Search
  • Follow NativePlanet
Share
» »ಗುಲ್ಬರ್ಗಾದಲ್ಲಿ ನೋಡಬಹುದಾಂತಹ ಸ್ಥಳಗಳು ಏನೆಲ್ಲಾ ಇವೆ ಗೊತ್ತಾ?

ಗುಲ್ಬರ್ಗಾದಲ್ಲಿ ನೋಡಬಹುದಾಂತಹ ಸ್ಥಳಗಳು ಏನೆಲ್ಲಾ ಇವೆ ಗೊತ್ತಾ?

ಗುಲ್ಬರ್ಗಾವನ್ನು ಇದೀಗ ಕಲಬುರಗಿ ಎನ್ನಲಾಗುತ್ತದೆ. ಇದೊಂದು ಐತಿಹಾಸಿಕ ನಗರವಾಗಿದೆ. ಕಲಬುರಗಿ ಅಂದರೆ ಕಲ್ಲಿನ ನಗರ, ರಾಷ್ಟ್ರಕೂಟರು, ಚಾಲುಕ್ಯರ ನಡುವೆ ನಡುವೆ ನಡೆದ ಸಂಘರ್ಷದ ಮೂಲಕ ಈ ನಗರ ಬೆಳಕಿಗೆ ಬಂದಿದೆ. ಇಲ್ಲಿ ರಾಷ್ಟ್ರಕೂಟರು, ಚಾಲುಕ್ಯರು 12ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ್ದರು ಎನ್ನಲಾಗುತ್ತದೆ.

ರಾಮೇಶ್ವರ ಸುತ್ತಲಿನ ಈ 9 ಪುಣ್ಯ ತೀರ್ಥಗಳಿಗೂ ರಾಮ-ಸೀತೆಗೂ ಇರುವ ನಂಟೇನು?ರಾಮೇಶ್ವರ ಸುತ್ತಲಿನ ಈ 9 ಪುಣ್ಯ ತೀರ್ಥಗಳಿಗೂ ರಾಮ-ಸೀತೆಗೂ ಇರುವ ನಂಟೇನು?

ಕಲಬುರಗಿಯು 14ನೇ ಶತಮಾನದಲ್ಲಿ ಬಹಮನಿ ಸುಲ್ತಾನಾರ ಮೂಲಕ ಸ್ಥಾಪನೆ ಮಾಡಲಾಗಿತ್ತು. 18ನೇ ಶತಮಾನದಿಂದ 20ನೇ ಶತಮಾನದವರೆಗೆ ಹೈದರಾಬಾದ್‌ನ ನಿಜಾಮರು ಆಳ್ವಿಕೆ ನಡೆಸಿದ್ದರು. ತನ್ನ ಐತಿಹಾಸಿಕ ಹಿನ್ನೆಲೆಯ ಜೊತೆಗೆ ಈ ನಗರವು ಅನೇಕ ಮಂದಿರಗಳು, ಕೋಟೆಗಳನ್ನು ಹೊಂದಿದ್ದು ಸುಂದರ ಪ್ರವಾಸಿ ತಾಣವೂ ಆಗಿದೆ. ಹಾಗಾಗಿ ಪ್ರವಾಸೋಧ್ಯಮದ ದೃಷ್ಠಿಯಿಂದ ಈ ನಗರದ ಪ್ರಾಮುಖ್ಯತೆ ಏನು ಅನ್ನೋದನ್ನು ತಿಳಿಯೋಣ...

ಗುಲ್ಬರ್ಗಾ ಕೋಟೆ

ಗುಲ್ಬರ್ಗಾ ಕೋಟೆ

PC: Dayal, Deen

ಗುಲ್ಬರ್ಗಾದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಇಲ್ಲಿನ ಕೋಟೆಯೂ ಒಂದು. ಇದನ್ನು 12ನೇ ಶತಮಾನದಲ್ಲಿ ನಿರ್ಮೀಸಲಾಗಿದೆ ಎನ್ನುವುದನ್ನು ಇತಿಹಾಸದ ಪುಟಗಳು ತಿಳಿಸುತ್ತವೆ. ಕಲಬುರಗಿ ಕೋಟೆ ಕರ್ನಾಟಕ ಪ್ರಾಚೀನ ಇಸ್ಲಾಮಿಕ್ ವಾಸ್ತುಶಿಲ್ಪ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದು. ಕೋಟೆ ಮೂಲತಃ ರಾಜಾ ಗುಲ್ಚಂದ್ ಕಟ್ಟಿಸಿದನು. ಕಲಬುರಗಿ ಬಹಮನಿ ರಾಜಧಾನಿಯಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು, ಕೋಟೆ ಆಳವಾದ ಕಂದಕ ಬೃಹತ್ ಗೋಡೆಗಳೊಂದಿಗೆ ಅಲಾವುದ್ದೀನ್ ಬಹಮನಿ ಮೂಲಕ ಬಲಪಡಿಸಿದರು. ಕೋಟೆ 15 ಗೋಪುರಗಳು ಮತ್ತು 26ಬಂದೂಕುಗಳ ಒಳಗೊಂಡಿತ್ತು ಅದ್ರಲ್ಲಿ ಒಂದು 8 ಮೀಟರ್ ಉದ್ದವಾಗಿತ್ತು. ಜಾಮಿ ಮಸೀದಿ ನಂತರ ಪರ್ಷಿಯನ್ ವಾಸ್ತುಶಿಲ್ಪ ಶೈಲಿಯಲ್ಲಿ 1367 ರಲ್ಲಿ ಕೋಟೆಯ ಒಳಗೆ ನಿರ್ಮಿಸಲಾಯಿತು.

ಗುಲ್ಬರ್ಗಾದ ಈ ಐತಿಹಾಸಿಕ ಕೋಟೆಯನ್ನು ಕಂಡಿದ್ದೀರಾ?ಗುಲ್ಬರ್ಗಾದ ಈ ಐತಿಹಾಸಿಕ ಕೋಟೆಯನ್ನು ಕಂಡಿದ್ದೀರಾ?

ಶರಣ ಬಸವೇಶ್ವರ ದೇವಸ್ಥಾನ

ಶರಣ ಬಸವೇಶ್ವರ ದೇವಸ್ಥಾನ

PC: youtube

ಕಲಬುರಗಿಯ ಮಧ್ಯದಲ್ಲಿರುವ ಈ ದೇವಸ್ಥಾನವನ್ನು ಬಸವಣ್ಣರ ನೆನಪಿಗಾಗಿ ನಿರ್ಮಿಸಲಾಗಿದೆ.
ಇಲ್ಲಿ ನೀವು ಪಂಚಲೋಹ ಕಲಶವನ್ನು ನೋಡಬಹುದು. ಈ ದೇವಸ್ಥಾನದ ವಾಸ್ತುಕಲೆ 12ನೆ ಶತಮಾನದಿಂದ ಇದೆ. ಗರ್ಭಗೃಹ: ಶರಣ ಬಸವೇಶ್ವರ ಸಮಾಧಿ ಇದೆ. ಶರಣ ಬಸವೇಶ್ವರರ ಮರಣದ ನಂತರ, ಅವರ ನೆನಪಿಗಾಗಿ ಒಂದು ಪವಿತ್ರವಾದ ದೇವಸ್ಥಾನವನ್ನು ಕಟ್ಟಿಸಿದರು. ಶರಣ ಬಸವೇಶ್ವರರ ಉತ್ಸಾಹಿ ಭಕ್ತ "ಅಡಿ ದೊಡ್ಡಪ್ಪ ಶರಣ" ಇವರಿಬ್ಬರೂ ಕೂಡಿ "ಶರಣ ಬಸವೇಶ್ವರ ಮಹಾದಾಸೋಹ ಪೀಠ" ಕಟ್ಟಿಸಿದರು. ಸಂಕ್ರಾಂತಿ ಹಾಗು ವಿಜಯದಶಮಿ ಹಬ್ಬ ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಶರಣ ಬಸವೇಶ್ವರ ಮಹಾದಾಸೋಹ ಜಾತ್ರೆ ಪ್ರತಿ ವರ್ಷ ಮಾರ್ಚ್ ರಿಂದ ಏಪ್ರಿಲ್‌ವರೆಗೆ ನಡೆಯುತ್ತದೆ.

ಖ್ವಾಜಾ ಬಂದೇ ನವಾಜ್

ಖ್ವಾಜಾ ಬಂದೇ ನವಾಜ್

PC:S N Barid

ಕೋಟೆ ಹಾಗೂ ಮಸೀದಿಯನ್ನು ಹೊರತುಪಡಿಸಿ ಇಲ್ಲಿ ಖ್ವಾಜಾ ಬಂದೇ ನವಾಜ್ ದರ್ಗಾ ಕೂಡಾ ಇದೆ. ಇದನ್ನು ನಿರ್ಮಿಸಲು ಭಾರತೀಯ-ಮುಸ್ಲೀಮ್ ವಾಸ್ತುಕಲಾವನ್ನು ಬಳಸಲಾಗಿದೆ. ಮಾಹಿತಿಗಳ ಪ್ರಕಾರ ಖ್ವಾಜಾ ಬಂದೇ ನವಾಜ್ 1413ರಲ್ಲಿ ಗುಲಬರ್ಗಕ್ಕೆ ಬಂದಿದ್ದರು. ಇದನ್ನು ಮಿಶ್ರಿತ ವಾಸ್ತುಲೆಯ ಶೈಲಿ ಎನ್ನಲಾಗುತ್ತದೆ. ಇಲ್ಲಿ ತುರ್ಕಿ, ಬಹಮನಿ ಹಾಗೂ ಇರಾನಿ ಪ್ರಭಾವ ಕಾಣಸಿಗುತ್ತದೆ.

 ಬುದ್ಧ ವಿಹಾರ

ಬುದ್ಧ ವಿಹಾರ

PC: youtube

ಬುದ್ಧ ವಿಹಾರ್ ವಿಸ್ತಾರವಾದ 70 ಎಕರೆ ಭೂಮಿಯಲ್ಲಿ ನೆಲೆಸಿದೆ. ಇದು ರಾಷ್ಟ್ರದ ಅತಿ ದೊಡ್ಡ ವಿಹರಗಳಲ್ಲಿ ಒಂದು. ಇದು ನಗರದಿಂದ ದೂರದಲ್ಲಿದೆ. ಕಲಬುರಗಿ ವಿಶ್ವವಿದ್ಯಾಲಯ ರೂ 8 ಕೋಟಿ ಹೆಚ್ಚು ವೆಚ್ಚದಲ್ಲಿ ಸಿದ್ದಾರ್ಥ ವಿಹಾರ್ ಟ್ರಸ್ಟ್ ನಿರ್ಮಿತಗೊಂಡಿದೆ. ಇದು ಇಡೀ ದಕ್ಷಿಣ ಭಾರತದಲ್ಲೇ ದೊಡ್ಡದೆಂದು ಪರಿಗಣಿಸಲಾಗುತ್ತದೆ. ಸಿಮೆಂಟ್ ಸುಮಾರು 1500 ಟನ್, ಉಕ್ಕು 250ಟನ್,5 ಲಕ್ಷ ಇಟ್ಟಿಗೆಗಳನ್ನು ಮತ್ತು ಮರಳು 200 ಘನ ಮೀಟರ್ ನಷ್ಟು ಉಪಯೋಗಿಸಿ ನಿರ್ಮಿಸಿದ, ಇದು ಒಂದು ಸುಂದರ ರಚನೆಯಾಗಿ ಕುಶಲಕರ್ಮಿಗಳಿಂದ ಪರಿವರ್ತಿಸಲ್ಪಟ್ಟಿದೆ.

ಕೋರ್‌ನಾಟಿ ಹನುಮಾನ್ ಮಂದಿರ

ಕೋರ್‌ನಾಟಿ ಹನುಮಾನ್ ಮಂದಿರ

PC: youtube

ಇಷ್ಟೇ ಅಲ್ಲದೆ ನೀವು ಗುಲ್ಬರ್ಗಾದಲ್ಲಿ ಕೋರ್‌ನಾಟಿ ಹನುಮಾನ್ ಮಂದಿರಕ್ಕೂ ಹೋಗಬಹುದು. 1957ರಲ್ಲಿ ನಿರ್ಮಿಸಲಾದ ಈ ಮಂದಿರವು ಹಿಂದೂ ವಾಸ್ತು ಶಿಲ್ಪ ಶೈಲಿಯನ್ನು ಹೊಂದಿದೆ. ಇಲ್ಲಿ ಹನುಮಾನ್‌ನ ಬೃಹತ್ ಪ್ರತಿಮೆಯನ್ನು ಅಳವಡಿಸಲಾಗಿದೆ. ಭಕ್ತರ ಜೊತೆಗೆ ಪ್ರವಾಸಿಗರನ್ನು ಬೆರಗಾಗಿಸುತ್ತದೆ ಈ ಮಂದಿರ. ನಿಮಗೆ ಆಧ್ಯಾತ್ಮದ ಅನುಭವವನ್ನು ಪಡೆಯಬೇಕಾದರೆ ಈ ಮಂದಿರಕ್ಕೊಮ್ಮೆ ಭೇಟಿ ನೀಡಿ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಗುಲ್ಬರ್ಗಾವು ಕರ್ನಾಟಕದ ಉತ್ತರ ಭಾಗದಲ್ಲಿದೆ. ನೀವು ರೈಲಿನಲ್ಲಿ ಹೋಗುವುದಾದರೆ ಗುಲ್ಬರ್ಗಾ ರೈಲ್ವೆ ಸ್ಟೇಶನ್ ಮೂಲಕ ಹೋಗಬಹುದು. ಬಸ್ ಮೂಲಕ ಹೋಗುವುದಾದರೆ ಎಲ್ಲಾ ಪ್ರದೇಶಗಳಿಂದ ಗುಲ್ಬರ್ಗಾಕ್ಕೆ ಬಸ್‍ಗಳಿವೆ. ಇನ್ನು ನೀವು ವಿಮಾನದ ಮೂಲಕ ಹೋಗಬೇಕೆಂದಿದ್ದರೆ ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಹೈದರಾಬಾದ್ ವಿಮಾನ ನಿಲ್ದಾಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X