Search
  • Follow NativePlanet
Share
» »ಭಾರತದ ಈ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಡ್ರೈವಿಂಗ್ ಮಾಡುವ ಧೈರ್ಯವಿದೆಯೇ?

ಭಾರತದ ಈ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಡ್ರೈವಿಂಗ್ ಮಾಡುವ ಧೈರ್ಯವಿದೆಯೇ?

By Manjula Balaraj Tantry

ನೀವು ಯಾವುದಾದರೂ ದೃಶ್ಯಾವಳಿಗಳಿರುವ ರಸ್ತೆಗಳಲ್ಲಿ ಫೋಟೋ ಕ್ಲಿಕ್ ಮಾಡಿಕೊಂಡು ಮತ್ತು ರಸ್ತೆ ಬದಿಯ ವಿನೋದಗಳನ್ನು ಅನುಭವಿಸುತ್ತಾ, ಒಂದು ಕೈ ಯನ್ನು ನಿಮ್ಮ ವಾಹನದ ಸ್ಟಿಯರಿಂಗ್ ಮೇಲೆ ಮತ್ತು ಇನ್ನೊಂದು ಕೈಯನ್ನು ರೇಡಿಯೋ ಕೇಂದ್ರ ಅಥವಾ ಇನ್ನಿತರ ಹಾಡುಗಳನ್ನು ಕೇಳುತ್ತಾ ಎಂದಾದರೂ ಸುತ್ತಾಡಿರುವಿರಾ?

ಈ ಕಥೆಯು ನಿಮಗಾಗಿ ಅಲ್ಲ ಇದು ಭಾರತದ ಅತ್ಯಂತ ಅಪಾಯಕಾರಿ ರಸ್ತೆಗಳ ಬಗ್ಗೆ ಆಗಿದೆ. ಇಂತಹ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ಒಂದು ಗಂಭೀರವಾದ ವಿಷಯವಾಗಿದ್ದು ಇದಕ್ಕಾಗಿ ನುರಿತ ಚಾಲಕರ ಅವಶ್ಯಕತೆಯಿರುತ್ತದೆ.

1. ಲೇಹ್ - ಮನಾಲಿ ಹೆದ್ದಾರಿ

1. ಲೇಹ್ - ಮನಾಲಿ ಹೆದ್ದಾರಿ

ಈ ಕಠಿಣವಾದ ಭೂ ಪ್ರದೇಶದಲ್ಲಿ ಚಾಲನೆ ಮಾಡುವುದು ಅತ್ಯಂತ ಕಷ್ಟಕರ ಮತ್ತು ಸವಾಲಾಗಿದೆ. ಭಾರತವು ಕೆಟ್ಟರಸ್ತೆಗಳನ್ನು ಹೊಂದಿದ ದೇಶವೆಂಬ ಕುಖ್ಯಾತಿ ಹೊಂದಿದ್ದರೂ ಇದರಲ್ಲಿ ಸವಾರಿ ನಡೆಸಲಾಗುತ್ತದೆ. ಲೇಹ್ - ಮನಾಲಿ ಹೆದ್ದಾರಿಯು ದೇಶದ ಒಂದು ಅತ್ಯಂತ ಸುಂದರವಾದ ರಸ್ತೆಗಳಲ್ಲಿ ಒಂದಾಗಿದ್ದು ಎಷ್ಟು ಸುಂದರವಾಗಿದೆಯೋ ಅಷ್ಟೇ ಅಪಾಯಕಾರಿಯೂ ಆಗಿದೆ. ಸುಮಾರು 490 ಕಿ.ಮೀ ಗಳಷ್ಟು ಉದ್ದಕ್ಕೆ ಹಬ್ಬಿರುವ ಈ ರಸ್ತೆಯು ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರಗಳ ಮೂಲಕ ಹಾದು ಹೋಗುತ್ತದೆ.

ಈ ರಸ್ತೆಯಲ್ಲಿ ಪ್ರಯಾಣಿಸುವಾಗ ಚಾಲಕನು ಹೆಚ್ಚಿನ ಪ್ರಮಾಣದಲ್ಲಿ ಜಾಗರೂಕನಾಗಿರಬೇಕು ಮತ್ತು ಗಮನವನ್ನು ರಸ್ತೆಯಲ್ಲಿಯೇ ಕೇಂದ್ರೀಕರಿಸಬೇಕಾಗುತ್ತದೆ. ಇಲ್ಲಿ ಹವಾಮಾನವು ಅತ್ಯಂತ ಚಳಿಯುಳ್ಳದ್ದಾಗಿದೆ ಮತ್ತು ಯಾವುದೇ ಮನುಷ್ಯರು ತಿರುಗಾಡುವುದು ದಾರಿಯುದ್ದಕ್ಕೂ ಕಾಣ ಸಿಗುವುದಿಲ್ಲ. ತುರ್ತು ಪರಿಸ್ಥಿತಿಗಳಿಗಾಗಿ ಹೆಚ್ಚುವರಿ ಇಂಧನವನ್ನು ನಿಮ್ಮ ಜೊತೆಗೆ ಒಯ್ಯುವುದು ಒಳಿತು.

2. ಜೋಜಿ ಲಾ ಪಾಸ್ ನ ಹಾದಿ

2. ಜೋಜಿ ಲಾ ಪಾಸ್ ನ ಹಾದಿ

ಸಮುದ್ರ ಮಟ್ಟದಿಂದ 11575 ಅಡಿ ಎತ್ತರದಲ್ಲಿ ನೆಲೆಸಿರುವ ಝೊಜಿ ಲಾ ಪಾಸ್ ಸುಮಾರು 9 ಕಿ.ಮೀ ದೂರದಲ್ಲಿದೆ ಮತ್ತು ಈ ಕಲ್ಲಿನ ಬಂಡೆಯ ಮೂಲಕ ಹಾದು ಹೋಗುವುದು ಮಕ್ಕಳ ಆಟವಲ್ಲ. ಶ್ರೀನಗರ ಮತ್ತು ಲೇಹ್ ರಾಷ್ಟ್ರೀಯ ಹೆದ್ದಾರಿ 1 ರಲ್ಲಿರುವ ಇದು ಹಿಮಾಲಯದ ಪಶ್ಚಿಮ ಭಾಗವಾಗಿದೆ.

ಪೋಟು ಲಾ ನಂತರ ಎರಡನೇ ಅಪಾಯಕಾರಿ ದಾರಿಯೆನಿಸಿರುವ ಇದು ಹೆಚ್ಚಾಗಿ ಕೆಟ್ಟ ಹವಾಮಾನದ ಕಾರಣದಿಂದಾಗಿ ಚಳಿಗಾಲದಲ್ಲಿ ಮುಚ್ಚಿರುತ್ತದೆ. ಒಮ್ಮೆ ನೀವು ಇಲ್ಲಿಗೆ ಹೋಗಲು ಯೋಚನೆ ಮಾಡಿದಲ್ಲಿ, ಹಿಮಾಲಯದ ಅಮೂಲ್ಯವಾದ ನೋಟವನ್ನು ಅನುಭವಿಸುವುದು ಜೀವನದ ಒಂದು ಅತ್ಯಂತ ರೋಚಕ ಅನುಭವವಾಗಿದೆ. ನೀವು ಇಲ್ಲಿರುವಾಗ ಅತ್ಯಂತ ಜಾಗರೂಕತೆಯಿಂದ ವಾಹನವನ್ನು ಚಲಾಯಿಸಿ ನಿಮ್ಮ ವಾಹನದ ಮೇಲೆ ಹಿಡಿತವಿಟ್ಟುಕೊಂಡರೆ ನೀವು ಈ ರೋಮಾಂಚಕ ಸವಾರಿಯ ಅನುಭವವನ್ನು ಆನಂದಿಸಬಹುದಾಗಿದೆ.

3. ಖಾರ್ದಾಂಗ್ ಲಾ ಪಾಸ್ ಹಾದಿ

3. ಖಾರ್ದಾಂಗ್ ಲಾ ಪಾಸ್ ಹಾದಿ

ಶ್ಯೋಕ್ ಮತ್ತು ನುಬ್ರಾ ಕಣಿವೆ ಯು ಒಂದು ಗೇಟ್ವೇ ಆಗಿದ್ದು ಖರ್ದಾಂಗ್ ಲಾ ವಿಶ್ವದ ಅತ್ಯಂತ ಎತ್ತರದ ಮೋಟಾರು ವಾಹನ ಚಲಾಯಿಸಬಹುದಾದಂತಹ ರಸ್ತೆ ಯಾಗಿದ್ದು, ಇದು ಲೇಹ್ ನಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. ಇದು ಕಾರಂಕೋರಮ್ ಶ್ರೇಣಿಯಲ್ಲಿರುವ ಈ ರಸ್ತೆಗಳು ಪರ್ವತವನ್ನು ಸುತ್ತಿಕೊಂಡು ಹಾದು ಹೋಗುವುದರಿಂದ ಇದು ಕಣಿವೆಯ ಕೆಲವು ಬೆರಗುಗೊಳಿಸುವಂತಹ ನೋಟವನ್ನು ಒದಗಿಸಿಕೊಡುತ್ತದೆ.ನೀವೇನಾದರೂ ಸಾಹಸ ಪ್ರವೃತ್ತಿಯವರಾಗಿದ್ದಲ್ಲಿ, ಇದು ಅತ್ಯಂತ ಹೆಚ್ಚಿನ ರೋಚಕ ಅನುಭವವನ್ನು ನೀಡುತ್ತದೆ. ಈ ಡ್ರೈವ್ ನಿಮ್ಮ ಮುಂದಿನಪಟ್ಟಿಯಲ್ಲಿರಬೇಕಾದುದು.

ಕಾರು ಮತ್ತು ಮೋಟಾರು ಬೈಕುಗಳಲ್ಲಿಯ ನಿಮ್ಮ ಸವಾರಿಯನ್ನು ಈ ಪಾಸ್ ಗಳಲ್ಲಿ ಹಾದುಹೋಗುವಾಗ ಸುಗಮಗೊಳಿಸಲು ಲೇಹ್ ನಿಂದ ಖರ್ದಾಂಗ್ ಲಾಗೆ 9 ರಿಂದ 1 ಗಂಟೆವರೆಗೆ ಮತ್ತು 1 ರಿಂದ 5 ಗಂಟೆಗೆ ಖರ್ದಾಂಗ್ ಲಾ ನಿಂದ ಲೆಹ್ಗೆ 1 ಗಂಟೆವರೆಗೆ ಪ್ರಯಾಣದ ಅನುಮತಿ ನೀಡಲಾಗುತ್ತದೆ. ಇಲ್ಲಿ ಹವಾಮಾನವು ಅತ್ಯಂತ ಕೆಟ್ಟದಾಗಿರುವುದರಿಂದ ನೀವು ಎಲ್ಲಾ ಕೆಟ್ಟ ಪರಿಣಾಮಗಳನ್ನು ಎದುರಿಸಲು ಸಿದ್ದರಾಗಿರಬೇಕಾಗುತ್ತದೆ. ಮೇ ಮತ್ತು ಅಕ್ಟೋಬರ್ ನಡುವಿನ ತಿಂಗಳುಗಳನ್ನು ಇಲ್ಲಿ ಡ್ರೈವಿಂಗ್ ಮಾಡಲು ಹೆಚ್ಚು ಸೂಕ್ತವೆಂದು ಪರಿಗಣಿಸಲಾಗುತ್ತದೆ.

4. ರೋಹ್ತಾಂಗ್ ಪಾಸ್ ಹಾದಿ

4. ರೋಹ್ತಾಂಗ್ ಪಾಸ್ ಹಾದಿ

ಲಾಹೋಲ್ -ಸ್ಪಿತಿ ಮತ್ತು ಲೇಹ್ ಗೆ ಒಂದು ಗೇಟ್ವೆಯಾಗಿರುವ ರೋಹ್ತಾಂಗ್ ಪಾಸ್ ಒಂದು ಅತ್ಯಂತ ಪ್ರಸಿದ್ದವಾದುದಾಗಿದೆ ಮತ್ತು ಉತ್ತರ ಭಾರತದಲ್ಲಿಯ ಅತ್ಯಂತ ಎತ್ತರದಲ್ಲಿಯ ಪಾಸ್ ಎನಿಸಿದೆ. ಮನಾಲಿಯಿಂದ ಸುಮಾರು 53ಕಿ.ಮೀ ಅಂತರದಲ್ಲಿರುವ ರೋಹ್ತಾಂಗ್ ಪಾಸ್ ಒಂದು ಅತ್ಯಂತ ಘಾತಕ ಸವಾರಿಯಾಗಿದ್ದರೂ ತನ್ನಲ್ಲಿಯ ಪ್ರಯಾಣಿಕರಿಗೆ ಕಣಿವೆಗಳ, ಹಿಮನದಿಗಳ, ಪರ್ವತ ಶ್ರೇಣಿಗಳು ಮತ್ತು ಚಂದ್ರಾ ನದಿಯ ಒಂದು ರೋಮಾಂಚಕ ನೋಟವನ್ನು ಒದಗಿಸಿ ಕೊಡುತ್ತದೆ. ಇದರ ನೋಟವು ತಪ್ಪಿಸಿಕೊಳ್ಳಲೇ ಬಾರದಂತಹುದಾಗಿದೆ ಆದರೆ ಇಲ್ಲಿ ವಾಹನವನ್ನು ಚಲಾಯಿಸುವಾಗ ಅತ್ಯಂತ ಎಚ್ಚರ ವಹಿಸಬೇಕಾಗುತ್ತದೆ. ಈ ಪಾಸ್ ಜೂನ್ ನಿಂದ ಅಕ್ಟೋಬರ್ ತಿಂಗಳುಗಳ ಮಧ್ಯದ ಅವಧಿಯಲ್ಲಿ ತರೆದಿರುತ್ತದೆ ಮತ್ತು ಅನೇಕ ಪ್ರವಾಸಿಗರನ್ನು ಈ ಸಮಯದಲ್ಲಿ ಆಕರ್ಷಿಸುತ್ತದೆ.

5. ನಾಥು ಲಾ ಪಾಸ್

5. ನಾಥು ಲಾ ಪಾಸ್

ಭಾರತ ಮತ್ತು ಚೀನಾ ನಡುವಿನ ಮೂರು ವಹಿವಾಟುಗಳಲ್ಲಿ ಒಂದಾದ ನಾಥು ಲಾ ಪಾಸ್ ಸಮುದ್ರ ಮಟ್ಟದಿಂದ 4310 ಮೀ ಎತ್ತರದಲ್ಲಿದೆ ಮತ್ತು ಪೂರ್ವ ಸಿಕ್ಕಿಂನ ಪ್ರಾಚೀನ ಸಿಲ್ಕ್ ಮಾರ್ಗದ ಭಾಗವಾಗಿದೆ. ಇದರಲ್ಲಿ ಹಾದು ಹೋಗುವ ರಸ್ತೆಗಳು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದ್ದರೂ ಪ್ರಯಾಣ ಮಾಡಲು ಇದು ಅತ್ಯಂತ ಸುಂದರವಾದುದಾಗಿದೆ. ಈ ಪಾಸ್ ಭಾರತದ ಮತ್ತು ಚೀನಾ ಮಿಲಿಟರಿ ಪೋಸ್ಟ್ ನ ಗೇಟ್ವೇ ನೆಲೆಯಾಗಿದೆ. ಈ ರಸ್ತೆಗಳಲ್ಲಿ ಪ್ರಯಾಣಿಸುವಾಗ ನೀವು ಇಲ್ಲಿಯ ಅತೀ ಅದ್ಬುತವಾದ ಮತ್ತು ಪ್ರವಾಸಿ ಆಕರ್ಷಣೆ ಎನಿಸಿರುವ ತ್ಸೋಮ್ಗೊ ಸರೋವರ ಮತ್ತು ಬಾಬಾ ಹರ್ಭಜನ್ ಮಂದಿರವನ್ನು ಕಾಣಬಹುದು. ಚಳಿಗಾಲದಲ್ಲಿ ಈ ಪಾಸ್ ನಲ್ಲಿ ಅತ್ಯಂಟ ಹಿಮಪಾತವಾಗುತ್ತದೆ ಆದುದರಿಂದ ಇಲ್ಲಿಗೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ಅದು ಬೇಸಿಗೆ ಕಾಲದಲ್ಲಿ.

6. ಕೊಲ್ಲಿ ಬೆಟ್ಟಗಳು

6. ಕೊಲ್ಲಿ ಬೆಟ್ಟಗಳು

ತಮಿಳುನಾಡಿನ ಕೇಂದ್ರದಲ್ಲಿರುವ 47 ಕಿ.ಮೀ ಗಳಷ್ಟು ಹರಡಿಕೊಂಡಿರುವ ಕೊಲ್ಲಿ ಬೆಟ್ಟಗಳು ಅತ್ಯಂತ ಅಪಾಯಕಾರಿಯಾದ ಪರ್ವತ ರಸ್ತೆಯಾಗಿದೆ ನಿರಂತರವಾಗಿ 70 ಕೂದಲೆಳೆಯ ಬಾಗುವಿಕೆಯಂತಿರುವ ಇದು ಬೈಕ್ ಸವಾರರಲ್ಲಿ ಅತ್ಯಂತ ಜನಪ್ರಿಯವಾದುದಾಗಿದೆ. ಇದನ್ನು ಅಕ್ಷರಶಃ ವಾಗಿಯೂ " ಸಾವುಗಳ ಬೆಟ್ಟ" (ಮೌಂಟನ್ಸ್ ಆಫ್ ಡೆತ್) ಎಂದು ಕರೆಯಲಾಗುತ್ತದೆ. ಈ ದಾರಿಯು ಕೆಲವು ಕೆಟ್ಟ ಪೊದೆಗಳು ಮತ್ತು ರಂಧ್ರಗಳನ್ನು ಹೊಂದಿದ್ದು ಇದು ಸವಾರಿಯನ್ನು ತುಂಬಾ ಕಷ್ಟಕರಗೊಳಿಸುತ್ತದೆ.

ಆದರೆ ಇದರ ಕೆಳಭಾಗದ ಕಣಿವೆಗಳಲ್ಲಿ ಕಾಣುವ ನೋಟವು ಅತ್ಯಂತ ಸ್ವಚ್ಚವಾಗಿದೆ ಮತ್ತು ಸುತ್ತಮುತ್ತಲೂ ದಟ್ಟವಾದ ಉಷ್ಣವಲಯದ ಕಾಡುಗಳನ್ನು ಹೊಂದಿರುವುದು ಇದರ ಸೌಂದರ್ಯತೆಗೆ ಇನ್ನಷ್ಟು ಮೆರುಗನ್ನು ನೀಡುತ್ತದೆ. ರೋಮಾಂಚಕ ಅನುಭವವನ್ನು ಇಷ್ಟ ಪಡುವವರಿಗೆ ಒಂದು ವಿಭಿನ್ನ ಅನುಭವವನ್ನು ನೀಡುತ್ತದೆ. ಈ ಅಂಕುಡೊಂಕಾದ ರಸ್ತೆಗಳು ಪ್ರತಿ ಬೈಕ್ ಸವಾರರು ತನ್ನ ಸೇರಿಸಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ ಆದರೆ ನೀವು ಅದನ್ನು ಹಾದುಹೋಗುವಾಗ ಅತ್ಯಂತ ಜಾಗರೂಕರಾಗಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X