Search
  • Follow NativePlanet
Share
» »ಭಾರತೀಯ ಹಿಮಾಲಯದ ರೋಮಾಂಚಕ ಶ್ರೇಣಿಗಳು

ಭಾರತೀಯ ಹಿಮಾಲಯದ ರೋಮಾಂಚಕ ಶ್ರೇಣಿಗಳು

By Vijay

ಹಿಮದಿಂದ ಕೂಡಿರುವ ಬೃಹತ್ ಆಲಯ ಅಥವಾ ಉದ್ದನೆಯ ಹಿಮ ಪರ್ವತಗಳ ಸಾಲು ಒಟ್ಟಾಗಿ ಸೇರಿ ಹಿಮಾಲಯ ಪರ್ವತ ಶ್ರೇಣಿ ಎಂಬ ಹೆಮ್ಮೆಯ ಹೆಸರು ಪಡೆದಿದೆ. ಈ ಶ್ರೇಣಿಯಲ್ಲಿ ಸುಮಾರು 100 ಕ್ಕೂ ಹೆಚ್ಚು ಅತಿ ಎತ್ತರದ ಪರ್ವತಗಳನ್ನು ಕಾಣಬಹುದು. ಪ್ರಪಂಚದಲ್ಲೆ ಅತಿ ಎತ್ತರದ ಪರ್ವತಗಳನ್ನು ಹೊಂದಿರುವ ಹಿಮಾಲಯ ಪರ್ವತ ಶ್ರೇಣಿಯು ಸುಮಾರು 2400 ಕಿ.ಮೀ ಗಳಷ್ಟು ಉದ್ದವಾಗಿ ಹರಡಿದೆ.

ಮೇಕ್ ಮೈ ಟ್ರಿಪ್ ವತಿಯಿಂದ ಎಲ್ಲ ಕೂಪನ್ನುಗಳನ್ನು ಉಚಿತವಾಗಿ ಪಡೆಯಿರಿ

ಸಮುದ್ರ ಮಟ್ಟದಿಂದ 7000ಮೀ ಗೂ ಅಧಿಕ ಎತ್ತರದಲ್ಲಿ ನೆಲೆಸಿರುವ ಹಿಮಾಲಯದ ಪರ್ವತಗಳು ಅತ್ಯಂತ ಸಮ್ಮೋಹಿತಗೊಳಿಸುವ, ಹಿಮಚ್ಛಾದಿತ ಸುಂದರ ಪರ್ವತಗಳ ಬೀಡಾಗಿದೆ. ಈ ಸುಂದರ ನಯನ ಮನೋಹರ ಪರ್ವತಗಳನ್ನು ಕಣ್ತುಂಬ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಸಾಹಸಿ ಪ್ರವೃತ್ತಿಯ ವಿದೇಶಿ ಪ್ರವಾಸಿಗರು ಬರುತ್ತಲೆ ಇರುತ್ತಾರೆ.

ವಿಶೇಶ ಲೇಖನ : ಭಾರತದ ಅತಿ ಎತ್ತರದ ಗಿರಿಶಿಖರಗಳು

ಮುಖ್ಯವಾಗಿ ಟಿಬೆಟ್ ಹಾಗೂ ಭಾರತವನ್ನು ಪ್ರತ್ಯೇಕಿಸುವ ಈ ಅದ್ಭುತ ಪರ್ವತ ಶ್ರೇಣಿಯು ಭಾರತ, ಭೂತಾನ್, ನೇಪಾಲ, ಚೀನಾ ಹಾಗೂ ಪಾಕಿಸ್ತಾನ ದೇಶಗಳಲ್ಲಿ ಸುಶ್ರಾವ್ಯವಾಗಿ ಹರಡಿದೆ. ಆದರೆ ಮೊದಲ ಮೂರು ದೇಶಗಳಲ್ಲಿ ಈ ಪರ್ವತ ಶ್ರೇಣಿಯ ಬಹು ಭಾಗವನ್ನು ಕಾಣಬಹುದು.

ವಿಶೇಷ ಲೇಖನ : ಕರ್ನಾಟಕದ ಅಮೋಘ ಬೆಟ್ಟಗಳು

ಪ್ರಸ್ತುತ ಲೇಖನವು ಭಾರತದ ಭೂಭಾಗದಲ್ಲಿ ಕಂಡುಬರುವ ಹಿಮಾಲಯ ಪರ್ವತಗಳ ಅತ್ಯದ್ಭುತ ಪರ್ವತ ಶ್ರೇಣಿಗಳು ಹಾಗೂ ಯಾವ್ಯಾವ ಚಾರಣ ಪಥಗಳನ್ನು ಈ ಭಾಗದಲ್ಲಿ ಆಸ್ವಾದಿಸಬಹುದೆಂಬುದರ ಕುರಿತು ಸಂಕ್ಷೀಪ್ತವಾಗಿ ತಿಳಿಸುತ್ತದೆ. ಅಷ್ಟೆ ಅಲ್ಲ ಈ ಸುಂದರ ಗಗನಚುಂಬಿ ಪರ್ವತಗಳ ಅತ್ಯದ್ಭುತ ಹಾಗೂ ರೋಮಾಂಚಕ ಚಿತ್ರಗಳ ಪ್ರವಾಸವನ್ನೂ ಸಹ ಮಾಡಿಸುತ್ತದೆ.

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಹಿಮಾಲಯವನ್ನು ಮುಖ್ಯವಾಗಿ ಐದು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಅವುಗಳೆಂದರೆ ಪೀರ್ ಪಾಂಜಾಲ್ ಶ್ರೇಣಿ, ಧೌಲಾ ಧರ್ ಶ್ರೇಣಿ, ಝನ್ಸ್ಕಾರ್ ಶ್ರೇಣಿ, ಲಡಾಖ್ ಶ್ರೇಣಿ ಹಾಗೂ ಪೂರ್ವ ಕಾರಾ ಕೋರಂ ಶ್ರೇಣಿ.

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಭಾರತದ ಉತ್ತರದಲ್ಲಿ ಹಾಗೂ ಹಿಮಾಲಯದ ದಕ್ಷಿಣದಲ್ಲಿ ಪೀರ್ ಪಾಂಜಾಲ್ ಶ್ರೇಣಿಯು ಸುಮಾರು 5000 ಮೀ ಗಳ ಎತ್ತರದಿಂದ ಪ್ರಾರಂಭವಾಗುತ್ತದೆ.

ಚಿತ್ರಕೃಪೆ: Ankur P

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಗುಲ್ಮಾರ್ಗ್ ನ ವಾಯವ್ಯ ಭಾಗದಿಂದ ಪ್ರಾರಂಭವಾಗುವ ಈ ಶ್ರೇಣಿಯು ಕಾಶ್ಮೀರ ಕಣಿವೆಯ ದಕ್ಷಿಣದ ತುದಿಯ ಮೂಲಕ ಸಾಗುತ್ತ ಬನಿಹಾಲ್ ಪಾಸ್ (ರಹದಾರಿ) ವರೆಗೆ ವಿಶಾಲವಾಗಿ ಹರಡಿದೆ.

ಚಿತ್ರಕೃಪೆ: Just Jimish

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಭಾರತದ ಭಾಗವಾದ ಟ್ರಾನ್ಸ್-ಹಿಮಾಲಯ ಭಾಗದಲ್ಲಿ 200 ಕ್ಕೂ ಅಧಿಕ ಸಂಖ್ಯೆಯಲ್ಲಿ ರೋಮಾಂಚನಗೊಳಿಸುವ ಅತ್ಯದ್ಭುತ ಚಾರಣ ಮಾರ್ಗಗಳಿವೆ. ಅವುಗಳಲ್ಲಿ ಮುಖ್ಯವಾಗಿ ಬಹುತೇಕ ಚಾರಣ ಮಾರ್ಗಗಗಳನ್ನು ಪೀರ್ ಪಾಂಜಾಲ್ ಹಾಗೂ ಧೌಲಾಧರ್ ಶ್ರೇಣಿಗಳಲ್ಲಿರುವುದನ್ನು ಕಾಣಬಹುದು. ಚಿತ್ರದಲ್ಲಿರುವುದು ಹಿಮಾಚಲದಲ್ಲಿರುವ ಸಾಚ್ ಪಾಸ್.

ಚಿತ್ರಕೃಪೆ: Travelling Slacker

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಶಿಮ್ಲಾ, ಕುಲ್ಲು, ಕಾಶ್ಮೀರ ಕಣಿವೆ, ಸ್ಪಿತಿ, ಲಡಾಖ್, ಲಾಹೌಲ್, ಕಿನ್ನೌರ್ ಮುಂತಾದ ಪ್ರದೇಶಗಳು ಸಾಹಸಿ ಪ್ರವೃತ್ತಿಯ ಪ್ರವಾಸಿಗರಿಗೆ ಸವಾಲೆಸೆಯುವಂತಹ ಅದ್ಭುತ ಚಾರಣ ಮಾರ್ಗಗಳನ್ನು ಕರುಣಿಸುತ್ತದೆ. ಆದರೆ ಒಂದೊಮ್ಮೆ ಚಾರಣ ಮಾಡಿದಾಗ ಮಾತ್ರವೆ ಪ್ರದೇಶದ ಅತ್ಯುನ್ನತ ಸೌಂದರ್ಯ, ನಮ್ಮ ಮಾಯಾ ಲೋಕದ ಕೃತಕ ಜೀವನಕ್ಕೆ ಸೆಡ್ಡು ಹೊಡೆದು ಪ್ರಕೃತಿಯ ರೌದ್ರಾವತಾರದ ಅನುಭೂತಿ ನೀಡುವ ರೋಚಕ ಪರ್ವತ ಶಿಖರಗಳ ಅದ್ಭುತ ನೋಟಗಳು ಕಾಣಲು ಸಿಗುತ್ತವೆ. ಚಿತ್ರದಲ್ಲಿರುವುದು ಹಿಮಾಚಲದಲ್ಲಿರುವ ಸಾಚ್ ಪಾಸ್.

ಚಿತ್ರಕೃಪೆ: Travelling Slacker

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ದೂಧ್ ಪತ್ರಿ, ಕಾಶ್ಮೀರದ ಶ್ರೀನಗರದಿಂದ ಕೇವಲ 42 ಕಿ.ಮೀ ಗಳಷ್ಟು ದೂರದಲ್ಲಿರುವ ಅತಿ ಸುಂದರ ತಾಣ. ಇಲ್ಲಿನ ಪ್ರಕೃತಿ ಸೌಂದರ್ಯ, ಗಂಧರ್ವ ಲೋಕವನ್ನೂ ಮೀರಿಸುವಷ್ಟು ಸುಂದರವಾಗಿದೆ.

ಚಿತ್ರಕೃಪೆ: Ankur P

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಇದನ್ನು ಪ್ರೀತಿಯಿಂದ "ಹಾಲಿನ ಕಣಿವೆ" ಎಂದೆ ಕರೆಯಲಾಗುತ್ತದೆ. ಕಾರಣ ಇಲ್ಲಿನ ತಾಜಾ ಪರಿಸರದಲ್ಲಿ ಬೆಳೆಯುವ ಹುಲ್ಲುಗಾವಲು, ಅತಿ ಶುದ್ಧ ನೀರಿನ ತಂಪಾದ ತೊರೆಗಳು ಇಲ್ಲಿ ಮೇಯುವ ದನ ಕರುಗಳಿಗೆ ವರದಾನ. ಆದ್ದರಿಂದ ಇಲ್ಲಿನ ದನ ಕರುಗಳು ಉತ್ಕೃಷ್ಟ ಮಟ್ಟದ ಹಾಲು ಹೆಚ್ಚಿನ ಪ್ರಮಾಣದಲ್ಲಿ ನೀಡುತ್ತವೆ.

ಚಿತ್ರಕೃಪೆ: Ankur P

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ದೂಧ್ ಪತ್ರಿ ಅಷ್ಟೊಂದಾಗಿ ಅನ್ವೇಷಿಸಲಾರದ ತಾಣ. ಸ್ಥಳೀಯ ದನಗಾಹಿ ಅಥವಾ ಕುರುಬರು ಮಾತ್ರ ದನ ಮೆಯಿಸುವ ದೃಷ್ಟಿಯಿಂದ ಇಲ್ಲಿಗೆ ಭೇಟಿ ನೀಡುತ್ತಾರೆ. ಸ್ಥಳೀಯ ಮಾರ್ಗದರ್ಶಿಯ ಸಹಾಯ ಪಡೆದು ಈ ಸುಂದರ ತಾಣದಲ್ಲಿ ಮನಸಾರೆ ವಿಹರಿಸಬಹುದು.

ಚಿತ್ರಕೃಪೆ: Ankur P

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಎರಡನೆಯದಾಗಿ ಧೌಲಾಧರ್ ಶ್ರೇಣಿಯು ಪೀರ್ ಪಾಂಜಾಲ್ ಶ್ರೇಣಿಯ ದಕ್ಷಿಣದಿಂದ ಪ್ರಾರಂಭವಾಗುತ್ತದೆ. ಹಿಮಾಚಲದ ಕಂಗ್ರಾ ಜಿಲ್ಲೆ, ಮಂಡಿ, ಧರ್ಮಶಾಲಾ ಹಾಗೂ ಚಂಬಾಗಳಲ್ಲಿ ಈ ಸುಂದರ ಮೇಲ್ಮೈನಲ್ಲಿ ಹಿಮಚ್ಛಾದಿತ ಪರ್ವತಗಳ ಶ್ರೇಣಿಯು ವಿಸ್ತಾರವಾಗಿ ಹರಡಿದೆ.

ಚಿತ್ರಕೃಪೆ: Travelling Slacker

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಈ ಶ್ರೇಣಿಯಲ್ಲಿ ಅತ್ಯಂತ ಎತ್ತರವಾದ ಹಿಮ ಶಿಖರವನ್ನು "ಹನುಮಾನ್ ಜಿ ಕಾ ಟಿಬಾ" ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: John Hill

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಧೌಲಾಧರ್ ಶ್ರೇಣಿಯು ಮುಖ್ಯವಾಗಿ ಹಿಮಾಚಲದ ಡಾಲ್ ಹೌಸಿ ಇಂದ ಪ್ರಾರಂಭವಾಗಿ ಕುಲ್ಲು ಕಣಿವೆಯ ಮೂಲಕವೂ ಸಾಗುತ್ತ ಕೊನೆಯದಾಗಿ ಬದರಿನಾಥದೆಡೆ ಕೊನೆಗೊಳ್ಳುತ್ತದೆ.

ಚಿತ್ರಕೃಪೆ: LivinTheDream

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಧರ್ಮಶಾಲಾದ ಬಳಿಯಿರುವ ಧೌಲಾಧರ್ ಶ್ರೇಣಿಯ ಇಂದ್ರಹಾರ್ ಪಾಸ್. ಇದು ಧರ್ಮಶಾಲಾದ ಜನಪ್ರೀಯ ಚಾರಣ ಮಾರ್ಗದ ಪ್ರಮುಖ ಭಾಗವಾಗಿದೆ. ಏಪ್ರಿಲ್-ಅಕ್ಟೋಬರ್ ಸಮಯದ ಮಧ್ಯೆ ಹೆಚ್ಚಿನ ಚಾರಣಿಗ ಪ್ರವಾಸಿಗರನ್ನು ಇದು ಆಕರ್ಷಿಸುತ್ತದೆ.

ಚಿತ್ರಕೃಪೆ: antoine

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಧೌಲಾಧರದ ತ್ರಿಯುಂಡ್ ನಿಂದ ಲೊಕಾ ಗೋಟ್ ನೆಡೆ ಜಾಗರೂಕತೆಯಿಂದ ಇಳಿಯುತ್ತ ಟ್ರೆಕ್ಕಿಂಗ್.

ಚಿತ್ರಕೃಪೆ: Ashish Gupta

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಝನ್ಸ್ಕಾರ್ ಶ್ರೇಣಿ, ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಹಿಮಾಲಯ ಪರ್ವತಗಳ ಒಂದು ಶ್ರೇಣಿಯಾಗಿದ್ದು ಝನ್ಸ್ಕಾರ್ ಪ್ರದೇಶವನ್ನು ಲಡಾಖ್ ನಿಂದ ಪ್ರತ್ಯೇಕಿಸುತ್ತದೆ. ಇದೊಂದು ನೂರು ಕಿ.ಮೀ ಗಳ ಉದ್ದನೆಯ ಶ್ರೇಣಿಯಾಗಿದ್ದು, ಇದರ ಸರಾಸರಿ ಎತ್ತರ ಸುಮಾರು 6000 ಮೀಗಳು.

ಚಿತ್ರಕೃಪೆ: Partha Chowdhury

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಹಿಮಾಚಲ ಪ್ರದೇಶದಲ್ಲೂ ವಿಸ್ತರಿಸಿರುವ ಈ ಶ್ರೇಣಿಯು ಸ್ಪಿತಿಯನ್ನು ಕಿನ್ನೌರ್ ನಿಂದ ಬೇರ್ಪಡಿಸುತ್ತದೆ. ಝನ್ಸ್ಕಾರ್ ಶ್ರೇಣಿಯಲ್ಲಿರುವ ಡ್ರಾಂಗ್ ಡ್ರುಂಗ್ ಹಿಮನದಿ.

ಚಿತ್ರಕೃಪೆ: Poonam Agarwal

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಲಡಾಖ್ ಶ್ರೇಣಿಯು ಅತಿ ಸುಂದರ ಪ್ರವತಗಳನ್ನೊಳಗೊಂಡ ಅದ್ಭುತ ಪರ್ವತ ಶ್ರೇಣಿಯಾಗಿದೆ. ಸಮುದ್ರ ಮಟ್ಟದದಿಂದ ಸಾವಿರಾರು ಮೀಟರ್ ಗಳಷ್ಟು ಎತ್ತರದಲ್ಲಿ ನೆಲೆಸಿರುವ ಲಡಾಖ್, ಖಡಕ್ ಸೌಂದರ್ಯವಿರುವ ಹೆಚ್ಚು ಕಡಿಮೆ ನಿರ್ಜನವಾದ ಭಾರತದ ಅತಿ ರಮಣೀಯ ಪ್ರದೇಶವಾಗಿದೆ.

ಚಿತ್ರಕೃಪೆ: Koshy Koshy

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಈ ಪರ್ವತ ಶ್ರೇಣಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಸ್ಕೃತಿ ಆಚಾರಗಳು ವಿಭಿನ್ನವಾಗಿದ್ದು, ಹೆಚ್ಚಾಗಿ ಇಲ್ಲಿ ಇಂಡೊ ಆರ್ಯನ್ ಹಾಗು ಟಿಬೆಟ್ ಮೂಲದ ಜನರು ವಾಸವಾಗಿರುವುದನ್ನು ಕಾಣಬಹುದು.

ಚಿತ್ರಕೃಪೆ: Incomposition

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಐತಿಹಾಸಿಕವಾಗಿ ಲಡಾಖ್ ಶ್ರೇಣಿಯು ದಕ್ಷಿಣಕ್ಕೆ ಬಾಲ್ಟಿಸ್ತಾನ್ ಕಣಿವೆ, ಸಿಂಧು ಕಣಿವೆ, ಝಂನ್ಸ್ಕಾರ್, ಲಾಹೌಲ್ ಹಾಗು ಸ್ಪಿಟಿಗಳನ್ನು, ಪೂರ್ವಕ್ಕೆ ಅಸ್ಕೈ ಚಿನ್, ರುಡೊಕ್ ಗಳನ್ನು ಹಾಗು ಉತ್ತರಕ್ಕೆ ನುಬ್ರಾ ಕಣಿವೆಗಳನ್ನು ಒಳಗೊಂಡಿತ್ತು.

ಚಿತ್ರಕೃಪೆ: Kunal Mukherjee

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಪ್ರಸ್ತುತ ಲಡಾಖ್ ಶ್ರೇಣಿಯು ಪೂರ್ವಕ್ಕೆ ಟಿಬೆಟ್, ದಕ್ಷಿಣಕ್ಕೆ ಲಾಹೌಲ್ ಮತ್ತು ಸ್ಪಿಟಿ, ಪಶ್ಚಿಮಕ್ಕೆ ಜಮ್ಮು ಮತ್ತು ಬಾಲ್ಟಿಯೂಲ್ ಗಳನ್ನು ಒಳಗೊಂಡಿದೆ. ಉತ್ತರಕ್ಕೆ ಅತಿ ದೂರದಲ್ಲಿ ಕುನ್ಲೂನ್ ಹಾಗು ಕ್ಸಿನಿಜಿಯಾಂಗ್ ಗಳನ್ನು ಒಳಗೊಂಡಿದೆ.

ಚಿತ್ರಕೃಪೆ: GerthMichael

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಹಿಂದೆ ವ್ಯಾಪಾರ ವಹಿವಾಟು ಉದ್ದೇಶದಿಂದ ವಿವಿಧ ಪ್ರದೇಶಗಳಿಗೆ ಹೋಗಿ ಬರಲು ಲಡಾಖ್ ಆಧಾರ ತಾಣವಾಗಿ ಸೇವೆ ಸಲ್ಲಿಸುತ್ತಿದ್ದುದರಿಂದ ಮಹತ್ವದ ಸ್ಥಾನ ಪಡೆದಿತ್ತು.

ಚಿತ್ರಕೃಪೆ: Karunakar Raykar

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಮೂಲತಃ ಲಡಾಖ್ ಪರ್ವತ ಶ್ರೇಣಿಯು ಕಾರಾಕೋರಂ ಪರ್ವತ ಶ್ರೇಣಿಯ ಒಂದು ಭಾಗವಾಗಿದೆ. ಈ ಅಗಾಧ ಪರ್ವತ ಶ್ರೇಣಿಯು 370 ಕಿ.ಮೀ ಉದ್ದವಾಗಿ ಹರಡಿದ್ದು ಲಡಾಖ್ ಪಟ್ಟಣದ ಶ್ಯೋಕ್ ನದಿಯಿಂದ ಪ್ರಾರಂಭವಾಗಿ ಟಿಬೆಟ್ ದೇಶದ ಗಡಿಯವರೆಗೂ ವಿಸ್ತಾರವಾಗಿ ಚಾಚಿದೆ.

ಚಿತ್ರಕೃಪೆ: Karunakar Rayker

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಇಲ್ಯುಶಿನ್ - 76 ಅಥವಾ ಐಎಲ್ - 76 ಸೇನಾ ವಿಮಾನ. ಭಾರತೀಯ ಸೇನೆಯ ಈ ಯುದ್ಧ ವಿಮಾನ ಅತಿ ಬೃಹತ್ ಕಾಯ ಹೊಂದಿದ್ದರೂ ಹಿನ್ನಿಲೆಯಲ್ಲಿರುವ ದೈತ್ಯ ಲಡಾಖ್ ಪರ್ವತ ಶ್ರೇಣಿಯ ಮುಂದೆ ಯಾವ ಲೆಕ್ಕಕ್ಕೂ ಇಲ್ಲವೆಂಬಂತೆ ಅನಿಸುವುದಿಲ್ಲವೆ? ಆದರೆ ಇಂತಹ ಪರ್ವತ ಶ್ರೇಣಿಗಳ ಪ್ರದೇಶದಲ್ಲಿ ಈ ಯುದ್ಧ ವಿಮಾನಗಳು ಅತಿ ಉಪಕಾರಿ ಎಂಬುದಂತೂ ಸತ್ಯ.

ಚಿತ್ರಕೃಪೆ: Karunakar Rayker

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಲಡಾಖ್ ನಿಂದ ಝನ್ಸ್ಕಾರ್ ಶ್ರೇಣಿಯ ಉನ್ನತ ಶಿಖರಗಳಲ್ಲೊಂದಾದ ಕುನ್ ಶಿಖರಕ್ಕೆ ಕರೆದೊಯ್ಯುವ ಮಾರ್ಗ.

ಚಿತ್ರಕೃಪೆ: Poonam Agarwal

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಲಡಾಖ್ ಶ್ರೇಣಿಯಲ್ಲಿರುವ ಸ್ಟೋಕ್ - ಕಂಗ್ರಿ ಚಾರಣ ಮಾರ್ಗ. ಇದು ಸಾಮಾನ್ಯವಾದುದಲ್ಲ. ಸಾಕಷ್ಟು ಸಾಮರ್ಥ್ಯವಿರಲೇಬೇಕು. ಈ ಮಾರ್ಗವು ಶ್ರೇಣಿಯ ಉನ್ನತ ಶಿಖರಗಳಲ್ಲೊಂದಾದ ಸ್ಟೋಕ್ ನೆಡೆ ಕರೆದೊಯ್ಯುತ್ತದೆ.

ಚಿತ್ರಕೃಪೆ: Karunakar Rayker

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಲೇಹ್ ಪಟ್ಟಣದಿಂದ ಗೋಚರಿಸುವ ಲಡಾಖ್ ಪರ್ವತ ಶ್ರೇಣಿಯ ವಿಹಂಗಮ ನೋಟ.

ಚಿತ್ರಕೃಪೆ: dustin larimer

ಹಿಮಾಲಯ ಶ್ರೇಣಿಗಳು:

ಹಿಮಾಲಯ ಶ್ರೇಣಿಗಳು:

ಪೂರ್ವ ಕಾರಾಕೋರಂ ಶ್ರೇಣಿಯು ಭಾರತದ ವಲಯದಲ್ಲಿದ್ದು ಸಲ್ಟೊರೊ ಎಂಬ ಉಪ ಪರ್ವತ ಶ್ರೇಣಿಯನ್ನು ಹೊಂದಿದೆ. ಈ ಉಪ ಪರ್ವತ ಶ್ರೇಣಿಯು ಸಲ್ಟೊರೊ ಕಂಗ್ರಿ ಎಮ್ಬ ಉನ್ನತ ಶಿಖರವನ್ನು ಹೊಂದಿದ್ದು ನೋಡಲು ಆಕರ್ಷಕವಾಗಿ ಕಾಣುತ್ತದೆ. ಕಾರಾಕೋರಂ ಶ್ರೇಣಿಯ ಒಮ್ದು ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Guilhem Vellut

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X