Search
  • Follow NativePlanet
Share
» »ಕೆಂಪುಕೋಟೆ ಸೇರಿದಂತೆ ಈ ಐತಿಹಾಸಿಕ ಸ್ಮಾರಕಗಳನ್ನು ದತ್ತು ಪಡೆದವರು ಯಾರು ?

ಕೆಂಪುಕೋಟೆ ಸೇರಿದಂತೆ ಈ ಐತಿಹಾಸಿಕ ಸ್ಮಾರಕಗಳನ್ನು ದತ್ತು ಪಡೆದವರು ಯಾರು ?

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಅಡಾಪ್ಟ್‌ ಎ ಹೆರಿಟೇಜ್ ಸ್ಕೀಮ್ ಅಡಿಯಲ್ಲಿ ಐತಿಹಾಸಿಕ ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳಲಾಗುತ್ತಿದೆ. ಈ ಸ್ಕೀಮ್‌ನಡಿಯಲ್ಲಿ ಆ ಸ್ಮಾರಕದ ಮೈಂಟೇನೆನ್ಸ್‌, ಅಭಿವೃದ್ಧಿ ಹಾಗೂ ಅದನ್ನು ಸರಿಯಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ವೈಯಕ್ತಿಕ ಕೈಯಲ್ಲಿ ನೀಡಲಾಗುತ್ತದೆ. ಅವುಗಳಲ್ಲಿ ಕೆಂಪುಕೋಟೆ ಸೇರಿದಂತೆ ದೆಹಲಿಯ 5 ಐತಿಹಾಸಿಕ ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳಲಾಗಿದೆ. ಅವುಗಳ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಸೂಕ್ತ ಅಭ್ಯರ್ಥಿಗಳನ್ನೂ ಆರಿಸಲಾಗಿದೆ.

ದತ್ತು ಪಡೆದವರು ಯಾರು ?

ದತ್ತು ಪಡೆದವರು ಯಾರು ?

ರಾಜ್ಯ ಸರ್ಕಾರದ ಜೊತೆಗ ಸಹಿ ಮಾಡಲಾಗಿರುವ ಎಮ್‌ಓಯುನಂತರ ಡಾಲ್ಮೀಯಾ ಭಾರತ್ ಗ್ರೂಪ್ ಗೆ ಕೆಂಪು ಕೋಟೆಯ ಸ್ಮಾರಕ ಸ್ನೇಹಿತನಾಗಿ ಆಯೋಜಿಸಲಾಗಿದೆ. ಕೈಪರ್ ಟ್ರಾವೆಲ್‌ ಕಂಪನಿಯನ್ನು ಉಳಿದ ನಾಲ್ಕು ಐತಿಹಾಸಿಕ ಸ್ಮಾರಕಗಳ ಸ್ನೇಹಿತನಾಗಿ ಆಯ್ಕೆ ಮಾಡಲಾಗಿದೆ.

ಐತಿಹಾಸಿಕ ಸ್ಥಳಗಳನ್ನು ದತ್ತು ಪಡೆಯುತ್ತವೆ ಕಂಪನಿ

ಐತಿಹಾಸಿಕ ಸ್ಥಳಗಳನ್ನು ದತ್ತು ಪಡೆಯುತ್ತವೆ ಕಂಪನಿ

ಕೇಂದ್ರೀಯ ಪರ್ಯಾವರಣ ಮಂತ್ರಾಲಯವು ಡೆವಲಪ್‌ಮೆಂಟ್‌ ಆಫ್ ಫ್ರೆಂಡ್ಲೀ ಡೆಸ್ಟಿನೇಶನ್ ಪ್ರಾಜೆಕ್ಟ್ 2017ರಲ್ಲಿ ಪ್ರಾರಂಭಿಸಿತ್ತು. ಈ ಯೋಜನೆಯ ಪ್ರಕಾರ ಕಾರ್ಪರೆಟ್‌ ಹೌಸ್‌ಗಳು ಮಂತ್ರಾಲಯದ ಜೊತೆ ಅಗ್ರಿಮೆಂಟ್ ಮಾಡಿಕೊಂಡು ಐತಿಹಾಸಿಕ ಸ್ಥಳಗಳನ್ನು ದತ್ತು ಪಡೆದುಕೊಳ್ಳುತ್ತವೆ.

 ಅಜೀಮ್‌ ಖಾನ್‌ ಸಮಾಧಿ

ಅಜೀಮ್‌ ಖಾನ್‌ ಸಮಾಧಿ

PC:Mohitnarayanan

ಅಜೀಮ್ ಖಾನ್ ಮೊಘಲ್ ಸೇನೆಯ ಜನರಲ್ ಆಗಿದ್ದರು. ಅವರ ಸಮಾಧಿಯು ದೆಹಲಿಯ ಗುಡ್‌ಗಾಂವ್‌ ರೋಜ್‌ನಲ್ಲಿ ಸಣ್ಣ ಬೆಟ್ಟದ ಮೇಲೆ ಇದೆ. ಈ ಸಮಾಧಿಯನ್ನು 17 ನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. ಐತಿಹಾಸಿಕ ಮಹತ್ವ ಹೊಂದಿರುವ ಸ್ಮಾರಕಗಳಲ್ಲಿ ಇವನ್ನು ಸೇರಿಸಲಾಗಿದೆ.

ಈ ಊರಿಗೆಲ್ಲಾ ರೈಲಿನಲ್ಲಿ ಪ್ರಯಾಣಿಸೋದಕ್ಕಿಂತ ವಿಮಾನದಲ್ಲಿ ಪ್ರಯಾಣಿಸೋದೇ ಅಗ್ಗ ಈ ಊರಿಗೆಲ್ಲಾ ರೈಲಿನಲ್ಲಿ ಪ್ರಯಾಣಿಸೋದಕ್ಕಿಂತ ವಿಮಾನದಲ್ಲಿ ಪ್ರಯಾಣಿಸೋದೇ ಅಗ್ಗ

ಜಮಾಲಿ-ಕಮಾಲಿ

ಜಮಾಲಿ-ಕಮಾಲಿ

PC:Varun Shiv Kapur

ದೆಹಲಿಯ ಮಹರೋಲಿಯಲ್ಲಿರುವ ಆರ್ಕಿಯೋಲಾಜಿಕಲ್ ಕಾಂಪ್ಲೆಕ್ಸ್‌ನಲ್ಲಿ ಒಂದಕ್ಕೊಂದು ಹತ್ತಿರ ಎರಡು ಸ್ಮಾರಕವನ್ನು ನಿರ್ಮಿಸಲಾಗಿದೆ. ಇದರಲ್ಲಿ ಒಂದು ಮಸೀದಿ. ಇನ್ನೊಂದು ಜಮಾಲಿ-ಕಮಾಲಿಯ ಸಮಾಧಿಯಾಗಿದೆ. ಮೊಘಲ್ ಸಾಮ್ರಾಜ್ಯಕ್ಕೂ ಮೊದಲು ಲೋಧಿ ವಂಶದ ಶಾಸನದ ಕಾಲದಲ್ಲಿ ಶೇಖ್ ಜಮಾಲಿ ಎನ್ನುವ ಓರ್ವ ಪ್ರಸಿದ್ಧ ಸೂಫಿ ಸಂತರಿದ್ದರು. ಅವರ ಮೃತ್ಯವಿನ ನಂತರ ಆ ಜಾಗದಲ್ಲೇ ಸಮಾಧಿ ಮಾಡಲಾಯಿತು.

ರಾಜರ ಮೆಟ್ಟಿಲು ಬಾವಿ

ರಾಜರ ಮೆಟ್ಟಿಲು ಬಾವಿ

PC:Varun Shiv Kapur

ದೆಹಲಿಯ ಮೆಹರೋಲಿಯಲ್ಲಿರುವ ಪುರಾತತ್ವ ಶಾಸ್ತ್ರ ಪಾರ್ಕ್‌ನ ಸಮೀಪದಲ್ಲೇ ರಾಜರ ಮೆಟ್ಟಿಲು ಬಾವಿ ಇದೆ. ಈ ಮೆಟ್ಟಿಲು ಬಾವಿಯು ಬಹಳ ಪ್ರಸಿದ್ಧವಾಗಿದ್ದು ಇದನ್ನು ದೌಲತ್ ಖಾನ್ ನಿರ್ಮಿಸಿದ್ದನು.

ಮೋತ್ ಕೀ ಮಸ್ಜೀದ್

ಮೋತ್ ಕೀ ಮಸ್ಜೀದ್

PC:Nvvchar

ಲೋಧಿ ವಂಶದ ಶಾಸನದ ಕಾಲದಲ್ಲಿ ವಜೀರ್ ಮಿಯಾ ಬೋಯಿಯಾ ಹೆಸರಿನ ವ್ಯಕ್ತಿಯು 1505ರಲ್ಲಿ ಈ ಮಸೀದಿಯನ್ನು ನಿರ್ಮಾಣ ಮಾಡಿದ್ದನು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X