• Follow NativePlanet
Share
» »ಪ್ರಪಂಚದ ಅತ್ಯಂತ ದುಬಾರಿ ದುರ್ಗಾ ವಿಗ್ರಹ ಎಲ್ಲಿದೆ ಗೊತ್ತ?

ಪ್ರಪಂಚದ ಅತ್ಯಂತ ದುಬಾರಿ ದುರ್ಗಾ ವಿಗ್ರಹ ಎಲ್ಲಿದೆ ಗೊತ್ತ?

Written By:

ದುರ್ಗ ಮಾತೆಯು ಹಿಂದೂಗಳ ಪವಿತ್ರವಾದ ದೇವತೆ. ಈ ದೇವತೆಯನ್ನು ಪಾರ್ವತಿ ಸ್ವರೂಪಿಯೆಂದೂ ಸಹ ಕರೆಯುತ್ತಾರೆ. ಈ ತಾಯಿಯನ್ನು ಹೆಚ್ಚಾಗಿ ಆರಾಧಿಸುವವರು ಪಶ್ಚಿಮ ಬಂಗಾಳದಲ್ಲಿ. ಅತ್ಯಂತ ವೈಭವದಿಂದ ಈ ತಾಯಿಯನ್ನು ಆರಾಧಿಸುತ್ತಾರೆ.

ಕೋಲ್ಕತ್ತದಲ್ಲಿ ದುರ್ಗಾ ಮಾತೆಯ ಮೂರ್ತಿಯನ್ನು 4 ಕೋಟಿ ಎಂದರೆ ನಂಬುತ್ತೀರಾ? ಇದು ಪ್ರಪಂಚದ ಅತ್ಯಂತ ದುಬಾರಿ ವೆಚ್ಚದ ದುರ್ಗಿಯ ಮೂರ್ತಿ ಎಂದು ಪ್ರಖ್ಯಾತಿ ಪಡೆದಿದೆ. ದುರ್ಗಿ ಎಂದರೆಯೇ ಅತ್ಯಂತ ಭಯಂಕರ ರೂಪತಾಳಿರುವ ಮಾತೆ. ಹಾಗಾಗಿ ಈ ತಾಯಿಯ ದರ್ಶನ ಪಡೆಯಲು ಸಾವಿರಾರು ಭಕ್ತರು ಈ ತಾಯಿಯ ದರ್ಶನ ಕೋರಿ ಇಲ್ಲಿಗೆ ಭೇಟಿ ನೀಡುತ್ತಾರೆ.

ಪ್ರಸ್ತುತ ಲೇಖನದಲ್ಲಿ ಕೋಲ್ಕತ್ತದಲ್ಲಿರುವ ದುಬಾರಿ ದುರ್ಗಿ ದೇವಿಯ ಮೂರ್ತಿಯ ಬಗ್ಗೆ ಲೇಖನದ ಮೂಲಕ ತಿಳಿಯೋಣ.

ಎಲ್ಲಿದೆ?

ಎಲ್ಲಿದೆ?

ಈ ದುರ್ಗಿಯ ಮೂರ್ತಿಯು ಪ್ರಪಂಚದಲ್ಲಿಯೇ ಅತ್ಯಂತ ದುಬಾರಿಯಾದ ಮೂರ್ತಿಯಾಗಿದೆ. ಈ ಮೂರ್ತಿ ಇರುವ ಪವಿತ್ರವಾದ ಸ್ಥಳವೆಂದರೆ ಅದು ಕೋಲ್ಕತ್ತದಲ್ಲಿದ ಅರ್ಗತಾಲದಲ್ಲಿ.

ಶಿಲ್ಪಿ

ಶಿಲ್ಪಿ

ದುರ್ಗಿಯ ಸುಂದರವಾದ ಮೂರ್ತಿಯ ಶಿಲ್ಪಿ ಓರ್ವ ಕಲಾವಿದ ಇಂದ್ರಜಿತ್ ಪೋಡಾರ್. ಈ ದೇವಿಯನ್ನು ಅಮೆರಿಕನ್ ವಜ್ರಗಳು ಹಾಗೂ ಚಿನ್ನವನ್ನು ಬಳಸಿ ದುರ್ಗಿಯನ್ನು ಅಲಂಕರಿಸಿದ್ದಾನೆ.

ಬೆಂಗಾಲಿ

ಬೆಂಗಾಲಿ

ಬೆಂಗಾಲಿಗರು ದುರ್ಗಿ ಆರಾಧಾಕರು. ಪ್ರತಿ ವರ್ಷವು ಅತ್ಯಂತ ವಿಜೃಂಭಣೆಯಿಂದ "ಮಾ ದುರ್ಗಿ"ಯನ್ನು ಆರಾಧಿಸುತ್ತಾರೆ. ಇಂತಹ ಸುಂದರವಾದ ಹಾಗು ಅತ್ಯಂತ ದುಬಾರಿಯಾದ ದುರ್ಗಿಯ ವಿಗ್ರಹ ಪ್ರಪಂಚದಲ್ಲಿಯೇ ಕಾಣಲು ಸಾಧ್ಯವಿಲ್ಲ.

ಭಕ್ತರು

ಭಕ್ತರು

ಈ ದೇವಾಲಯಕ್ಕೆ ಬಂದ ಸಾವಿರಾರು ಭಕ್ತರು ದುರ್ಗಿಯ ಸೌಂದರ್ಯವನ್ನು ಕಂಡು ಬೆರಗಾಗಲೇಬೇಕಾಗಿದೆ. ಏಕೆಂದರೆ ದುರ್ಗಾ ಮಾತಾಳ ಆಭರಣಗಳು, ಅಮೂಲ್ಯವಾದ ಹರಳುಗಳಿಂದ ಅಲಂಕರಿಸಲ್ಪಟ್ಟ ವಿಗ್ರಹವು ಸಾರಾಸರಿ 4 ಕೋಟಿ ಮೌಲ್ಯವಾಗಿದೆ.

ಸಮಯ

ಸಮಯ

ಕಲಾವಿದ ಪೋಡಾರ್ ದುರ್ಗಿಯ ಮೂರ್ತಿಯನ್ನು ಸುಮಾರು 1 ದಶಕಗಳ ಕಾಲ ವಿಗ್ರಹವನ್ನು ತಯಾರಿಸಿದ್ದಾನೆ. ಹಾಗೆಯೇ ಮರದ ತೊಗಟೆ ಅಥವಾ ಚಿಪ್ಪುಗಳು ಮತ್ತು ಮುತ್ತುಗಳ ವಿಶಿಷ್ಟವಾದ ಸಾಮಾಗ್ರಿಗಳಿಂದ ಪ್ರಯೋಗವನ್ನು ಮಾಡುತ್ತಿದ್ದರು.

ಪೋಡಾರ್

ಪೋಡಾರ್

ಪೊಡಾರ್‍ರವರು 2014ರಲ್ಲಿ ಮುತ್ತುಗಳನ್ನು ಬಳಸಿ ಕೆತ್ತಿದ ವಿಗ್ರಹಗಳನ್ನು ತಯಾರಿಸಿದ್ದರು. ಆ ವಿಗ್ರಹವನ್ನು ಅರ್ಗತಲಾದ ಉಜ್ಜಂತ ಅರಮನೆಯಲ್ಲಿ ಸಂರಕ್ಷಿಸಿ ಇಡಲಾಗಿದೆ.

ಸ್ಥಾಪನೆ

ಸ್ಥಾಪನೆ

ಈ ವೈಭವದಿಂದ ಕೂಡಿರುವ ದುರ್ಗಿಯ ವಿಗ್ರಹವನ್ನು ಅರ್ಗತಲಾದ ಉಜ್ಜಂತ ಅರಮನೆಯಲ್ಲಿ ಸ್ಥಾಪಿಸಲಾಗಿದೆ.

ದುರ್ಗಾ ದೇವಿ ಮೂರ್ತಿ

ದುರ್ಗಾ ದೇವಿ ಮೂರ್ತಿ

ಸುಂದರವಾದ ದುರ್ಗಾ ದೇವಿಯ ಮೂರ್ತಿಯು 10.5 ಅಡಿ ಎತ್ತರವಾಗಿದ್ದು, ಸುಮಾರು 4 ಕೋಟಿ ವೆಚ್ಚದ್ದಾಗಿದೆ. ಇಲ್ಲಿ ಲಕ್ಷ್ಮಿ, ಗಣೇಶ ವಿಗ್ರಹಗಳನ್ನು ಕೂಡ ಕಾಣಬಹುದಾಗಿದೆ.

ಸಿ.ಸಿ.ಟಿ.ವಿ

ಸಿ.ಸಿ.ಟಿ.ವಿ

ವಿಗ್ರಹವು ದುಬಾರಿಯಾಗಿರುವುದರಿಂದ ಬಿಗಿ ಬಂದೊಬಸ್ತ್‍ಗಾಗಿ ಸಿ.ಸಿ.ಟಿ.ವಿ ಅಳವಡಿಸಿದ್ದಾರೆ. ಹಾಗೆಯೇ ವಿಗ್ರಹದ ಕಾವಲಿಗೆ ಪೊಲೀಸರು ಕೂಡ ರಕ್ಷಣೆಯನ್ನು ನೀಡುತ್ತಿದ್ದಾರೆ.

22 ಕಾರಟ್ ಚಿನ್ನ

22 ಕಾರಟ್ ಚಿನ್ನ

ಅಗರ್ತಲಾದಲ್ಲಿನ ದುರ್ಗಾ ದೇವಿಯು 22 ಕಾರಟ್‍ನ ಚಿನ್ನದ ಮೂರ್ತಿಯಾಗಿದೆ. ಇಲ್ಲಿ ಬೇರೆ ದೇವತಾ ಮೂರ್ತಿಗಳ ವಿಗ್ರಹವೂ ಕೂಡ ಕಾಣಬಹುದಾಗಿದೆ.

ತಲುಪುವ ಬಗೆ?

ತಲುಪುವ ಬಗೆ?

ಈ ಸುಂದರವಾದ ಹಾಗೂ ದುಬಾರಿಯಾದ ದುರ್ಗಿಯ ವಿಗ್ರಹವು ಕೋಲ್ಕತ್ತಾದ ಬಾಣಿಪುರದ ಅಗರ್ತಲಾದಲ್ಲಿದೆ. ಕೋಲ್ಕಾತ್ತದಿಂದ ಬಾಣಿಪುರಕ್ಕೆ ಸುಮಾರು 60 ಕಿ,ಮೀ ದೂರದಲ್ಲಿದೆ.

ಸಮೀಪದ ವಿಮಾನ ಮಾರ್ಗ

ಸಮೀಪದ ವಿಮಾನ ಮಾರ್ಗ

ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಕೋಲ್ಕತ್ತ ಇಲ್ಲಿಂದ ಸುಮಾರು 60 ಕಿ,ಮೀ ದೂರವಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ