Search
  • Follow NativePlanet
Share
» »ಝಾಲಾವರ್‌ನ ಸುತ್ತಮುತ್ತಲಿರುವ ಈ ಸುಂದರ ತಾಣಗಳನ್ನು ನೋಡಿ

ಝಾಲಾವರ್‌ನ ಸುತ್ತಮುತ್ತಲಿರುವ ಈ ಸುಂದರ ತಾಣಗಳನ್ನು ನೋಡಿ

ಝಾಲಾವರ್ ನಲ್ಲಿ 100 ಅಡಿ ಎತ್ತರದ ಸೂರ್ಯ ದೇವಸ್ಥಾನವಿದೆ. ದೇವಸ್ಥಾನದ ಒಳಗೆ ಸುಂದರವಾದ ಕೆತ್ತನೆಗಳನ್ನು ಕಾಣಬಹುದು.

ಝಾಲಾವರ್ ರಾಜಸ್ಥಾನದ ಹದೋತಿ ಪ್ರದೇಶದ ದಕ್ಷಿಣ ಭಾಗದಲ್ಲಿ. ಇದನ್ನು ಹದಾಸ್‌ ಪ್ರದೇಶ ಎಂದೂ ಕರೆಯಲಾಗುತ್ತದೆ. ಈ ಜಿಲ್ಲೆಯು ಸುಮಾರು 6928 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಇದು ಕೋಟಾ ಪ್ರಾಂತ್ಯದ ಭಾಗವಾಗಿದೆ. ಝಾಲಾವರ್ ನ್ನು ಬ್ರಿಜ್‌ನಗರ ಎಂದೂ ಕರೆಯಲಾಗುತ್ತದೆ. ಇದು ಜಿಲ್ಲೆಯ ಆಡಳಿತ ಕೇಂದ್ರವೂ ಹೌದು. ಉತ್ತರದ ಭಾಗವು ಬರಾನ್ ಜಿಲ್ಲೆಗೆ ಹೊಂದಿಕೊಂಡಿದ್ದು ದಕ್ಷಿಣ ಭಾಗವು ಕೋಟಾ ಜಿಲ್ಲೆಗೆ ಹೊಂದಿಕೊಂಡಿದೆ.

ಝಾಲಾವರ್ ಇತಿಹಾಸ

ಝಾಲಾವರ್ ಇತಿಹಾಸ

PC:Siddharth 36
ಐತಿಹಾಸಿಕವಾಗಿ ಝಾಲಾವರ್ ನಗರ ಶೋಧಗೊಂಡಿದ್ದು 1791ರಲ್ಲಿ. ಕೋಟಾ ಜಿಲ್ಲೆಯ ದಿವಾನರಾಗಿದ್ದ ಝಾಲಾ ಜಾಲಿಮ್‌ ಸಿಂಗ್‌ ಇದನ್ನು ಕಂಡುಹಿಡಿದರು. ಈ ಪ್ರದೇಶವನ್ನು ಮಿಲಿಟರಿ ಕಂಟೋನ್ಮೆಂಟ್‌ ಆಗಿ ಅಭಿವೃದ್ಧಿಪಡಿಸುವ ಉದ್ದೇಶವನ್ನು ಇವರು ಹೊಂದಿದ್ದರು. ಇದರಿಂದಾಗಿ ಮರಾಠಾ ದಾಳಿಕೋರರಿಂದ ರಕ್ಷಿಸುವುದು ಇವರ ಉದ್ದೇಶವಾಗಿತ್ತು. ನಂತರದಲ್ಲಿ ಬ್ರಿಟಿಷರು ಝಾಲಾ ಝಾಲಿಮ್‌ ಸಿಂಗ್‌ರ ಮೊಮ್ಮಗನಾದ ಝಾಲಾ ಮದನ್‌ ಸಿಂಗ್‌ಗೆ ಈ ಪ್ರದೇಶವನ್ನು ಹಸ್ತಾಂತರಿಸಿದರು. ಈತನೇ ಝಾಲಾವರ್ ನ ಮೊದಲ ಆಡಳಿತಗಾರನಾದ. ಇವನು 1838ರಿಂದ 1845ರ ತನಕ ಈ ಪ್ರದೇಶವನ್ನು ಆಳಿದ.

ಝಾಲಾವರ್ ನ ಕೋಟೆಗೆ

ಝಾಲಾವರ್ ನ ಕೋಟೆಗೆ

PC: Siddharth tiwari
ಪ್ರವಾಸಿಗರು ಝಾಲಾವರ್ ಗೆ ಹೋಗಲು ಇಚ್ಛಿಸಿದರೆ ಮೊದಲು ಝಾಲಾವರ್ ನ ಕೋಟೆಗೆ ಭೇಟಿ ನೀಡಲೇಬೇಕು. ಈ ಕೋಟೆಯನ್ನು ಗಾರ್ ಅರಮನೆ ಎಂದೂ ಕರೆಯಲ್ಪಟ್ಟಿದೆ. ಝಾಲಾವರ್ ನಲ್ಲಿ 100 ಅಡಿ ಎತ್ತರದ ಸೂರ್ಯ ದೇವಸ್ಥಾನವಿದೆ. ದೇವಸ್ಥಾನದ ಒಳಗೆ ಸುಂದರವಾದ ಕೆತ್ತನೆಗಳನ್ನು ಕಾಣಬಹುದು. ಈ ನಗರವು ಚಂದ್ರಭಾಗ ನದಿಗೆ ಸಮೀಪದಲ್ಲಿದೆ ಮತ್ತು ಎಲ್ಲಾ ಭಾಗಗಳಿಂದಲೂ ಗೋಡೆಯಿಂದ ಸಂರಕ್ಷಿತವಾಗಿದೆ.

ಹಲವು ದೇವಸ್ಥಾನಗಳಿವೆ

ಹಲವು ದೇವಸ್ಥಾನಗಳಿವೆ

PC:Ritukejai
ಚಂದ್ರಭಾಗ ನದಿಯ ದಡದಲ್ಲಿ ಹಲವು ದೇವಸ್ಥಾನಗಳಿವೆ. ಇವುಗಳನ್ನು 6ರಿಂದ 14ನೇ ಶತಮಾನದ ಮಧ್ಯದಲ್ಲಿ ನಿರ್ಮಿಸಲಾಯಿತು. ಈ ದೇವಸ್ಥಾನಗಳು ಕಲಾತ್ಮಕವಾಗಿ ನಿರ್ಮಾಣಗೊಂಡಂತಹವು. ಇವುಗಳಲ್ಲಿ ಪದ್ಮನಾಥ ದೇವಸ್ಥಾನ, ಶ್ರೀ ದ್ವಾರಕೀಶ ದೇವಸ್ಥಾನ ಮತ್ತು ಶಾಂತಿನಾಥ ಜೈನ ದೇವಸ್ಥಾನಗಳು ಪ್ರಮುಖವಾದದ್ದು. ಆಸಕ್ತಿಯಿರುವ ಪ್ರವಾಸಿಗರು ಬುದ್ಧ ಗುಹೆಗಳನ್ನು ಮತ್ತು ಸ್ತೂಪಗಳನ್ನೂ ನೋಡಬಹುದು. ಈ ಪ್ರದೇಶದ ವಾಸ್ತುಶಿಲ್ಪ ತಜ್ಞರ ಸೂಕ್ಷ್ಮ ಕೆಲಸಗಳು ಈ ಕಲಾಕೃತಿಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

 ಇತರ ಆಕರ್ಷಣೆಗಳು

ಇತರ ಆಕರ್ಷಣೆಗಳು

PC:YAMAN SAINI
ಇದರ ಜೊತೆಗೆ, ಪ್ರವಾಸಿಗರು ಭೀಮಸಾಗರ ಆಣೆಕಟ್ಟು, ಜೈನ ಶ್ವೇತಾಂಬರ ನಾಗೇಶ್ವರ ಪಾರ್ಶ್ವನಾಥ ದೇವಸ್ಥಾನ, ಅನ್‌ಹೆಲ್‌ ಮತ್ತು ಸರ್ಕಾರಿ ಮ್ಯೂಸಿಯಂನ್ನು ನೋಡಬಹುದು. ಅರ್ಧನಾರೀಶ್ವರ ನಟರಾಜನಂತಹ ಹಲವು ಹಿಂದೂ ಮೂರ್ತಿಗಳು ಇಲ್ಲಿವೆ. ಇದನ್ನು ಮಾಸ್ಕೋದ 'ಫೆಸ್ಟಿವಲ್‌ ಆಫ್‌ ಇಂಡಿಯಾ'ದ ಉತ್ಸವದಲ್ಲಿ ಪ್ರದರ್ಶನ ಮಾಡಲಾಗಿತ್ತು. ಗಾಗ್ರನ್‌ ಕೋಟೆ, ಅತಿಶಯ ಜೈನ ದೇವಸ್ಥಾನ, ದಲ್ಹಾನಪುರ, ಮನೋಹರ ಥಾಣೆ ಕೋಟೆ ಮತ್ತು ಗಂಗಾಧರ ಕೋಟೆಯು ಝಾಲಾವರ್ ನ ಸುತ್ತಮುತ್ತಲಿರುವ ಆಸಕ್ತಿಕರ ಪ್ರದೇಶಗಳು.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC:Siddharth tiwari
ಪ್ರವಾಸಿಗರು ಬೇಸಿಗೆ ಕಾಲದಲ್ಲಿ ಇಲ್ಲಿಗೆ ಪ್ರಯಾಣ ಮಾಡುವುದು ಸೂಕ್ತವಲ್ಲ. ಈ ಸಂದರ್ಭದಲ್ಲಿ ಇಲ್ಲಿನ ತಾಪಮಾನವು 27 ಡಿಗ್ರಿಯಿಂದ 42 ಡಿಗ್ರಿಯವರೆಗೆ ಇರುತ್ತದೆ. ಮಳೆಗಾಲದಲ್ಲಿ, ಈ ಪ್ರದೇಶದ ತಾಪಮಾನವು ಕೆಳಗಿಳಿಯುತ್ತದೆ ಮತ್ತು ಸರಾಸರಿ ತಾಪಮಾನವು ಸುಮಾರು 30 ಡಿಗ್ರಿ ಇರುತ್ತದೆ. ಚಳಿಗಾಲದ ಅವಧಿಯಲ್ಲಿ ಗರಿಷ್ಟ ಮತ್ತು ಕನಿಷ್ಟ ತಾಪಮಾನವು 25 ಡಿಗ್ರಿ ಮತ್ತು 10 ಡಿಗ್ರಿ ಇರುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಸಂಪರ್ಕ ಜಿಲ್ಲೆಗೆ ರೈಲು, ರಸ್ತೆ ಮತ್ತು ವಿಮಾನದ ಮೂಲಕ ಸುಲಭವಾಗಿ ಪ್ರಯಾಣಿಸಬಹುದು. ಕೋಟಾ ವಿಮಾನ ನಿಲ್ದಾಣವು ಝಾಲಾವರ್ ಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಇದು ಸುಮಾರು 82 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ಭಾರತದ ಪ್ರಮುಖ ನಗರಗಳಿಂದ ವಿಮಾನ ಸಂಪರ್ಕವನ್ನು ಹೊಂದಿದೆ. ರಾಮಗಂಜ್‌ ಮಂಡಿ ರೈಲ್ವೆ ನಿಲ್ದಾಣವು ಝಾಲಾವರ್ ಗೆ ಸಮೀಪದ ರೈಲು ನಿಲ್ದಾಣ. ಪ್ರವಾಸಿಗರು ಇಲ್ಲಿಂದ ಟ್ಯಾಕ್ಸಿ ಮತ್ತು ಕ್ಯಾಬ್‌ಗಳನ್ನು ಬಾಡಿಗೆಗೆ ಪಡೆದು ಝಾಲಾವರ್ ನಗರವನ್ನು ತಲುಪಬಹುದು. ಸಮೀಪದ ನಗರಗಳಾದ ಜೈಪುರ, ಕೋಟಾ ಮತ್ತು ಬುಂದಿ ನಗರಗಳಿಂದ ರಾಜ್ಯ ಸಾರಿಗೆ ಮತ್ತು ಖಾಸಗಿ ಸಾರಿಗೆ ಬಸ್‌ಗಳು ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X