» »800 ಶಿಲ್ಪಗಳನ್ನು ಒಳಗೊಂಡ ಸುಂದರವಾದ ಬಾವಿ-ರಾಣಿ ಕಿ ವಾವ್

800 ಶಿಲ್ಪಗಳನ್ನು ಒಳಗೊಂಡ ಸುಂದರವಾದ ಬಾವಿ-ರಾಣಿ ಕಿ ವಾವ್

Written By: Sowmyabhai

ರಾಣಿ ಕಿ ವಾವ್ ಒಂದು ಐತಿಹಾಸಿಕಕ್ಕೆ ನಿರ್ದಶನವಾಗಿದೆ. ರಾಣಿ ಕಿ ವಾವ್ ಎಂದ ಕೂಡಲೇ ಯಾವುದೂ ರಾಣಿಯ ಕಥೆ ಇರಬಹುದು ಅಂತ ತಿಳಿದುಕೊಳ್ಳಬೇಡಿ. ಇದೊಂದು ಪುರಾತನ ಬಾವಿಯ ಕಥೆಯ ಇತಿಹಾಸವಾಗಿದೆ. ಇಂಥಹ ಬಾವಿಯನ್ನು ಜೀವನದಲ್ಲಿ ನೀವು ಎಲ್ಲೂ ಕಂಡಿರಲು ಸಾಧ್ಯವೇ ಇಲ್ಲ. ಈ ರಾಣಿ ಕಿ ವಾವ್ ಬಾವಿಯು ನೋಡಲು ಅದ್ಭುತವಾದ ಚಿತ್ತಾಕರ್ಷಕತೆಯಿಂದ ಕೂಡಿದೆ. ಇಂಥಹ ಬಾವಿ ಕೂಡ ಭೂಮಿ ಮೇಲೆ ಇದೆಯೇ ಎಂಬ ಕುತೂಹಲ ಉಂಟಾಗುತ್ತದೆ. ಅಂತಹ ಕುತೂಹಲ ನಿಮಗಿದ್ದರೆ ಒಮ್ಮೆ ಈ ರಾಣಿ ಕಿ ವಾವ್‍ಗೆ ಭೇಟಿ ನೀಡಿ.

ಸುಂದರವಾದ ಬಾವಿ-ರಾಣಿ ಕಿ ವಾವ್

ಸುಂದರವಾದ ಬಾವಿ-ರಾಣಿ ಕಿ ವಾವ್

ರಾಣಿ ಕಿ ವಾವ್ ಭಾರತದ ಗುಜರಾತ್ ರಾಜ್ಯದ ಪಾಟ್ನ ಪಟ್ಟಣದಲ್ಲಿರುವ ಒಂದು ಸಂಕೀರ್ಣವಾಗಿ ನಿರ್ಮಿಸಿದ ಮೆಟ್ಟಿಲುಬಾವಿಯಾಗಿದೆ. ಈ ಬಾವಿಯು ಸರಸ್ವತಿ ನದಿಯ ದಡದ ಮೇಲೆ ನಿರ್ಮಿಸಲಾಗಿದೆ. ಈ ರಾಣಿ ಕಿ ವಾವ್ ಅನ್ನು 11ನೇ ಶತಮಾನದ ರಾಜನಿಗೆ ನೆನಪಿನ ಸ್ಮಾರಕವಾಗಿ ನಿರ್ಮಿಸಲಾಯಿತು. ಇಂದೊಂದು ತಲೆಕೆಳಗಾದ ಮೆಟ್ಟಿಲು ಹೊಂದಿರುವ ಬಾವಿ ಎಂದೇ ಹೇಳಬಹುದು.

PC: www.gujarattourism.com

ರಾಣಿ ಕಿ ವಾವ್

ರಾಣಿ ಕಿ ವಾವ್

ಈ ಬಾವಿಯನ್ನು ಜಲ ಸಂಪನ್ಮೂಲ ಮತ್ತು ಶೇಖರಣಾ ವ್ಯವಸ್ಥೆಗಾಗಿ ಈ ರಾಣಿ ಕಿ ವಾವ್ ಅನ್ನು ನಿರ್ಮಿಸಲಾಗಿತ್ತು. ಈ ತಲೆ ಕೆಳಗಾದ ಏಳು ಮೆಟ್ಟಿಲುಗಳುಳ್ಳ ಸುಂದರ ಬಾವಿ ಯಾಗಿದೆ. ಈ ಬಾವಿಯು ಮಾರು ಗುರ್ಜರಾ ವಾಸ್ತು ಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ರಾಣಿ ಕಿ ವಾವ್ ನ ಬಾವಿಯು ಒಟ್ಟು 800 ಶಿಲ್ಪಗಳು ಹೊಂದಿದೆ. ಯುನೆಸ್ಕು ಪ್ರಪಂಚದ ಅತ್ಯಂತ ಹಳೆಯದಾದ ಪರಂಪರೆಗೆ ರಾಣಿ ಕಿ ವಾವ್ ಎಂದುಪಟ್ಟಿಯಲ್ಲಿ ಸೇರಿಸಲಾಗಿದೆ.

PC:Sudhamshu Hebbar

 ರಾಣಿ ಕಿ ವಾವ್‍ನ ಶಿಲ್ಪಕಲೆಗಳು

ರಾಣಿ ಕಿ ವಾವ್‍ನ ಶಿಲ್ಪಕಲೆಗಳು

ಅಲಂಕೃತ ಪಾಶ್ವ ಗೋಡೆಗಳು
ಈ ರಾಣಿ ಕಿ ವಾವ್‍ನ ಶಿಲ್ಪಗಳಲ್ಲಿ ಹಲವಾರು ವಿಷ್ಣುವಿನ ಶಿಲ್ಪಕಲೆಗಳನ್ನು ಕಾಣಬಹುದು. ವಿಷ್ಣುವಿನ ಅವತಾರಗಳಾದ ಕಲ್ಕಿ, ರಾಮ, ಕೃಷ್ಣ, ನರಸಿಂಹ, ವಾಮನ, ವರಹ ಅವತಾರಗಳ ಶಿಲ್ಪ ಕಲೆಗಳಿಂದ ವೈಭವಯುತವಾಗಿ ಕಂಗೊಳಿಸುತ್ತಿದೆ. ನಾಗಕನ್ಯೆ, ಯೋಗಿನಿ, ಅಪಸರೆಗಳಂತಹ 16 ವಿವಿಧ ಶಿಲಾಬಾಲಿಕೆಯರ ರಮಣೀಯವಾದ ಭಂಗಿಗಳನ್ನು ಕಾಣಬುದಾಗಿದ್ದು ಇದನ್ನು "ಸೋಳ ಶೃಂಗಾರ್" ಎಂದು ಕರೆಯುತ್ತಾರೆ. ಸುಮಾರು 50 ರಿಂದ 60 ವರ್ಷಗಳಷ್ಟು ಹಿಂದಿನ ಆರ್ಯುವೇದಿಕ್‍ನ ದಿವ್ಯ ಔಷಧಿಗಳ ಸಸ್ಯಗಳು ಇಲ್ಲಿ ಸಿಗುತ್ತವೆ ಹಾಗೇಯೆ ರಾಣಿ ಕಿ ವಾವ್‍ನ ಬಾವಿಯಲ್ಲಿರುವ ಪವಿತ್ರವಾದ ನೀರನ್ನು ಸಕಲ ರೋಗ ನಿವಾರಕವಾದ ಜಲವೆಂದು ಪರಿಗಣಿಸಲಾಗುತ್ತದೆ.

PC:Sudhamshu Hebbar

ವಿಷ್ಣುವಿನ ವರಹ ದಶಾವತಾರ

ವಿಷ್ಣುವಿನ ವರಹ ದಶಾವತಾರ

ರಾಣಿ ಕಿ ವಾವ್‍ನ ವಾಸ್ತು ಶಿಲ್ಪ
ರಾಣಿ ಕಿ ವಾವ್ ಒಂದು ಅತ್ಯಂತ ವಿಭಿನ್ನವಾದ ಬೃಹತ್ ಬಾವಿಯಾಗಿದ್ದು ಇದು ಸುಮಾರು 20 ಮೀ ವಿಶಾಲ ಹಾಗೂ 27 ಮೀ ಆಳವನ್ನು ಹೊಂದಿದೆ. ಆಶ್ಚರ್ಯವೆನೆಂದರೆ ಈ ಬಾವಿಯಲ್ಲಿ ಮಂಟಪಗಳು, ಕೆಲವು ಸ್ತಂಭಗಳು, ನಿಯಮಿತ ಮೆಟ್ಟಿಲುಗಳು, ಚಿತ್ರ ವಿಚಿತ್ರ ಕಲಾಕೃತಿಗಳನ್ನು ಸೊಗಸಾದ ಸೂಕ್ಷ್ಮ ಕೆತ್ತನೆಗಳಿಂದ ನಿರ್ಮಿತವಾಗಿದೆ. ರಾಣಿ ಕಿ ವಾವ್‍ನಲ್ಲಿ ಸುಮಾರು 800 ಶಿಲ್ಪಗಳು ಹಾಗೂ 7 ಚಿತ್ರಶಾಲೆಗಳು ಇದ್ದು, ಇವುಗಳಲ್ಲಿ ಹಲವಾರು ವಿಷ್ಣುವಿನ ದಶಾವತಾರಗಳ ಶಿಲ್ಪಗಳನ್ನು ಕಾಣಬುಹುದು. ಕೇವಲ ವಿಷ್ಣುವಿನ ಶಿಲ್ಪಕಲೆಗಳೇ ಅಲ್ಲದೇ ಬುದ್ದ, ಸಾಧು, ಬ್ರಾಹಣ, ಅಪಸರೆ, ನೂರು ಹೆಡೆಗಳ ಅದಿ ಶೇಷನ ಮೇಲೆ ಮಲಗಿರುವ ವಿಷ್ಣುವಿನ ಶಿಲ್ಪಗಳಿಂದ ಈ ಸುಂದರವಾದ ಬಾವಿ ವಿಶ್ವ ವಿಖ್ಯಾತವಾಗಿದೆ.

PC:Sudhamshu Hebbar

ಬಾವಿ-ರಾಣಿ ಕಿ ವಾವ್ ಸುಂದರವಾದ ಶಿಲ್ಪ

ಬಾವಿ-ರಾಣಿ ಕಿ ವಾವ್ ಸುಂದರವಾದ ಶಿಲ್ಪ

ಭೇಟಿ ನೀಡಲು ಉತ್ತಮ ಕಾಲಾವಧಿ
ಈ ರಾಣಿ ಕಿ ವಾವ್‍ಗೆ ಭೇಟಿ ನೀಡಲು ಉತ್ತಮವಾದ ಕಾಲಾವಧಿಯೆಂದರೆ ಅಕ್ಟೋಬರ್ ನಿಂದ ಮಾರ್ಚ್‍ನವರೆಗೆ ಗುಜರಾತ್‍ನಲ್ಲಿ ಉತ್ತಮವಾದ ಹವಾಮಾನವಿರುವುದರಿಂದ ಈ ಕಾಲಾವಧಿ ಸೂಕ್ತವಾದುದು.

PC:Sudhamshu Hebbar

ರಾಣಿ ಕಿ ವಾವ್ ಶಿಲ್ಪ

ರಾಣಿ ಕಿ ವಾವ್ ಶಿಲ್ಪ

ಪ್ರವೇಶ ಸಮಯ
ರಾಣಿ ಕಿ ವಾವ್‍ನ ಪ್ರವೇಶ ಸಮಯ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಈ ಸುಂದರವಾದ ಬಾವಿಯನ್ನು ಕಣ್ಣಾರೆ ಕಂಡು ಆನಂದಿಸಬಹುದು.

PC:Sudhamshu Hebbar

Please Wait while comments are loading...