Search
  • Follow NativePlanet
Share
» »ದಿನಕ್ಕೆ ಮೂರು ಬಾರಿ ಬಣ್ಣಬದಲಾಯಿಸುವ ಶಿವಲಿಂಗ ಎಲ್ಲಿದೆ ಗೊತ್ತಾ?

ದಿನಕ್ಕೆ ಮೂರು ಬಾರಿ ಬಣ್ಣಬದಲಾಯಿಸುವ ಶಿವಲಿಂಗ ಎಲ್ಲಿದೆ ಗೊತ್ತಾ?

ಬಣ್ಣ ಬದಲಾಯಿಸುವ ಶಿವನ ಬಗ್ಗೆ ಕೇಳಿದ್ದೀರಾ? ಹೌದು ದಿನಕ್ಕೆ ಮೂರು ಬಾರಿ ಈ ಪುಣ್ಯಕ್ಷೇತ್ರದ ಶಿವಲಿಂಗ ಬಣ್ಣ ಬದಲಾಯಿಸುತ್ತಂತೆ. ಆ ಪುಣ್ಯ ಕ್ಷೇತ್ರ ಯಾವುದು, ಅದು ಎಲ್ಲಿದೆ ಎನ್ನುವುದನ್ನು ಇಂದು ತಿಳಿಯೋಣ.

ಎಲ್ಲಿದೆ ಈ ದೇವಾಲಯ?

ಎಲ್ಲಿದೆ ಈ ದೇವಾಲಯ?

PC: youtube

ಶಿವಲಿಂಗ ಬಣ್ಣ ಬದಲಾಯಿಸುವ ಕ್ಷೇತ್ರವೇ ಕಾಂತೇಶ್ವರ ದೇವಾಲಯ. ಇದು ಉಡುಪಿಯಿಂದ 40 ಕಿ.ಮೀ ದೂರದಲ್ಲಿದೆ ಇದು ಪಡುಬಿದ್ರೆಯಿಂದ ಕಾರ್ಕಳಕ್ಕೆ ಹೋಗುವ ರಸ್ತೆಯಲ್ಲಿ ಬೆಳವಾಯಿಯಿಂದ ಸ್ವಲ್ಪವೇ ದೂರದಲ್ಲಿದೆ ಕಾಂತಾವರ.

ಈಗ ಬರೀ 10 ರೂ. ಯಲ್ಲಿ ರೈಲಿನಲ್ಲಿ ಓಡಾಡಬಹದು, ಎಲ್ಲಿಗೆಲ್ಲಾ ಗೊತ್ತಾ? ಈಗ ಬರೀ 10 ರೂ. ಯಲ್ಲಿ ರೈಲಿನಲ್ಲಿ ಓಡಾಡಬಹದು, ಎಲ್ಲಿಗೆಲ್ಲಾ ಗೊತ್ತಾ?

ಹೆಸರು ಬಂದಿದ್ದು ಹೇಗೆ?

ಹೆಸರು ಬಂದಿದ್ದು ಹೇಗೆ?

PC: youtube
ಈ ಕ್ಷೇತ್ರವು ಹಿಂದೆ ಅರಣ್ಯದಿಂದ ಕೂಡಿತ್ತು. ಕಾಂತಾರ ಎಂದರೆ ಅರಣ್ಯ ಅಲ್ಲಿನ ಪ್ರಕೃತಿಯಿಂದಾಗಿ ಕಾಂತಾವರ ಎಂಬ ಹೆಸರು ಬಂದಿದ್ದು ಎನ್ನಲಾಗುತ್ತದೆ. ಹಾಗೆಯೇ ಇಲ್ಲಿ ಶಿವನು ಪಾರ್ವತಿ ಸಮೇತನಾಗಿ ನೆಲೆಸಿರುವುದರಿಂದ ಇಲ್ಲಿಗೆ ಕಾಂತೇಶ್ವರ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತದೆ.

7ನೇ ಶತಮಾನಕ್ಕೆ ಸೇರಿದ್ದು

7ನೇ ಶತಮಾನಕ್ಕೆ ಸೇರಿದ್ದು

PC: youtube

ಇದನ್ನು 7ನೇ ಶತಮಾನಕ್ಕೆ ಸೇರಿದ್ದು ಎನ್ನಲಾಗುತ್ತದೆ. ಇಲ್ಲಿನ ಮೂಲದೈವ ಕಾಂತೇಶ್ವರ. ಇಲ್ಲಿ ಗಣೇಶ, ಅಣ್ಣಪ್ಪ ಹಾಗೂ ಅರ್ಧನಾರೀಶ್ವರ ಗುಡಿಯೂ ಇದೆ.

ಶಿವಮೊಗ್ಗದಲ್ಲಿರುವ ವರದಾಮೂಲಕ್ಕೆ ಹೋಗಿದ್ದೀರಾ?ಶಿವಮೊಗ್ಗದಲ್ಲಿರುವ ವರದಾಮೂಲಕ್ಕೆ ಹೋಗಿದ್ದೀರಾ?

ಪುರಾಣ ಕಥೆ

ಪುರಾಣ ಕಥೆ

PC: youtube

ಜಂಜವಾತ ಎನ್ನುವ ಅಸುರನ ಕುಟುಂಬ ಇಲ್ಲಿ ನೆಲೆಸಿದ್ದರಂತೆ. ಅವರ ಕುಟುಂಬ ಇಲ್ಲಿ ತಪಸ್ಸು ಮಾಡುತ್ತಿದ್ದ ಮುನಿಗಳಿಗೆ ಕಾಟ ನೀಡುತ್ತಿದ್ದರಂತೆ. ಅವುಗಳಲ್ಲಿ ಅಂಬರೀಶ ಮುನಿ ಆ ರಾಕ್ಷಸರ ಸಂಹಾರಕ್ಕಾಗಿ ಶಿವನನ್ನು ತಪಸ್ಸು ಮಾಡುತ್ತಾನಂತೆ . ಹಾಗಾಗಿ ಶಿವನು ಇಲ್ಲಿ ನೆಲೆಸಿದ್ದಾನೆ ಎನ್ನಲಾಗುತ್ತದೆ.

ಮೂರು ಬಣ್ಣದಲ್ಲಿ ಕಾಣಿಸುವ ಶಿವ

ಮೂರು ಬಣ್ಣದಲ್ಲಿ ಕಾಣಿಸುವ ಶಿವ

PC: youtube

ಇಲ್ಲಿನ ವಿಶೇಷವೆಂದರೆ ಶಿವನು ದಿನದಲ್ಲಿ ಮೂರು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಬೆಳಗ್ಗೆ ಬೆಳ್ಳಿ ಬಣ್ಣದಲ್ಲಿ, ಮಧ್ಯಾಹ್ನ ತಾಮ್ರದ ಬಣ್ಣ ಸಂಜೆ ಬಂಗಾರದ ಬಣ್ಣದಲ್ಲಿ ಶಿವನು ಕಂಗೊಳಿಸುತ್ತಾನೆ. ಇದಕ್ಕೆ ಯಾವುದೇ ಕವಚಗಳನ್ನು ಹಾಕಲಾಗಿಲ್ಲ. ಬರೀ ಶಿಲೆಯ ಲಿಂಗವಿದು. ಇದನ್ನು ವಜ್ರಶಿಲೆ ಎನ್ನಲಾಗುತ್ತದೆ.

ಕಮಲಶಿಲೆಯಲ್ಲಿ ಲಿಂಗರೂಪದಲ್ಲಿ ನೆಲೆನಿಂತಿದ್ದಾಳೆ ದುರ್ಗಾಪರಮೇಶ್ವರಿ ಕಮಲಶಿಲೆಯಲ್ಲಿ ಲಿಂಗರೂಪದಲ್ಲಿ ನೆಲೆನಿಂತಿದ್ದಾಳೆ ದುರ್ಗಾಪರಮೇಶ್ವರಿ

ಭಕ್ತರ ಬೇಡಿಕೆ ಈಡೇರುತ್ತದೆ

ಭಕ್ತರ ಬೇಡಿಕೆ ಈಡೇರುತ್ತದೆ

PC: youtube

ವ್ಯಾಪಾರ ದೋಷ ನಿವಾರಣೆ, ಸಂತಾನ ಪ್ರಾಪ್ತಿ, ಕುಟುಂಬ ಕಲಹ ನಿವಾರಣೆಗೆಯಾಗುತ್ತದೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ. ಇಲ್ಲಿಗೆ ಬಂದ ಭಕ್ತರು ಯಾವತ್ತೂ ಬರೀ ಕೈಯಲ್ಲಿ ಹೋಗೋದಿಲ್ಲ ಎನ್ನುತ್ತಾರೆ.

ಶಿವಲಿಂಗಕ್ಕೆ ಕಡಗ

ಶಿವಲಿಂಗಕ್ಕೆ ಕಡಗ

PC: youtube
ಅಂಬರೀಶ ಮುನಿಗೆ ಪಾರ್ವತಿ ದೇವಿಯು ಕಡಗವನ್ನು ನೀಡಿದ್ದಳಂತೆ. ಶಿವಲಿಂಗಕ್ಕೆ ಕಡಗ ತೊಡಿಸಿ ಪೂಜಿಸುವಂತೆ ಹೇಳಿದ್ದಳಂತೆ. ಆ ಕಡಗವನ್ನು ಇಂದಿಗೂ ಇಲ್ಲಿ ಕಾಣಬಹುದು. ಇಲ್ಲಿನ ನಂದಿಯೂ ಬಹಳ ದೊಡ್ಡದಾಗಿದೆ.

ಬರೀ 5,000 ರೂ. ಇದ್ರೆ ಸಾಕು ಇಲ್ಲಿಗೆ ಹೋಗಿ ಬರಬಹುದು.ಬರೀ 5,000 ರೂ. ಇದ್ರೆ ಸಾಕು ಇಲ್ಲಿಗೆ ಹೋಗಿ ಬರಬಹುದು.

ತೃಂಭಕ ಪರ್ವತ

ತೃಂಭಕ ಪರ್ವತ

PC: youtube

ಕಾಂತೇಶ್ವರನ ಸನ್ನಿಧಾನದಿಂದ ಮೂರು ಕಿ.ಮೀ ದೂರ ಸಾಗಿದರೆ ಅಂಬರೀಶ ಮುನಿ ತಪಸ್ಸು ಮಾಡಿದ ಗುಹೆ ಇದೆ. ಅಲ್ಲೇ ಶಿವನು ದರ್ಶನ ನೀಡಿದನು ಎನ್ನಲಾಗುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: youtube

ಬೆಂಗಳೂರಿನಿಂದ, ಮಂಗಳೂರಿನಿಂದ ಉಡುಪಿಗೆ ಸಾಕಷ್ಟು ಬಸ್‌ಗಳಿವೆ. ಉಡುಪಿಯಿಂದ ೪೦ ಕಿ.ಮೀ ದೂರದಲ್ಲಿ ಈ ಕ್ಷೇತ್ರವಿದೆ.
ಇನ್ನು ರೈಲು ಮೂಲಕ ಹೋಗುವುದಾದರೆ ಸಮೀಪದ ರೈಲು ನಿಲ್ದಾಣವೆಂದರೆ ಉಡುಪಿ ರೈಲುನಿಲ್ದಾಣ.
ವಿಮಾನದ ಮೂಲಕ ಹೊಗುವುದಾದರೆ ಸಮೀಪದ ವಿಮಾನ ನಿಲ್ದಾಣವೆಂದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X