Search
  • Follow NativePlanet
Share
» »ಇನ್ನೂ ರಹಸ್ಯವಾಗೆ ಉಳಿದಿರುವ ಪಾತಾಳೇಶ್ವರ!

ಇನ್ನೂ ರಹಸ್ಯವಾಗೆ ಉಳಿದಿರುವ ಪಾತಾಳೇಶ್ವರ!

By Vijay

ಇದೊಂದು ಅದ್ಭುತ ಗುಹಾ ದೇವಾಲಯವಾಗಿದೆ. ಭಾರತೀಯ ಶಿಲಾ ಕೆತ್ತನೆಯ ಶೈಲಿಗೆ ಒಂದು ಉತ್ತಮ ಉದಾಹರಣೆಯೂ ಹೌದು. ಆದರೆ ಇಲ್ಲಿ ಕೆತ್ತಲಾದ ಶಾಸನಗಳು ಅಪೂರ್ಣವಾಗಿವೆ. ಕೆಲವು ರಚನೆಗಳು ಬೌದ್ಧ ಶೈಲಿಯ ವಿನ್ಯಾಸಗಳನ್ನು ಹೋಲುತ್ತವೆ. ರಾಷ್ಟ್ರಕೂಟರ ಕಾಲದಲ್ಲಿ ಅಂದರೆ ಸುಮಾರು ಎಂಟನೇಯ ಶತಮಾನದಲ್ಲಿ ಈ ಗುಹಾ ದೇವಾಲಯದ ನಿರ್ಮಾಣವಾಗಿದೆ.

ಈ ಗುಹಾದೇವಾಲಯಗಳನ್ನು ನೋಡಿದ್ದೀರಾ? ಅಚ್ಚರಿಯಾಗದೆ ಇರಲಾರದು

ಇಲ್ಲಿ ಶಿವನನ್ನು ಮುಖ್ಯ ದೇವರಾಗಿ ಆರಾಧಿಸಲಾಗುತ್ತದೆ. ಆದಾಗ್ಯೂ ಇತರೆ ದೇವ ದೇವತೆಯರ ವಿಗ್ರಹಗಳನ್ನೂ ಸಹ ಇಲ್ಲಿ ಕಾಣಬಹುದು. ಶಿವನು ಇಲ್ಲಿ ಭೂಗತ ಅಥವಾ ನೆಲದ್ವಾರದಲ್ಲಿರುವುದರಿಂದ ಪಾತಾಳೇಶ್ವರನೆಂದು ಕರೆಸಿಕೊಂಡಿದ್ದಾನೆ. ಇಲ್ಲಿ ಕಂಡುಬರುವ ಪ್ರತಿ ಕೆತ್ತನೆಗಳು ಏನೋ ಹೇಳಲು ಹೋಗಿ ಮೌನವಾಗಿರುವಂತೆ ಗೋಚರಿಸುತ್ತವೆ.

ಇನ್ನೂ ರಹಸ್ಯವಾಗೆ ಉಳಿದಿರುವ ಪಾತಾಳೇಶ್ವರ!

ಚಿತ್ರಕೃಪೆ: Khoj Badami

ಯಾವುದೆ ಕೆತ್ತನೆಗಳು ಅದ್ಭುತವಾಗಿ ಪ್ರಾರಂಭಗೊಂಡಿದ್ದರೂ ಪೂರ್ಣಗೊಂಡಿಲ್ಲದೆ ಇರುವುದು ಇಲ್ಲಿಗೆ ಭೇಟಿ ನೀಡಿದ ಹಲವು ಪುರಾತತ್ವ ಶಾಸ್ತ್ರಜ್ಞರಿಗೆ ನಿಖರವಾಗಿ ಇದರ ಕುರಿತು ಸಂಪೂರ್ಣ ಮಾಹಿತಿ ಅರಿಯಲಾಗದಂತೆ ಮಾಡಿರುವುದೂ ಸತ್ಯ.

ಬಂಡೆಯಲ್ಲಿ ಕೆತ್ತಲಾದ ಗುಹೆಯ ಗರ್ಭ ಸ್ಥಳವು ಶಿವಲಿಂಗವನ್ನು ಹೊಂದಿದ್ದರೆ ಎರಡೂ ಅದಿ ಬದಿಗಳಲ್ಲಿ ಇತರೆ ದೇವರುಗಳ ಸನ್ನಿಧಿಗಳಿವೆ. ಎಡಗಡೆಯಿರುವ ರಾಮ, ಸೀತೆ ಹಾಗೂ ಲಕ್ಷ್ಮಣರ ಅಮೃತ ಶಿಲೆಯಲ್ಲಿ ಕೆತ್ತಲಾದ ವಿಗ್ರಹಗಳು ನೋಡುಗರನ್ನು ಬಲು ಆಕರ್ಷಿಸುತ್ತದೆ. ಕಪ್ಪು ಕಟ್ಟೆಯ ಮೇಲೆ ನಿಂತ ಭಂಗಿಯಲ್ಲಿರುವ ಈ ವಿಗ್ರಹಗಳು ಸೂರ್ಯನ ಕಿರಣಗಳು ಬಿದ್ದಾಗ ಅದ್ಭುತವಾಗಿ ಪ್ರಕಾಶಿಸುತ್ತವೆ.

ಇನ್ನೂ ರಹಸ್ಯವಾಗೆ ಉಳಿದಿರುವ ಪಾತಾಳೇಶ್ವರ!

ಚಿತ್ರಕೃಪೆ: shankar s.

ಕಾಲದ ಹೊಡೆತಕ್ಕೆ ಎದೆ ಸೆಟೆಸಿ ನಿಂತಿರುವ ಈ ಗುಹಾ ದೇವಾಲಯದ ಕುರಿತು ಎಲ್ಲಿಯೂ ಅಷ್ಟಾಗಿ ಉಲ್ಲೇಖಿಸಲ್ಪಟ್ಟಿಲ್ಲ. ಒಂದು ಮೂಲದ ಪ್ರಕಾರ, ಮೊದಲು ಹಿಂದು ಶೈಲಿಯಲ್ಲಿ ನಿರ್ಮಿತವಾಗಿದ್ದು ನಂತರ ಬೌದ್ಧ ಧರ್ಮದ ಪ್ರಭಾವ ಹೆಚ್ಚಾದಾಗ ಬೌದ್ಧ ಶೈಲಿಯ ವಿನ್ಯಾಸಗಳು ಇಲ್ಲಿ ನಿರ್ಮಿಸಲ್ಪಟ್ಟು ಪೂರ್ಣಗೊಳ್ಳದೆ ಮತ್ತೆ ಹಾಗೆ ನಿಂತಿರುವುದು ಸಹ ಒಂದು ರಹಸ್ಯವೆ ಆಗಿದೆ.

ಇನ್ನೂ ರಹಸ್ಯವಾಗೆ ಉಳಿದಿರುವ ಪಾತಾಳೇಶ್ವರ!

ಚಿತ್ರಕೃಪೆ: Mukul2u

ಭಾರತದ ಮಾಹಿತಿ ತಂತ್ರಜ್ಞಾನದಲ್ಲಿ ಮಂಚೂಣಿಯಲ್ಲಿರುವ ನಗರಗಳಲ್ಲಿ ಒಂದಾದ ಮಹಾರಾಷ್ಟ್ರ ರಾಜ್ಯದ ಪುಣೆ ನಗರದಲ್ಲಿ ಪಾತಾಳೇಶ್ವರನ ಈ ದೇವಾಲಯವಿದೆ. ನಗರದ ಹೃದಯ ಭಾಗದಲ್ಲಿರುವ ಶಿವಾಜಿ ನಗರದಲ್ಲಿರುವ ಈ ದೇವಾಲಯವು ನಗರದ ಸಾಂಪ್ರದಾಯಿಕ ಸ್ವತ್ತಾಗಿದ್ದು ನಗರವಾಸಿಗಳಿಗೆ ಹೆಮ್ಮೆಯ ರಚನೆಯಾಗಿದೆ.

ಪುಣೆಯೂ ಸಹ ನೋಡಲೇಬೇಕಾದ ಜಿಲ್ಲೆ, ಇಲ್ಲಿದೆ ಪುರಾವೆಗಳು!

ಪುಣೆಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಸಾಕಷ್ಟು ಜನರಿಂದ ಈ ಗುಹಾ ದೇವಾಲಯ ಭೇಟಿ ನೀಡಲ್ಪಡುತ್ತದೆ. ಜಂಗ್ಲಿ ಮಹಾರಾಜ್ ರಸ್ತೆಯಲ್ಲಿರುವ ಈ ದೇವಾಲಯಕ್ಕೆ ತೆರಳಲು ಬಸ್ಸು ನಿಲ್ದಾಣ ಹಾಗೂ ರೈಲು ನಿಲ್ದಾಣಗಳಿಂದ ಬಾಡಿಗೆ ಕಾರು ಹಾಗೂ ರಿಕ್ಷಾಗಳು ಸುಲಭವಾಗಿ ದೊರೆಯುತ್ತವೆ. ಇದನ್ನು ಸರ್ಕಾರವು ಒಂದು ಸಂರಕ್ಷಿತ ಸ್ಮಾರಕ ಎಂದು ಘೋಷಿಸಿದೆ.

ಪುಣೆಗಿರುವ ರೈಲುಗಳ ವೇಳಾಪಟ್ಟಿ

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more