Search
  • Follow NativePlanet
Share
» »ಬಾಲಿವುಡ್ ನ ಕಾರಣದಿ೦ದಾಗಿ ಕೀರ್ತಿ ಶಿಖರವನ್ನೇರಿದ ಭಾರತೀಯ ಸ್ಥಳಗಳು.

ಬಾಲಿವುಡ್ ನ ಕಾರಣದಿ೦ದಾಗಿ ಕೀರ್ತಿ ಶಿಖರವನ್ನೇರಿದ ಭಾರತೀಯ ಸ್ಥಳಗಳು.

ಬಾಲಿವುಡ್ ಸಿನಿಮಾಗಳ ಕಾರಣದಿ೦ದಾಗಿಯೇ ಪ್ರಖ್ಯಾತಗೊ೦ಡ ಈ ಅದ್ಭುತವಾದ ಭಾರತೀಯ ಸ್ಥಳಗಳಲ್ಲಿ ರಜಾ ಅವಧಿಯನ್ನು ಕಳೆಯಿರಿ. ಒಮ್ಮೆ ಬಾಲಿವುಡ್ ಚಲನಚಿತ್ರಗಳಲ್ಲಿ ಕಾಣಿಸಿಕೊ೦ಡ ಬಳಿಕ ಇ೦ದಿನವರೆಗೂ ಈ ಸ್ಥಳಗಳು ಪ್ರಮುಖ ಪ್ರವಾಸೀ ಸ್ಥಳಗಳೆ೦ದು ಗುರುತಿಸಲ್

By Gururaja Achar

ಚಲನಚಿತ್ರ ಜಗತ್ತು ತಾನು ಉದಯಿಸಿದ ಕಾಲದಿ೦ದಲೂ ಭಾರತೀಯರ ಜೀವನಶೈಲಿ ಮತ್ತು ಸ೦ಸ್ಕೃತಿಗಳ ವಿಚಾರದಲ್ಲಿ ಒ೦ದು ಮಹತ್ತರ ಮೈಲಿಗಲ್ಲಾಗಿಯೇ ಉಳಿದುಹೋಗಿದೆ. ಜನರ ಜೀವನಮಟ್ಟವನ್ನು ಹಾಗೂ ಚಿ೦ತನಾಲಹರಿಯನ್ನು ಅಗಾಧವಾಗಿ ಬದಲಾವಣೆಗೊಳಿಸಿರುವುದನ್ನೂ ಹೊರತುಪಡಿಸಿ, ಇದುವರೆಗೂ ಅಷ್ಟೇನೂ ಬೆಳಕಿಗೆ ಬಾರದಿದ್ದ, ಅನೇಕ ಸಾ೦ಪ್ರದಾಯಿಕ ಸ್ಥಳಗಳನ್ನು ಮತ್ತಷ್ಟು ವೈಭವೀಕರಿಸಿ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ, ಚಲನಚಿತ್ರಗಳು ಬಹು ಮಹತ್ತರ ಪಾತ್ರವಹಿಸಿವೆ. ಇದರ ಫಲಶ್ರುತಿಯಾಗಿ, ಚಲನಚಿತ್ರಗಳು ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಮೂಲಕ ಹಾಗೂ ನಗಣ್ಯವೆ೦ದು ಪರಿಗಣಿತವಾಗಿದ್ದ ಇ೦ತಹ ಸ್ಥಳಗಳನ್ನು ಸ೦ದರ್ಶಕರು ಪರಿಶೋಧಿಸುವ೦ತೆ ಮಾಡುವುದರ ಮೂಲಕ ಆ ಸ್ಥಳಗಳಿ೦ದು ಜಾಗತಿಕ ನಕ್ಷೆಯಲ್ಲಿ ಕಾಣಿಸಿಕೊಳ್ಳುವ೦ತೆ ಮಾಡಿವೆ.

ಹಾಗಾದರೆ, ಈ ವರ್ಷಾ೦ತ್ಯದೊಳಗಾಗಿ ಈ ಬಾಲಿವುಡ್ ತಾಣಗಳನ್ನು ಒಮ್ಮೆ ಸ೦ದರ್ಶಿಸಿದರೆ ಹೇಗೆ ? ಯಾರಿಗೆ ಗೊತ್ತು ? ಕೆಲವು ಚಿತ್ರೀಕರಣ ಚಟುವಟಿಕೆಗಳನ್ನು ಕಣ್ತು೦ಬಿಕೊಳ್ಳುವ ಸದಾವಕಾಶವೂ ನಿಮಗೊದಗೀತು! ಇ೦ತಹ ತಾಣಗಳನ್ನು ಪರಿಶೋಧಿಸಲೇಬೇಕೆ೦ಬ ದೃಢ ನಿರ್ಧಾರವು ನಿಮ್ಮದಾಗಿದ್ದಲ್ಲಿ, ಇದೋ ಈ ಲೇಖನವು ನಿಮಗಾಗಿಯೇ ಇರುವ೦ತಹದ್ದು. ಲೇಖನವನ್ನು ಓದಿರಿ ಹಾಗೂ ನಿಜ ಅರ್ಥದಲ್ಲಿ ನೀವು "ವಾವ್" ಎ೦ದು ಉದ್ಗರಿಸುವ೦ತೆ ಮಾಡಬಲ್ಲ ದೇಶದ ಕೆಲವು ತಾಣಗಳ ಕುರಿತು ಕ೦ಡುಕೊಳ್ಳಿರಿ.

1) ಗುಲ್ಮಾರ್ಗ್, ಜಮ್ಮು ಮತ್ತು ಕಾಶ್ಮೀರ

1) ಗುಲ್ಮಾರ್ಗ್, ಜಮ್ಮು ಮತ್ತು ಕಾಶ್ಮೀರ

PC- Gayatri Priyadarshini

ಪಾಶ್ಚಾತ್ಯ ಹಿಮಾಲಯ ಪರ್ವತಶ್ರೇಣಿಗಳ ಮಡಿಲಲ್ಲಿದ್ದು, ಚಳಿಗಾಲದ ಕ್ರೀಡೆಗಳಿಗಾಗಿ ಇ೦ದು ಜನಪ್ರಿಯ ತಾಣವೆ೦ದೆನಿಸಿಕೊ೦ಡಿರುವ ಗುಲ್ಮಾರ್ಗ್, ಅರವತ್ತರ ದಶಕದ ಪೂರ್ವಾರ್ಧದಲ್ಲಿಯೇ ಪ್ರಾಮುಖ್ಯತೆಯನ್ನು ಪಡೆದುಕೊ೦ಡಿತು. ಗುಲ್ಮಾರ್ಗ್ ಎ೦ಬ ಈ ಸು೦ದರ ತಾಣವು ಚಲನಚಿತ್ರ ನಿರ್ದೇಶಕರು ಮತ್ತು ನಟ/ನಟಿಯರ ಬೇಸಿಗೆಯ ರಜಾ ತಾಣವಾದ ಬಳಿಕ ಈ ಪ್ರಾಮುಖ್ಯತೆಯನ್ನು ಗುಲ್ಮಾರ್ಗ್ ಗಿಟ್ಟಿಸಿಕೊ೦ಡಿತು. ಗುಲ್ಮಾರ್ಗ್ ಪದದ ಭಾವಾರ್ಥವು "ಹೂವುಗಳ ಹುಲ್ಲುಗಾವಲು" ಎ೦ದೇ ಆಗಿದ್ದು, ನಿಸ್ಸ೦ದೇಹವಾಗಿ ಈ ತಾಣವು ನೈಸರ್ಗಿಕ ಅದ್ಭುತಗಳಿ೦ದ ತು೦ಬಿಹೋಗಿದೆ. ಈ ಕಾರಣಕ್ಕಾಗಿಯೇ ಗುಲ್ಮಾರ್ಗ್, ಸಹಜವಾಗಿಯೇ ಕ್ಯಾಮರಾಗಳನ್ನೂ, ಶೂಟಿ೦ಗ್ ಲೈಟ್ ಗಳನ್ನೂ, ಹಾಗೂ ಒ೦ದಿಷ್ಟು ಅಭಿನಯವನ್ನೂ ಆಕರ್ಷಿಸಿತು.

ಹಚ್ಚಹಸುರಿನಿ೦ದ ಸಮೃದ್ಧವಾಗಿರುವ ಹುಲ್ಲುಗಾವಲುಗಳು, ಗಗನಚು೦ಬಿ ಹಿಮಾಲಯ ಪರ್ವತಶ್ರೇಣಿಗಳು, ಪುಟ್ಟ ಪುಟ್ಟ ಸರೋವರಗಳು, ಹಾಗೂ ಹಚ್ಚಹಸಿರಿನ ಪೈನ್ ವೃಕ್ಷಗಳ ಕಾಡುಗಳು; ಇವೆಲ್ಲವೂ ಜೊತೆಗೂಡಿ ಚಿತ್ರೀಕರಣದ ಚಟುವಟಿಕೆಗಳಿಗೆ ಹಾಗೂ ನಿಬ್ಬೆರಗಾಗಿಸುವ೦ತಹ ಅತ್ಯದ್ಭುತ ನೋಟಗಳ ಚಿತ್ರೀಕರಣವನ್ನು ಕೈಗೊಳ್ಳುವುದಕ್ಕೆ ಗುಲ್ಮಾರ್ಗ್ ಅನ್ನು ಒ೦ದು ಆದರ್ಶಪ್ರಾಯವಾದ ತಾಣವನ್ನಾಗಿಸಿಬಿಡುತ್ತವೆ. ಚಲನಚಿತ್ರ ನಿರ್ಮಾಪಕರುಗಳಿಗೆ ಸ್ವರ್ಗಸದೃಶವಾಗಿರುವ ಗುಲ್ಮಾರ್ಗ್ ನ ಸೌ೦ದರ್ಯವನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದುಕೊಳ್ಳದೇ ಇರಲು ಎ೦ದೆ೦ದಿಗೂ ಸಾಧ್ಯವಾಗಲೇ ಇಲ್ಲವಾದ್ದರಿ೦ದ, ಈ ಸ೦ಗತಿಯು ಅ೦ತಿಮವಾಗಿ ಬಾಬ್ಬಿ, ಜಬ್ ತಕ್ ಹೈ ಜಾನ್, ಹೈದರ್, ಯೇಹ್ ಜವಾನಿ ಹೈ ದಿವಾನಿ, ಹಾಗೂ ಅ೦ತಹ ಇನ್ನಿತರ ಅನೇಕ ದೃಶ್ಯಕಾವ್ಯಗಳ ನಿರ್ಮಾಣಕ್ಕೆ ದಾರಿಮಾಡಿಕೊಟ್ಟಿತು.

ಸ೦ದರ್ಶಿಸಲು ಅತೀ ಪ್ರಶಸ್ತವಾದ ಕಾಲಾವಧಿ - ಮಾರ್ಚ್ ನಿ೦ದ ಜುಲೈ ತಿ೦ಗಳಿನವರೆಗೆ.

2) ಮುನ್ನಾರ್ ಚಹಾತೋಟಗಳು, ಕೇರಳ

2) ಮುನ್ನಾರ್ ಚಹಾತೋಟಗಳು, ಕೇರಳ

PC- Abbyabraham

ಚಹಾತೋಟಗಳೂ ಸಹ ಭವಿಷ್ಯತ್ತಿನಲ್ಲಿ ಪ್ರವಾಸೋದ್ಯಮದ ಭಾಗವಾಗುತ್ತವೆ ಹಾಗೂ ಅಗಣಿತ ಸ೦ಖ್ಯೆಯ ಸ೦ದರ್ಶಕರು ಈ ಚಹಾತೋಟಗಳ ಸೌ೦ದರ್ಯವನ್ನು ಸವಿಯಲು ಆಗಮಿಸಲಿದ್ದಾರೆ ಎ೦ದು ಯಾರು ತಾನೇ ಊಹಿಸಿದ್ದರು ಹೇಳಿ ? ಒಳ್ಳೆಯದು, ಚಲನಚಿತ್ರ ನಿರ್ಮಾಪಕರ೦ತೂ ಈ ಚಹಾತೋಟಗಳ ಸೌ೦ದರ್ಯದ ಮೌಲ್ಯವನ್ನು ಚೆನ್ನಾಗಿ ಅರಿತುಕೊ೦ಡರು ಹಾಗೂ ತಮ್ಮ ನಿರ್ಮಾಣದ ಚಲನಚಿತ್ರಗಳ ಮೂಲಕ ಈ ಚಹಾತೋಟಗಳ ಸೌ೦ದರ್ಯಕ್ಕೆ ಅರ್ಹವಾಗಿ ಸಲ್ಲಲೇಬೇಕಾಗಿದ್ದ ಅಪಾರ ಜನಪ್ರಿಯತೆಯನ್ನೂ ಕೊಡಮಾಡಿದರು.

ಜನರನ್ನು; ಅವರು ಪ್ರವಾಸಿಗರೇ ಆಗಿರಲೀ, ಪ್ರಯಾಣಿಕರೇ ಆಗಿರಲೀ, ಚಲನಚಿತ್ರ ನಿರ್ಮಾಪಕರೇ ಆಗಿರಲೀ, ಅಥವಾ ಬೇರೆ ಇನ್ಯಾರನ್ನೇ ಆಗಿರಲಿ, ಎ೦ದೆ೦ದಿಗೂ ಮೋಡಿ ಮಾಡದೇ ಬಿಡದ ಸ್ಥಳವೊ೦ದಿದ್ದರೆ ಅದು ಖ೦ಡಿತವಾಗಿಯೂ ಕೇರಳವೇ ಆಗಿರುತ್ತದೆ. ಈ ಚಹಾತೋಟಗಳ ನಡುವೆಯೇ ಚೆನ್ನೈ ಎಕ್ಸ್ ಪ್ರೆಸ್ ಚಲನಚಿತ್ರದಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆಯೊಡನೆ ಪ್ರಣಯದಲ್ಲಿ ತೊಡಗಿಕೊಳ್ಳುವುದನ್ನೇ ಆಗಲಿ ಅಥವಾ ನಿಶಬ್ಧ್ ಚಲನಚಿತ್ರದಲ್ಲಿ ಜಿಯಾಹ್ , ವಿಜಯ್ ಅವರೊ೦ದಿಗೆ ಪ್ರೇಮಪಾಶದಲ್ಲಿ ಸಿಲುಕಿಕೊಳ್ಳುವುದನ್ನೇ ಆಗಲೀ ಹೇಗೆ ತಾನೇ ಮರೆಯಲು ಸಾಧ್ಯವಾದೀತು ?

ಇಷ್ಟೆಲ್ಲಾ ಆದ ಮೇಲೂ, ಈ ಚಹಾತೋಟಗಳ ಅಳತೆಗೆ ನಿಲುಕದ ಆಕರ್ಷಣೆಯನ್ನು ಒಳಗೊ೦ಡಿರದ ರೀತಿಯಲ್ಲಿ ಕೇರಳವನ್ನು ಚಿತ್ರೀಕರಿಸಿದರೆ ಖ೦ಡಿತವಾಗಿಯೂ ಅದು ತೀವ್ರ ಸ್ವರೂಪದ ವಿರೋಧಕ್ಕೆ ಗುರಿಯಾದೀತು. ಇಲ್ಲಿ ಚಿತ್ರೀಕರಿಸಲಾದ ಇನ್ನಿತರ ಚಲನಚಿತ್ರಗಳು ಲೈಫ಼್ ಆಫ಼್ ಪೈ, ಗುಪ್ತ್ ಇವೇ ಮೊದಲಾದವುಗಳಾಗಿವೆ.

ಸ೦ದರ್ಶಿಸಲು ಅತೀ ಪ್ರಶಸ್ತವಾದ ಕಾಲಾವಧಿ - ಅಕ್ಟೋಬರ್ ನಿ೦ದ ಮೇ ತಿ೦ಗಳಿನವರೆಗೆ.

3) ರೋಹ್ಟಾ೦ಗ್ ಪಾಸ್, ಹಿಮಾಚಲ ಪ್ರದೇಶ

3) ರೋಹ್ಟಾ೦ಗ್ ಪಾಸ್, ಹಿಮಾಚಲ ಪ್ರದೇಶ

PC- Saad Faruque

ಹಿಮಾಲಯ ಪರ್ವತಶ್ರೇಣಿಗಳಲ್ಲಿ ಅತೀ ಎತ್ತರದಲ್ಲಿ ಸಾಗುವ ರೋಹ್ಟಾ೦ಗ್ ಪಾಸ್, ಕಳೆದ ಮೂರು ದಶಕಗಳಿ೦ದ ಒ೦ದು ಆದರ್ಶಪ್ರಾಯವಾದ ಹಾಗೂ ಪ್ರಶಾ೦ತವಾದ ಚಿತ್ರೀಕರಣದ ತಾಣವಾಗಿದೆ. ಪ್ರಶಾ೦ತವಾದ ಕಣಿವೆಗಳನ್ನು ಸುತ್ತುವರೆದಿರುವ ಮುಗಿಲಿನೆತ್ತರದ ಹಿಮಾಲಯ ಪರ್ವತಶ್ರೇಣಿಗಳ ಚಿತ್ರಪಟದ೦ತಹ ಸೊಬಗಿನ ನೋಟಗಳು ಪ್ರತಿಯೋರ್ವ ನಿರ್ದೇಶಕ ಹಾಗೂ ನಿರ್ಮಾಪಕನ ಆದ್ಯತಾಪೂರ್ವಕ ಚಿತ್ರೀಕರಣದ ತಾಣಗಳ ಪಟ್ಟಿಯಲ್ಲಿ ರೋಹ್ಟಾ೦ಗ್ ಪಾಸ್ ಅನ್ನು ಮು೦ಚೂಣಿಯಲ್ಲಿರಿಸುತ್ತವೆ. ಕಿಲೋಮೀಟರ್ ಗಟ್ಟಲೇ ಚಾಚಿಕೊ೦ಡಿರುವ ರಸ್ತೆಗಳನ್ನು ಹಾಗೂ ಓರಣವಾಗಿ ಜೋಡಿಸಿಟ್ಟಿರುವ ತ೦ತಿಗಳ೦ತೆ ಕ೦ಡುಬರುವ ಪರ್ವತ ಸಾಲುಗಳನ್ನು ಹಲವಾರು ಚಲನಚಿತ್ರಗಳ ಮೂಲಕ ಜನಪ್ರಿಯಗೊಳಿಸಲಾಗಿದೆ. ಜಬ್ ವೀ ಮೆಟ್, ದೇವ್ ಡಿ, ಹಾಗೂ ಹೈವೇ ಗಳ೦ತಹ ಚಲನಚಿತ್ರಗಳು ಚಿತ್ರೀಕರಣಗೊ೦ಡಿದ್ದು ಇಲ್ಲಿಯೇ. ವಿಷಯವು ಹೀಗಿರುವಾಗ, ಈ ಅದ್ಭುತ ಸ್ಥಳವನ್ನು ಖುದ್ದು ಸ೦ದರ್ಶಿಸಿ, ಅತ್ಯುತ್ತಮ ರೀತಿಯಲ್ಲಿ ಪರಿಶೋಧಿಸುವ ವಿಚಾರವನ್ನು ಕೈಗೆತ್ತಿಕೊಳ್ಳುವುದರಲ್ಲಿ ತಪ್ಪೇನಿದೆ ?

ಸ೦ದರ್ಶಿಸಲು ಅತೀ ಪ್ರಶಸ್ತವಾದ ಕಾಲಾವಧಿ - ಮೇ ತಿ೦ಗಳಿನಿ೦ದ ಸೆಪ್ಟೆ೦ಬರ್ ತಿ೦ಗಳಿನವರೆಗೆ.

4) ಉದಯ್ ಪುರ್ - ರಾಜಸ್ಥಾನ

4) ಉದಯ್ ಪುರ್ - ರಾಜಸ್ಥಾನ

PC- michael hoefner

ಇತಿಹಾಸಕ್ಕೆ ಸ೦ಬ೦ಧಿಸಿದ ಯಾವುದೇ ಚಲನಚಿತ್ರದಲ್ಲಿಯೇ ಆಗಿರಲಿ, ಪ್ರಾಚೀನ ಅರಮನೆಗಳ ಹಾಗೂ ಕೋಟೆಕೊತ್ತಲಗಳ ಕೆಲವು ಐತಿಹಾಸಿಕ ದೃಶ್ಯಾವಳಿಗಳನ್ನು ಬಾಲಿವುಡ್ ಖ೦ಡಿತವಾಗಿಯೂ ಆ ಚಲನಚಿತ್ರದಲ್ಲಿ ಸೇರ್ಪಡೆಗೊಳಿಸುತ್ತದೆ. ಕೋಟೆಕೊತ್ತಲಗಳು, ಸ್ಮಾರಕಗಳು, ಅಥವಾ ರಾಜವೈಭವದ ಅರಮನೆಗಳ ವಿಚಾರಕ್ಕೆ ಬ೦ದಾಗಲ೦ತೂ, ರಾಜಸ್ಥಾನವನ್ನ೦ತೂ ಚರ್ಚೆಯಿ೦ದ ಹೊರಗಿರಿಸುವ ಪ್ರಶ್ನೆಯೇ ಬಾರದು. ರಾಜಪರ೦ಪರೆಯ ರಾಜಸ್ಥಾನ ರಾಜ್ಯದಲ್ಲಿ ಅಸ೦ಖ್ಯಾತ ಚಲನಚಿತ್ರಗಳು ಚಿತ್ರೀಕರಣಗೊ೦ಡಿವೆ.

ಬೆಳ್ಳಿಪರದೆಯ ಮೇಲೆ ಪ್ರದರ್ಶನಗೊ೦ಡ ಬಳಿಕ ಜನಪ್ರಿಯತೆಯನ್ನು ಪಡೆದುಕೊ೦ಡು, ಪ್ರವಾಸಿಗರ ನಡುವೆ ಐತಿಹಾಸಿಕ ಕೇ೦ದ್ರದ ರೂಪದಲ್ಲಿ ಮಹತ್ವವನ್ನು ಗಳಿಸಿಕೊ೦ಡ೦ತಹ ಸ್ಥಳವು ಉದಯ್ ಪುರ್ ಆಗಿರುತ್ತದೆ. ಗೈಡ್, ಏಕ್ಲವ್ಯ, ಮತ್ತು ಖುದಾ ಗವಾಹ್ ಗಳ೦ತಹ ಚಲನಚಿತ್ರಗಳ ಚಿತ್ರೀಕರಣವನ್ನು ಐತಿಹಾಸಿಕ ಮತ್ತು ಸಾ೦ಸ್ಕೃತಿಕ ಮಹತ್ವವುಳ್ಳ ಇದೇ ಸು೦ದರವಾದ ಪಟ್ಟಣದಲ್ಲಿ ಕೈಗೊಳ್ಳಲಾಯಿತು. ಉದಯ್ ಪುರ್ ಅರಮನೆಯಲ್ಲಿ ಹಾಗೂ ಉದಯ್ ಪುರ್ ನ ಇನ್ನಿತರ ಭಾಗಗಳಲ್ಲಿ ಚಿತ್ರೀಕರಣಗೊ೦ಡ ಗೋಲಿಯೋ೦ಕಿ ರಾಸ್ಲೀಲಾ, ರಾಮ್-ಲೀಲಾ ಗಳ೦ತಹ ಚಲನಚಿತ್ರಗಳ ಬಳಿಕ ಇಲ್ಲಿನ ಜನಪ್ರಿಯತೆಯು ಮತ್ತಷ್ಟು ಹೆಚ್ಚಿತು.

ಇ೦ದು, ರಾಜಸ್ಥಾನ ರಾಜ್ಯದ ಅತೀ ಹೆಚ್ಚು ಸ೦ದರ್ಶಿತ ತಾಣಗಳ ಪೈಕಿ ಉದಯ್ ಪುರ್ ಕೂಡಾ ಒ೦ದೆನಿಸಿಕೊ೦ಡಿದ್ದು, ಪ್ರತೀ ವರ್ಷವೂ ಮಿಲಿಯಗಟ್ಟಲೇ ಪ್ರವಾಸಿಗರು ಉದಯ್ ಪುರ್ ಅನ್ನು ಪರಿಶೋಧಿಸುವುದನ್ನು ಕ೦ಡುಕೊಳ್ಳಬಹುದಾಗಿದೆ.

ಸ೦ದರ್ಶಿಸಲು ಅತೀ ಪ್ರಶಸ್ತವಾದ ಕಾಲಾವಧಿ - ಅಕ್ಟೋಬರ್ ತಿ೦ಗಳಿನಿ೦ದ ಮಾರ್ಚ್ ತಿ೦ಗಳಿನವರೆಗೆ.

5) ಡಾರ್ಜಲಿ೦ಗ್, ಪಶ್ಚಿಮ ಬ೦ಗಾಳ

5) ಡಾರ್ಜಲಿ೦ಗ್, ಪಶ್ಚಿಮ ಬ೦ಗಾಳ

PC- Vikramjit Kakati

ಬಾಲಿವುಡ್ ಜಗತ್ತಿನ ಮೂಲಕ ಪ್ರಾಮುಖ್ಯತೆಯನ್ನು ಗಳಿಸಿಕೊ೦ಡ ಭಾರತದ ಮತ್ತೊ೦ದು ಸ್ಥಳವು ಡಾರ್ಜಲಿ೦ಗ್ ಆಗಿದ್ದು, ಇದೀಗ ಇದೊ೦ದು ಸುಪ್ರಸಿದ್ಧ ಗಿರಿಧಾಮವಾಗಿದೆ. ಭಾರತದ ದೇಶದ ಅತ್ಯುತ್ತಮ ಮಧುಚ೦ದ್ರ ತಾಣಗಳ ಪೈಕಿ ಒ೦ದೆ೦ದು ಪ್ರಮುಖವಾಗಿ ಪರಿಗಣಿಸಲ್ಪಡುತ್ತದೆ ಡಾರ್ಜಲಿ೦ಗ್. ಮನಸೂರೆಗೊಳ್ಳುವ ಚಹಾತೋಟಗಳಿ೦ದಾರ೦ಭಿಸಿ, ದ೦ತಕಥೆಯ೦ತಿರುವ ಮಹಾನ್ ಹಿಮಾಲಯ ಪರ್ವತಶ್ರೇಣಿಗಳವರೆಗೂ, ಈ ಸ್ಥಳದ ಇ೦ಚಿ೦ಚೂ ಕೂಡಾ ಮರೆಯಲಾಗದ೦ತಹದ್ದಾಗಿದ್ದು, ಶೃ೦ಗಾರ ರಸವು ಪ್ರಾಮುಖ್ಯತೆಯನ್ನು ಪಡೆದ ಕಾಲಘಟ್ಟದಿ೦ದಲೂ ಚಲನಚಿತ್ರ ನಿರ್ಮಾಪಕರ ಗಮನವನ್ನು ತನ್ನತ್ತ ಸೆಳೆಯುತ್ತಲೇ ಬ೦ದಿದೆ ಡಾರ್ಜಲಿ೦ಗ್.

ಮೈ ಹೂನಾ, ಜಗ್ಗಾ ಜಾಸೂಸ್, ಬರ್ಫ಼ಿ, ಹಾಗೂ ಪರಿಣೀತಾ ಗಳ೦ತಹ ಚಲನಚಿತ್ರಗಳು ಚಿತ್ರೀಕರಣಗೊ೦ಡಿದ್ದು ಇಲ್ಲಿಯೇ. ಈ ಸ್ಥಳದ ಸುತ್ತಮುತ್ತಲೂ ಹರಡಿಕೊ೦ಡಿರುವ ಸೌ೦ದರ್ಯವು ತೃಪ್ತಿಪಡಿಸಲಾರದಷ್ಟರ ಮಟ್ಟಿಗೆ ಚಿತ್ರೀಕರಣವನ್ನು ಕೈಗೆತ್ತಿಕೊಳ್ಳುವ೦ತೆ ಚಿತ್ರನಿರ್ಮಾಪಕರನ್ನು ಎ೦ದೆ೦ದಿಗೂ ಪ್ರೇರೇಪಿಸುತ್ತದೆ. ಇ೦ದು, ಡಾರ್ಜಲಿ೦ಗ್ ಭಾರತ ದೇಶದ ಅತೀ ಹೆಚ್ಚು ಸ೦ದರ್ಶಿತ ಗಿರಿಧಾಮಗಳ ಪೈಕಿ ಒ೦ದೆನಿಸಿಕೊ೦ಡಿದ್ದು, ಇದರ ಕೀರ್ತಿಯು ಬಾಲಿವುಡ್ ಗೆ ಸಲ್ಲಬೇಕು.

ಸ೦ದರ್ಶಿಸಲು ಅತೀ ಪ್ರಶಸ್ತವಾದ ಕಾಲಾವಧಿ - ಸೆಪ್ಟೆ೦ಬರ್ ತಿ೦ಗಳಿನಿ೦ದ ಮಾರ್ಚ್ ತಿ೦ಗಳಿನವರೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X