Search
  • Follow NativePlanet
Share
» »ಕಾನ್ಹೇರಿಯ ಗುಹೆ ಆಹಾ ಎಂಥಹ ಸೊಬಗು!

ಕಾನ್ಹೇರಿಯ ಗುಹೆ ಆಹಾ ಎಂಥಹ ಸೊಬಗು!

ಮಹಾರಾಷ್ಟ್ರ ರಾಜ್ಯದಲ್ಲಿ ಪ್ರವಾಸಗಳಿಗೇನು ಕಡಿಮೆ ಇಲ್ಲ. ದೇವಾಲಯಗಳಿಂದ ಹಿಡಿದು ಟ್ರೆಕ್ಕಿಂಗ್‍ವರೆವಿಗೂ ಅದ್ಭುತವಾದ ಆಕರ್ಷಣೆಗಳು ಇಲ್ಲಿವೆ. ಪ್ರವಾಸಿಗರ ಅಭಿರುಚಿಗೆ ತಕ್ಕಂತೆ ಬಗೆ ಬಗೆಯ ತಾಣಗಳನ್ನು ಇಲ್ಲಿ ಕಂಡು ಆನಂದಿಸಬಹುದಾಗಿದೆ. ಇಲ್ಲಿ ಮುಖ್ಯವಾಗಿ ಗುಹೆಗಳು ಅತ್ಯಂತ ಕುತೂಹಲವನ್ನು ಕೇರಳಿಸುತ್ತದೆ. ಅದು ಎಲ್ಲೋರ ಗುಹೆಗಳೇ ಆಗಿರಬಹುದು, ಮಂಡಪೇಶ್ವರ ಗುಹೆಯೇ ಆಗಿರಬಹುದು, ಹರಿಶ್ಚಂದ್ರ ಗುಹೆಯೇ ಅಗಿರಬಹುದು. ಗುಹೆಗಳು ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ ಕುತೂಹಲ ಪ್ರಾರಂಭವಾಗುತ್ತದೆ.

ಸಾವಿರ ವರ್ಷದ ಆ ದೇವಾಲಯದಲ್ಲಿ ಬಗೆಹರಿಸಲಾಗದ ರಹಸ್ಯಗಳು!

ಮುಖ್ಯವಾಗಿ ಗುಹೆಗಳಲ್ಲಿ ಅದರ ವಿಶೇಷವಾದ ಕೆತ್ತನೆಗಳೇ ಇರಬಹುದು ಅಥವಾ ವಿಶೇಷವಾದ ರಚನೆಗಳೇ ಇರಬಹುದು ಪ್ರಸಿದ್ಧವಾದುದೇ ಅಗಿದೆ. ಇಂಥಹ ಅದ್ಭುತವಾದ ಗುಹೆಗಳ ಪೈಕಿ ಕಾನ್ಹೇರಿ ಗುಹೆಗಳು ಕೂಡ ಒಂದಾಗಿದೆ. ಮುಂಬೈನ ನಗರವಾಸಿಗಳಿಗೆ ಇದೊಂದು ವಾರಾಂತ್ಯದ ಪ್ರವಾಸಿ ತಾಣವಾಗಿದೆ.

ಪ್ರಸ್ತುತ ಲೇಖನದಲ್ಲಿ ಅದ್ಭುತವಾದ ಕಾನ್ಹೇರಿ ಗುಹೆಗಳ ಬಗ್ಗೆ ತಿಳಿಯೋಣ.

 ಕಾನ್ಹೇರಿ ಗುಹೆಗಳು

ಕಾನ್ಹೇರಿ ಗುಹೆಗಳು

ಅದ್ಭುತವಾದ ಕಾನ್ಹೇರಿ ಗುಹೆಗಳು ಮಹಾರಾಷ್ಟ್ರ ರಾಜ್ಯದಲ್ಲಿದ್ದು, ಉತ್ತರ ಮುಂಬೈನ ಹೊರವಲಯದ ಬೋರಿವಿಲಿ ಎಂಬ ಪ್ರದೇಶದ ಬಳಿ ನೆಲೆಸಿದೆ. ಹೀಗಾಗಿಯೇ ಈ ಸ್ಥಳಕ್ಕೆ ಸುಲಭವಾಗಿ ಭೇಟಿ ನೀಡಬಹುದಾಗಿದೆ.

Ting Chen

ಕಾನ್ಹೇರಿಯ ಗುಹೆ

ಕಾನ್ಹೇರಿಯ ಗುಹೆ

ಈ ಗುಹೆಗಳು ಭಾರತೀಯ ಶೈಲಿಯಲ್ಲಿ ಕೆತ್ತನೆ ಮಾಡಲಾಗಿದೆ. ಮುಖ್ಯವಾಗಿ ಈ ಗುಹೆಯನ್ನು ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನವನದ ಭಾಗವಾಗಿದ್ದು ಅದರ ಮುಖ್ಯ ದ್ವಾರದಿಂದ ಕೇವಲ 6 ಕಿ.ಮೀಗಳಷ್ಟು ಒಳಭಾಗದಲ್ಲಿದೆ. ಮಹಾರಾಷ್ಟ್ರದ ಬೋರಿವಿಲಿ ರೈಲು ನಿಲ್ದಾಣದಿಂದ 7 ಕಿ.ಮೀ ದೂರದಲ್ಲಿದೆ ಈ ಕಾನ್ಹೇರಿ ಗುಹೆಗಳು.


Varun Patil

ಕಾನ್ಹೇರಿಯ ಗುಹೆ

ಕಾನ್ಹೇರಿಯ ಗುಹೆ

ಈ ಗುಹೆಗೆ ಭೇಟಿ ನೀಡಬೇಕಾದರೆ ಬೆಳಗ್ಗೆ 7:30 ರಿಂದ ಸಂಜೆ 6 ರವರೆಗೆ ಪ್ರವೇಶಿಸಲು ಅನುಮತಿಯನ್ನು ನೀಡಲಾಗುತ್ತದೆ. ಈ ಗುಹೆಗಳ ಮೇಲೆ ಭಾರತೀಯ ಕಲೆಯ ಮೇಲೆ ಯಾವ ರೀತಿ ಬೌದ್ಧ ಧರ್ಮದ ಪ್ರಭಾವ ಉಂಟಾಯಿತು ಎಂಬುದನ್ನು ಸಂಕ್ಷೀಪ್ತವಾಗಿ ಇಲ್ಲಿ ಕಾಣಬಹುದು.


Ting Chen

ಕಾನ್ಹೇರಿಯ ಗುಹೆ

ಕಾನ್ಹೇರಿಯ ಗುಹೆ

ಈ ಸುಂದರವಾದ ಕಾನ್ಹೇರಿ ಗುಹೆಗೆ ಒಂದು ಸ್ಥಳ ಪುರಾಣ ಕೂಡ ಇದೆ. ಅದೆನೆಂದರೆ ಕಾನ್ಹೇರಿ ಎಂಬ ಹೆಸರು ಮೂಲತಃ ಕೃಷ್ಣಗಿರಿ ಎಂಬ ಸಂಸ್ಕøತ ಪದದ ಮೂಲಕ ಉತ್ಪತ್ತಿಯಾಗಿದೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಕೃಷ್ಣಗಿರಿ ಬೆಟ್ಟ ಎಂದರೆ ಕಪ್ಪು ಬೆಟ್ಟ ಎಂಬ ಅರ್ಥವಾಗಿದೆ. ಈ ಕಾನ್ಹೇರಿ ಗುಹೆಯನ್ನು 10 ನೇ ಶತಮಾನದಲ್ಲಿ ನಿರ್ಮಾಣ ಮಾಡಿದ್ದಾರೆ ಎಂದು ಗುರುತಿಸಲಾಗಿದೆ.

Ting Chen

ಕಾನ್ಹೇರಿಯ ಗುಹೆ

ಕಾನ್ಹೇರಿಯ ಗುಹೆ

10 ನೇ ಶತಮಾನದ ಪ್ರಾಚೀನವಾದ ಗುಹೆ ಇದಾದ್ದರಿಂದ ಇಲ್ಲಿಯವರಗೆ ಸುಮಾರು 109 ಗುಹಾ ರಚನೆಗಳನ್ನು ಉತ್ಖನನ ಮಾಡಿ ಹೊರ ತೆಗೆಯಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರತಿಯೊಂದು ಗುಹೆಯಲ್ಲಿಯೂ ಬೌದ್ಧ ಸ್ತೂಪಗಳನ್ನು ಕಾಣಬಹುದು. ಇಷ್ಟೇ ಅಲ್ಲದೇ ಬುದ್ಧನ ವಿಗ್ರಹವನ್ನು ಕೂಡ ಕಾಣಬಹುದು.


Milind13

ಕಾನ್ಹೇರಿಯ ಗುಹೆ

ಕಾನ್ಹೇರಿಯ ಗುಹೆ

ಇಲ್ಲಿನ ಹಲವಾರು ಗುಹೆಗಳು ಬೌದ್ಧ ವಿಹಾರಗಳಿಗಾಗಿ ಬಳಸಲಾಗುತ್ತಿತ್ತು ಎಂದು ಗುರುತಿಸಲಾಗಿದೆ. ಅಂದರೆ ಈ ಗುಹೆಗಳನ್ನು ಧ್ಯಾನ ಮಾಡುವುದು, ವಾಸಿಸುವುದು, ಅಧ್ಯಯನಕ್ಕೊಸ್ಕರ, ಪ್ರಾರ್ಥನ ಮಂದಿರವಾಗಿ ಬಳಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ.

Marco Zanferrari

ಕಾನ್ಹೇರಿಯ ಗುಹೆ

ಕಾನ್ಹೇರಿಯ ಗುಹೆ

ಆಶ್ಚರ್ಯ ಏನಪ್ಪ ಎಂದರೆ ಮೌರ್ಯರು ಹಾಗು ಕುಶಾನರು ಆಳ್ವಿಕೆ ಮಾಡುತ್ತಿದ್ದ ಸಮಯದಲ್ಲಿ ಕಾನ್ಹೇರಿಯನ್ನು ಒಂದು ವಿಶ್ವವಿದ್ಯಾಲಯ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿತ್ತು ಎಂಬುದು ಇತಿಹಾಸದ ಮೂಲಕ ತಿಳಿದುಕೊಳ್ಳಬಹುದಾಗಿದೆ.


Jeff Warren

ಕಾನ್ಹೇರಿಯ ಗುಹೆ

ಕಾನ್ಹೇರಿಯ ಗುಹೆ

ಅಷ್ಟೇ ಅಲ್ಲದೇ ಈ ಕೇಂದ್ರವು ಇತರೆ ಪ್ರಮುಖ ವ್ಯಾಪಾರಿ ಕೇಂದ್ರಗಳಾದ ಸೋಪಾರಾ, ಕಲ್ಯಾಣ, ನಾಶಿಕ್ ಹಾಗು ಉಜ್ಜಯಿನಿಗಳೊಂದಿಗೆ ಸಂಬಂಧವನ್ನು ಸಹ ಹೊಂದಿತ್ತು ಎಂದು ತಿಳಿದು ಬರುತ್ತದೆ.


Elroy Serrao

ಕಾನ್ಹೇರಿಯ ಗುಹೆ

ಕಾನ್ಹೇರಿಯ ಗುಹೆ

ಇದೊಂದು ಪ್ರಾಚೀನವಾದ ಗುಹೆಯಾಗಿದ್ದು, ಇಲ್ಲಿ ಒಟ್ಟು ಬ್ರಾಹ್ಮಿ, ದೇವನಾಗರಿ ಹಾಗು ಪಹಲ್ವಿ ಭಾಷೆಗಳಲ್ಲಿ ಕೆತ್ತನೆ ಮಾಡಲ್ಪಟ್ಟ 51 ಬರಹಗಳು ಮತ್ತು 26 ಶಿಲಾ ಶಾಸನಗಳು ಈ ಗುಹಾ ರಚನೆಗಳಲ್ಲಿ ದೊರೆತ್ತಿವೆ.

Chaitu

ಕಾನ್ಹೇರಿಯ ಗುಹೆ

ಕಾನ್ಹೇರಿಯ ಗುಹೆ

ಈ ಗುಹೆಯ ಸುತ್ತಮುತ್ತ ಸುಂದರವಾದ ವಾತಾವರಣವಿದ್ದು, ಪ್ರವಾಸಿಗರಲ್ಲಿ ಪ್ರಾಕೃತಿಕ ಸೌಂದರ್ಯವನ್ನು ಕೂಡ ಒದಗಿಸುತ್ತದೆ. ಈ ಗುಹಾ ತಾಣವು ಪ್ರಶಾಂತವಾದ ಪರಿಸರದಲ್ಲಿದ್ದು, ಪ್ರವಾಸಿಗರಿಗೆ ವಿಶಿಷ್ಟವಾದ ಅನುಭೂತಿಯನ್ನು ಒದಗಿಸುತ್ತದೆ.


Indrajit Chakraborty

ಕಾನ್ಹೇರಿಯ ಗುಹೆ

ಕಾನ್ಹೇರಿಯ ಗುಹೆ

ಈ ಸ್ಥಳಕ್ಕೆ ಮಳೆಗಾಲದಲ್ಲಿ ಭೇಟಿ ನೀಡಿದರೆ ಮತ್ತಷ್ಟು ಅನುಭೂತಿಯನ್ನು ಪಡೆಯಬಹುದಾಗಿದೆ. ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ನೆಲೆಸಿರುವ ರಚನೆಗಳಿಗೆ ಮಳೆಗಾಲದಲ್ಲಿ ಉಂಟಾಗುವ ತಾತ್ಕಾಲಿಕ ಜಲಪಾತಳ ಸವಿಯನ್ನು ಸವಿಯುತ್ತ ಕಾಣುವುದೇ ಒಂದು ಮನೋಹರವಾದ ದೃಶ್ಯ.

Vaibhav Gupta

ಕಾನ್ಹೇರಿಯ ಗುಹೆ

ಕಾನ್ಹೇರಿಯ ಗುಹೆ

ಈ ಸ್ಥಳಕ್ಕೆ ತಲುಪಲು ಬೋರಿವಿಲಿಯಿಂದ ಪ್ರತಿ ಗಂಟೆಗೊಮ್ಮೆ ಬಸ್ಸುಗಳ ವ್ಯವಸ್ಥೆಯಿದೆ. ಪ್ರವಾಸಿಗರು ರಾಷ್ಟ್ರೀಯ ಉದ್ಯಾನದ ಮುಖ್ಯ ದ್ವಾರ ಹಾಗು ಗುಹಾ ರಚನೆಗಳ ಪ್ರವೇಶ ದ್ವಾರದ ಬಳಿ ಪ್ರವೇಶ ಶುಲ್ಕ ಪಾವತಿ ಮಾಡಿ ಪ್ರವೇಶಿಸಬೇಕು.

Magiceye

ಕಾನ್ಹೇರಿಯ ಗುಹೆ

ಕಾನ್ಹೇರಿಯ ಗುಹೆ

ಕಾನ್ಹೇರಿ ಗುಹೆಯ ಒಳಭಾಗದಲ್ಲಿ ದೊಡ್ಡ ದೊಡ್ಡದಾದ ಸ್ಥಳ ಹಾಗು ಅದ್ಭುತವಾದ ಶಿಲ್ಪಗಳನ್ನು ಕಂಡು ಮೈಮರೆಯಬಹುದು. ಬುದ್ಧನಿಗೆ ಸಂಬಂಧ ಪಟ್ಟ ಅತ್ಯಂತ ಮನೋಹರವಾದ ಪ್ರತಿಮೆಗಳನ್ನು ಕೂಡ ಇಲ್ಲಿ ಕಾಣಬಹುದು.


Milind13

ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more