Search
  • Follow NativePlanet
Share
» »150 ರೂ.ಗೆ ಜೀನ್ಸ್, 90 ರೂ.ಗೆ ಶರ್ಟ್; ದೇಶದಲ್ಲೇ ಅಗ್ಗದ ಮಾರ್ಕೇಟ್ ಇದು

150 ರೂ.ಗೆ ಜೀನ್ಸ್, 90 ರೂ.ಗೆ ಶರ್ಟ್; ದೇಶದಲ್ಲೇ ಅಗ್ಗದ ಮಾರ್ಕೇಟ್ ಇದು

ಭಾರತದಲ್ಲಿ ಅನೇಕ ಕಡೆಗಳಲ್ಲಿ ಕಡಿಮೆಗೆ ಬಟ್ಟೆ ಬರೆಗಳು ದೊರೆಯುತ್ತವೆ. ಪ್ರತಿಯೊಂದು ಸ್ಥಳದಲ್ಲೂ ಕಡಿಮೆ ಬೆಲೆಗೆ ಬಟ್ಟೆ ಸಿಗುವ ಸ್ಥಳಗಳು ಇದ್ದೇ ಇರುತ್ತವೆ. ಬರೀ 50ರೂ. 100ರೂ.ಗೆ ಬಟ್ಟೆಗಳು ಸಿಗುತ್ತವೆ. ಅಂತಹದ್ದೇ ಒಂದು ಬಹಳ ಅಗ್ಗದ ಮಾರ್ಕೇಟ್ ಬಗ್ಗೆ ನಾವಿಂದು ತಿಳಿಸಿಕೊಡಲಿದ್ದೇವೆ. ಇಲ್ಲಿ ಒಳ್ಳೇ ಕ್ವಾಲಿಟಿ ಬಟ್ಟೆಗಳೆಲ್ಲಾ ಬಹಳ ಕಡಿಮೆ ಬೆಲೆಗೆ ಸಿಗುತ್ತವೆ.

ಅಗ್ಗದ ಮಾರ್ಕೇಟ್

ಅಗ್ಗದ ಮಾರ್ಕೇಟ್

ದೆಹಲಿಯ ಗಾಂಧೀ ನಗರದ ಸುಭಾಷ್‌ ರೋಡ್‌ನಲ್ಲಿ ಒಂದು ಅತ್ಯಂತ ಅಗ್ಗದ ಮಾರ್ಕೇಟ್ ಇದೆ. ಇದು ದೇಶದ ಅತ್ಯಂತ ಅಗ್ಗದ ಮಾರ್ಕೇಟ್‌ಗಳಲ್ಲಿ ಒಂದಾಗಿದೆ. ಸಾವಿರಾರು ಸಂಖ್ಯೆಯ ಜನರು ಇಲ್ಲಿಗೆ ಬಂದು ಶಾಪಿಂಗ್ ಮಾಡುತ್ತಾರೆ. ಕೈಯಲ್ಲಿ ಸಾವಿರ ರೂ. ಇದ್ರೆ ಮನೆಮಂದಿಗೆಲ್ಲಾ ಬಟ್ಟೆ ಖರೀದಿಸಬಹುದು.

ಬಿ.ಎಂ.ಟಿ.ಸಿ ಬಸ್‌ನಲ್ಲಿ ಓಡಾಡಿರೋರಿಗೆಲ್ಲಾ ಈ ಸ್ಥಳ ಗೊತ್ತಿರ್ಲೇ ಬೇಕುಬಿ.ಎಂ.ಟಿ.ಸಿ ಬಸ್‌ನಲ್ಲಿ ಓಡಾಡಿರೋರಿಗೆಲ್ಲಾ ಈ ಸ್ಥಳ ಗೊತ್ತಿರ್ಲೇ ಬೇಕು

ಸಾವಿರ ರೂ.ಯ ಬಟ್ಟೆ 150 ರೂ.ಗೆ ಸಿಗುತ್ತೆ

ಸಾವಿರ ರೂ.ಯ ಬಟ್ಟೆ 150 ರೂ.ಗೆ ಸಿಗುತ್ತೆ

ಇಲ್ಲಿ ಜೀನ್ಸ್‌, ಟೀ ಶರ್ಟ್, ಶರ್ಟ್‌ಗಳನ್ನು ಬಹಳ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಯಾವುದೇ ಶೋ ರೂಂನಲ್ಲಿ 1000 ರೂ ನಲ್ಲಿ ಮಾರಾಟ ಮಾಡಲಾಗುವ ಬಟ್ಟೆಗಳು ಇಲ್ಲಿ ಕೇವಲ 150 ರೂ.ಗೆ ದೊರೆಯುತ್ತದೆ.

ಶಾಪ್‌ಕೀಪರ್ಕ್‌ಗಳೇ ತಯಾರಿಸ್ತಾರೆ ಬಟ್ಟೆ

ಶಾಪ್‌ಕೀಪರ್ಕ್‌ಗಳೇ ತಯಾರಿಸ್ತಾರೆ ಬಟ್ಟೆ

ಇಲ್ಲಿನ ಹೆಚ್ಚಿನ ಶಾಪ್‌ಕೀಪರ್ಸ್ ಜೀನ್ಸ್‌ ಹಾಗೂ ಶರ್ಟ್ ತಯಾರಿಸುವ ಫ್ಯಾಕ್ಟರಿ ಇಟ್ಟಿದ್ದಾರೆ. ಇವರು ಬಟ್ಟೆಯನ್ನು ತೆಗೆದುಕೊಂಡು ವಿಭಿನ್ನ ಶೈಲಿಯ ಜೀನ್ಸ್‌ ಹಾಗೂ ಶರ್ಟ್ ತಯಾರಿಸುತ್ತಾರೆ. ಶಾಪ್‌ಕೀಪರ್ಸ್ ಸ್ವತಃ ಬಟ್ಟೆ ತಯಾರಿಸುವುದರಿಂದ ಇಲ್ಲಿ ಬಟ್ಟೆಗಳು ಬಹಳ ಕಡಿಮೆ ಬೆಲೆಗೆ ದೊರೆಯುತ್ತವೆ.

ಐಆರ್‌ಸಿಟಿಸಿ ಆಫರ್; 12 ದಿನದ ಪ್ಯಾಕೇಜ್‌ನಲ್ಲಿ ಜ್ಯೋತಿರ್ಲಿಂಗದ ದರ್ಶನ ಐಆರ್‌ಸಿಟಿಸಿ ಆಫರ್; 12 ದಿನದ ಪ್ಯಾಕೇಜ್‌ನಲ್ಲಿ ಜ್ಯೋತಿರ್ಲಿಂಗದ ದರ್ಶನ

ಕಡಿಮೆ ಅಂದರೂ 5 ಪೀಸ್ ಕೊಳ್ಳಬೇಕು

ಕಡಿಮೆ ಅಂದರೂ 5 ಪೀಸ್ ಕೊಳ್ಳಬೇಕು

ಇಲ್ಲಿ ಬಹಳ ಉತ್ತಮ ಕ್ವಾಲಿಟಿಯ ಬಟ್ಟೆಯ ಜೀನ್ಸ್‌ ಬರೀ 250 ರೂ.ಗೆ ಸಿಗುತ್ತದೆ. ಈ ಮಾರ್ಕೇಟ್‌ನಲ್ಲಿ ಒಂದೇ ಬೆಲೆಯ ೫ ಅಥವಾ ಅದಕ್ಕಿಂತ ಹೆಚ್ಚಿನ ಜೀನ್ಸ್‌ನ್ನು ಕೊಂಡುಕೊಳ್ಳಬೇಕು. ಹಾಗೆಯೇ ಶರ್ಟ್‌ನ ಬೆಲೆ 90 ರೂ.ಯಿಂದ ಆರಂಭವಾಗುತ್ತದೆ. ಇದನ್ನು ಕೂಡಾ 5 ಪೀಸ್ ತೆಗೆದುಕೊಳ್ಳಲೇ ಬೇಕು.

ಈ ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಿ

ಈ ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಿ

ಈ ಮಾರ್ಕೇಟ್‌ನಲ್ಲಿ ನೀವು ಜೀನ್ಸ್‌, ಶರ್ಟ್ ಹಾಗೂ ಟೀ ಶರ್ಟ್ ಖರೀದಿಸುವಾಗ ಕೆಲವು ವಿಷ್ಯಗಳನ್ನು ಗಮನದಲ್ಲಿಡುವುದು ಬಹಳ ಅವಶ್ಯಕವಾಗಿದೆ. ಇಲ್ಲಿ ಎಲ್ಲಾ ರೀತಿಯ ಬಟ್ಟೆಗಳು ಪ್ಯಾಕ್ ಆಗಿರುತ್ತವೆ. ನೀವು ಯಾವುದೇ ಬಟ್ಟೆ ಕೊಳ್ಳುವಾಗ ಅದನ್ನೊಮ್ಮೆ ಓಪನ್ ಮಾಡಿ ನೋಡಿ.

 ಬಾರ್ಗೇನಿಂಗ್ ಮಾಡಬಹುದು

ಬಾರ್ಗೇನಿಂಗ್ ಮಾಡಬಹುದು

ಕೆಲವೊಮ್ಮೆ ಜೀನ್ಸ್‌ನ ಸೈಜ್‌ನಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಕೆಲವೊಮ್ಮೆ ಕಲರ್‌ನಲ್ಲಿ ವ್ಯತ್ಯಾಸವಾಗುತ್ತದೆ. ಇದು ಫಿಕ್ಸ್‌ಡ್‌ ರೇಟ್‌ನ ಮಾರ್ಕೇಟ್ ಅಲ್ಲ. ಹಾಗಾಗಿ ನೀವು ಇಲ್ಲಿ ಬೆಲೆಯಲ್ಲಿ ಬಾರ್ಗೇನಿಂಗ್ ಮಾಡಬಹುದು. ಇನ್ನಷ್ಟು ಕಡಿಮೆ ಬೆಲೆಗೆ ಬಟ್ಟೆಗಳನ್ನು ಕೊಳ್ಳಬಹುದು.

ರೋಪ್‌ವೇಯಲ್ಲಿ ಹೋಗಿದ್ದೀರಾ ? ಇಲ್ಲಾ ಅಂದ್ರೆ ಇಲ್ಲಿದೆ ದೇಶದ ಪ್ರಮುಖ ರೋಪ್‌ ವೇ ಗಳುರೋಪ್‌ವೇಯಲ್ಲಿ ಹೋಗಿದ್ದೀರಾ ? ಇಲ್ಲಾ ಅಂದ್ರೆ ಇಲ್ಲಿದೆ ದೇಶದ ಪ್ರಮುಖ ರೋಪ್‌ ವೇ ಗಳು

ಕಡಿಮೆ ಖರ್ಚು

ಕಡಿಮೆ ಖರ್ಚು

ನಿಮಗೂ ಈ ದುಬಾರಿ ಬಟ್ಟೆಗಳು ಕಡಿಮೆ ಬೆಲೆಯಲ್ಲಿ ಪಡೆಯಬೇಕೆಂದಿದ್ದರೆ ನೀವೂ ಕೂಡಾ ದೆಹಲಿಯಲ್ಲಿರುವ ಈ ಅಗ್ಗದ ಮಾರ್ಕೇಟ್‌ಗೆ ಹೋಗಿ ಶಾಪಿಂಗ್ ಮಾಡಿ. ಇಲ್ಲಿ ಕ್ವಾಲಿಟಿಯೂ ಒಳ್ಳೆದಿರುತ್ತದೆ ಹಾಗೆಯೇ ದುಡ್ಡು ಕೂಡಾ ಕಡಿಮೆ ಖರ್ಚಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X