Search
  • Follow NativePlanet
Share
» »ವಿಜಯವಾಡ ಕನಕದುರ್ಗಾಮ್ಮ ದೇವಾಲಯದ ಬಗ್ಗೆ ನಿಮಗೆ ತಿಳಿಯದ ಸಂಗತಿಗಳು....

ವಿಜಯವಾಡ ಕನಕದುರ್ಗಾಮ್ಮ ದೇವಾಲಯದ ಬಗ್ಗೆ ನಿಮಗೆ ತಿಳಿಯದ ಸಂಗತಿಗಳು....

ದೇವಿಗಳ ದೇವಾಲಯಗಳು ನಮ್ಮ ಭಾರತ ದೇಶದಲ್ಲಿ ತನ್ನದೇ ಆದ ಪ್ರಸಿದ್ಧತೆಯನ್ನು ಪಡೆದುಕೊಂಡಿದೆ. ಆ ದೇವಾಲಯಗಳೆಲ್ಲಾ ಅತ್ಯಂತ ಮಹಿಮಾನ್ವತವಾದುದು ಎಂದೇ ಹೇಳಬಹುದು. ಒಂದೊಂದು ದೇವಾಲಯಕ್ಕೂ ಸುಂದರವಾದ ಹಾಗು ರೋಚಕವಾದ ಕಥೆಗಳು ಹೊಂದಿರುವುದು ಸಾಮಾನ್ಯ. ಆ ಕಥೆಗಳು ಎಂಥವರನ್ನು ಭಕ್ತಿ ಪರವಶರನ್ನಾಗಿ ಮಾಡುತ್ತದೆ. ಆ ದೇವಾಲಯಗಳಲ್ಲಿ ವಿಜಯವಾಡ ಕನಕ ದುರ್ಗಾಮ್ಮ ದೇವಾಲಯವು ಒಂದು.

ಸಾಮಾನ್ಯವಾಗಿ ಕನಕದುರ್ಗಾ ದೇವಾಲಯ ಬಗ್ಗೆ ಯಾರಿಗೂ ಅಷ್ಟಾಗಿ ಮಾಹಿತಿ ತಿಳಿದಿಲ್ಲ ಎಂದು ಕೊಳ್ಳುತ್ತೇನೆ. ಆ ತಾಯಿಯು ವಿಜಯವಾಡದಲ್ಲಿ ಹೇಗೆ ನೆಲೆಸಿದಳು? ಆ ತಾಯಿ ಅಲ್ಲಿ ನೆಲೆಸಲು ಮುಖ್ಯವಾದ ಕಾರಣವೇನು? ಆಕೆಯ ಅವತಾರದ ಬಗ್ಗೆ ಕುತೂಹಲಕಾರಿ ಮಾಹಿತಿಯ ಬಗ್ಗೆ ಈ ಲೇಖನದ ಮೂಲಕ ಮಾಹಿತಿಯನ್ನು ಪಡೆಯೋಣ ಬನ್ನಿ.

1.ಎಲ್ಲಿದೆ?

1.ಎಲ್ಲಿದೆ?

ಕನಕ ದುರ್ಗಾಮ್ಮ ದೇವಾಲಯವು ಆಂಧ್ರ ಪ್ರದೇಶದ ವಿಜಯವಾಡದಲ್ಲಿರುವ ದುರ್ಗಾದೇವಿಯ ಪ್ರಸಿದ್ಧವಾದ ಹಿಂದೂ ದೇವಾಲಯವಾಗಿದೆ. ಕೃಷ್ಣ ನದಿಯ ದಂಡೆಯ ಮೇಲಿರುವ ಇಂದ್ರಕೀಲಾದ್ರಿ ಬೆಟ್ಟದ ಮೇಲೆ ಈ ದೇವಾಲಯವಾಗಿದೆ. ಕಾಳಿಕಾ ಪುರಾಣಗಳಲ್ಲಿ, ದುರ್ಗಾ ಸಪ್ತಶತಿ ಮತ್ತು ವೇದ ಸಾಹಿತ್ಯದಲ್ಲಿ ಇಂದ್ರಕೀಲಾದ್ರಿಯ ಮೇಲೆ ಕನಕದುರ್ಗಾ ದೇವಿಯ ಕುರಿತು ಉಲ್ಲೇಖಗಳಿರುವುದನ್ನು ಕಾಣಬಹುದಾಗಿದೆ.

2.ಸ್ವಯಂ ಭೂ

2.ಸ್ವಯಂ ಭೂ

ವಿಜಯವಾಡದಲ್ಲಿನ ಕನಕ ದುರ್ಗಾಮ್ಮ ದೇವಾಲಯದಲ್ಲಿನ ದುರ್ಗಾ ಅವತಾರಿಯಾದ ಆ ತಾಯಿಯು ಸ್ವಯಂ ಭೂ ಆಗಿ ನೆಲೆಸಿದ್ದಾಳೆ. ಈ ತಾಯಿ ಇಲ್ಲಿ ನೆಲೆಸಲು ರೋಚಕವಾದ ಪುರಾಣ ಕೂಡ ಇದೆ. ಈಕೆಯ ಕಥೆಯನ್ನು ಕೇಳಿದರೆ ಸಕಲ ಪಾಪಗಳು ನಾಶವಾಗುತ್ತದೆ ಎಂದು ನಂಬಲಾಗಿದೆ.

3.ಶ್ರೀ ಶಕ್ತಿ ಪೀಠ

3.ಶ್ರೀ ಶಕ್ತಿ ಪೀಠ

ನಮ್ಮ ಭಾರತ ದೇಶದಲ್ಲಿನ ಒಂದು ಪ್ರಮುಖವಾದ ದೇವಾಲಯವೇ ಅಲ್ಲದೇ ಶ್ರೀ ಶಕ್ತಿ ಪೀಠಗಳಲ್ಲಿ ಒಂದಾಗಿ ಈ ದೇವಾಲಯವು ಪ್ರಸಿದ್ಧತೆಯನ್ನು ಪಡೆದಿದೆ. ಅಭಯ ಪ್ರದಾಯಿನಿಯಾಗಿ, ಭಕ್ತರ ಕೋರಿಕೆಗಳನ್ನು ನೆರವೇರಿಸುವ ಶಕ್ತಿಯಾಗಿ ಈ ದೇವಿ ನೆಲೆಸಿದ್ದಾಳೆ. ಈಕೆಯ ದರ್ಶನಕ್ಕೆ ದೇಶದ ಮೂಲೆ- ಮೂಲೆಗಳಿಂದ ಭಕ್ತರು ಭೇಟಿ ನೀಡುತ್ತಾರೆ. ಸ್ವಯಂ ಭೂ ಆಗಿ ನೆಲೆಸಿರುವ ಈ ತಾಯಿಯು ಅತ್ಯಂತ ಶಕ್ತಿವಂತಳು ಎಂದು ಹೇಳಲಾಗುತ್ತದೆ.

4.ಉಗ್ರ ರೂಪ

4.ಉಗ್ರ ರೂಪ

ಕನಕದುರ್ಗಾಮ್ಮ ಉಗ್ರ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನವನ್ನು ನೀಡುತ್ತಾಳೆ. ಅಂದರೆ ಆನೇಕ ಕೈಗಳನ್ನು ಹೊಂದಿ, ಒಂದು ಕೈಯಲ್ಲಿ ತ್ರಿಶೂಲವನ್ನು ಹಿಡಿದು ಮಹಿಷಾಸೂರನನ್ನು ಸಂಹಾರ ಮಾಡುವ ಭಂಗಿಯಲ್ಲಿ ನೆಲೆಸಿರುವ ಆ ತಾಯಿಯ ರೂಪ ಅತ್ಯಂತ ಅದ್ಭುತವಾಗಿದೆ. ಈಕೆಯ ಚರಿತ್ರೆ ಒಂದು ಅದ್ಭುತವೆಂದರೆ ಆಕೆಯ ರೂಪ ವಿಚಿತ್ರವಾದುದು ಎಂದೇ ಹೇಳಬಹುದು.

5.ಪುರಾಣಗಳ ಪ್ರಕಾರ

5.ಪುರಾಣಗಳ ಪ್ರಕಾರ

ಕೆಲವು ಪವಿತ್ರವಾದ ಪುರಾಣಗಳ ಪ್ರಕಾರ ಪೂರ್ವದಲ್ಲಿ ಕೀಲ ಎಂಬ ಯಕ್ಷನಿದ್ದನು. ಆತನು ಮಹಾ ಶಕ್ತಿಯಾದ ದೇವಿಯನ್ನು ಕುರಿತು ಘೋರವಾದ ತಪಸ್ಸನ್ನು ಆಚರಿಸಿದರು. ಆತನ ಭಕ್ತಿಗೆ ಮೆಚ್ಚಿದ ದೇವಿಯು ಪ್ರತ್ಯಕ್ಷವಾಗಿ ಯಾವ ವರ ಬೇಕು? ಎಂದು ಕೇಳಿದಳು. ಅದಕ್ಕೆ ಕೀಲನು "ತಾಯಿ ನೀನು ಎಂದಿಗೂ ತನ್ನ ಹೃದಯ ಸ್ಥಾನದಲ್ಲಿ ನೆಲೆಸಬೇಕು" ಎಂದು ಕೇಳಿಕೊಂಡನು.

6.ಕನಕದುರ್ಗಾಮ್ಮಳ ಉತ್ತರ

6.ಕನಕದುರ್ಗಾಮ್ಮಳ ಉತ್ತರ

ಅದಕ್ಕೆ ಉತ್ತರವಾಗಿ ಆ ತಾಯಿಯು, ಒಬ್ಬ ರಾಕ್ಷಸನನ್ನು ಸಂಹಾರ ಮಾಡಬೇಕಾಗಿದೆ. ಹಾಗಾಗಿ ಆ ರಾಕ್ಷಸ ಸಂಹಾರ ಮಾಡಿದ ನಂತರ ನಿನ್ನ ಬಳಿ ಬಂದು ನೆಲೆಸುತ್ತೇನೆ ಎಂದು ಹೇಳುತ್ತಾಳೆ. ಅಲ್ಲಿಯವರೆಗೆ ಕೃಷ್ಣ ನದಿಯವರೆಗೆ ಒಂದು ಪರ್ವತವಾದರೆ ಅಲ್ಲಿ ತಾನು ಬಂದು ನೆಲೆಸುತ್ತನೆ ಎಂದು ಹೇಳಿ ಅದೃಶ್ಯಳಾದಳಂತೆ.

7.ಪರ್ವತ

7.ಪರ್ವತ

ತಾಯಿಯ ಆದೇಶದ ಮೇರೆಗೆ ಕೃಷ್ಣ ನದಿಯ ಸಮೀಪದಲ್ಲಿ ಕೀಲನು ಪರ್ವತವಾಗಿ ಮಾರ್ಪಾಟಾದನು. ಹಾಗಾಗಿಯೇ ಕೀಲಾದ್ರಿ ಪರ್ವತ ಎಂದು ಹೆಸರು ಬಂದಿತು. ತದನಂತರ ಆ ಆದಿ ಪರಾಶಕ್ತಿಯು ಮಹಿಷಾಸುರ ರೂಪದಲ್ಲಿ ಮಹಿಷಾಸೂರನನ್ನು ಸಂಹಾರ ಮಾಡಿದ ನಂತರ ಕೀಲಾದ್ರಿಯ ಮೇಲೆ ಸ್ವಯಂ ಭೂವಾಗಿ ನೆಲೆಸಿದಳು.

8.ಇಂದ್ರ

8.ಇಂದ್ರ

ಸ್ವಯಂ ಭೂ ಆಗಿ ನೆಲೆಸಿರುವ ಆ ತಾಯಿಯನ್ನು ಪೂಜೆ ಮಡುವ ಸಲುವಾಗಿ ಸ್ವಯಂ ಆ ದೇವರಾಜನಾದ ಇಂದ್ರನು ಹಾಗು ಉಳಿದ ದೇವತೆಗಳು ಕೂಡ ಈ ಪರ್ವಕ್ಕೆ ಭೇಟಿ ನೀಡುತ್ತಿದ್ದರಂತೆ. ಇಂದ್ರನು ಕೀಲಾದ್ರಿ ಪರ್ವತದ ಮೇಲೆ ಕಾಲಿಟ್ಟಿದ್ದರಿಂದ ಇಂದ್ರ ಕೀಲಾದ್ರಿ ಎಂಬ ಹೆಸರಿನಿಂದ ಪ್ರಸಿದ್ಧಿಯನ್ನು ಪಡೆಯಿತು.

9.ಮಹಾಶಿವನು

9.ಮಹಾಶಿವನು

ಆ ತಾಯಿಯ ಜೊತೆ ಇರಲು ಆ ಲಯಕಾರನಾದ ಪರಮೇಶ್ವರನು ಇರಬೇಕು ಎಂದು ಬ್ರಹ್ಮ ದೇವನು ಒಂದು ಯಾಗವನ್ನು ಮಾಡಿದನು. ಆ ಯಾಗದ ಫಲಿತವಾಗಿ ಮಹಾಶಿವನು ಜ್ಯೋತಿರ್‍ಲಿಂಗವಾಗಿ ಇಂದ್ರ ಕೀಲಾದ್ರಿಯ ಮೇಲೆ ನೆಲೆಸಿದನು. ಆ ದೃಶ್ಯವನ್ನು ಕಂಡು ಪರವಶಗೊಂಡ ಬ್ರಹ್ಮನು ಆನೇಕ ಪುಷ್ಪಗಳಿಂದ ಪ್ರಥಮ ಪೂಜೆ ಮಾಡಿದ್ದರಿಂದ ಆ ಲಿಂಗಕ್ಕೆ ಮಲ್ಲಿಕಾರ್ಜುನ ಎಂಬ ಹೆಸರು ಬಂದಿತಂತೆ.

10.ಉಗ್ರ ಸ್ವರೂಪಿಣಿ

10.ಉಗ್ರ ಸ್ವರೂಪಿಣಿ

ಮಹಿಷಾಸುರನನ್ನು ಸಂಹಾರ ಮಾಡಿ ಕೀಲಾದ್ರಿ ಪರ್ವತದ ಮೇಲೆ ನೆಲೆಸಿದ್ದ ಆ ತಾಯಿಯು ಅತ್ಯಂತ ಉಗ್ರ ಸ್ವರೂಪಿಣಿಯಾಗಿ ನೆಲೆಸಿದ್ದಳಂತೆ. ಹಾಗಾಗಿ ಯೋಗಿಗಳು, ಋಷಿಗಳು, ಮುನಿಗಳ ಹೊರತು ಸಾಮಾನ್ಯ ಮಾನವರು ಈ ದೇವಿಯನ್ನು ದರ್ಶನ ಮಾಡುತ್ತಿರಲಿಲ್ಲವಂತೆ.

11.ಶಿವಲಿಂಗ

11.ಶಿವಲಿಂಗ

ಅಲ್ಲಿನ ಶಿವಲಿಂಗವು ಆ ತಾಯಿಯ ಉಗ್ರ ಸ್ವರೂಪಕ್ಕೆ ಕಣ್ಮರೆಯಾಗುವ ಸಮಯದಲ್ಲಿ ಆದಿ ಗುರು ಶಂಕರಾಚಾರ್ಯರು ಇಂದ್ರಕೀಲಾದ್ರಿಗೆ ಭೇಟಿ ನೀಡಿ, ದೇವಿಯ ರೌದ್ರವತಾರವನ್ನು ಕಡಿಮೆಗೊಳಿಸುವ ಸಲುವಾಗಿ ಶ್ರೀ ಚಕ್ರವನ್ನು ಸ್ಥಾಪನೆ ಮಾಡಿದರಂತೆ. ಇದರಿಂದಾಗಿ ಆ ತಾಯಿ ಶಾಂತ ರೂಪಿಣಿಯಾಗಿ ಮಾರ್ಪಾಟಾದಳು.

12.ಮಹಾಭಾರತ ಕಾಲ

12.ಮಹಾಭಾರತ ಕಾಲ

ದೇವಿಯ ಉತ್ತರ ದಿಕ್ಕಿಗೆ ಮಲ್ಲಿಶ್ವರನನ್ನು (ಶಿವ) ಪುನರ್ ಪ್ರತಿಷ್ಟಾಪಿಸಿದರು ಎಂದು ಸ್ಥಳ ಪುರಾಣ ಹೇಳುತ್ತದೆ. ಮಹಾಭಾರತ ಕಾಲದಲ್ಲಿ ಅರ್ಜುನನ್ನು ತನ್ನ ಮಹತ್ತರವಾದ ಅಸ್ತ್ರಗಳನ್ನು ಸಂಪಾದಿಸುವ ಸಲುವಾಗಿ, ಇಂದ್ರಕೀಲಾದ್ರಿಯ ಮೇಲೆ ಶಿವನಿಗಾಗಿ ಘೋರವಾದ ತಪಸ್ಸನ್ನು ಆಚರಿಸಿದನಂತೆ.

13.ಅರ್ಜುನ

13.ಅರ್ಜುನ

ಶಿವನಿಂದ ಪಾಶುಪಥಾ ಅಸ್ತ್ರವನ್ನು ಪಡೆದು, ಇದೇ ಪರ್ವತದ ಮೇಲೆ ಇಂದ್ರನನ್ನು ಪ್ರಸನ್ನನಾಗಿ ಮಾಡಿ ದಿವ್ಯ ಅಸ್ತ್ರವನ್ನು ಹೊಂದಿದನು. ಕನಕದುರ್ಗಾಮ್ಮ, ಕನಕ ವರ್ಣದಲ್ಲಿ ಕಂಗೋಳಿಸುತ್ತಾ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾಳೆ. ಹಾಗಾಗಿಯೇ ಆ ತಾಯಿಯನ್ನು ಕನಕದುರ್ಗಾಮ್ಮ ಎಂಬ ಹೆಸರು ಬಂದಿತು ಎಂಬ ಕತೆಯು ಪ್ರಚಾರದಲ್ಲಿದೆ.

14.ಕನಕ ದುರ್ಗಾಮ್ಮಳ ವಿಗ್ರಹ

14.ಕನಕ ದುರ್ಗಾಮ್ಮಳ ವಿಗ್ರಹ

ಸ್ವಯಂ ಭೂವಾಗಿ ನೆಲೆಸಿರುವ ಆ ತಾಯಿಯು ಸುಮಾರು 4 ಅಡಿ ಎತ್ತರದಲ್ಲಿದ್ದು, 8 ಕೈಗಳನ್ನು ಹೊಂದಿದ್ದಾಳೆ. ಒಂದೊಂದು ಕೈಯಲ್ಲಿ ಒಂದೊಂದು ಅಸ್ತ್ರವನ್ನು ಕೈಯಲ್ಲಿ ಹಿಡಿದುಕೊಂಡು ರೌದ್ರ ಸ್ವರೂಪಿಣಿಯಾಗಿ ನೆಲೆಸಿದ್ದಾಳೆ. ನವದುರ್ಗಿಯರಲ್ಲಿ ಕೊನೆಯ ದೇವತೆಯಾದ ಸಿದ್ಧಿಧಾತ್ರಿಯ ಅವತಾರದಲ್ಲಿ ದರ್ಶನ ನೀಡುವುದು ಅತ್ಯಂತ ಅದ್ಭುತವಾದುದು.

15.ಜನ ಸಾಮಾನ್ಯರಿಗೆ ದರ್ಶನ

15.ಜನ ಸಾಮಾನ್ಯರಿಗೆ ದರ್ಶನ

ಇಲ್ಲಿ ಕನಕ ದುರ್ಗಾಮ್ಮ ನೆಲೆಸಿ ಸಾವಿರಾರು ವರ್ಷಗಳೇ ಆದರೂ ಕೂಡ ಜನ ಸಾಮನ್ಯರು ಮಾತ್ರ ಆ ಸ್ಥಳಕ್ಕೆ ತೆರಳುತ್ತಿರಲಿಲ್ಲ. ಆದಿ ಶಂಕರಾಚಾರ್ಯರು ಪ್ರತಿಷ್ಟಾಪಿಸಿದ ಶ್ರೀ ಚಕ್ರದ ನಂತರ ಆ ಪರ್ವತದ ಮೇಲೆ ಇದ್ದ ಕೆಲವು ಜನರು ಹಾಗು ಬೆಸ್ತರು ಆ ತಾಯಿಯನ್ನು ಪೂಜಿಸುತ್ತಿದ್ದರು.

16.19 ನೇ ಶತಮಾನ

16.19 ನೇ ಶತಮಾನ

ತದನಂತರ ಎಲ್ಲಾ ಜನರು ಕೂಡ ಆ ತಾಯಿಯ ದರ್ಶನ ಮಾಡಿ ಬರುತ್ತಿದ್ದರಂತೆ. ಅತ್ಯಂತ ಚಿಕ್ಕದಾಗಿದ್ದ ಆ ದೇವಾಲಯವು 19 ನೇ ಶತಮಾನದಿಂದ 20 ನೇ ಶತಮಾನದ ಮಧ್ಯ ಭಾಗದಲ್ಲಿ ಹಲವಾರು ಅಭಿವೃದ್ಧಿಯನ್ನು ಪಡೆಯಿತು.

17.ಹೇಗೆ ತಲುಪಬೇಕು?

17.ಹೇಗೆ ತಲುಪಬೇಕು?

ವಿಜಯವಾಡ ನಗರದ ಹೃದಯಭಾಗದಲ್ಲಿರುವ ಈ ದೇವಾಲಯವು ರೈಲ್ವೆ ನಿಲ್ದಾಣ ಮತ್ತು ಬಸ್ಸು ನಿಲ್ದಾಣದಿಂದ ಕೇವಲ 10 ನಿಮಿಷಗಳ ಕಾಲ ಮತ್ತು ವಿಮಾನ ನಿಲ್ದಾಣದಿಂದ ಸುಮಾರು 20 ಕಿ.ಮೀ ದೂರದಲ್ಲಿದೆ. ಪ್ರತಿ 20 ನಿಮಿಷಕ್ಕೆ ಒಮ್ಮೆ ಬಸ್ಸುಗಳ ಹಾಗು ರೈಲುಗಳ ಸೌಲಭ್ಯವಿದೆ. ವಿಜಯವಾಡ ಹೈದ್ರಾಬಾದ್‍ನಿಂದ ಸುಮಾರು 275 ಕಿ.ಮೀ ದೂರದಲ್ಲಿದೆ. ಇದು ದೇಶದ ಎಲ್ಲಾ ಭಾಗಗಳಿಂದ ರಸ್ತೆ, ರೈಲು ಮತ್ತು ವಾಯು ಸಂಪರ್ಕವನ್ನು ಹೊಂದಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more