Search
  • Follow NativePlanet
Share
» »ಅಮಾಯಕ ಪ್ರಜೆಗಳು ದೌಲತಾಬಾದ್ ಕೋಟೆಗೆ ಸ್ಥಳಾಂತರವಾಗುವ ವೇಳೆ ಮೃತರಾದರು

ಅಮಾಯಕ ಪ್ರಜೆಗಳು ದೌಲತಾಬಾದ್ ಕೋಟೆಗೆ ಸ್ಥಳಾಂತರವಾಗುವ ವೇಳೆ ಮೃತರಾದರು

ಮಹಾರಾಷ್ಟ್ರದಲ್ಲಿನ ದೇವಗಿರಿ ಎಂದು ಕರೆಯಲ್ಪಡುವ ದೌಲತಾಬಾದ್ ಪ್ರಖ್ಯಾತವಾದ ಕೋಟೆಯಾಗಿದೆ. ಈ ಕೋಟೆಯನ್ನು 14 ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಕೋಟೆಯಾಗಿದೆ. ಈ ದೌಲತಾಬಾದ್ ಅನ್ನು ಮಹಾರಾಷ್ಟ್ರದ 7 ಅದ್ಭುತಗಳಲ್ಲಿ ಒಂದು ಎಂದು ಪ್ರಸಿದ್ಧಿ ಪಡೆದ

ಮಹಾರಾಷ್ಟ್ರದಲ್ಲಿನ ದೇವಗಿರಿ ಎಂದು ಕರೆಯಲ್ಪಡುವ ದೌಲತಾಬಾದ್ ಪ್ರಖ್ಯಾತವಾದ ಕೋಟೆಯಾಗಿದೆ. ಈ ಕೋಟೆಯನ್ನು 14 ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಕೋಟೆಯಾಗಿದೆ. ಈ ದೌಲತಾಬಾದ್ ಅನ್ನು ಮಹಾರಾಷ್ಟ್ರದ 7 ಅದ್ಭುತಗಳಲ್ಲಿ ಒಂದು ಎಂದು ಪ್ರಸಿದ್ಧಿ ಪಡೆದಿದೆ. ಮುಹಮ್ಮದ್ ತುಘಲಕ್‍ನ್ನು ತನ್ನ ಅಧಿಕಾರದ ಮದದಿಂದ ದೆಹಲಿಯಿಂದ ದೌಲತಾಬಾದ್‍ಗೆ ಸ್ಥಳಾಂತರ ಮಾಡುವಾಗ ಅದೆಷ್ಟೋ ಜನರು ಮೃತರಾದರು.

ದೌಲತಾಬಾದ್ ಎಂಬ ಹೆಸರನ್ನು ದೆಹಲಿಯ ಸುಲ್ತಾನ್ ಮುಹಮ್ಮದ್ ತುಘಲಕ್ ನೀಡಿದನು. ಇದನ್ನು "ಫಾರ್ಚೂನ್ ನಗರ" ಎಂದೂ ಸಹ ಕರೆಯುತ್ತಾರೆ. ಈ ಐತಿಹಾಸಿಕವಾದ ಕೋಟೆಯ ಬಗ್ಗೆ ಲೇಖನದ ಮೂಲಕ ಸಂಪೂರ್ಣವಾಗಿ ಮಾಹಿತಿಯನ್ನು ಪಡೆಯಿರಿ.

ದೇವಗಿರಿ

ದೇವಗಿರಿ

ದೌಲತಾಬಾದ್ (ದೇವಗಿರಿ)ಯನ್ನು ಕ್ರಿ.ಶ 1203ರಲ್ಲಿ ಧಂಗಾರ್ ಎಂಬುವವನಿಂದ ನಿರ್ಮಿಸಲಾಯಿತು. ಈ ದೇವಗಿರಿಯಲ್ಲಿ ಸಾಕ್ಷಾತ್ ಪರಮಶಿವನು ನೆಲೆಸಿದ್ದಾನೆ ಎಂದು ನಂಬಲಾಗಿದೆ.


PC:Aakash.gautam

ದೌಲತಾಬಾದ್

ದೌಲತಾಬಾದ್

ಈ ದೌಲತಾಬಾದ್ ಕೋಟೆಯು ಬೆಟ್ಟದ ಮೇಲೆ ಇದೆ. ಇದು ಸುಮಾರು 200 ಮೀಟರ್ ಎತ್ತರದಲ್ಲಿದೆ. ಇಲ್ಲಿ ಫಿರಂಗಿಗಳು, ಸುರಂಗ ಮಾರ್ಗಗಳು, ಭವ್ಯವಾದ ಕಟ್ಟಡಗಳನ್ನು ಕಾಣಬಹುದಾಗಿದೆ.

PC:cool_spark

ಪ್ರವೇಶ ದ್ವಾರ

ಪ್ರವೇಶ ದ್ವಾರ

ಈ ಕೋಟೆಯಲ್ಲಿ ಯಾವುದೇ ಪ್ರತ್ಯೇಕವಾದ ದ್ವಾರಗಳು ಇಲ್ಲ. ಶತ್ರು ಸೈನ್ಯ ಒಳ ಪ್ರವೇಶ ಮಾಡಬೇಕಾದರೂ ಒಂದೇ ಪ್ರವೇಶದ್ವಾರದಲ್ಲಿಯೇ ಬರಬೇಕಾಗುತ್ತಿತ್ತು.


PC:Todd vanGoethem

ನೀರಿನ ತೊಂದರೆ

ನೀರಿನ ತೊಂದರೆ

ದೌಲತಾಬಾದ್ ಕೋಟೆಯಲ್ಲಿ ನೀರಿನ ಅಭಾವವಿದ್ದರಿಂದ ನೀರಿನ ಶೇಖರಣೆಗೆ ಎಂದು ದೊಡ್ಡದಾದ ಜಲಾಶಯವನ್ನು ನಿರ್ಮಿಸಿದರು. ಹಿಗಾಗೀ ಕೋಟೆಯಿಂದ ಸ್ವಲ್ಪ ದೂರವಿರುವ ನದಿಗೆ ಸಂಪರ್ಕ ಸಾಧಿಸಿದರು.

PC:Danial Chitnis

ಪ್ರಪಂಚದ ಸುರಕ್ಷಿತ ಕೋಟೆ

ಪ್ರಪಂಚದ ಸುರಕ್ಷಿತ ಕೋಟೆ

ಈ ದೌಲತಾವಾದ್ ಕೋಟೆಯನ್ನು ಪ್ರಪಂಚದ ಅತ್ಯುತ್ತಮವಾದ ಸುರಕ್ಷಿತವಾದ ಕೋಟೆ ಎಂದು ಹೆಗ್ಗಳಿಕೆಯನ್ನು ಪಡೆದಿದೆ.


PC:Todd vanGoethem

ವಿವಿಧ ಕಾರಣ

ವಿವಿಧ ಕಾರಣ

ಮುಹಮ್ಮದ್ ತುಘಲಕ್‍ನ್ನು ಅಧಿಕಾರದಲ್ಲಿದ್ದಾಗ ಹಲವಾರು ಕಾರಣಗಳಿಂದ ತನ್ನ ರಾಜಧಾನಿ ದೆಹಲಿಯಿಂದ ದೌಲತಾಬಾದ್‍ಗೆ ರಾಜಧಾನಿಯಾಗಿ ವರ್ಗಾಯಿಸಲು ಮುಂದಾದನು.

PC:Salil S

ಆಜ್ಞೆ

ಆಜ್ಞೆ

ಹೀಗಾಗಿ ತನ್ನ ಪ್ರಜೆಗಳಿಗೆಲ್ಲಾ ತಕ್ಷಣವೇ ದೌಲತಾಬಾದಿಗೆ ಹೋರಡಬೇಕು ಎಂದು ಆಜ್ಞಾಪಿಸಿದನು. ರಾಜನ ಮಾತಿಗೆ ತಲೆದೂಗಿ ಸಾವಿರಾರು ಮಂದಿ ಪ್ರಜೆಗಳು ದೆಹಲಿಯಿಂದ ಮಹಾರಾಷ್ಟ್ರದ ದೌಲತಾಬಾದ್‍ಗೆ ಸುದೀರ್ಘಾವಾದ ಪ್ರಯಾಣವನ್ನು ಬೆಳೆಸಿದನು.


PC:Sankarshan Mukhopadhyay

ಕಾಲು ನಡಿಗೆ

ಕಾಲು ನಡಿಗೆ

ಸಾಮಾನ್ಯ ಪ್ರಜೆಗಳಾದ್ದರಿಂದ ಯಾವುದೇ ವ್ಯವಸ್ಥೆ ಇಲ್ಲದೆಯೇ ಬರೀ ಕಾಲಿನಲ್ಲಿ ದೀರ್ಘಾವಾದ ಪ್ರಯಾಣ ಮಾಡುವಾಗಲೇ ದಾರಿ ಮಾಧ್ಯೆಯಲ್ಲಿ ಸಾವಿರಾರು ಮಂದಿ ಪ್ರಾಣವನ್ನು ಬಿಟ್ಟರು.


PC:Leon Yaakov

ತುಘಲಕ್

ತುಘಲಕ್

ಈ ವಿಷಯ ತಿಳಿದ ತುಘಲಕ್ ಮತ್ತೆ ರಾಜಧಾನಿ ದೆಹಲಿಗೆ ಪ್ರಯಾಣ ಬೆಳಸಿ ಎಂದು ಆಜ್ಞೆಯನ್ನು ನೀಡಿದ. ಈಗಾಗಲೇ ದೆಹಲಿಗೂ ಮಹಾರಾಷ್ಟ್ರದ ಮಧ್ಯೆ ಬಂದಿದ್ದ ಪ್ರಜೆಗಳಿಗೆ ಈ ರಾಜನ ಮೇಲೆ ಕೋಪ ನೆತ್ತಿಗೆ ಏರಿತ್ತು.

PC:Sankarshan Mukhopadhyay

ರಾಜ ಆಜ್ಞೆ

ರಾಜ ಆಜ್ಞೆ

ಅದು ರಾಜ ಆಜ್ಞೆ ಎಂದು ಮತ್ತೇ ರಾಜಧಾನಿ ದೆಹಲಿಗೆ ತೆರಳುತ್ತಿದ್ದರು. ಆ ಸಮಯದಲ್ಲಿ ಆಗಲೇ ಕಾಲ್ ನಡಿಗೆಯಿಂದ ಬೆಸತ್ತಜನರು ನಿಂತಲ್ಲೇ ತಮ್ಮ ಪ್ರಾಣವನ್ನು ಅರ್ಪಿಸಿದರು. ಹೀಗೆ ಒಬ್ಬ ರಾಜ ತನ್ನ ರಾಜಧಾನಿಯ ಬದಲಾವಣೆಯಿಂದಾಗಿ ಹಲವಾರು ಪ್ರಜೆಗಳ ಜೀವವನ್ನು ತೆಗೆದುಕೊಂಡನು. ಈ ಕೋಟೆಯ ದುರಂತವಾದ ಕಥೆ ಇದು.


PC:Salil S

ಭೇಟಿಗೆ ಸೂಕ್ತವಾದ ಸಮಯ

ಭೇಟಿಗೆ ಸೂಕ್ತವಾದ ಸಮಯ

ಈ ಐತಿಹಾಸಿಕವಾದ ಕೋಟೆಯನ್ನು ಕಾಣಲು ಅಕ್ಟೋಬರ್‍ನಿಂದ ಫೆಬ್ರವರಿ ತಿಂಗಳವರೆಗೆ ಹಾಗೂ ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆವಿಗೂ ಸೂಕ್ತವಾದ ಕಾಲಾವಧಿಯಾಗಿದೆ.

PC:Salil S

ಸಮೀಪದ ವಿಮಾನ ನಿಲ್ದಾಣ

ಸಮೀಪದ ವಿಮಾನ ನಿಲ್ದಾಣ

ಈ ದೌಲತಾಬಾದ್‍ಗೆ ಭೇಟಿ ನೀಡಲು ಸಮೀಪವಾದ ವಿಮಾನ ನಿಲ್ದಾಣವೆಂದರೆ ಅದು ಔರಂಗಾಬಾದ್. ಔರಂಗಾಬಾದ್‍ನಿಂದ ಸುಮಾರು 22 ಕಿ,ಮೀ ದೂರದಲ್ಲಿ ದೌಲತಾಬಾದ್ ಇದೆ.

ಸಮೀಪದ ರೈಲ್ವೆ ನಿಲ್ದಾಣ

ಸಮೀಪದ ರೈಲ್ವೆ ನಿಲ್ದಾಣ

ಸಮೀಪವಾದ ರೈಲ್ವೆ ನಿಲ್ದಾಣವೆಂದರೆ ಅದು ಔರಂಗಾಬಾದ್. ಇಲ್ಲಿಂದ ಸುಮಾರು 15 ಕಿ,ಮೀ ದೂರದಲ್ಲಿ ದೌಲತಾಬಾದ್ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X