» »ಪ್ರಾಣಿಗಳ ಜೊತೆ ಕಾಲ ಕಳೆಯಲು ತೆರಳಿ ಇಂದಿರಾಗಾಂಧಿ ಪ್ರಾಣಿ ಸಂಗ್ರಾಲಯಕ್ಕೆ

ಪ್ರಾಣಿಗಳ ಜೊತೆ ಕಾಲ ಕಳೆಯಲು ತೆರಳಿ ಇಂದಿರಾಗಾಂಧಿ ಪ್ರಾಣಿ ಸಂಗ್ರಾಲಯಕ್ಕೆ

Written By:

ಪಾರ್ಕ್ ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ವೃದ್ಧರಿಗೆ, ಡಯೆಟ್ ಮಾಡಬೇಕು ಎಂದು ಬಯಕೆ ಇರುವ ಹುಡುಗಿಯರಿಗೆ, ವ್ಯಾಯಾಮ ಮಾಡುವವರಿಗೆ, ಮಧುಮೇಹಿಗಳಿಗೆ ಅತ್ಯಗತ್ಯ. ಆಯ್ಯೋ ವಿಶೇಷವಾದವರನ್ನೇ ಮರೆತು ಬಿಟ್ಟಿದ್ದೇನೆ ಅವರೇ ಪ್ರೇಮಿಗಳು. ಪಾರ್ಕ್ ಯಾರಿಗೆ ಬೇಡ ಎಂದಾದರೂ ಕೂಡ ಪ್ರೇಮಿಗಳಿಗೆ ಮಾತ್ರ ಬೇಕೆ ಬೇಕು.

ಆ ಪಾರ್ಕ್‍ನಲ್ಲಿ ಹಲವಾರು ಪ್ರಾಣಿಗಳು ಇದ್ದರೆ ಹೇಗೆ ಇರುತ್ತದೆ. ಸೂಪರ್ ಅಲ್ವಾ? ಅಜ್ಜ ತನ್ನ ಮೊಮ್ಮಗನಿಗೆ ಅಥವಾ ಮೊಮ್ಮಗಳಿಗೆ ಪ್ರಾಣಿ ಹಾಗು ಪಕ್ಷಿಗಳ ಪರಿಚಯವನ್ನು ಮಾಡಬಹುದು ಅಲ್ಲವೇ. ಹಲವಾರು ಪ್ರಾಣಿಗಳನ್ನು ಮಕ್ಕಳಿಗೆ ಪರಿಚಯ ಮಾಡುತ್ತಾ ಓದಿನ ಜೊತೆಗೆ ಜ್ಞಾನವನ್ನು ಕೂಡ ಆ ಮಕ್ಕಳು ಪಡೆಯಲು ಸಾಹಯವಾಗುತ್ತದೆ.

ಈಗ ವಿಷಯಕ್ಕೆ ಬರೋಣ. ಆಂಧ್ರ ಪ್ರದೇಶ ನಮ್ಮ ಕರ್ನಾಟಕಕ್ಕೆ ಸಮೀಪದಲ್ಲಿ ಇರುವ ರಾಜ್ಯವಾಗಿದೆ. ಸಾಮಾನ್ಯವಾಗಿ ಆಗಾಗ ಆಂಧ್ರ ಪ್ರದೇಶದ ಪ್ರವಾಸಕ್ಕೆ ಭೇಟಿ ನೀಡುತ್ತಾ ಇರುತ್ತೇವೆ. ಆಂಧ್ರ ಪ್ರದೇಶದ ವಿಶಾಖ ಪಟ್ಟಣದಲ್ಲಿರುವ ಕಂಬಲಕೊಂಡ ರಿಸರ್ವ ಫಾರೆಸ್ಟ್ ಮಧ್ಯೆ ಇಂದಿರಾ ಗಾಂಧಿ ಪ್ರಾಣಿ ಸಂಗ್ರಹಾಲಯವಿದೆ. ಇದು ಪಾರ್ಕ್ ಕಮ್ ಪ್ರಾಣಿ ಸಂಗ್ರಹಾಲಯವಾಗಿದೆ.

ಎಲ್ಲಿದೆ?

ಎಲ್ಲಿದೆ?

ಈ ಇಂದಿರಾ ಗಾಂಧಿ ಪ್ರಾಣಿ ಸಂಗ್ರಾಲಯವು ಆಂಧ್ರ ಪ್ರದೇಶದಲ್ಲಿನ ಮಧುರದ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿ 5 ರ ವಿಶಾಖ ಪಟ್ಟಣದ ರೈಲು ನಿಲ್ದಾಣದಿಂದ ಸುಮಾರು 11 ಕಿ.ಮೀ (6.8) ದೂರದಲ್ಲಿದೆ.

PC:Siddhartha Lammata

ಇಂದಿರಾಗಾಂಧಿ ಪ್ರಾಣಿ ಸಂಗ್ರಾಲಯ

ಇಂದಿರಾಗಾಂಧಿ ಪ್ರಾಣಿ ಸಂಗ್ರಾಲಯ

ಭಾರತದ ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಹೆಸರಿನಲ್ಲಿ ಈ ಪ್ರಾಣಿ ಸಂಗ್ರಹಾಲಯವನ್ನು ಸ್ಥಾಪಿಸಲಾಯಿತು. ಇದನ್ನು 1977 ಮೇ 19 ರಂದು ಸಾರ್ವಜನಿಕರಿಗೆ ಮುಕ್ತವಾಗಿ ಘೋಷಿಸಲಾಗಿದೆ.

PC:Adityamadhav83

ವಿಸ್ತೀರ್ಣ

ವಿಸ್ತೀರ್ಣ

ಇಂದಿರಾ ಗಾಂಧಿ ಪ್ರಾಣಿ ಸಂಗ್ರಹಾಲಯದ ವಿಸ್ತೀರ್ಣ ಸುಮಾರು 625 ಎಕರೆ ಅಂದರೆ 253 ಹೆಕ್ಟೇರ್ ಪ್ರದೇಶವನ್ನು ಹೊಂದಿದೆ.

PC:Adityamadhav83

ಪ್ರಾಣಿ ಪ್ರಭೇಧ

ಪ್ರಾಣಿ ಪ್ರಭೇಧ

ಇಲ್ಲಿ ಸುಮಾರು 800 ಕ್ಕೂ ಹೆಚ್ಚಾಗಿ ಪ್ರಾಣಿ ಪ್ರಭೇಧವನ್ನು ಕಾಣಬಹುದಾಗಿದೆ. ಇಲ್ಲಿ ಮಾಂಸಹಾರಿಗಳು, ಕಡಿಮೆ ಮಾಂಸಹಾರಿಗಳು, ಸಣ್ಣ ಸಸ್ತನಿಗಳು, ಸರೀಸೃಪಗಳು, ಹುಲ್ಲುಗಾವಲುಗಳು ಮತ್ತು ಹಕ್ಕಿಗಳು ಎಂದು ವಿಂಗಡಿಸಲಾಗಿದೆ.

PC:Siddhartha Lammata

ದ್ವಾರಗಳು

ದ್ವಾರಗಳು

ಇಂದಿರಾಗಾಂಧಿ ಪ್ರಾಣಿ ಸಂಗ್ರಹಾಲಯಕ್ಕೆ 2 ಪ್ರವೇಶ ಮತ್ತು ನಿರ್ಗಮನ ದ್ವಾರಗಳಿವೆ. ಇದು ವಾರದಲ್ಲಿ ಸೋಮವಾರದ ದಿನ ಬಿಟ್ಟು ಇನ್ನು ಉಳಿದ ಎಲ್ಲಾ ದಿನಗಳಲ್ಲಿಯೂ ಕೂಡ ಸಾರ್ವಜನಿಕರಿಗೆ ತೆರೆದಿರುತ್ತಾರೆ.

PC: Adityamadhav83

80 ಜಾತಿ

80 ಜಾತಿ

ಮೃಗಾಲಯದಲ್ಲಿ ಸುಮಾರು 80 ಜಾತಿಗಳ ಸಸ್ತನಿಗಳು, ಪಕ್ಷಿಗಳು ಮತ್ತು ಸರೀಸೃಪಗಳಿವೆ. ಇಲ್ಲಿ ವಿಭಾಗಗಳಾಗಿ ಪ್ರಾಣಿ, ಪಕ್ಷಿಗಳನ್ನು ಸಂರಕ್ಷಿಸಿ ಇಡಲಾಗಿದೆ. ಇದೊಂದು ಪ್ರಾಣಿ ಮೃಗಾಲಯವೇ ಅಲ್ಲದೇ ಪಕ್ಷಿಧಾಮ ಕೂಡ ಆಗಿದೆ.

PC:Adityamadhav83

ಸಸ್ಯಹಾರಿಗಳು

ಸಸ್ಯಹಾರಿಗಳು

ಬಾಕಿಂಗ್ ಜಿಂಕೆ, ಕಾಡು ಹಂದಿ, ಗೌರ್ ಎಮ್ಮೆ, ಸಾಂಬರ್ ಜಿಂಕೆ, ಮಚ್ಚೆಯುಳ್ಳ ಜಿಂಕೆ, ಜೌಗು ಜಿಂಕೆ, ಎಲ್ಡಲ್ ಜಿಂಕೆ ಅಥವಾ ಥಾಮಿನ್ ಜಿಂಕೆಯನ್ನು ಇಲ್ಲಿ ಕಾಣಬಹುದಾಗಿದೆ. ಇವೆಲ್ಲಾ ಸಸ್ಯಹಾರಿ ಪ್ರಾಣಿಗಳಾಗಿವೆ.

PC:Anusha Gannavarapu

ಮಾಂಸಹಾರಿ ಪ್ರಾಣಿಗಳು

ಮಾಂಸಹಾರಿ ಪ್ರಾಣಿಗಳು

ಬಂಗಾಳದ ಟೈಗರ್, ಏಶಿಯಾಟಿಕ್ ಸಿಂಹ, ಚಿರತೆ ಇನ್ನೂ ಹಲವಾರು ಇಲ್ಲಿ ಮಾಂಸಹಾರಿ ಪ್ರಾಣಿಗಳನ್ನು ಕಾಣಬಹುದಾಗಿದೆ.


PC:Adityamadhav83

ಭೇಟಿ ನೀಡಲು ಸೂಕ್ತವಾದ ಸಮಯ

ಭೇಟಿ ನೀಡಲು ಸೂಕ್ತವಾದ ಸಮಯ

ಈ ಸುಂದರವಾದ ಇಂದಿರಾ ಗಾಂಧಿ ಸಂಗ್ರಹಾಲಕ್ಕೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ಅದು ಅಕ್ಟೋಬರ್ ತಿಂಗಳಿನಿಂದ ಮೇ ತಿಂಗಳವೆರೆಗೆ.

PC:Nivi1891

ಪ್ರವೇಶ ಸಮಯ

ಪ್ರವೇಶ ಸಮಯ

ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪ್ರವಾಸಿಗರಿಗೆ ಪ್ರವೇಶದ ಅನುಮತಿಯನ್ನು ನೀಡಲಾಗುತ್ತದೆ. ಹಾಗೆಯೇ ಪ್ರವೇಶ ಶುಲ್ಕ ದೊಡ್ಡವರಿಗೆ 10 ರೂ ಹಾಗು ಚಿಕ್ಕವರಿಗೆ 5 ರೂ ಗಳಾಗಿರುತ್ತದೆ.

Please Wait while comments are loading...