Search
  • Follow NativePlanet
Share
» »ರಾಣಿ ಪದ್ಮಿಣಿ ಆತ್ಮ ಇಂದಿಗೂ ಜೋಹರ್ ಕುಂಡದಲ್ಲಿದೆಯಂತೆ !

ರಾಣಿ ಪದ್ಮಿಣಿ ಆತ್ಮ ಇಂದಿಗೂ ಜೋಹರ್ ಕುಂಡದಲ್ಲಿದೆಯಂತೆ !

ಪದ್ಮಾವತಿ ಸಿನಿಮಾ ನೋಡಿರುವವರಿಗೆ ರಾಣಿ ಪದ್ಮಾವತಿ, ರತನ್ ಸಿಂಗ್ ಹಾಗೂ ಅಲ್ಲಾವುದ್ದೀನ್ ಖಿಲ್ಜಿಯ ಕಥೆಯ ಬಗ್ಗೆ ಒಂದು ಐಡಿಯಾ ಸಿಕ್ಕಿರುತ್ತದೆ. ಅದರಲ್ಲಿ ಕೊನೆಗೆ ರಾಣಿ ಪದ್ಮಾವತಿ ತನ್ನ ಇತರ ರಾಣಿಯರು ಹಾಗೂ ದಾಸಿಯರ ಜೊತೆ ಅಗ್ನಿಪ್ರದೇಶ ಮಾಡುತ್ತಾಳೆ. ಆ ಸ್ಥಳದ ಬಗ್ಗೆ ನಾವಿಂದು ತಿಳಿಸಲಿದ್ದೇವೆ.

ಚಿತ್ತೋಡ್‌ನ ರಾಣಿ

ಚಿತ್ತೋಡ್‌ನ ರಾಣಿ

PC:P12CO012

ರಾಣಿ ಪದ್ಮಾವತಿಯು ಚಿತ್ತೋಡ್‌ನ ರಾಣಿ. ರಾಜಸ್ಥಾನ ಚಿತ್ತೋಡ್‌ ಕೋಟೆಯನ್ನು ನೋಡಲು ಸಾಕಷ್ಟು ಜನರು ಪ್ರತಿವರ್ಷ ಬರುತ್ತಾರೆ. ಈ ಸುಂದರವಾದ ಕೋಟೆಯನ್ನು ಪ್ರಶಂಸೆ ಮಾಡದವರೇ ಇಲ್ಲ. ಅಲ್ಲಿ ರಾಣಿ ಪದ್ಮಾವತಿಯ ಪದ್ಮಿಣಿ ಮಹಲ್ ಕೂಡಾ ಇದೆ.

ತಲೆ ತುಂಡಾದ ದೇವಿಯನ್ನು ಪೂಜಿಸುವ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?<br /> ತಲೆ ತುಂಡಾದ ದೇವಿಯನ್ನು ಪೂಜಿಸುವ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?

 ಜೋಹರ್‌ ಕುಂಡ

ಜೋಹರ್‌ ಕುಂಡ

ಆದರೆ ಅಲ್ಲೇ ಸಮೀಪದಲ್ಲಿ ಇರುವ ರಾಣಿ ಪದ್ಮಾವತಿಯ ಜೋಹರ್‌ ಕುಂಡ್‌ದ ಬಳಿಗೆ ಯಾರೂ ಹೋಗುವುದಿಲ್ಲ. ಜೋಹರ್ ಕುಂಡದ ಬಾಗಿಲು ಸುಟ್ಟಂತೆಯೇ ಕಾಣುತ್ತದೆ. ಇದನ್ನು ಭೂತಬಂಗಲೆ ಎಂದು ಹೇಳಲಾಗುತ್ತದೆ. ಈ ಕುಂಡದ ಹಿಂದೆ ಅನೇಕ ರಹಸ್ಯಗಳು ಅಡಗಿದೆ. ಪ್ರೀತಿ, ದ್ವೇಷ, ಬಲಿದಾನದ ಕಥೆ ಇಲ್ಲಿ ಅಡಗಿದೆ. ಸೌಂದರ್ಯವೇ ಜೀವಕ್ಕೆ ಮುಳುವಾದದಂತಹ ಕಥೆ ಇಲ್ಲಿದೆ.

ಸಂಕ್ಷಿಪ್ತ ವಿವರ

ಸಂಕ್ಷಿಪ್ತ ವಿವರ

ಚಿತ್ತೋಡದ ರಾಣಿ ಪದ್ಮಿಣಿ ಬಹಳ ರೂಪವಂತಿಯಾಗಿದ್ದಳು. ಪದ್ಮಿಣಿಯ ವಿವಾಹ ರಾಜ ರತನ್ ಸಿಂಗ್ ಜೊತೆ ವಿವಾಹವಾಯಿತು. ಆದರೆ ಅಲ್ಲಾವುದ್ದೀನ್ ಖಿಲ್ಜಿ ಯ ಕಣ್ಣು ಆಕೆಯ ಮೇಲೆ ಬಿದ್ದಿತ್ತು ರತನ್‌ ಸಿಂಗ್ ಸಾವನ್ನಪ್ಪಿದಾಗ ರಾಣಿ ಪದ್ಮಿಣಿ ಸಮೇತ ಎಲ್ಲಾ ರಾಣಿಯರು ಬೆಂಕಿಗೆ ಆಹುತಿಯಾದರು.

 ಚಾರಣಿಗರ ಮೆಚ್ಚಿನ ತಾಣ -ನಾಸಿಕ್‌ನ ಹರಿಹರ ಕೋಟೆ ಚಾರಣಿಗರ ಮೆಚ್ಚಿನ ತಾಣ -ನಾಸಿಕ್‌ನ ಹರಿಹರ ಕೋಟೆ

ಇಂದೂ ಕಿರುಚಾಡುವ ಸದ್ದು ಕೇಳಿಸುತ್ತದೆ

ಇಂದೂ ಕಿರುಚಾಡುವ ಸದ್ದು ಕೇಳಿಸುತ್ತದೆ

ಪದ್ಮಾವತಿಯ ಆತ್ಮ ಜೋಹರ್ ಕುಂಡದಲ್ಲಿ ಇದೆ ಎನ್ನಲಾಗುತ್ತದೆ. ಜನರು ಇಲ್ಲಿಗೆ ಹೋಗಲು ಭಯಪಡುತ್ತಾರೆ. ಪದ್ಮಾವತಿಯ ಬಲಿದಾನವನ್ನು ಕಾಲ್ಪನಿಕ ಎನ್ನುವವರಿಗೆ ಇದೊಂದು ಸಾಕ್ಷಿಯಾಗಿದೆ. ಇಲ್ಲಿಗೆ ಹೋಗುವ ರಸ್ತೆಯು ಭಯಾನಕವಾಗಿದೆ. ಈ ಕುಂಡದಲ್ಲಿ ಬಿಸಿಯ ಬೇಗೆಯನ್ನು ಈಗಲೂ ಅನುಭವಿಸಬಹುದು. ಇಲ್ಲಿ ಪ್ರತಿನಿತ್ಯ ಚಿತ್ರವಿಚಿತ್ರ ಘಟನೆಗಳು ನಡೆಯುತ್ತವೆ. ಇಲ್ಲಿ ನಕಾರಾತ್ಮಕ ಶಕ್ತಿ ಇದೆ ಎನ್ನುತ್ತಾರೆ ಸ್ಥಳೀಯರು.

ಪದ್ಮಿಣಿ ಮಹಲ್

ಪದ್ಮಿಣಿ ಮಹಲ್

ಪುರಾತತ್ವ ವಿಭಾಗವು ಇಲ್ಲಿ ಶಿಲೆಯಲ್ಲಿ ಅಲ್ಲಿನ ಕಥೆಯನ್ನು ಬಣ್ಣಿಸಿದೆ. ಚಿತ್ತೋಡ್‌ ಕೋಟೆಯಿಂದ ಜೋಹರ್ ಕುಂಡಕ್ಕೆ ಒಂದು ಸುರಂಗವಿದೆ. ರಾಣಿ ಪದ್ಮಾವತಿ ಆ ಸುರಂಗ ಮಾರ್ಗದಿಂದಲೇ ಜೊಹರ್ ಕುಂಡಕ್ಕೆ ತಲುಪಿದ್ದು ಎನ್ನಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X