Search
  • Follow NativePlanet
Share
» »ಇಲ್ಲಿ ಪಿಂಡದಾನ ಮಾಡಿದ್ರೆ ಮೋಕ್ಷ ಪ್ರಾಪ್ತಿಯಾಗುತ್ತಂತೆ!

ಇಲ್ಲಿ ಪಿಂಡದಾನ ಮಾಡಿದ್ರೆ ಮೋಕ್ಷ ಪ್ರಾಪ್ತಿಯಾಗುತ್ತಂತೆ!

ನಮ್ಮ ದೇಶದಲ್ಲಿ ಶ್ರಾದ್ಧಾ, ಪಿಂಡದಾನ , ತರ್ಪಣೆ ಹೀಗೆ ಅನೇಕ ತೀರ್ಥಸ್ಥಾನಗಳಿವೆ. ಆದರೆ ಕೆಲವು ತೀರ್ಥಗಳ ಮಹತ್ವ ಬೇರೆದ್ದೇ ಇರುತ್ತದೆ. ಇಂದು ನಾವು ನಿಮಗೆ ಕೆಲವು ಪವಿತ್ರ ತೀರ್ಥ ಸ್ಥಾನಗಳನ್ನು ತಿಳಿಸಿಕೊಡಲಿದ್ದೇವೆ. ಅಲ್ಲಿ ಶ್ರಾದ್ಧಾ, ಪಿಂಡದಾನ ಮಾಡುವುದರಿಂದ ಪೂರ್ವಜನರಿಗೆ ಮೋಕ್ಷ ಪ್ರಾಪ್ತಿಯಾಗುತ್ತಂತೆ.

1850ರಲ್ಲಿ ನಮ್ಮ ಬೆಂಗಳೂರು ಹೇಗಿತ್ತು ಗೊತ್ತಾ?

ರಿಷಿಕೇಶ್

ರಿಷಿಕೇಶ್

PC:आशीष_भटनाग

ಗಂಗಾ ನದಿ ಹರಿಯುವ ತಾಣ ಇದಾಗಿದ್ದು, ಹಿಂದೂಗಳ ಪವಿತ್ರ ಸ್ಥಳವಾಗಿದೆ. ಇಲ್ಲಿ ಪಿಂಡದಾನ ಮಾಡಲು ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ . ಪವಿತ್ರ ಗಂಗೆಯ ದಡದಲ್ಲಿ ಪಿಂಡದಾನ ಮಾಡಲಾಗುತ್ತದೆ.

ರಾಮೇಶ್ವರ

ರಾಮೇಶ್ವರ

PC:எஸ். பி. கிருஷ்ணமூர்த்தி

ಹಿಂದೂಗಳ ಪವಿತ್ರಸ್ಥಳವಾದ ರಾಮೇಶ್ವೆ ಚಾರ್‌ಧಾಮ್ ಯಾತ್ರದಲ್ಲಿ ಒಂದಾಗಿದೆ. ದಕ್ಷಿಣ ಭಾರತದಲ್ಲಿರುವ ಈ ಸ್ಥಳವು ಪಿಂಡದಾನಕ್ಕೆ ಪ್ರಸಿದ್ಧವಾಗಿದೆ. ರಾಮನಾಥಸ್ವಾಮಿ ಶಿವ ದೇವಾಲಯವು ಇಲ್ಲಿದೆ.

ಕಾಶಿ

ಕಾಶಿ

PC:Biswarup Ganguly

ವಾರಣಾಸಿಯಲ್ಲಿರುವ ಕಾಶಿಯು ಹಿಂದೂಗಳ ಪವಿತ್ರ ಸ್ಥಳವಾಗಿದೆ. ಇಡೀ ಏಷ್ಯಾದಲ್ಲೇ ಬಹಳ ಹಳೇಯ ನಗರ ಇದಾಗಿದೆ. ಕಾಶಿ ವಿಶ್ವನಾಥ ದೇವಾಲಯ ಹಾಗೂ ಸಂಕಟ್ ಮೋಚನ ದೇವಾಲಯ ಇಲ್ಲಿನ ಪ್ರಸಿದ್ಧ ದೇವಾಲಯಗಳಾಗಿವೆ, ಇದು ಪಿತೃಪಕ್ಷ ವಿಧಿ ವಿಧಾನಕ್ಕೂ ಹೆಸರುವಾಸಿಯಾಗಿದೆ.

ಗಯಾ, ಬಿಹಾರ

ಗಯಾ, ಬಿಹಾರ

PC:Biswarup Ganguly

ಬಿಹಾರದ ದೊಡ್ಡ ನಗರಗಳಲ್ಲಿ ಗಯಾ ಕೂಡಾ ಒಂದು. ಇದು ಫಲ್ಗುನದಿಯ ತಟದಲ್ಲಿದೆ. ಪಿತೃಪಕ್ಷದಂದು ಇಲ್ಲಿ ಸಾವಿರಾರು ಜನರು ತಮ್ಮ ಪೂರ್ವಜರ ಪಿಂಡದಾನಕ್ಕಾಗಿ ಆಗಮಿಸುತ್ತಾರೆ. ಇಲ್ಲಿ ಪಿಂಡದಾನ ಮಾಡಿದರೆ ನೇರ ವೈಕುಂಠ ಮೋಕ್ಷ ದೊರೆಯುತ್ತದೆ ಎನ್ನಲಾಗುತ್ತದೆ. ಅದಕ್ಕಾಗಿ ಗಯಾವನ್ನು ಪಿಂಡದಾನ, ಶ್ರಾದ್ಧಾ, ತರ್ಪಣೆಗೆ ಹೆಸರುವಾಸಿಯಾಗಿರುವುದು.

ಮೆಂದ್‌ಕರ್, ಮಹಾರಾಷ್ಟ್ರ

ಮೆಂದ್‌ಕರ್, ಮಹಾರಾಷ್ಟ್ರ

PC:Biswarup Ganguly

ಮೆಂದ್‌ಕರ್ ತೀರ್ಥವು ಸಾಕ್ಷಾತ್ ಜನಾರ್ಧನ್‌ನ ಸ್ವರೂಪವಾಗಿದೆ. ಇದು ಮಹಾರಾಷ್ಟ್ರದ ಸಮೀಪದ ಕಾಮ್‌ಗಾಂವ್‌ನಿಂದ ಸುಮಾರು 75 ಕಿ.ಮೀ ದೂರದಲ್ಲಿದೆ. ಇಲ್ಲಿ ಸ್ನಾನ ಮಾಡಿದರೆ ಒಳ್ಳೆಯದಂತೆ. ಈ ತೀರ್ಥ ಸ್ಥಾನದ ಉಲ್ಲೇಖ ಧರ್ಮಗ್ರಂಥಗಳಲ್ಲಿ ನೀಡಲಾಗಿದೆ. ಬ್ರಹ್ಮನ ಯಜ್ಞದಲ್ಲಿ ಬಳಸಲಾದ ಪಾತ್ರೆಯಿಂದ ಈ ನದಿಯ ಉತ್ಪತ್ತಿಯಾಗಿದ್ದು ಎನ್ನಲಾಗುತ್ತದೆ. ಇದು ಪಶ್ಚಿಮ ವಾಹಿನಿಯಾಗಿರುವ ಕಾರಣದಿಂದ ಇನ್ನೂ ಮಹತ್ವದ್ದಾಗಿದೆ. ಇಲ್ಲಿ ತಿಥಿ ಮಾಡೋದು ತುಂಬಾ ಒಳ್ಳೆಯದು ಎನ್ನಲಾಗುತ್ತದೆ.

ಲಕ್ಷ್ಮಣಬಾಣ, ಕರ್ನಾಟಕ

ಲಕ್ಷ್ಮಣಬಾಣ, ಕರ್ನಾಟಕ

PC:Biswarup Ganguly

ಶ್ರೀರಾಮನು ತನ್ನ ಪುತ್ರ ಧರ್ಮ ಪಾಲಿಸಲು ರಾಜ ದಶರಥನ ಶ್ರಾದ್ಧಾ ಮಾಡಿದ್ಷನು. ಅದೇ ಜಾಗ ಇಂದು ತೀರ್ಥದ ರೂಪದಲ್ಲಿ ಹೆಸರುವಾಸಿಯಾಗಿದೆ. ಅದುವೇ ಲಕ್ಷಣಬಾಣ. ಇದು ಮಾಲ್ಯವಾನ ಪರ್ವತದಲ್ಲಿದೆ. ಈ ತೀರ್ಥವನ್ನು ಲಕ್ಷಣನು ತನ್ನ ಬಾಣವನ್ನು ಪ್ರಹರಿಸಿ ಸೃಷ್ಠಿಸಿದ್ದನು. ಹಾಗಾಗಿ ಅದರ ಹೆಸರು ಲಕ್ಷಣಬಾಣ ಎಂದಾಗಿದೆ. ಇದೇ ಸ್ಥಳದಲ್ಲಿ ರಾಮ ತನ್ನ ತಂದೆ ದಶರಥನ ಶ್ರಾದ್ಧಾ ಮಾಡಿದ್ದನು. ಹಂಪಿಯಿಂದ ಇದು ಸುಮಾರು 6 ಕಿ.ಮೀ ದೂರದಲ್ಲಿದೆ.

ಪ್ರಯಾಗ್, ಉತ್ತರಪ್ರದೇಶ

ಪ್ರಯಾಗ್, ಉತ್ತರಪ್ರದೇಶ

PC:Biswarup Ganguly

ಉತ್ತರ ಪ್ರದೇಶದ ಪ್ರಯಾಗ್ ಕೂಡಾ ಪಿಂಡದಾನಕ್ಕೆ ಮಹತ್ವದ್ದಾಗಿದೆ. ತ್ರಿವೇಣಿ ನದಿಯ ತಟದಲ್ಲಿ ತಲೆ ಬೋಳಿಸಲಾಗುವುದು. ಇಲ್ಲಿ ವಿಧವೆಯರೂ ಕೂಡಾ ತಲೆ ಬೋಳಿಸುತ್ತಾರೆ. ಇಲ್ಲಿ ಯಾವುದೇ ವ್ಯಕ್ತಿಯ ಶ್ರಾದ್ಧಾ ಪೂರ್ಣ ವಿಧಿ ವಿಧಾನದಿಂದ ಮಾಡಲಾಗುತ್ತದೋ ಆ ವ್ಯಕ್ತಿ ಜನ್ಮ ಮೃತ್ಯು ಬಂಧನದಿಂದ ಮುಕ್ತನಾಗಿದ್ದಾನೆ ಎನ್ನಲಾಗುತ್ತದೆ.

ಈ ದೇವಸ್ಥಾನದ ದರ್ಶನ ಪಡೆದರೆ ಮನಸ್ಸಿನಲ್ಲಿರುವ ಬೇಡಿಕೆ ಈಡೇರುತ್ತದಂತೆ!

ಸಿದ್ಧನಾಥ್, ಮಧ್ಯಪ್ರದೇಶ

ಸಿದ್ಧನಾಥ್, ಮಧ್ಯಪ್ರದೇಶ

PC:Biswarup Ganguly

ಸಿದ್ಧನಾಥ ತೀರ್ಥ ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಶಿಪ್ರ ನದಿ ತೀರದಲ್ಲಿದೆ. ಸಿದ್ಧನಾಥನ ಬಳಿ ಒಂದು ವೃಕ್ಷವಿದೆ ಅದನ್ನು ಸಿದ್ಧವಟ ಎನ್ನುತ್ತೇವೆ. ಕೃಷ್ಣಚತುರ್ದಶಿ ಹಾಗೂ ಶ್ರಾದ್ಧ ಪಕ್ಷದಂದು ದೂರ ದೂರದ ಊರುಗಳಿಂದ ಜನರು ಪಿಂಡದಾನಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ.

ಬ್ರಹ್ಮಕಪಾಲ್ , ಉತ್ತರಾಖಂಡ

ಬ್ರಹ್ಮಕಪಾಲ್ , ಉತ್ತರಾಖಂಡ

PC:Biswarup Ganguly

ಪಿಂಡದಾನ ಮಾಡಲು ಬ್ರಹ್ಮಕಪಾಲ್ ಮಹತ್ವದ ಸ್ಥಳವಾಗಿದೆ. ಇಲ್ಲಿ ಜನರು ತಮ್ಮಪೂರ್ವಜರ ಶಾಂತಿಗಾಗಿ ಪಿಂಡದಾನ ಮಾಡುತ್ತಾರೆ. ಇದು ಬದ್ರಿನಾಥ್ ಧಾಮದ ಬಳಿಯೇ ಇದೆ. ಇಲ್ಲಿ ಶ್ರಾದ್ಧಾ ಮಾಡೋದರಿಂದ ಪೂರ್ವಜರ ಆತ್ಮ ತೃಪ್ತಿ ಹೊಂದುತ್ತದೆ ಎನ್ನಲಾಗುತ್ತದೆ. ಇಲ್ಲಿ ಪಿಂಡದಾನ ಮಾಡಿದ ನಂತರ ಬೇರೆಲ್ಲೂ ಪಿಂಡದಾನ ಮಾಡುವ ಅಗತ್ಯವಿರೋದಿಲ್ಲ. ಇದರ ಪಕ್ಕದಲ್ಲೇ ಅಲಕನಂದ ನದಿ ಹರಿಯುತ್ತದೆ.

Read more about: india rishikesh rameshwaram
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more