Search
  • Follow NativePlanet
Share
» »ಚೀಟಿ ಬರೆದು ಇಟ್ಟರೆ ಚಿಟಿಕೆಯಲ್ಲಿಯೇ ನಿಮ್ಮ ಸಮಸ್ಯೆಗಳನ್ನು ತೀರಿಸುತ್ತಾನಂತೆ ಇಲ್ಲಿನ ದೈವ...

ಚೀಟಿ ಬರೆದು ಇಟ್ಟರೆ ಚಿಟಿಕೆಯಲ್ಲಿಯೇ ನಿಮ್ಮ ಸಮಸ್ಯೆಗಳನ್ನು ತೀರಿಸುತ್ತಾನಂತೆ ಇಲ್ಲಿನ ದೈವ...

By Sowmyabhai

ನಮ್ಮ ಭಾರತ ದೇಶವು ದೇವಾಲಯಗಳ ನಿಲಯ ಎಂದು ಹೇಳುತ್ತಾರೆ. ಮುಖ್ಯವಾಗಿ ಹಿಮಾಲಯ ರಾಜ್ಯಗಳು ಎಂದು ಹೇಳುವ ಹಿಮಾಚಲ ಪ್ರದೇಶ, ಉತ್ತರಾಖಂಡ ತದಿತರ ರಾಜ್ಯದಲ್ಲಿನ ಪುರಾಣ, ಚಾರಿತ್ರಿಕವಾದ ಪ್ರಧಾನ್ಯತೆಯನ್ನು ಹೊಂದಿರುವ ಅನೇಕ ದೇವಾಲಯಗಳಿವೆ. ಇವುಗಳಲ್ಲಿ ಕೆಲವು ದೇವಾಲಯಗಳ ಪೂಜಾ ವಿಧಾನಗಳು ಅತ್ಯಂತ ವಿಭಿನ್ನವಾಗಿ ಇರುತ್ತವೆ. ಅಂತಹ 2 ದೇವಾಲಯಗಳಿಗೆ ಸಂಬಂಧಿಸಿದ ಕಥನಗಳನ್ನು ತಿಳಿದುಕೊಳ್ಳೊಣ.

ಮೊದಲನೆಯ ದೇವಾಲಯದಲ್ಲಿ ಭಕ್ತರು ತನ್ನ ನ್ಯಾಯ ಸಮಸ್ಯೆಗಳನ್ನು ಚೀಟಿಯ ರೂಪದಲ್ಲಿ ಬರೆದು ದೇವರಿಗೆ ನಿವೇದಿಸುತ್ತಾರೆ. ಅದಕ್ಕೆ ಉತ್ತಮ ಫಲಿತ ದೊರೆತ ನಂತರ ಮುಡುಪನ್ನು ಸಮರ್ಪಿಸುತ್ತಾರೆ.

ಮತ್ತೊಂದು ದೇವಾಲಯದಲ್ಲಿ 2 ಶಿವಲಿಂಗಗಳು ವಿಭಿನ್ನ ಪರಿಣಾಮಗಳು ಕಾಣಿಸುತ್ತವೆ. ಅನೇಕ ಪ್ರದೇಶಗಳ ನೀರನ್ನು ತೆಗೆದುಕೊಂಡು ಬಂದು ಇಲ್ಲಿನ ದೇವಾಲಯದಲ್ಲಿನ ಶಿವಲಿಂಗವನ್ನು ಅಭಿಷೇಕಿಸುತ್ತಾರೆ. ಇಲ್ಲಿನ ಸ್ವಾಮಿಯನ್ನು ದರ್ಶನ ಮಾಡಿದರೆ ಆಕಾಲ ಮೃತ್ಯು ಭಯವು ತೊಲಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಹಾಗಾಗಿಯೇ ದೇಶದಿಂದಲೇ ಅಲ್ಲದೇ ವಿದೇಶದಿಂದಲೂ ಕೂಡ ನಿತ್ಯವೂ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಇದಕ್ಕೆ ಸಂಬಂಧಿಸಿದ ಪೂರ್ತಿ ಮಾಹಿತಿಯನ್ನು ನೇಟಿವ್ ಪ್ಲಾನೆಟ್‍ನ ಮೂಲಕ ತಿಳಿದುಕೊಳ್ಳೊಣ.

1.ಉತ್ತರಖಂಡ

1.ಉತ್ತರಖಂಡ

PC:YOUTUBE

ಹಿಮಾಲಯ ಪರ್ವತ ಪ್ರದೇಶದಲ್ಲಿನ ರಾಜ್ಯದಲ್ಲಿ ಒಂದಾದ ಉತ್ತರಖಂಡ ಪ್ರದೇಶವನ್ನು ಘುರೆವಾಲ್, ಕುಮಾವು ಪ್ರದೇಶಗಳಾಗಿ ವಿಭಾಗಿಸಿದ್ದಾರೆ. ಇವುಗಳಲ್ಲಿ ಬದರಿನಾಥ್, ಕೇದಾರನಾಥ್, ಗಂಗೋತ್ರಿ, ಯಮುನೋತ್ರಿಯಂತಹ ಅತಿ ಮುಖ್ಯವಾದ ಧಾರ್ಮಿಕ ಪುಣ್ಯಕ್ಷೇತ್ರಗಳು ಘುರೆವಾಲ್ ಪ್ರದೇಶದಲ್ಲಿವೆ.

2.ಕುಮಾವು ಪ್ರದೇಶ

2.ಕುಮಾವು ಪ್ರದೇಶ

PC:YOUTUBE

ಇನ್ನು ನೈನಿತಾಲ್, ರಾಣಿಖೇಟ್, ಜಾಗೇಶ್ವರಿ, ಭಾಗೇಶ್ವರಿ, ಪಾತಾಳಭುವನೇಶ್ವರ್ ಕುಮಾವು ಪ್ರದೇಶದಲ್ಲಿವೆ. ಜಾಗೇಶ್ವರವನ್ನು ದೇವಾಲಯಗಳ ಸಮುದಾಯ ಎಂದು ಕರೆಯುತ್ತಾರೆ. ಇಲ್ಲಿ ಚಿಕ್ಕ ಹಾಗು ದೊಡ್ಡ ದೇವಾಲಯಗಳೆಲ್ಲಾ ಸೇರಿ ಸುಮಾರು 120 ದೇವಾಲಯಗಳಿವೆ.

3.120 ದೇವಾಲಯಗಳ ಸಮುದಾಯ

3.120 ದೇವಾಲಯಗಳ ಸಮುದಾಯ

PC:YOUTUBE

ಈ 120 ದೇವಾಲಯಗಳಲ್ಲಿ ಗೋಲದೇವಿ ದೇವಾಲಯ, ಜಾಗೇಶ್ವರಿ ಮಹದೇವ್ ಮಂದಿರಗಳು ಅತ್ಯಂತ ಮುಖ್ಯವಾದುವು. ಉತ್ತರಖಂಡದಲ್ಲಿನ ಆಲ್ಮೋಡದಿಂದ ಹೈವೆಯಲ್ಲಿ ಸುಮಾರು 14 ಕಿ.ಮೀ ದೂರದಲ್ಲಿ ಚೆತ್ತೈ ಎಂಬ ಊರಿದೆ. ಅಲ್ಲಿ ಗೋಲು ಅಥವಾದ ಚೆತ್ತೈ ದೇವಿ ದೇವಾಲಯವಿದೆ.

4.ಫುಂಟಾ ದೇವಿ ಎಂದು ಕೂಡ

4.ಫುಂಟಾ ದೇವಿ ಎಂದು ಕೂಡ

PC:YOUTUBE

ಇಲ್ಲಿ ನೆಲೆಸಿರುವ ದೇವಿಯನ್ನು ಶಕ್ತಿ ಸ್ವರೂಪಿಣಿ ಎಂದು ಭಾವಿಸುತ್ತಾರೆ. ಇನ್ನು ಭಕ್ತರು ದೇವಿಗೆ ಗಂಟೆಯ ರೂಪದಲ್ಲಿ ತಮ್ಮ ಮುಡುಪನ್ನು ತೀರಿಸುತ್ತಾರೆ. ಅದ್ದರಿಂದಲೇ ಇಲ್ಲಿನ ತಾಯಿಯನ್ನು ಫುಂಟಾ ದೇವಿ ಎಂದು ಕೂಡ ಕರೆಯುತ್ತಾರೆ. ಅಷ್ಟೇ ಅಲ್ಲದೇ, ಕಲ್ವ ದೇವತೆ, ಗರ್ವ ದೇವತೆ ವಿಗ್ರಹಗಳು ಕೂಡ ಇವೆ.

5.ಕೋರ್ಟಿಗೆ ಹೋಗದೇ ಇರುವವರು

5.ಕೋರ್ಟಿಗೆ ಹೋಗದೇ ಇರುವವರು

PC:YOUTUBE

ಸ್ಥಳೀಯರು ಗೋಲು ದೇವತೆಗಳನ್ನು ಶಿವನ ಅವತಾರವೆಂದೂ. ಕಲ್ವ ದೇವತೆಯನ್ನು ಭೈರವ ಸ್ವರೂಪಿ ಎಂದೂ ಗರ್ವ ದೇವಿಯನ್ನು ಶಕ್ತಿ ಸ್ವರೂಪಿಣಿಯಾಗಿ ಭಾವಿಸುತ್ತಾರೆ. ಕೋರ್ಟಿನಲ್ಲಿ ತಮಗೆ ಅನ್ಯಾಯ ನಡೆದಿದೆ ಎಂದು ಭಾವಿಸುವವರು ಅಥವಾ ಆರ್ಥಿಕ, ಸಾಮಾಜಿಕ ತದಿತರ ಕಾರಣಗಳಿಂದ ಕೋರ್ಟಿಗೆ ಹೋಗದೇ ಇರುವವರು ತಮಗೆ ನಡೆದ ಅನ್ಯಾಯವನ್ನು ಇಲ್ಲಿ ಒಂದು ಚೀಟಿಯ ಮೇಲೆ ಬರೆಯುತ್ತಾರೆ.

6.ಗಂಟೆಗಳನ್ನು ಮುಡುಪಾಗಿ

6.ಗಂಟೆಗಳನ್ನು ಮುಡುಪಾಗಿ

PC:YOUTUBE

ನಿಜವಾದ ಭಕ್ತರನ್ನು ಶಿವನು ಗೋಲ ದೇವತೆಯ ರೂಪದಲ್ಲಿ ಸಹಾಯ ಮಾಡುತ್ತಾನೆ ಎಂದೂ. ಇದಕ್ಕೆ ಎಷ್ಟೊ ಪ್ರತ್ಯಕ್ಷವಾದ ಉದಾಹರಣೆಗಳು ಇವೆ ಎಂದು ಹೇಳುತ್ತಾರೆ. ತಮಗೆ ನ್ಯಾಯ ದೊರೆತ ನಂತರ ಭಕ್ತರು ಇಲ್ಲಿ ಗೋಲ ದೇವತೆಗೆ ಗಂಟೆಯನ್ನು ಮುಡುಪಾಗಿ ಸಮರ್ಪಿಸುತ್ತಾರೆ.

7.ಎರಡುವರೆ ಲಕ್ಷಕ್ಕಿಂತ ಹೆಚ್ಚು

7.ಎರಡುವರೆ ಲಕ್ಷಕ್ಕಿಂತ ಹೆಚ್ಚು

PC:YOUTUBE

ಹೀಗೆ ಬರೆದ ಚೀಟಿಗಳ ಜೊತೆ ಚಿಕ್ಕ ಹಾಗು ದೊಡ್ಡ ಗಂಟೆಗಳು ಸೇರಿ ಸುಮಾರು ಎರಡುವರೆ ಲಕ್ಷ ಘಂಟೆಗಳನ್ನು ಇಲ್ಲಿ ಕಾಣಬಹುದು. ಈ ಚೀಟಿಗಳು, ಘಂಟೆಗಳ ಸಂಖ್ಯೆಯನ್ನು ಕಂಡು ಪ್ರಜೆಗಳಿಗೆ ಈ ದೇವತೆಯ ಮೇಲೆ ಎಷ್ಟು ನಂಬಿಕೆ ಇದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಈ ಗೋಲ ದೇವತೆಗೆ ಸಮೀಪದಲ್ಲಿಯೇ 20 ಕಿ.ಮೀ ದೂರದಲ್ಲಿ ಜಟಗಂಟಾ ನದಿ ಇದೆ.

8.ಪುರಾತತ್ತ್ವ ಇಲಾಖೆ

8.ಪುರಾತತ್ತ್ವ ಇಲಾಖೆ

PC:YOUTUBE

ಇಲ್ಲಿ ಜಾಗೇಶ್ವರ ಮಹಾದೇವ್ ಮಂದಿರದ ಜೊತೆ ಕುಬೇರನ ದೇವಾಲಯ, ಮತ್ತೊಂದು ಚಿಕ್ಕದಾದ ಶಿವಾಲಯಗಳಿವೆ. ಈ ದೇವಾಲಯದ ಸಮುದಾಯವು ಪ್ರಸ್ತುತ ಪುರಾವಸ್ತು ಇಲಾಖೆಯವರ ಅಧೀನದಲ್ಲಿದೆ.

9.450 ವರ್ಷಕ್ಕಿಂತ ಹಿಂದೆ

9.450 ವರ್ಷಕ್ಕಿಂತ ಹಿಂದೆ

PC:YOUTUBE

ಇವುಗಳನ್ನು ನಿರ್ಮಾಣ ಮಾಡಿ ಸುಮಾರು 450 ವರ್ಷವಾಗಿದೆ ಎಂದು ಪುರಾವಸ್ತು ಶಾಖೆಯ ಅಧಿಕಾರಿಗಳು ಹೇಳುತ್ತಾರೆ. ಇಲ್ಲಿ ಮೃತ್ಯುಂಜಯ ಮಂದಿರ ಕೂಡ ಇದೆ. ಇದು ಸ್ವಯಂಭೂಲಿಂಗ ಎಂದು ಗುರುತಿಸಲಾಗಿದೆ. ಇದರ ಮೇಲೆ ಕಣ್ಣಿನ ಆಕಾರದಲ್ಲಿ ಗಿಳಿ ಇದೆಯಂತೆ.

10.ಆಕಾಲ ಮೃತ್ಯು ಭಯಂ

10.ಆಕಾಲ ಮೃತ್ಯು ಭಯಂ

PC:YOUTUBE

ಈ ದೇವಾಲಯ ಗೋಡೆಯ ಮೇಲೆ ಮೃತ್ಯುಂಜಯ ಮಹಾ ಮಂತ್ರ ಇರುತ್ತದೆ. ಈ ಮಂತ್ರವನ್ನು ಜಪಿಸಿದರೆ ಮೃತ್ಯು ಭಯವು ಹೋಗುತ್ತದೆ ಎಂದು ಭಕ್ತರು ನಂಬುತ್ತಾರೆ. ದೇಶದಲ್ಲಿ ಅನೇಕ ಸ್ಥಳಗಳಿಂದ ನಿತ್ಯವು ಇಲ್ಲಿಗೆ ಅನೇಕ ಮಂದಿ ಭಕ್ತರು ಮೃತ್ಯುಂಜಯ ಹೋಮವನ್ನು ಮಾಡುತ್ತಾ ಇರುತ್ತಾರೆ.

11.ನಾಗೇಶಮ ದೇವಾಲಯ

11.ನಾಗೇಶಮ ದೇವಾಲಯ

PC:YOUTUBE

ಈ ಪ್ರಾಂಗಣದಲ್ಲಿರುವ ಮತ್ತೊಂದು ದೇವಾಲಯವೆಂದರೆ ನಾಗೇಶಮ ದೇವಾಲಯ. ಇದನ್ನು ನಾಗನಾಥ್ ಎಂದು ಕೂಡ ಕರೆಯುತ್ತಾರೆ. ದ್ವಾದಶ ಜ್ಯೋತಿರ್ ಲಿಂಗಗಳಲ್ಲಿ ಇದು ಕೂಡ ಒಂದು ಎಂದು ಹೇಳುತ್ತಾರೆ. ಇಲ್ಲಿ ಶಿವನು ಪರಮ ಮುಖವಾಗಿ ಕಾಣಿಸುತ್ತಾನೆ. ಅಷ್ಟೇ ಅಲ್ಲದೇ 2 ಭಾಗವಾಗಿರುತ್ತದೆ.

12.ಅರ್ಧನಾರೀಶ್ವರ

12.ಅರ್ಧನಾರೀಶ್ವರ

PC:YOUTUBE

ಒಂದು ಭಾಗದ ಪರಿಣಾಮದಲ್ಲಿ ಸ್ವಲ್ಪ ದೊಡ್ಡದಾಗಿರುತ್ತದೆ. ಇದನ್ನು ಶಿವನ ಪ್ರತಿರೂಪವಾಗಿ ಭಾವಿಸುತ್ತಾರೆ. ಮತ್ತೊಂದು ಭಾಗವು ಚಿಕ್ಕದಾಗಿರುತ್ತದೆ. ಇದನ್ನು ಪಾರ್ವತಿ ದೇವಿ ಎಂದು ಸ್ಥಳೀಯ ಭಕ್ತರ ನಂಬಿಕೆಯಾಗಿದೆ. ಅದ್ದರಿಂದಲೇ ಈ ಲಿಂಗವನ್ನು ಅರ್ಥನಾರೀಶ್ವರ ಲಿಂಗ ಎಂದು ಕರೆಯುತ್ತಾರೆ.

13.ಯೋಗ ನಿದ್ರೆಯಲ್ಲಿ

13.ಯೋಗ ನಿದ್ರೆಯಲ್ಲಿ

PC:YOUTUBE

ಸಾಧಾರಣವಾಗಿ ಎಲ್ಲಾ ಶಿವಾಲಯಗಳಲ್ಲಿ ಶಿವನು ಯೋಗ ನಿದ್ರೆಯಲ್ಲಿ ಇದ್ದು ಹಾರತಿ ಸಮಯದಲ್ಲಿ ಮಾತ್ರವೇ ಜಾಗರುಕನಾಗಿ ಭಕ್ತರನ್ನು ಅನುಗ್ರಹಿಸುತ್ತಾನೆ. ಆದರೆ ಈ ಪುಣ್ಯಕ್ಷೇತ್ರದಲ್ಲಿ ಸರ್ವಕಾಲದಲ್ಲಿಯೂ ಶಿವನು ಜಾಗೃತ ಸ್ಥಿತಿಯಲ್ಲಿ ಇದ್ದು, ಭಕ್ತರನ್ನು ಅನುಗ್ರಹಿಸುತ್ತಾನೆ ಎಂದು ನಂಬುತ್ತಾರೆ.

14.ನಿದ್ರೆ

14.ನಿದ್ರೆ

PC:YOUTUBE

ಇಲ್ಲಿ ಸ್ವಾಮಿಯವರು ನಿದ್ರೆ ಮಾಡಲು ಬರುತ್ತಾರೆ ಎಂದು ನಂಬಲಾಗಿದೆ. ಅದಕ್ಕೆ ಸಾಕ್ಷಿ ಮುಂಜಾನೆ ಗರ್ಭಗುಡಿಯಲ್ಲಿನ ಬಲಭಾಗದಲ್ಲಿರುವ ಉಯ್ಯಾಲೆಯಲ್ಲಿ ಬಟ್ಟೆಯು ಅಸ್ತವ್ಯಸ್ಥ ಸ್ಥಿತಿಯಲ್ಲಿರುತ್ತದೆ. ಇಲ್ಲಿನ ಒಂದು ಕಿ. ಮೀ ದೂರದಲ್ಲಿರುವ ಗುಡ್ಡದ ಮೇಲೆ ಜಾಗೇಶ್ವರ ಮಂದಿ ಇದೆ.

15.ಕಾವಡಿ ಯಾತ್ರೆ

15.ಕಾವಡಿ ಯಾತ್ರೆ

PC:YOUTUBE

ಈ ದೇವಾಲಯದ ಸಮೀಪದಲ್ಲಿರುವ ಜಟಗಂಗದಲ್ಲಿನ ನೀರನ್ನು ತೆಗೆದುಕೊಂಡು ಹೋಗಿ ತಮ್ಮ ಗ್ರಾಮದಲ್ಲಿನ ಶಿವಾಲಯದಲ್ಲಿ ಅಭೀಷೇಕಿಸುತ್ತಿರುತ್ತಾರೆ. ಇದನ್ನು ಕಾವಡಿ ಯಾತ್ರೆ ಎಂದು ಕರೆಯುತ್ತಾರೆ. ಈ ಯಾತ್ರೆಯು ಹರಿದ್ವಾರದವರೆವಿಗೂ ನಡೆಯುತ್ತದೆ.

16.ಹೇಗೆ ಸಾಗಬೇಕು?

16.ಹೇಗೆ ಸಾಗಬೇಕು?

PC:YOUTUBE

ಭಾರತ ದೇಶದ ರಾಜಧಾನಿಯಾದ ದೆಹಲಿಯಿಂದ ಜೋಗೇಶ್ವರಕ್ಕೆ ಸುಮಾರು 400 ಕಿ.ಮೀ ದೂರದಲ್ಲಿದೆ. ದೆಹಲಿಯಿಂದ ಅನೇಕ ಪ್ರವಾಸಿ ಬಸ್ಸುಗಳು, ಖಾಸಗಿ ಟ್ಯಾಕ್ಸಿಗಳ ಮೂಲಕ ನೇರವಾಗಿ ತೆರಳಬಹುದು. ಅದೇ ವಿಧವಾಗಿ ದೆಹಲಿಯಿಂದ ಕೊಠ್‍ಗೊದಾಂನವರೆವಿಗೆ ರೈಲುಗಳು ಸಂಪರ್ಕ ಸಾಧಿಸುತ್ತವೆ. ಅಲ್ಲಿಂದ 125 ಕಿ.ಮೀ ರಸ್ತೆ ಪ್ರಯಾಣದ ಮೂಲಕ ಜಾಗೇಶ್ವರಕ್ಕೆ ಸೇರಿಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X