Search
  • Follow NativePlanet
Share
» »ಐಆರ್‌ಸಿಟಿಸಿ ನೀಡುತ್ತಿದೆ 12 ದಿನದ ಜಮ್ಮುಕಾಶ್ಮೀರ ಪ್ಯಾಕೇಜ್

ಐಆರ್‌ಸಿಟಿಸಿ ನೀಡುತ್ತಿದೆ 12 ದಿನದ ಜಮ್ಮುಕಾಶ್ಮೀರ ಪ್ಯಾಕೇಜ್

ಭಾರತೀಯ ರೈಲ್ವೆಯು ಕಾಲಕಾಲಕ್ಕೆ ಒಂದಲ್ಲ ಒಂದು ಪ್ರವಾಸದ ಪ್ಯಾಕೇಜ್‌ನ್ನು ಹೊರತರುತ್ತಲೇ ಇದೆ. ಪ್ರತಿ ಬಾರೀ ಯಾವುದಾದರೊಂದು ಯಾತ್ರೆಯಿಂದಾಗಿ ಭಾರತ ದರ್ಶನಕ್ಕೆ ತಯಾರಾಗುತ್ತದೆ. ಇಂತಹ ವಿಶೇಷ ಆಫರ್‌ ನೀಡುವ ಮೂಲಕ ಪ್ರವಾಸಿಗರಿಗೆ ಅವರ ನೆಚ್ಚಿನ ಸ್ಥಳದ ಅನ್ವೇಷಣೆ ಮಾಡುವಂತೆ ಮಾಡುತ್ತದೆ.

 ಜಮ್ಮುಕಾಶ್ಮೀರ ಯಾತ್ರೆ

ಜಮ್ಮುಕಾಶ್ಮೀರ ಯಾತ್ರೆ

ಇದೀಗ ರೈಲ್ವೆಯು ಜಮ್ಮುಕಾಶ್ಮೀರ ಹೋಗಬೇಕೆಂದಿರುವ ಪ್ರವಾಸಿಗರ ಕನಸನ್ನು ನನಸಾಗಿಸಲು ಹೊರಟಿದೆ. ೧೨ ದಿನಗಳ ಜಮ್ಮುಕಾಶ್ಮೀರ ಪ್ರವಾಸದ ಪ್ಯಾಕೇಜ್‌ನ್ನು ಜಾರಿಗೆ ತಂದಿದೆ.

ವಿಐಪಿಗೂ ಇಲ್ಲ ಇಂಥಾ ಟ್ರೀಟ್‌ಮೆಂಟ್...ಇಲ್ಲಿದೆ ದೇಶದಲ್ಲೇ ದುಬಾರಿ ಮರ !ವಿಐಪಿಗೂ ಇಲ್ಲ ಇಂಥಾ ಟ್ರೀಟ್‌ಮೆಂಟ್...ಇಲ್ಲಿದೆ ದೇಶದಲ್ಲೇ ದುಬಾರಿ ಮರ !

ಶರದ್‌ ಋತು

ಶರದ್‌ ಋತು

ಐಆರ್‌ಸಿಟಿಸಿಯು ಕಾಶ್ಮೀರದ ಕಣಿವೆಯಲ್ಲಿ ಶರದ್‌ ಋತು ಎನ್ನುವ ಹೆಸರಿನ ಟೂರ್‌ ಪ್ಯಾಕೇಜ್ ಆರಂಭಿಸಲಿದೆ. ಡಿಸೆಂಬರ್ ೧೪ರಿಂದ ಇದು ಆರಂಭಗೊಳ್ಳಲಿದೆ. ಈ ಪ್ರವಾಸವು ೧೧ ರಾತ್ರಿ ಹಾಗೂ ೧೨ ದಿನಗಳ ಪ್ಯಾಕೇಜ್‌ನ್ನು ಒಳಗೊಂಡಿದೆ. ಚೆನ್ನೈಯಿಂದ ಪ್ರಾರಂಭವಾಗುತ್ತದೆ. ಇದರಲ್ಲಿ ಪ್ರವಾಸಿಗರಿಗೆ ಎಸಿ ಟೂರಿಸ್ಟ್‌ ಟ್ರೈನ್ ಯಾತ್ರೆ ಮಾಡಿಸಲಾಗುವುದು. ಈ ಪ್ರವಾಸದಲ್ಲಿ ಅಮೃತ್‌ಸರ್‌, ಶ್ರೀನಗರ್, ಗುಲ್ಮಾರ್ಗ್ ಹಾಗೂ ಸೋನ್‌ಮಾರ್ಗ್ ಸುತ್ತಾಡಿಸಲಾಗುವುದು.

3 ಆಯ್ಕೆ ಇದೆ

3 ಆಯ್ಕೆ ಇದೆ

ಈ ಪ್ಯಾಕೇಜ್‌ನಲ್ಲಿ ಬೆಲೆಯ ಬಗ್ಗೆ ಹೇಳುವುದಾದರೆ ಸ್ಟ್ಯಾಂಡರ್ಡ್ ಪ್ಯಾಕೇಜ್ ಇದರದಲ್ಲಿ ಥರ್ಡ್ ಎಸಿಯ ಪ್ರಯಾಣ ಮಾಡಬಹುದು. ಇದರಲ್ಲಿ ನಿಮಗೆ ಮೂರು ಶೇರಿಂಗ್‌ ಪ್ರಕಾರ ಪ್ರತಿಯೊಬ್ಬರಿಗೂ ೩೩ ಸಾವಿರದ ೩೦೦ ರೂ. ಖರ್ಚು ಮಾಡಬೇಕಾಗುತ್ತದೆ. ಎರಡು ಶೇರಿಂಗ್‌ಗೆ ೩೫ ಸಾವಿರದ ೭೫೦ ರೂ. ಸಿಂಗಲ್‌ ಟ್ರಾವೆಲ್ ಮಾಡಲು ೪೪ ಸಾವಿರದ ೨೫೦ ರೂ. ಖರ್ಚು ಮಾಡಬೇಕಾಗುತ್ತದೆ.

ಈ ದೇವಾಲಯದಲ್ಲಿ ಎಣ್ಣೆಯಿಂದಲ್ಲ, ಬರೀ ನೀರಿನಿಂದ ದೀಪ ಬೆಳಗಿಸ್ತಾರಂತೆ !ಈ ದೇವಾಲಯದಲ್ಲಿ ಎಣ್ಣೆಯಿಂದಲ್ಲ, ಬರೀ ನೀರಿನಿಂದ ದೀಪ ಬೆಳಗಿಸ್ತಾರಂತೆ !

ಕಂಫರ್ಟ್ ಪ್ಯಾಕೇಜ್

ಕಂಫರ್ಟ್ ಪ್ಯಾಕೇಜ್

ಕಂಫರ್ಟ್ ಪ್ಯಾಕೇಜ್ ನಲ್ಲಿ ಸೆಕೆಂಡ್ ಎಸಿ, ಮೂವರು ಶೇರಿಂಗ್‌ಗೆ ೩೬ ಸಾವಿರದ ೩೦೦ ರೂ. ಡಿಲಕ್ಸ್ ಪ್ಯಾಕೇಜ್‌ನಲ್ಲಿ ಫಸ್ಟ್ ಕ್ಲಾಸ್‌ ಎಸಿ ಪ್ರಯಾಣ ಮಾಡಲು ೪೧ ಸಾವಿರದ ೮೫೦ ರೂ. ಖರ್ಚಾಗುತ್ತದೆ.

ಎಲ್ಲಿಂದ ಆರಂಭ

ಎಲ್ಲಿಂದ ಆರಂಭ

ಚೆನ್ನೈನಿಂದ ಆರಂಭವಾಗುವ ಈ ಯಾತ್ರೆ ಇಡೀ ರೈಲಿನಲ್ಲಿ ಪ್ರಯಾಣಿಸಲಾಗುವುದು. ಆದರೆ ದೆಹಲಿಯಿಂದ ಚೆನ್ನೈಗೆ, ಕೊಯಂಬತ್ತೂರು ಅಥವಾ ಇತರ ಯಾವುದೇ ಸ್ಥಳಗಳಿಗೆ ರಿಟನ್‌ ಟಿಕೇಟ್ ವಿಮಾನದ್ದಾಗಿರುತ್ತದೆ. ಅದನ್ನು ಹೊರತುಪಡಿಸಿ ಉಳಿಯಲು ರೂಮ್, ಮೂರು ಹೊತ್ತಿನ ಆಹಾರ, ಗಾರ್ಡನ್‌ ಎಂಟ್ರಿ, ಬೋಟ್‌ ರೈಡ್, ಕೇಬಲ್ ಕಾರ್ ರೈಡ್ ಇದೆಲ್ಲವೂ ಪ್ಯಾಕೇಜ್‌ನಲ್ಲೇ ಬರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X