Search
  • Follow NativePlanet
Share
» »ಜಲಿಯನ್‍ವಾಲಾ ಬಾಗ್ : ರಕ್ತದ ಉದ್ಯಾನ

ಜಲಿಯನ್‍ವಾಲಾ ಬಾಗ್ : ರಕ್ತದ ಉದ್ಯಾನ

By Vijay

ಪಂಜಾಬ್ ರಾಜ್ಯದ ಅಮೃತಸರ್ ಪಟ್ಟಣದಲ್ಲಿರುವ ಜಲಿಯನ್‍ವಾಲಾ ಬಾಗ್ ಭಾರತದ ಇತಿಹಾಸದಲ್ಲಿ ಎಂದೂ ಮರೆಯಲಾರದಂತಹ ಒಂದು ಕಪ್ಪು ಅಧ್ಯಾಯ. ನಿಸ್ಸಹಾಯಕ, ಪ್ರಾಮಾಣಿಕ, ಮುಗ್ಧ ಯಾತ್ರಾರ್ಥಿಗಳನ್ನು ಕರುಣೆಯಿಲ್ಲದೆ ಬಂದೂಕಿನ ಗುಂಡುಗಳಿಂದ ಹೊಡೆದುರುಳಿಸಿದ್ದನ್ನು ಮೂಕ ಸಾಕ್ಷಿಯಾಗಿ ನಿಂತು ಕಂಡಿರುವ ಉದ್ಯಾನವೆ ಜಲಿಯನ್‍ವಾಲಾ ಬಾಗ್.

ಇಂದು ರಾಷ್ಟ್ರೀಯ ಸ್ಮಾರಕವಾಗಿರುವ ಈ ಉದ್ಯಾನವು ಗತ ಕಾಲದಲ್ಲಿ ನಡೆದ ದುರದೃಷ್ಟಕರ ಹಾಗೂ ಅತಿ ಖಂಡನೀಯವಾದ ಹತ್ಯಾಕಾಂಡದ ಕಥೆಯನ್ನು ಭೇಟಿ ನೀಡುವ ಪ್ರವಾಸಿಗರಿಗೆ ಹೇಳುತ್ತಿದೆ. ಅಮೃತಸರ ಪಟ್ಟಣದ ಸಿಖ್ಖರ ಪವಿತ್ರ ಸ್ಥಳವಾದ ಸುವರ್ಣ ದೇವಾಲಯ (ಗೋಲ್ಡನ್ ಟೆಂಪಲ್) ದ ಪಕ್ಕದಲ್ಲೆ ಇರುವ ಜಲಿಯನ್‍ವಾಲಾ ಮೂಲತಃ ಒಂದು ಸಾರ್ವಜನಿಕ ಉದ್ಯಾನವಾಗಿದೆ.

ಅಮೃತಸರ ಪಟ್ಟಣಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ದೇಶೀಯ ಪ್ರವಾಸಿಗನೂ ಈ ಸ್ಥಳಕ್ಕೆ ಭೇಟಿ ನೀಡಿ ಮಡಿದ ಭಾರತೀಯರಿಗೆ ಪ್ರಾರ್ಥನೆ ಸಲ್ಲಿಸದೆ ಮರಳಲಾರ ಎಂದೇ ಹೇಳಬಹುದು. ಈ ಹತ್ಯಾಕಾಂಡದ ಹಿನ್ನಿಲೆಯ ಕುರಿತು ಸ್ಲೈಡುಗಳಲ್ಲಿ ತಿಳಿಯಿರಿ.

ಈ ಲೇಖನವನ್ನೂ ಸಹ ಓದಲು ಬಯಸುವಿರಾ?

ಹೀಗಿದೆ ನಮ್ಮ ಹೆಮ್ಮೆಯ ಕಾರ್ಗಿಲ್

ಜಲಿಯನ್‍ವಾಲಾ ಬಾಗ್:

ಜಲಿಯನ್‍ವಾಲಾ ಬಾಗ್:

ಏಪ್ರಿಲ್ 13, 1919 ರ ಸಮಯ. ಇಬ್ಬರು ಭಾರತೀಯ ನಾಯಕರನ್ನು ಬಂಧಿಸಿದ್ದ ಬ್ರಿಟೀಷರ ವಿರುದ್ಧ ಪ್ರತಿಭಟಿಸಲು ಅಮೃತಸರದ ಜಲಿಯನ್‍ವಾಲಾ ಉದ್ಯಾನದಲ್ಲಿ ಸಾಕಷ್ಟು ಜನರ ಗುಂಪೊಂದು ಸೇರಿತ್ತು. ಇವರಲ್ಲಿ ಬೈಸಾಖಿ ಹಬ್ಬದ ಯಾತ್ರಾರ್ಥಿಗಳೂ ಸಹ ಸೇರಿದ್ದರು. ಆದರೆ ಇವರು ಕ್ರಾಂತಿಕಾರಿಗಳಾಗಿರಲಿಲ್ಲ. ಬದಲಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಯೋಜಿಸಿದ್ದರು.

ಚಿತ್ರಕೃಪೆ: Adam Jones

ಜಲಿಯನ್‍ವಾಲಾ ಬಾಗ್:

ಜಲಿಯನ್‍ವಾಲಾ ಬಾಗ್:

ಈ ಸಮಯದಲ್ಲಿ ಆ ಪ್ರದೇಶದಲ್ಲಿ ನಿಶೇಧಾಜ್ಞೆ ಚಾಲ್ತಿಯಲ್ಲಿತ್ತು. ಈ ರೀತಿ ಇರುವಾಗಲೂ ಗುಂಪು ಸೇರಿದ್ದ ಭಾರತೀಯರಿಗೆ, ಬುದ್ಧಿ ಕಲಿಸಬೇಕೆಂದು ಕ್ರೂರ ಬುದ್ಧಿಯ ಅಂದಿನ ಬ್ರಿಟೀಷ್ ಸರ್ಕಾರದ ಪಂಜಾಬ್ ಪ್ರಾಂತ್ಯದ ಬ್ರಿಗೇಡಿಯರ್ ಜನರಲ್ ಆಗಿದ್ದ ರೆಗಿನಾಲ್ಡ್ ಡಯರ್ ಎಂಬಾತನು ಶಸ್ತ್ರವುಳ್ಳ ತನ್ನ ಪಡೆಗಳನ್ನು ಕರೆದುಕೊಂಡು ಆ ಉದ್ಯಾನಕ್ಕೆ ಬರುತ್ತಾನೆ.

ಚಿತ್ರಕೃಪೆ: Stefan Krasowski

ಜಲಿಯನ್‍ವಾಲಾ ಬಾಗ್:

ಜಲಿಯನ್‍ವಾಲಾ ಬಾಗ್:

ಉದ್ಯಾನದೊಳಗೆ ಪ್ರವೇಶಿಸಲು ಇದ್ದ ಮಾರ್ಗವು ಅತಿ ಚಿಕ್ಕದಾಗಿತ್ತು. ಅಲ್ಲದೆ ಪ್ರವೇಶ ದ್ವಾರಗಳ ಸುತ್ತಮುತ್ತ ಆತನು ತನ್ನ ಪಡೆಗಳಿಗೆ ಆವರಿಸಲು ಹೇಳಿದ. ಇಷ್ಟಾದ ಮೇಲೆ ಆತ ಯಾವುದೇ ರೀತಿಯ ಎಚ್ಚರಿಕೆ ನೀಡದೆ ಹೆಚ್ಚು ಜನರಿದ್ದ ಗುಂಪಿನ ಮೇಲೆ ಗುಂಡಿನ ಮಳೆಗೆರೆಯಲು ಆದೇಶಿಸುತ್ತಾನೆ.

ಚಿತ್ರಕೃಪೆ: Jmacleantaylor

ಜಲಿಯನ್‍ವಾಲಾ ಬಾಗ್:

ಜಲಿಯನ್‍ವಾಲಾ ಬಾಗ್:

ಇದರಿಂದ ತಬ್ಬಿಬ್ಬಾದ ಜನರು ತಮ್ಮ ತಮ್ಮ ಪ್ರಾಣಗಳನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಚೆಲ್ಲಾ ಪಿಲ್ಲಿಯಾಗಿ ಓಡಲು ಆರಂಭಿಸುತ್ತಾರೆ. ಹೀಗೆ ನುಕ್ಕು ನುಗ್ಗಲಿಗೆ, ಕಾಲ್ತುಳಿತಕ್ಕೆ ಸಿಲುಕಿದ ಹಲವರು ಗಾಯಗೊಳ್ಳುತ್ತಾರೆ. ಇನ್ನೂ ಕೆಲವರೂ ಪ್ರಾಣವನ್ನೂ ಬಿಡುತ್ತಾರೆ.

ಚಿತ್ರಕೃಪೆ: Dinesh Bareja

ಜಲಿಯನ್‍ವಾಲಾ ಬಾಗ್:

ಜಲಿಯನ್‍ವಾಲಾ ಬಾಗ್:

ನಂತರ ಹೊರ ಹೋಗಲು ಪ್ರಯತ್ನಿಸುತ್ತಿರುವ ಜನಗಳ ಮೇಲೆ ಗುಂಡು ಹೊಡೆಯಲು ಹೇಳುತ್ತಾನೆ. ಈ ರೀತಿಯಾಗಿ ಜನ ತಮ್ಮ ಪ್ರಾಣ ಉಳಿಸಿಕೊಳ್ಳಲು ಎಲ್ಲೆಲ್ಲಿ ಓಡುತ್ತಿದ್ದರೊ ಅಲ್ಲಲ್ಲಿ ಗುಂಡಿನ ಮಳೆ ಗೈಯಲಾಗುತ್ತದೆ.

ಚಿತ್ರಕೃಪೆ: Stefan Krasowski

ಜಲಿಯನ್‍ವಾಲಾ ಬಾಗ್:

ಜಲಿಯನ್‍ವಾಲಾ ಬಾಗ್:

ಭಯ ಭೀತರಾದ ಕೆಲ ಜನಗಳು ಉದ್ಯಾನದಲ್ಲಿದ್ದ ಬಾವಿಯೊಂದರಲ್ಲಿ ತಮ್ಮ ಪ್ರಾಣ ಉಳಿಸಿಕೊಳ್ಳುವ ಉದ್ದೇಶದಿಂದ ಜಿಗಿಯುತ್ತಾರೆ. ನಂತರ ಅವರೂ ಕೂಡ ಪ್ರಾಣ ಕಳೆದುಕೊಳ್ಳುತ್ತಾರೆ. ಕೆಲವರು ಶರಣಾಗುವ ರೀತಿಯಲ್ಲಿ ಭೂಮಿಗೆ ಒರಗಿದರೂ ಅವರ ಮೇಲೆ ಗುಂಡು ಹಾರಿಸಲಾಗುತ್ತದೆ.

ಜಲಿಯನ್‍ವಾಲಾ ಬಾಗ್:

ಜಲಿಯನ್‍ವಾಲಾ ಬಾಗ್:

ಈ ಗುಂಡಿನ ಮಳೆಯು ಗುಂಪಿನ ಜನರು ಯಾವ ಕಡೆಯಿಂದಲೂ ಹೊರ ಹೋಗದಂತೆ ಆಕ್ರಮಿಸಿಕೊಳ್ಳಲಾದ ಜಲಿಯನ್‍ವಾಲಾ ಬಾಗ್ ಉದ್ಯಾನದಲ್ಲಿ, ಇದ್ದ ಗುಂಡುಗಳು ಮುಗಿಯುವವರೆಗೂ ಸುಮಾರು 8 ರಿಂದ 10 ನಿಮಿಷಗಳ ಕಾಲ ಸತತವಾಗಿ ಹಾರಿಸಲಾಗುತ್ತದೆ.

ಚಿತ್ರಕೃಪೆ: Dinesh Bareja

ಜಲಿಯನ್‍ವಾಲಾ ಬಾಗ್:

ಜಲಿಯನ್‍ವಾಲಾ ಬಾಗ್:

ಹೀಗೆ ಆ ಒಂದು ದಿನವು ದಿನಕಳೆಯುವುದರಲ್ಲೆ ಒಂದು ಕರಾಳ ದಿನವಾಗಿ ಮಾರ್ಪಡುತ್ತದೆ. ಪ್ರಾಣ ಕಳೆದುಕೊಂಡವರ ಕುಟುಂಬದ ಆಕ್ರಂದನ ಮುಗಿಲು ಮುಟ್ಟುತ್ತದೆ. ಸಮಸ್ತ ಭಾರತೀಯರು ಈ ಘಟನೆಯಿಂದ ನೊಂದು ಶೋಕ ಸಾಗರದಲ್ಲಿ ಮುಳುಗುತ್ತಾರೆ.

ಚಿತ್ರಕೃಪೆ: Rishabh Mathur

ಜಲಿಯನ್‍ವಾಲಾ ಬಾಗ್:

ಜಲಿಯನ್‍ವಾಲಾ ಬಾಗ್:

ಘಟನಾನಂತರ ಬಿಡುಗಡೆ ಮಾಡಲಾದ ಬ್ರಿಟೀಷ್ ಆಡಳಿತದ ದಾಖಲೆಗಳ ಪ್ರಕಾರ, ಸತ್ತವರ ಸಂಖ್ಯೆ 379 ಹಾಗೂ ಗಾಯಗೊಂಡವರ ಸಂಖ್ಯೆ 1100. ಆದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಕಾರ, 1500 ಕ್ಕೂ ಹೆಚ್ಚು ಜನರು ಗಾಯಗೊಂಡು ಸುಮಾರು 1000 ದಷ್ಟು ಜನರು ಮರಣಿಸಿದರು.

ಚಿತ್ರಕೃಪೆ: Rishabh Mathur

ಜಲಿಯನ್‍ವಾಲಾ ಬಾಗ್:

ಜಲಿಯನ್‍ವಾಲಾ ಬಾಗ್:

ಸ್ಥಂಭಿಭೂತರನ್ನಾಗಿಸುವ ಜಲಿಯನ್‍ವಾಲಾ ಬಾಗ್ ಉದ್ಯಾನದ ಕೆಲ ಚಿತ್ರಗಳು. ಗೋಡೆಗೆ ತಾಕಿದ ಗುಂಡಿನ ಕುರುಹುಗಳು.

ಚಿತ್ರಕೃಪೆ: tjollans

ಜಲಿಯನ್‍ವಾಲಾ ಬಾಗ್:

ಜಲಿಯನ್‍ವಾಲಾ ಬಾಗ್:

ಸ್ಥಂಭಿಭೂತರನ್ನಾಗಿಸುವ ಜಲಿಯನ್‍ವಾಲಾ ಬಾಗ್ ಉದ್ಯಾನದ ಕೆಲ ಚಿತ್ರಗಳು.

ಚಿತ್ರಕೃಪೆ: tjollans

ಜಲಿಯನ್‍ವಾಲಾ ಬಾಗ್:

ಜಲಿಯನ್‍ವಾಲಾ ಬಾಗ್:

ಸ್ಥಂಭಿಭೂತರನ್ನಾಗಿಸುವ ಜಲಿಯನ್‍ವಾಲಾ ಬಾಗ್ ಉದ್ಯಾನದ ಕೆಲ ಚಿತ್ರಗಳು.

ಚಿತ್ರಕೃಪೆ: Adam Jones

ಜಲಿಯನ್‍ವಾಲಾ ಬಾಗ್:

ಜಲಿಯನ್‍ವಾಲಾ ಬಾಗ್:

ಸ್ಥಂಭಿಭೂತರನ್ನಾಗಿಸುವ ಜಲಿಯನ್‍ವಾಲಾ ಬಾಗ್ ಉದ್ಯಾನದ ಕೆಲ ಚಿತ್ರಗಳು.

ಚಿತ್ರಕೃಪೆ: Adam Jones

ಜಲಿಯನ್‍ವಾಲಾ ಬಾಗ್:

ಜಲಿಯನ್‍ವಾಲಾ ಬಾಗ್:

ಸ್ಥಂಭಿಭೂತರನ್ನಾಗಿಸುವ ಜಲಿಯನ್‍ವಾಲಾ ಬಾಗ್ ಉದ್ಯಾನದ ಕೆಲ ಚಿತ್ರಗಳು.

ಚಿತ್ರಕೃಪೆ: Stefan Krasowski

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more