Search
  • Follow NativePlanet
Share
» »ಥಾರ್ ಮರಭೂಮಿಯ ಕುತೂಹಲಕರ ಸತ್ಯಗಳು!

ಥಾರ್ ಮರಭೂಮಿಯ ಕುತೂಹಲಕರ ಸತ್ಯಗಳು!

By Vijay

ಒಮ್ಮೆ ಕಲ್ಪಿಸಿಕೊಳ್ಳಿ, ಸಮುದ್ರದ ಮಧ್ಯದಲ್ಲಿ ಹಡಗಿನಲ್ಲಿ ಪ್ರಯಾಣಿಸುತ್ತಿರುವಿರಿ. ಸುತ್ತಲೂ ಒಂದು ಸುತ್ತು ಕಣ್ತಿರುಗಿಸಿ ನೋಡಿ, ಎಲ್ಲೆಡೆ ನೀಳ ವರ್ಣದ ಜಲಧಾರೆಯೆ ಕಂಡುಬರುತ್ತದೆ. ಅಲೆಗಳ ಮೇಲೆ ಬಳಕುತ್ತಾ ಸಾಗುವ ಹಡುಗು, ಎಲ್ಲೆಡೆ ನೀರೆ ನೀರು. ಇದು ಒಂದು ರೀತಿಯ ರೋಮಾಂಚನ ಅನುಭವ ನೀಡುತ್ತದಲ್ಲವೆ? ಹೌದು ಇಂತಹ ಕೆಲವು ಭೌಗೋಳಿಕ ಅಂಶಗಳು ಸಾಕಷ್ಟು ಸಂತಸ ನೀಡುತ್ತವೆ.

ಅಂತಹ ಕೆಲವು ಅಂಶಗಳಲ್ಲಿ ಸಮುದ್ರ ವಿಹಾರ ಒಂದಾದರೆ, ಆಗಸದಲ್ಲಿ ಹೆಲಿಕಾಪ್ಟರ್ ಗಳಲ್ಲಿ ಹಾರಾಡುವುದು ಮತ್ತೊಂದು ಅನುಭವ. ಕಾಡು-ಮೇಡುಗಳಲ್ಲಿ ನಗರದ ಕಟ್ಟಡಗಳ ಚಿಕ್ಕ ಸುಳೀವೂ ಇಲ್ಲದೆ ದಟ್ಟವಾದ ಘನ ಘೋರ ಮರಗಳ ಮಧ್ಯೆ ಕಾಡು ಪ್ರಾಣಿಗಳ ಬಗ್ಗೆ ಜೋಪಾನವಹಿಸುತ್ತ ಚಾರಣ ಮಾಡುವುದು/ಅನ್ವೇಷಿಸುವುದು ಇನ್ನೊಂದು ರೋಮಾಂಚನ ಅನುಭವ.

ರೋಚಕ ಸತ್ಯಗಳ ಅಂಡಮಾನ್ ಮತ್ತು ನಿಕೋಬಾರ್

ಇದೆ ರೀತಿಯಾಗಿ ಮರಭೂಮಿಗಳೂ ಸಹ ತಮ್ಮದೆ ಆದ ವಿಶಿಷ್ಟ ಅನುಭವಗಳನ್ನು ಅದರ ಮೇಲೆ ವಿಹರಿಸುವ ಪ್ರವಾಸಿಗರಿಗೆ ನೀಡುತ್ತದೆ ಎಂದರೆ ತಪ್ಪಾಗಲಾರದು. ಸಮುದ್ರದಲ್ಲಿ ಎಲ್ಲೆಡೆ ಹೇಗೆ ನೀರು ಕಾಣುತ್ತದೆಯೊ ಮರಭೂಮಿಯಲ್ಲಿ ಎಲ್ಲಿ ನೋಡಿದರಲ್ಲಿ ಮರಳಿನ ದಿಬ್ಬಗಳು, ಅಗಾಧವಾಗಿ ಹಾಸಿಗೆಯ ಹಾಗೆ ಹರಡಿದ ಮರಳಿನ ರಾಶಿ, ಎಲ್ಲೊ ಕಿ.ಮೀ ಗಳಿಗೊಂದರಂತೆ ಬೆಳೆದ ಗಿಡಗಳು, ಸರಾಗವಾಗಿ ನಡೆಯಲು ಬಾರದಂತೆ ಮಾಡುವ ಮರಳು. ಇವು ಮರಭೂಮಿಯ ಕೆಲವು ವಿಶೇಷತೆಗಳು. ಆದಾಗ್ಯೂ ಮರಭೂಮಿಗಳು ಒಂದು ಆಕರ್ಷಕ ರೀತಿಯ ಅನುಭವ ನೀಡುತ್ತವೆ.

ಅಂತಹ ಒಂದು ಸುಂದರ ಮರಭೂಮಿಯ ಕುರಿತು ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ. ಇದನ್ನು "ಗ್ರೇಟ್ ಇಂಡಿಯನ್ ಡಸರ್ಟ್" ಅಂದರೆ ಭಾರತದ ಮಹೋನ್ನತ ಮರಭೂಮಿ ಎಂಬ ನಾಮಾಂಕಿತದಿಂದಲೂ ಸಂಬೋಧಿಸುತ್ತಾರೆ ಹಾಗೂ ಇದರ ವಿಶೇಷತೆಯೆ ವಿಶೇಷವಾಗಿದ್ದು ಪ್ರವಾಸಿ ದೃಷ್ಟಿಯಿಂದಲೂ ಸಹ ಸಾಕಷ್ಟು ಮಹತ್ವ ಪಡೆದಿದೆ. ಈ ಮರಭೂಮಿಯ ಮೇಲೆ ಒಂಟೆಗಳನ್ನು ಬಳಸಿಕೊಂಡು ಅವುಗಳ ಡುಬ್ಬಗಳ ಮೇಲೆ ಕುಳಿತು ವಿಹರಿಸುವುದು ಒಂದು ಆಕರ್ಷಣೆಯಾಗಿದೆ. ಆ ಅದ್ಭುತ ಮರಭೂಮಿಯೆ ಭಾರತದ "ಥಾರ್ ಮರಭೂಮಿ".

ಅದ್ಭುತ ನೋಟ

ಅದ್ಭುತ ನೋಟ

ಭಾರತದ ವಾಯವ್ಯ ಭಾಗದಲ್ಲಿರುವ ಥಾರ್ ಮರಭೂಮಿಯು ಭಾರತ ಉಪಖಂಡ ಹಾಗೂ ಪಾಕಿಸ್ತಾನ ದೇಶಗಳ ಮಧ್ಯೆ ನೈಸರ್ಗಿಕ ಗಡಿಯನ್ನು ನೈಸರ್ಗಿಕ ರೀತಿಯಲ್ಲಿ ಮೂಡಿಸಿದೆ.

ಚಿತ್ರಕೃಪೆ: Kanthi Kiran

ವಿಸ್ಮಯಕರ

ವಿಸ್ಮಯಕರ

ಥಾರ್ ಜಗತ್ತಿನಲ್ಲೆ 17 ನೇಯ ಅತಿ ದೊಡ್ಡ ಮರಭೂಮಿ ಹಾಗೂ 9 ನೇಯ ಅತಿ ದೊಡ್ಡ ಉಪ ಉಷ್ಣವಲಯದ ಮರಭೂಮಿಯಾಗಿ ಗಮನ ಸೆಳೆಯುತ್ತದೆ. ಥಾರ್ ಮರಭೂಮಿಯ ಒಟ್ಟು 85% ರಷ್ಟು ಪ್ರದೇಶವು ಭಾರತದಲ್ಲಿದ್ದು ಮಿಕ್ಕ 15% ರಷ್ಟು ಪ್ರದೇಶವು ಪಾಕಿಸ್ತಾನದಲ್ಲಿದೆ.

ಚಿತ್ರಕೃಪೆ: Karan Dhawan India

ಕೆಲವು ಸತ್ಯಗಳು

ಕೆಲವು ಸತ್ಯಗಳು

ಭಾರತದಲ್ಲಿ ಥಾರ್ ಮರಭೂಮಿಯು 320,000 ಚ.ಕಿ.ಮೀ ಗಳಷ್ಟು ವಿಸ್ತಾರವಾದ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದು ಅದರಲ್ಲಿ 90% ರಷ್ಟು ಭಾಗವು ರಾಜಸ್ಥಾನ ರಾಜ್ಯವೊಂದರಲ್ಲೆ ಹರಡಿದೆ. ಮಿಕ್ಕಂತೆ ಶೇ.ಹತ್ತರಷ್ಟು ಭಾಗವು ಗುಜರಾತ್, ಪಂಜಾಭಾಗೂ ಹರ್ಯಾಣಾ ರಾಜ್ಯಗಳಲ್ಲಿ ಹಂಚಿಕೆಯಾಗಿದೆ.

ಚಿತ್ರಕೃಪೆ: Zaferauf

ಚಲನಶೀಲತೆಯ ಮರಳು

ಚಲನಶೀಲತೆಯ ಮರಳು

ಅರಾವಳಿ ಪರ್ವತ ಶ್ರೇಣಿಗಳಿಂದ ಹಿಡಿದು ಗ್ರೇಟ್ ರಣ್ ಆಫ್ ಕಚ್ ವರೆಗೆ ಥಾರ್ ಮರಭೂಮಿಯು ಅದ್ಭುತವಾಗಿ ಹರಡಿದೆ. ಇದರ ಮರಳು ಹೆಚ್ಚಿನ ಚಲನಾ ಶಕ್ತಿಯನ್ನು ಹೊಂದಿದ್ದು ಅಲ್ಲಲ್ಲಿ ಮರಳಿನ ದಿಬ್ಬಗಳನ್ನು ನಿರ್ಮಿಸುತ್ತಿರುತ್ತದೆ. ಕರಾವಳಿಯಿಂದ ಗಾಳಿಯು ಬೀಸತೊಡಗಿದಾಗ ಥಾರ್ ಮರಭೂಮಿಯ ಮರಳು ಸಾಕಷ್ಟು ರಭಸವಾಗಿ ಚಚಿಸುತ್ತದೆ.

ಚಿತ್ರಕೃಪೆ: Sankara Subramanian

ಲೂನಿ ನದಿ

ಲೂನಿ ನದಿ

ಲೂನಿ ನದಿ ಥಾರ್ ಮರಭೂಮಿಯಲ್ಲಿ ಕಾಣಬಹುದಾದ ಏಕೈಕ ನದಿ. ಅರಾವಳಿ ಶ್ರೇಣಿಯ ಪುಷ್ಕರ್ ಕೆರೆಯಿಂದು ಉಗಮಗೊಳ್ಳುವ ಈ ನದಿಯು ಥಾರ್ ಮರಭೂಮಿ ಹಾಗೂ ಗುಜರಾತಿನ ಕಚ್ ಭೂಮಿಯ ಮೇಲೆ ಹರಿದು ಕೊನೆಗೆ ಅಲ್ಲಿರುವ ಕ್ಷಾರ/ಲವಣಯುಕ್ತ ಪ್ರದೇಶದಲ್ಲಿ ವಿಲೀನಗೊಳ್ಳುತ್ತದೆ.

ಚಿತ್ರಕೃಪೆ: Chandra

ಗುಜರಾತ್ ನಲ್ಲಿ

ಗುಜರಾತ್ ನಲ್ಲಿ

ಥಾರ್ ಮರಭೂಮಿಯು ತನ್ನಲ್ಲಿ ಲವಣಯುಕ್ತ ಕೆರಗಳನ್ನು ಸಹ ಹೊಂದಿದ್ದು ಇವುಗಳನ್ನು ಗುಜರಾತ್ ರಾಜ್ಯದ ರಣ್ ಆಫ್ ಕಚ್ ನಲ್ಲಿರುವ ಸಂಭರ್, ದಿದ್ವಾನಾ ಮುಂತಾದ ಪ್ರದೇಶಗಳಲ್ಲಿ ಕಾಣಬಹುದು. ಮಳೆಗಾಲದಲ್ಲಿ ಇವು ನೀರಿನಿಂದ ತುಂಬಿಕೊಂಡು ಬೇಸಿಗೆಯಲ್ಲಿ ಇದರ ನೀರು ಆವಿಯಾಗಿ ಹೋಗುತ್ತದೆ. ಇಲ್ಲಿ ವಾಣಿಜ್ಯವಾಗಿ ಉಪ್ಪನ್ನು ಸಹ ತೆಗೆಯಾಲಾಗುತ್ತದೆ.

ಚಿತ್ರಕೃಪೆ: Rahul Zota

ಇವಕ್ಕೆ ನೀರು ಕಮ್ಮಿ ಬೇಕು!

ಇವಕ್ಕೆ ನೀರು ಕಮ್ಮಿ ಬೇಕು!

ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುವಂತೆ ಗಿಡ ಮರಗಳನ್ನು ಇಲ್ಲಿ ಬೆಳೆಯಲು ಸಾಧ್ಯವಿಲ್ಲ. ಕಾರಣ ಇಲ್ಲಿರುವ ನೀರಿನ ದುರ್ಲಭತೆ, ಅತಿಶಯವಾದ ತಾಪಮಾನ ಹಾಗೂ ಗಾಳಿಯಿಂದುಂಟಾಗುವ ಮಣ್ಣಿನ ಸವೆತ. ಹಾಗಾಗಿ ಆಫ್ರಿಕಾ, ಆಸ್ಟ್ರೇಲಿಯಾ, ಜಿಂಬಾಬ್ವೆ ಮುಂತಾದ ದೇಶಗಳಿಮ್ದ ಹಲವಾರು ಗಿಡ ಮರಗಳನ್ನು ಇಲ್ಲಿ ತಂದು ನೆಡುವ ಪ್ರಯತ್ನವನ್ನು ಮಾಡಲಾಗಿದ್ದು ಅದರಲ್ಲಿ ಆಫ್ರಿಕಾದಲ್ಲಿ ಕಂಡುಬರುವ ಅಕೇಸಿಯಾ ಟೊರ್ಟಿಲಿಸ್ ಅಥವಾ ಕೋಡೆಯ ಮರವು ಸಾಕಷ್ಟು ಉತ್ತಮ ಫಲಿತಾಂಶ ನೀಡಿದೆ.

ಚಿತ್ರಕೃಪೆ: Dan Searle

ಇಷ್ಟು ಜನರು ಪ್ರತಿ ಚ.ಕಿ.ಮೀಗೆ!

ಇಷ್ಟು ಜನರು ಪ್ರತಿ ಚ.ಕಿ.ಮೀಗೆ!

ಥಾರ್ ಮರಭೂಮಿಗೆ ಸಂಬಂಧಿಸಿದಂತೆ ಇನ್ನೊಂದು ಕುತೂಹಲಕರ ವಿಷಯವಿದೆ. ಆ ಪ್ರಕಾರವಾಗಿ ಜಗತ್ತಿನಲ್ಲೆ ಹೆಚ್ಚು ಜನಸಾಂದ್ರತೆಯಿರುವ ಮರಭೂಮಿ ಇದಾಗಿದೆ. ಪ್ರತಿ ಕಿ.ಮೀಗೆ 85 ಜನರು ವಾಸಿಸುತ್ತಿದ್ದರೆನ್ನಲಾಗಿದೆ.

ಚಿತ್ರಕೃಪೆ: Benjamin Vander Steen

ಎಲ್ಲಿ ಹೆಚ್ಚು?

ಎಲ್ಲಿ ಹೆಚ್ಚು?

ರಾಜಸ್ಥಾನ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ 40% ರಷ್ಟು ಜನರು ಥಾರ್ ಮರಭೂಮಿಯಲ್ಲೆ ಕಂಡುಬರುತ್ತಾರೆಂದರೆ ಅತಿಶಯೋಕ್ತಿಯಲ್ಲ. ಇವರ ಮೂಲ ಕಸುಬು ಕೃಷಿ ಹಾಗೂ ಪಶುಸಂಗೋಪನೆ. ಅದರಲ್ಲೂ ವಿಶೇಷವಾಗಿ ಪಶುಸಂಗೋಪನೆಯೆ ಹೆಚ್ಚಿನ ಮಹತ್ವವುಳ್ಳದ್ದಾಗಿದೆ.

ಚಿತ್ರಕೃಪೆ: Dashrath09

ಲವಣಸಾಗರ

ಲವಣಸಾಗರ

ಭಾರತದ ಪೌರಾಣಿಕ ಗ್ರಂಥಗಳಲ್ಲೂ ಸಹ ಥಾರ್ ಮರಭೂಮಿಯ ಕುರಿತು ಉಲ್ಲೇಖಗಳಿರುವುದನ್ನು ಗಮನಿಸಬಹುದಾಗಿದೆ. ಇದನ್ನು ಲವಣಸಾಗರ ಎಂದು ಕರೆಯಲಾಗಿದೆ. ಶ್ರೀರಾಮನು ಲಂಕೆಗೆ ಹೋಗುವ ಸಂದರ್ಭದಲ್ಲಿ ಲವಣಸಾಗರದ ಒಂದು ಮೂಲವನ್ನು ತನ್ನ ಆಗ್ನೇಯಾಸ್ತ್ರ ಅಮೋಘ ಬಳಸಿ ಒಣಗಿಸಿ ಬಿಡುತ್ತಾನೆನ್ನಲಾಗಿದೆ.

ಚಿತ್ರಕೃಪೆ: Vinod Panicker

ಮರಳಿನ ದಿಬ್ಬಗಳು

ಮರಳಿನ ದಿಬ್ಬಗಳು

ಥಾರ್ ಮರಭೂಮಿ ಇರುವ ರಾಜಸ್ಥಾನದ ಜೈಸಲ್ಮೇರ್ ನಂತಹ ಪ್ರವಾಸಿ ಪಟ್ಟಣಗಳು ಒಂಟೆ ಸವಾರಿ ಅಥವಾ ಸಫಾರಿಗಳಿಗಾಗಿ ಸಾಕಷ್ಟು ಪ್ರಸಿದ್ಧವಾಗಿದೆ. ಮರಭೂಮಿಯ ಮರಳಿನಲ್ಲಿ ಸರಾಗವಾಗಿ ಸಾಗಬಲ್ಲ ಒಂಟೆಗಳ ಮೇಲೆ ಕುಳಿತುಕೊಂಡು ಮರಭೂಮಿಯಲ್ಲಿ ಸುತ್ತು ಹೊಡೆಯುವುದು ಹೆಚ್ಚಿನ ಸಂಖ್ಯೆಯ ವಿದೇಶಿ ಪ್ರವಾಸಿಗರಿಗೆ ನೆಚ್ಚಿನ ಚಟುವಟಿಕೆಯಾಗಿದೆ.

ಚಿತ್ರಕೃಪೆ: Flicka

ಇಲ್ಲೆ ಕಾಣಬಹುದು

ಇಲ್ಲೆ ಕಾಣಬಹುದು

ಇನ್ನುಳಿದಂತೆ ಥಾರ್ ಮರಭೂಮಿಯಲ್ಲಿ ಕೆಲವು ವಿಶಿಷ್ಟ ಹಾಗೂ ಆ ಪ್ರದೇಶಕ್ಕಷ್ಟೆ ಸಂಬಂಧ ಪಟ್ಟಂತಹ ಕೆಲವು ಜೀವಿಗಳನ್ನು ಕಾಣಬಹುದು. ಸರಿಸೃಪಗಳು, ಕೀಟಗಳು ಹಾಗೂ ಇತರೆ ನಿರ್ದಿಷ್ಟ ಜೀವಿಗಳ ಕುರಿತು ಆಸಕ್ತಿ ಹೊಂದಿರುವ ಪ್ರವಾಸಿಗರಿಗಾಗಲಿ ಅಥವಾ ಅಧ್ಯಯನಕಾರರಿಗಾಗಲಿ ಥಾರ್ ಉತ್ತಮ ಅವಕಾಶವನ್ನು ಒದಗಿಸುತ್ತದೆ. ಮರಳಿನಲ್ಲಿ ಮರಳಿನಂತೆಯೆ ಕಂಡುಬರುವ ನೈಟ್ ಜಾರ್ ಎಂಬ ಥಾರ ಪಕ್ಷಿ.

ಚಿತ್ರಕೃಪೆ: Arjun Bharioke

ಮರಭೂಮಿ ಚೇಳು:

ಮರಭೂಮಿ ಚೇಳು:

ಮರಭೂಮಿ ಚೇಳು: ಅಂಥ್ರಾಪೋಡ್ ಕುಟುಂಬ ವರ್ಗಕ್ಕೆ ಸೇರಿದ ಮರಭೂಮಿ ಚೇಳು ಸಾಮಾನ್ಯವಾಗಿ ಕಂಡುಬರುವಂತೆ ಚೇಳಿಗಿಂತ ತುಸು ವಿಭಿನ್ನ ಬಣ್ಣದಿಂದ ಕೂಡಿದ್ದು, ಕಠಿಣ ಮರಭೂಮಿ ಪರಿಸರಕ್ಕೆ ಹೊಂದುವಂತೆ ದೇಹ ರಚನೆಯು ಮಾಡಲ್ಪಟ್ಟಿದೆ.

ಮರಭೂಮಿ ಹಾವು

ಮರಭೂಮಿ ಹಾವು

ಮರಭೂಮಿ ಹಾವು (ಸ್ಯಾಂಡ್ ಬೋವಾ): ಸ್ಯಾಂಡ್ ಬೋವಾ ಎಂದು ಕರೆಯಲ್ಪಡುವ ಈ ಹಾವು ಸಾಮಾನ್ಯವಾಗಿ ಮರಭೂಮಿಯಲ್ಲಿ ಕಂಡುಬರುತ್ತದೆ. ಇರಾನ್, ಪಾಕಿಸ್ತಾನ್ ಹಾಗೂ ರಾಜಸ್ಥಾನದ ಥಾರ್ ಮರಭೂಮಿಯಲ್ಲಿ ಕಂಡುಬರುವ ಈ ಹಾವು ಮೂಲತಃ ನಾಚಿಕೆಯ ಸ್ವಭಾವದಾಗಿದ್ದು ವಿಷ ರಹಿತವಾಗಿರುತ್ತವೆ. ವಿಶೇಷತೆಯೆಂದರೆ ಇದರ ಬಾಲವು ಇತರೆ ಹಾವುಗಳಂತೆ ಮೊನಚಾಗಿರದೆ ತಲೆಯ ಭಾಗದಷ್ಟೆ ದಪ್ಪಗಾಗಿರುತ್ತದೆ.

ಚಿತ್ರಕೃಪೆ: KLPrice

ವಿಶೇಷ ಹಲ್ಲಿ

ವಿಶೇಷ ಹಲ್ಲಿ

ಮುಳ್ಳಿನ ಬಾಲವುಳ್ಳ ಹಲ್ಲಿ: ವಾತಾವರಣಕ್ಕೆ ಅನುಗುಣವಾಗಿ ರೂಪ ಹೊಂದಿದ ಒಂದು ಹಲ್ಲಿ. ಥಾರ್ ಮರಭೂಮಿಯಲ್ಲಿ ಕಂಡುಬರುವ ಈ ಹಲ್ಲಿಯು ಇತರೆ ಚಿಕ್ಕ ಪುಟ್ಟ ಹುಳುಗಳನ್ನು ತಿಂದು ಬದುಕುತ್ತದೆ.

ಚಿತ್ರಕೃಪೆ: Centpacrr

ರ್ಯಾಟಲ್ ಹಾವು

ರ್ಯಾಟಲ್ ಹಾವು

ರ್ಯಾಟಲ್ ಹಾವು: ಮರಭೂಮಿಯಲ್ಲಿ ಕಂಡು ಬರುವ ಈ ಹಾವು ಮರಭೂಮಿಯ ನೆರಳಿನಲ್ಲಿ ವಿಶಿಷ್ಟವಾದ ವಿನ್ಯಾಸದಲ್ಲಿ ಚಲಿಸುತ್ತದೆ.

ಚಿತ್ರಕೃಪೆ: Victorrocha

ರಣಹದ್ದು

ರಣಹದ್ದು

ಮರಭೂಮಿ ರಣಹದ್ದು: ಮರಭೂಮಿಯ ರಣ ಹದ್ದು ಥಾರ್ ಮರಭೂಮಿ ಪ್ರದೇಶದಲ್ಲಿ ಕಂಡು ಬರುವ ಬೇಟೆ ಪಕ್ಷಿಯಾಗಿದೆ. ಕೊಳೆತ ಮಾಂಸ, ಹಾವು, ಹಲ್ಲಿ, ಹುಳ ಹುಪ್ಪಡಿಗಳನ್ನು ತಿನ್ನುತ್ತ ಬದುಕುತ್ತದೆ.

ಚಿತ್ರಕೃಪೆ: Nehrams2020

ಜಿರುಂಡೆ

ಜಿರುಂಡೆ

ಜಿರುಂಡೆ: ಥಾರ್ ಮರಭೂಮಿಯಲ್ಲಿ ಕಂಡು ಬರುವ ಜಿರುಂಡೆ ಅಥವಾ ಕಠಿಣ ಕವಚವುಳ್ಳ ರೆಕ್ಕೆಯ ಹುಳುವಿದು. ಇತರೆ ಪ್ರಾಣಿಗಳ ವಿಸರ್ಜಿಸಿದ ತ್ಯಾಜ್ಯವನ್ನು ಗೋಲಾಕಾರದಲ್ಲಿ ಪರಿವರ್ತಿಸಿ ತಿನ್ನುತ್ತ ಬದುಕುತ್ತವೆ.

ಚಿತ್ರಕೃಪೆ: AxelStrauss

ಕೃಷ್ಣ ಮೃಗ

ಕೃಷ್ಣ ಮೃಗ

ಕೃಷ್ಣಮೃಗ: ಥಾರ್ ಮರಭೂಮಿಯಲ್ಲಿ ಕಂಡುಬರುವ ಕೃಷ್ಣಮೃಗಗಳು ಅಪಾಯದ ಅಂಚಿನಲ್ಲಿರುವ ಪ್ರಾಣಿಗಳು. ಥಾರ್ ಮರಭೂಮಿಯಲ್ಲಿ ಈ ಕೃಷ್ಣಮೃಗಗಳನ್ನು ನೋಡಬಹುದಾಗಿದೆ.

ಚಿತ್ರಕೃಪೆ: Chinmayisk

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more