.ಕೋಟೆಯ ರಹಸ್ಯವೇನು?

ಆ ನಂತರ ಕೂಡ ಇಂತಹ ಅನೇಕ ಘಟನೆಗಳು ನಡೆದಿವೆಯಂತೆ. ಒಬ್ಬರು ಇಬ್ಬರು ಆದರೆ ಪರವಾಗಿಲ್ಲ, ಗುಂಪು ಗುಂಪುಗಳಾಗಿ ಹೋದವರು ಹಿಂದಿರುಗಿ ಬರುವುದಿಲ್ಲವೆಂದರೆ ಆಶ್ರ್ಚಯ, ಭಯ ಆಗದೇ ಮತ್ತೇನು?. ಆ ಮದುವೆಯ ಗುಂಪು ಹೇಗೆ ಮಾಯವಾದರು ಎಂಬುದು ಇಂದಿಗೂ ತಿಳಿದಿಲ್ಲ, ಹಾಗಾಗಿಯೇ ಯಾರು ಕೂಡ ಆ ಕೋಟೆಯ ಒಳಗೆ ಪ್ರವೇಶಿಸುವುದಿಲ್ಲ.

12.ಕೋಟೆಯ ದ್ವಾರವನ್ನು ಮುಚ್ಚಿದರು

12.ಕೋಟೆಯ ದ್ವಾರವನ್ನು ಮುಚ್ಚಿದರು

ಈ ಕೋಟೆಯ ದ್ವಾರವನ್ನು ಮುಚ್ಚುವುದಕ್ಕಿಂತ ಮೊದಲು ಈ ಕೋಟೆಯ ಅಂಡರ್ ಗ್ರೌಂಡ್‍ನಲ್ಲಿ ಇರುವ ಆ 2 ಅಂತಸ್ತಿನ ಒಳಗೆ ಹೋಗುವ ಎಲ್ಲಾ ದ್ವಾರವನ್ನು ಕೂಡ ಮುಚ್ಚಿ, ಬೀಗವನ್ನು ಹಾಕಿದರಂತೆ. ಆ ನಂತರ ಈ ಕೋಟೆಯ ಹೊರಗೆ ಇರುವ ದೊಡ್ಡ ಪ್ರವೇಶ ದ್ವಾರವನ್ನು ಕೂಡ ಮುಚ್ಚಿ ಹಾಕಿದ್ದಾರೆ.

13.ಕೋಟೆಯ ಚರಿತ್ರೆ

13.ಕೋಟೆಯ ಚರಿತ್ರೆ

ಈ ಕೋಟೆ ಇಂದಿನದಲ್ಲ. ಸುಮಾರು 12 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಕೆಲವು ಶಾಸನದ ಮೂಲಕ ತಿಳಿದು ಬರುತ್ತದೆ. ಈ ಕೋಟೆಯು ಭೂಮಿಯಿಂದ ಮೇಲೆ 3 ಅಂತಸ್ತುಗಳು ಇದ್ದರೆ, ಉಳಿದ 2 ಅಂತಸ್ತುಗಳು ಭೂಮಿಯ ಅಂತರ್ ಭಾಗದಲ್ಲಿ ರಹಸ್ಯವಾಗಿ ಆ ಕಾಲದಲ್ಲಿ ನಿರ್ಮಾಣ ಮಾಡಿದ್ದಾರೆ.

14.ಕೋಟೆಯನ್ನು ಯಾರು ನಿರ್ಮಾಣ ಮಾಡಿದರು?

14.ಕೋಟೆಯನ್ನು ಯಾರು ನಿರ್ಮಾಣ ಮಾಡಿದರು?

ಈ ಕೋಟೆಯನ್ನು ಯಾರು ನಿರ್ಮಾಣ ಮಾಡಿದರು ಎಂಬುದಕ್ಕೆ ಖಚಿತವಾದ ಆಧಾರಗಳು, ಶಿಲಾ ಶಾಸನಗಳು ಯಾವುದು ಇಂದಿಗೂ ದೊರೆತ್ತಿಲ್ಲ.

15.ಕೋಟೆಯ ಒಳಗೆ ಹೇಗೆ ಇರುತ್ತದೆ?

15.ಕೋಟೆಯ ಒಳಗೆ ಹೇಗೆ ಇರುತ್ತದೆ?

ಈ ಕೋಟೆಯು ಸುಮಾರು 1500 ರಿಂದ 200 ವರ್ಷಗಳ ಪುರಾತನವಾದುದು ಎಂದು ಭಾವಿಸಲಾಗುತ್ತಿದೆ. ಈ ಕೋಟೆಯ ಹೊರಗಿನಿಂದ ನೋಡಿದರೆ ಒಂದು ವಿಧವಾಗಿ ಕಂಡರೆ, ಒಳಗೆ ಮಾತ್ರ ಯಾವುದೇ ಬೆಳಕು ಕೂಡ ಇರದೇ ಭಯಂಕರವಾಗಿ ಕಾಣಿಸುತ್ತದೆ ಎಂತೆ.

16.ಪ್ರಾಣವನ್ನು ಕಳೆದುಕೊಂಡಿದ್ದಾರೆ

16.ಪ್ರಾಣವನ್ನು ಕಳೆದುಕೊಂಡಿದ್ದಾರೆ

ಈ ಕೋಟೆಯ ಒಳಭಾಗದಲ್ಲಿ 2 ಅಂತಸ್ತುನಲ್ಲಿರುವ ನಿಧಿಗಾಗಿ ಪ್ರಯತ್ನಿಸಿ ಅನೇಕ ಮಂದಿ ತಮ್ಮ ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರಂತೆ. ಅಂತಹ ವಿಷಯಗಳು ಕೆಲವು ಬೆಳಕಿಗೆ ಬಂದರೆ ಇನ್ನು ಕೆಲವು ವಿಷಯಗಳು ಬೆಳಕಿಗೆ ಬಂದಿಲ್ಲವಂತೆ.

17.ಸಾಮಾನ್ಯವಾಗಿಯೇ ಕಾಣುತ್ತದೆ ಕೋಟೆ

17.ಸಾಮಾನ್ಯವಾಗಿಯೇ ಕಾಣುತ್ತದೆ ಕೋಟೆ

ಸಾಮಾನ್ಯ ಕೋಟೆಯ ಹಾಗೆ ಕಾಣುವ ಈ ಕೋಟೆಯು ಭೂಮಿಯ ಮೇಲಿನಿಂದ ನೋಡಿದರೆ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ಸಮೀಪಕ್ಕೆ ಹೋದರೆ ಆ ಕೋಟೆಯು ಆ ಪ್ರದೇಶದಲ್ಲಿ ಇರುವುದಿಲ್ಲವಂತೆ, ಮಾಯವಾಗುತ್ತದೆ ಎಂತೆ.

18.ಅದ್ಭುತವಾದ ಕೋಟೆ

18.ಅದ್ಭುತವಾದ ಕೋಟೆ

ಏಕೆಂದರೆ ಆ ಕಾಲದಲ್ಲಿ ಇತರ ಶತ್ರುಗಳ ದಂಡಯಾತ್ರೆಯಿಂದ ಕಾಪಾಡಿಕೊಳ್ಳುವ ಸಲುವಾಗಿ ಆ ಕೋಟೆಯನ್ನು ಆ ಕಾಲದಲ್ಲಿ ಟೆಕ್ನಾಲಜಿಯನ್ನು ಉಪಯೋಗಿಸಿ ನಿರ್ಮಾಣ ಮಾಡಿರುತ್ತಾರೆ ಎಂದು ನಂಬಲಾಗಿದೆ. ಇದೊಂದು ಅದ್ಭುತ ಎಂದು ಕೂಡ ಅನೇಕ ಮಂದಿ ಹೇಳಿಕೊಳ್ಳುತ್ತಿರುತ್ತಾರೆ.

19.ಶತ್ರುಗಳಿಂದ ರಕ್ಷಣೆ

19.ಶತ್ರುಗಳಿಂದ ರಕ್ಷಣೆ

ಇದು ನಮ್ಮ ಸುತ್ತ ಇರುವ ವಾತಾವರಣದಲ್ಲಿ ಭೂಮಿಯ ಮೇಲಿನಿಂದ ಕೆಲವು ಮಾರ್ಪಾಟಿನಿಂದಾಗಿ ನಮ್ಮ ಕಣ್ಣಿಗೆ ಅಂತಹ ಭ್ರಮೆಯಾಗುತ್ತದೆ. ಅದೇ ವಿಧವಾಗಿ ಅದೇ ಟೆಕ್ನಾಲಜಿ ಉಪಯೋಗಿಸಿ ಆ ದಿನಗಳಲ್ಲಿ ಆ ಕೋಟೆಯನ್ನು ಶತ್ರುಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ನಿರ್ಮಾಣ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.

ಅಂತಹ ರಹಸ್ಯದ ಬಗ್ಗೆ ತಿಳಿದುಕೊಳ್ಳಬೇಕಾದರೆ ಅನೇಕ ಮಂದಿ ಹೆಚ್ಚು ಆಸಕ್ತಿ ಇರುತ್ತದೆ. ಅಂತಹ ರಹಸ್ಯಗಳಲ್ಲಿ ಈ ಕೋಟೆಯು ಒಂದು. ಆಶ್ಚರ್ಯ ಏನಪ್ಪ ಎಂದರೆ ಈ ಕೋಟೆಯ ಒಳಗೆ ಹೋದವರು ಮಾಯವಾಗುತ್ತಾರಂತೆ. ಇನ್ನೆಂದಿಗೂ ಹಿಂದಿರುಗಿ ಬರುವದಿಲ್ಲವಂತೆ. ಅಸಲಿಗೆ ಈ ಕೋಟೆಯ ಒಳಗೆ ಅಂತಹದ್ದು ಏನಿದೆ? ಎಂಬುದನ್ನು ತಿಳಿದುಕೊಳ್ಳೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X