Search
  • Follow NativePlanet
Share
» » ಇಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ.. ವೆಸ್ಟರ್ನ್ ಬಟ್ಟೆ ಹಾಕುವಂತಿಲ್ಲ

ಇಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ.. ವೆಸ್ಟರ್ನ್ ಬಟ್ಟೆ ಹಾಕುವಂತಿಲ್ಲ

ಭಾರತದ ಕೆಲವು ದೇವಾಲಯಳು ಸಂಸ್ಕೃತಿ, ಆಚಾರ, ವಿಚಾರವನ್ನು ಇಂದಿಗೂ ಮುಂದುವರಿಸುತ್ತಾ ಬಂದಿದೆ. ಕೆಲವು ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಪ್ರವೇಶವನ್ನೇ ನಿಷೇಧಿಸಲಾಗಿದೆ. ಅಂತಹ ದೇವಸ್ಥಾನಗಳು ಯಾವುದು ಎನ್ನುವುದನ್ನು ತಿಳಿಯೋಣ.

ಕೇರಳದ ಶಬರಿಮಲೆ

ಕೇರಳದ ಶಬರಿಮಲೆ

PC: youtube

ಕೇರಳದ ಅಯ್ಯಪ್ಪನ ಮಂದಿರ ಶಬರಿಮಲೆಯು ಬಹಳ ಪ್ರಾಚೀನವಾದ ಹಾಗೂ ಭವ್ಯವಾದ ಮಂದಿರವಾಗಿದೆ. ಈ ಅಯ್ಯಪ್ಪನ ಸನ್ನಿಧಾನಕ್ಕೆ ಕೇವದ ದೇಶದಿಂದ ಮಾತ್ರವಲ್ಲ ವಿದೇಶದಿಂದಲೂ ಭಕ್ತರು ಆಗಮಿಸುತ್ತಾರೆ. ಆದರೆ ಈ ಮಂದಿರದ ಒಳಗೆ 10ವರ್ಷದಿಂದ 50 ವರ್ಷದ ಒಳಗಿನ ಮಹಿಳೆಯರಿಗೆ ಪ್ರವೇಶವಿಲ್ಲ.

ಕೇರಳದ ಪದ್ಮನಾಭ ಸ್ವಾಮಿ ಮಂದಿರ

ಕೇರಳದ ಪದ್ಮನಾಭ ಸ್ವಾಮಿ ಮಂದಿರ

ಕೇರಳದ ತಿರುವನಂತಪುರಂನಲ್ಲಿ ವಿಷ್ಣುವಿನ ಪ್ರಸಿದ್ಧ ಮಂದಿರವಿದೆ. ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ಮಂದಿರವು ಕೇರಳದ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಒಂದು, ಎಲ್ಲದಕ್ಕಿಂತಲೂ ಮೊದಲು ಈ ಸ್ಥಳದಲ್ಲಿ ವಿಷ್ಣುವಿನ ಪ್ರತಿಮೆ ದೊರೆತಿದ್ದು ಎನ್ನಲಾಗುತ್ತದೆ.

ರಾಜಸ್ಥಾನದ ಕಾರ್ತೀಕೇಯ ಮಂದಿರ

ರಾಜಸ್ಥಾನದ ಕಾರ್ತೀಕೇಯ ಮಂದಿರ

PC: youtube

ರಾಜಸ್ಥಾನದ ಪುಷ್ಕರ್‌ಲ್ಲಿ ಬ್ರಹ್ಮ ದೇವನ ಪ್ರಸಿದ್ಧ ಮಂದಿರವಿರುವುದು ನಿಮಗೆ ತಿಳಿದೇ ಇದೆ. ಇಲ್ಲಿ ಇನ್ನೊಂದು ಪ್ರಾಚೀನ ದೇವಾಲಯವಿದೆ ಅದುವೇ ಕಾರ್ತೀಕೇಯ ಮಂದಿರ, ಈ ಮಂದಿರ ಬಹಳ ಸುಂದರವಾಗಿದೆ. ಇಲ್ಲಿ ಮಹಿಳೆಯರ ಪ್ರವೇಶ ಮಾಡುವುದನ್ನು ನಿಷೇಧಿಸಲಾಗಿದೆ.

ಮುಂಬೈನ ಹಾಜಿ ಅಲಿ ದರ್ಗಾ

ಮುಂಬೈನ ಹಾಜಿ ಅಲಿ ದರ್ಗಾ

PC: wikipedia

ಹಾಜಿ ಅಲಿ ದರ್ಗಾದಲ್ಲಿ ಎಲ್ಲಾ ಧರ್ಮದ ಜನರು ಆಗಮಿಸುತ್ತಾರೆ. ಮನೋಕಾಮನೆ ಈಡೇರುವಂತೆ ಬಾಬಾರಲ್ಲಿ ಪ್ರಾರ್ಥಿಸುತ್ತಾರೆ. ಮುಂಬೈನ ವಾಲಿ ಸಮುದ್ರ ತಟದಲ್ಲಿನ ಹಾಜಿ ಅಲಿ ದರ್ಗಾದ ಒಳಗಿನ ಭಾಗದಲ್ಲಿ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ.

ದೆಹಲಿಯ ಹಜರತ್ ನಿಜಾಮುದ್ದೀನ್ ಔಲಿಯಾ ದರ್ಗಾ

ದೆಹಲಿಯ ಹಜರತ್ ನಿಜಾಮುದ್ದೀನ್ ಔಲಿಯಾ ದರ್ಗಾ

ಇದು ಸೂಫಿಯರ ಕಾಲದ ಪವಿತ್ರ ದರ್ಗಾವಾಗಿದೆ, ಈ ದರ್ಗಾದಲ್ಲಿ ಮಹಿಳೆಯರು ಪ್ರವೇಶಿಸುವಂತಿಲ್ಲ. ಈ ಸೂಫಿ ಸಂತರು ವೈರಾಗ್ಯ ಹಾಗೂ ಸಹನಶೀಲತೆಯ ಪ್ರತೀಕವಾಗಿದ್ದಾರೆ. ೧೩೦೩ರಲ್ಲಿ ಇವರ ಮಾತಿಗೆ ಬೆಲೆ ಕೊಟ್ಟು ಮೊಘಲ್ ಸೇನೆ ದಾಳಿಯನ್ನು ನಿಲ್ಲಿಸಿತ್ತು. ಹಾಗಾಗಿ ಈ ದರ್ಗಾ ಎಲ್ಲಾ ಧರ್ಮಿಯರಿಗೂ ಜನಪ್ರೀಯವಾಗಿದೆ.

More News

Read more about: temple kerala
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+