Search
  • Follow NativePlanet
Share
» »ಅಬ್ಬಾ..! ಈ ಪರಿಯಾಗಿ ಉಕ್ಕಿ ಹರಿಯುತ್ತಿದೆ ಜೋಗ್‌ಫಾಲ್ಸ್‌...

ಅಬ್ಬಾ..! ಈ ಪರಿಯಾಗಿ ಉಕ್ಕಿ ಹರಿಯುತ್ತಿದೆ ಜೋಗ್‌ಫಾಲ್ಸ್‌...

https://www.facebook.com/oneindiakannada/videos/311510662954208/
ಮಳೆಯು ದೇಶದಲ್ಲೆಡೆಗೆ ರುದ್ರತಾಂಡವವಾಡುತ್ತಿದ್ದರೆ ಇನ್ನೊಂದೆಡೆ ಈ ಮಳೆಯು ಸುಂದರ ರಮಣೀಯ ದೃಶ್ಯ ಕಾಣಬಹುದಾಗಿದೆ. ದೇಶದ ಅತೀ ದೊಡ್ಡ ಜಲಪಾತವಾಗಿರುವ ಜೋಗ್‌ ಜಲಪಾತದಲ್ಲಿ ಹಿಂದೆಂದಿಗಿಂತಲೂ ಅತೀ ರಭಸದಲ್ಲಿ ನೀರು ಹರಿಯುತ್ತಿದೆ. ಆ ನಯನ ಮನೋಹರ ದೃಶ್ಯವನ್ನು ನೋಡಲು ಕಣ್ಣುಗಳೆರಡು ಸಾಲದು ಎನಿಸಿದೆ.
ಗೇರುಸೊಪ್ಪೆ

ಗೇರುಸೊಪ್ಪೆ

Pc: Prashanth bhat

ಶಿವಮೊಗ್ಗ ಜಿಲ್ಲೆಸಾಗರತಾಲೂಕಿನಲ್ಲಿ ದಟ್ಟವಾದ ಕಾಡು ಹಾಗು ಗುಡ್ಡಗಳಿಂದ ಆವೃತ್ತವಾದ ಜೋಗ ಕರ್ನಾಟಕದಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಶರಾವತಿ ನದಿಯ ಜಲಪಾತ ಗೇರುಸೊಪ್ಪೆ ಎಂದೂ ಪ್ರಸಿದ್ಧವಾಗಿದೆ.

ಶ್ರೀ ಕೃಷ್ಣ ತನ್ನ ಶರೀರವನ್ನು ತ್ಯಜಿಸಿದ್ದು ಎಲ್ಲಿ ಗೊತ್ತಾ?ಶ್ರೀ ಕೃಷ್ಣ ತನ್ನ ಶರೀರವನ್ನು ತ್ಯಜಿಸಿದ್ದು ಎಲ್ಲಿ ಗೊತ್ತಾ?

830 ಫೀಟ್ ಎತ್ತರದಿಂದ ಧುಮ್ಮುಕ್ಕುತ್ತದೆ

830 ಫೀಟ್ ಎತ್ತರದಿಂದ ಧುಮ್ಮುಕ್ಕುತ್ತದೆ

PC: Sarvagnya

ಮಳೆಗಾಲದಲ್ಲೇ ಜಲಪಾತಗಳ ನಿಜವಾದ ಸೌಂದರ್ಯ ಕಾಣಸಿಗುತ್ತದೆ. ಇನ್ನೂ ಜೋಗ್ ಜಲಪಾತವು ದೇಶದಲ್ಲೇ ಅತ್ಯಂತ ಎತ್ತರದಿಂದ ಧುಮ್ಮುಕ್ಕುವ ಜಲಪಾತವಾಗಿದೆ. ನಾಲ್ಕು ವರ್ಷದಲ್ಲಿ ಇದೇ ಮೊದಲ ಬಾರಿಗೆ ಜೋಗ್ ಜಲಪಾತವು ಈ ರೀತಿ ಉಕ್ಕಿ ಹರಿಯುತ್ತಿದೆ. 830 ಫೀಟ್ ಎತ್ತರದಿಂದ ಈ ಜಲಪಾತ ಧುಮ್ಮುಕ್ಕುತ್ತಿದೆ.

ಲಿಂಗನಮಕ್ಕಿ ಜಲಾಶಯ

ಲಿಂಗನಮಕ್ಕಿ ಜಲಾಶಯ

PC: Kiran Sagara

ಹೆಚ್ಚಿನ ಮಳೆಯಿಂದಾಗಿ ಜಲಪಾತದಲ್ಲಿ ನೀರು ತುಂಬಿದೆ. ಲಿಂಗನಮಕ್ಕಿ ಜಲಾಶಯದ 11 ಗೇಟ್‌ ತೆರೆಯಲಾಗಿದ್ದು, ಇದರಿಂದ ಜಲಪಾತದಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. 1964ರಲ್ಲಿ ಇಲ್ಲಿ ಡ್ಯಾಮ್‌ನ್ನು ನಿರ್ಮಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಕೇವಲ 13 ಬಾರಿ ಡ್ಯಾಮ್‌ನ ನೀರು ಇಷ್ಟೊಂದು ಮಟ್ಟಕ್ಕೆ ಏರಿರುವುದು.

ಇಲ್ಲಿ ದಂಪತಿಯರು ಒಟ್ಟಾಗಿ ಸ್ನಾನ ಮಾಡಿದ್ರೆ ಏನಾಗುತ್ತದೆ ಗೊತ್ತಾಇಲ್ಲಿ ದಂಪತಿಯರು ಒಟ್ಟಾಗಿ ಸ್ನಾನ ಮಾಡಿದ್ರೆ ಏನಾಗುತ್ತದೆ ಗೊತ್ತಾ

ಜೋಗ್‌ನ ಸಮೀಪದ ಡ್ಯಾಮ್‌ಗಳು

ಜೋಗ್‌ನ ಸಮೀಪದ ಡ್ಯಾಮ್‌ಗಳು

PC: Vmjmalali

ನೀವು ಒಂದುವೇಳೆ ಜೋಗ್‌ಫಾಲ್ಸ್‌ ನೋಡಲು ಹೋಗುತ್ತಿದ್ದೀರೆಂದಾರೆ ಅದರ ಸಮೀಪದಲ್ಲಿರುವ ಇತರ ಸಣ್ಣ ಪುಟ್ಟ ಫಾಲ್ಸ್‌ಗಳನ್ನೂ ನೋಡಬಹುದು. ಜೋಗ್‌ನ ಸಮೀಪದಲ್ಲಿ ನಿಮಗೆ ಭದ್ರಾ ಡ್ಯಾಮ್ ಹಾಗೂ ತುಂಗಾ ಡ್ಯಾಮ್ ಕೂಡಾ ನೋಡಬಹುದು. ಮಾನ್ಸೂನ್‌ನಲ್ಲಿ ಬಹಳಷ್ಟು ಪ್ರವಾಸಿಗರು ಈ ಜಲಪಾತದ ಸೌಂದರ್ಯವನ್ನು ನೋಡಲು ಬರುತ್ತಾರೆ.

ಜೋಗ್‌ಫಾಲ್ಸ್ ತಲುಪುವುದು ಹೇಗೆ?

ಜೋಗ್‌ಫಾಲ್ಸ್ ತಲುಪುವುದು ಹೇಗೆ?

PC:Sachin D K

ವಿಮಾನದ ಮೂಲಕ : ಜೋಗ್‌ಗೆ ನೀವು ವಿಮಾನದ ಮೂಲಕ ಹೋಗಬೇಕೆಂದಿದ್ದರೆ ಸಮೀಪದ ವಿಮಾನ ನಿಲ್ದಾಣವೆಂದರೆ ಮಂಗಳೂರು ವಿಮಾನ ನಿಲ್ದಾಣ ಅದು ಶಿವಮೊಗ್ಗದಿಂದ 180 ಕಿ.ಮೀ ದೂರದಲ್ಲಿದೆ. ಇನ್ನೊಂದು ವಿಮಾನ ನಿಲ್ದಾಣವೆಂದರೆ ಬೆಂಗಳೂರು ವಿಮಾನ ನಿಲ್ದಾಣ. ಇದು ಶಿವಮೊಗ್ಗದಿಂದ 378 ಕಿ.ಮೀ ದೂರದಲ್ಲಿದೆ. ಏರ್‌ಪೋರ್ಟ್‌ನಿಂದ ನೀವು ಬಸ್ ಅಥವಾ ಕಾರ್ ಮೂಲಕ ಜೋಗ್ ತಲುಪಬಹುದು.

ರೈಲು ಮೂಲಕ

ರೈಲು ಮೂಲಕ

PC: Sarvagnya

ರೈಲು ಮೂಲಕ ಹೋಗುವುದಾದರೆ: ಜೋಗ್‌ ಪಾಲ್ಸ್‌ನ ಸಮೀಪದ ರೈಲು ನಿಲ್ದಾಣವೆಂದರೆ ಶಿವಮೊಗ್ಗ ರೈಲು ನಿಲ್ದಾಣ. ಇದು ಫಾಲ್ಸ್‌ನಿಂದ 104 ಕಿ.ಮೀ ದೂರದಲ್ಲಿದೆ. ಶಿವಮೊಗ್ಗದಿಂದ ತಲುಗುಪ್ಪ ತನಕ ತಲುಪಬೇಕು. ತಲುಗುಪ್ಪದಿಂದ ಕೇವಲ 6 ಕಿ.ಮೀ ದೂರದಲ್ಲಿದೆ.
ರಸ್ತೆ ಮಾರ್ಗದಲ್ಲಿ: ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ 4 ರ ಮೂಲಕ ನೀವು ಜೋಗ್‌ಫಾಲ್ಸ್‌ ತಲುಪಬಹುದು. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸಾಕಷ್ಟು ಖಾಸಗಿ ಬಸ್‌ಗಳೂ ಇವೆ. ಶಿವಮೊಗ್ಗದಿಂದ ಜೋಗ್‌ಫಾಲ್ಸ್‌ಗೆ ಲೋಕಲ್ ಬಸ್ ಹಿಡಿಯಬಹುದು.

ಚಪ್ಪಾಳೆ ಹೊಡೆದ್ರೆ ಸಾಕು ಕುಂಡದ ನೀರು ಮೇಲೆ ಬರುತ್ತಂತೆ!ಚಪ್ಪಾಳೆ ಹೊಡೆದ್ರೆ ಸಾಕು ಕುಂಡದ ನೀರು ಮೇಲೆ ಬರುತ್ತಂತೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X