Search
  • Follow NativePlanet
Share
» »ಈ ಬಾರಿ ಕೇರಳಕ್ಕೆ ಹೋದ್ರೆ 19ನೇ ಶತಮಾನದ ಬೋಟ್‌ಹೌಸ್‌ನತ್ತ ಹೋಗ್ಲೇ ಬೇಕು ಯಾಕೆ ಗೊತ್ತಾ?

ಈ ಬಾರಿ ಕೇರಳಕ್ಕೆ ಹೋದ್ರೆ 19ನೇ ಶತಮಾನದ ಬೋಟ್‌ಹೌಸ್‌ನತ್ತ ಹೋಗ್ಲೇ ಬೇಕು ಯಾಕೆ ಗೊತ್ತಾ?

ಕೇರಳವು ಇಡೀ ದೇಶದಲ್ಲಿ ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿರುವ ರಾಜ್ಯವಾಗಿದೆ. ದೇವರ ನಾಡು ಎಂದೇ ಕರೆಯಲಾಗುವ ಕೇರಳದಲ್ಲಿ ಅನೇಕ ಪ್ರೇಕ್ಷಣೀಯ ತಾಣಗಳಿವೆ. ಪ್ರಕೃತಿ ಸೌಂದರ್ಯದಿಂದ ಹಚ್ಚ ಹಸಿರುನಿಂದ ಕೂಡಿರುವ ಈ ಪ್ರದೇಶವು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.

ಕೊಯಮತ್ತೂರು-ಬೆಂಗಳೂರಿಗೆ ಬಂದಿದೆ ಡಬಲ್ ಡೆಕ್ಕರ್ ರೈಲುಕೊಯಮತ್ತೂರು-ಬೆಂಗಳೂರಿಗೆ ಬಂದಿದೆ ಡಬಲ್ ಡೆಕ್ಕರ್ ರೈಲು

ಭಾರತದಲ್ಲಿನ ಕೆಲವು ಅತಿವಾಸ್ತವಿಕ ಅನುಭವಗಳಿಗೆ ಕೇರಳವು ನೆಲೆಯಾಗಿದೆ. ಇದು ಎಲ್ಲಾ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೇರಳದ ವಲ್ಲಕಾಡು ಬೋಟ್‌ಹೌಸ್‌ನ್ನು ನೀವು ನೋಡಿರಬಹುದು. ಒಂದು ವೇಳೆ ನೋಡಿಲ್ಲವೆಂದಾದರೆ ಅಥವಾ ಈ ಹಿಂದೆ ನೋಡಿದ್ದಿರೆಂದಾದರೂ ನೀವು ಈಗ ಅಲ್ಲಿಗೆ ಹೋಗಲೇಬೇಕು ಯಾಕೆಂದರೆ ಅಲ್ಲಿನ ಪ್ರವಾಸಿತಾಣವನ್ನು ಇನ್ನಷ್ಟು ಸುಂದರಗೊಳಿಸಲು ಹೊಸದೊಂದು ಪ್ರಯತ್ನ ನಡೆದಿದೆ.

ವಲ್ಲಕಾಡು ಬೋಟ್‌ಹೌಸ್‌

ವಲ್ಲಕಾಡು ಬೋಟ್‌ಹೌಸ್‌

PC:Arun Sinha

ಟ್ರಿವಂಡ್ರಮ್‌ನಲ್ಲಿರುವ 19 ನೇ ಶತಮಾನದ ಹಳೆಯ ವಲ್ಲಕಾಡು ಬೋಟ್‌ಹೌಸ್‌ ನಲ್ಲಿ ನಿರ್ಮಿಸಲಾಗಿರುವ ಈ ಹೊಸ ಜೀವವೈವಿಧ್ಯ ವಸ್ತುಸಂಗ್ರಹಾಲಯವು ದೇಶದಲ್ಲೇ ಮೊದಲ ಜೀವವೈವಿಧ್ಯ ವಸ್ತುಸಂಗ್ರಹಾಲಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಜೂನ್ 5, 2018 ರಂದು ಉದ್ಘಾಟನೆಯಾಗಿದ್ದು, ಇದೀಗ ಸಾರ್ವಜನಿಕರಿಗೆ ತೆರೆಯಲಾಗಿದೆ.

ಬೆಂಗಳೂರಿನಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದೀರಾ?ಬೆಂಗಳೂರಿನಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದೀರಾ?

ಜೀವವೈವಿಧ್ಯ ವಸ್ತುಸಂಗ್ರಹಾಲಯ

ಜೀವವೈವಿಧ್ಯ ವಸ್ತುಸಂಗ್ರಹಾಲಯ

ಕೇರಳ ಸ್ಟೇಟ್ ಬಯೋಡೈವರ್ಸಿಟಿ ಬೋರ್ಡ್ (ಕೆಎಸ್ಎಸ್ಬಿ) , ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ, ಕೇರಳ ರಾಜ್ಯ ಕರಾವಳಿ ಪ್ರದೇಶ ಅಭಿವೃದ್ಧಿ ನಿಗಮ ಮತ್ತು ಕೇರಳ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (ಕೆಲ್ಟ್ರಾನ್) ಮುಂದಾಳತ್ವದಲ್ಲಿ ಈ ಮ್ಯೂಸಿಯಂನ್ನು ಆರಂಭಿಸಲಾಗಿದೆ. ಕೇರಳಕ್ಕೆ ಹೋದರೆ ಇದನ್ನು ಖಂಡಿತವಾಗಿ ನೋಡಲೇ ಬೇಕು.

ಪ್ರಮುಖ ಆಕರ್ಷಣೆಗಳು

ಪ್ರಮುಖ ಆಕರ್ಷಣೆಗಳು

50-ಆಸನ ವ್ಯವಸ್ಥೆಯುಳ್ಳ 3D ಥಿಯೇಟರ್, ಸ್ಕೇಲ್ ಮಾಡೆಲ್ಸ್, ಇಂಟರಾಕ್ಟಿವ್ ಕಿಯೋಸ್ಕ್ಗಳು ಮತ್ತು ಎಲ್ಸಿಡಿಗಳು
ಒಂದು ಗೋಳದ ಮೇಲೆ ವಿಜ್ಞಾನ (SOS) ಪ್ರೊಜೆಕ್ಷನ್ ವ್ಯವಸ್ಥೆ
ಜೀವವೈವಿಧ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರದರ್ಶಿಸುವ ಕೆಲವು ಗ್ಯಾಲರಿಗಳು
ರಾಜ್ಯದ ಸಾಂಪ್ರದಾಯಿಕ ಅಕ್ಕಿ, ಕಡಲ ವೈವಿಧ್ಯತೆ ಮತ್ತು ಕಡಲ ಜೀವನದ ಬಗೆಗಿನ ಕೆಲವು ತಿಳಿವಳಿಕೆ ಫಲಕಗಳು
ಆಕ್ವಾಸ್ಕಪ್ಡ್ ಪರಿಸರ

 2013ರಲ್ಲೇ ಆರಂಭವಾಗಿದ್ದ ಕೆಲಸ

2013ರಲ್ಲೇ ಆರಂಭವಾಗಿದ್ದ ಕೆಲಸ

PC: Augustus Binu

ಈ ಎಲ್ಲಾ ವ್ಯವಸ್ಥೆಯನ್ನು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. ಇವುಗಳು ಪ್ರವಾಸಿಗರಿಗೆ ಜೀವವೈವಿಧ್ಯ ಸಂಭಾಷಣೆಯ ಪ್ರಾಮುಖ್ಯತೆಯ ತಿಳಿಯಪಡಿಸುವಲ್ಲಿ ಸಹಕಾರಿಯಾಗಿದೆ. ಈ ಜೀವವೈವಿದ್ಯ ವಸ್ತು ಸಂಗ್ರಹಾಲಯವು ಇತ್ತೀಚೆಗಷ್ಟೇ ಆರಂಭವಾಗಿದ್ದರೂ ಇತರ ಕೆಲಸ 2013ರಲ್ಲೇ ಆರಂಭವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X