Search
  • Follow NativePlanet
Share
» »ಶಿಕ್ಷೆ ಅನುಭವಿಸದೆ ಜೈಲಿಗೆ ಹೋಗೋ ನಿಮ್ಮ ಕನಸು ಈಗ ನನಸಾಗಲು ಸಾಧ್ಯ

ಶಿಕ್ಷೆ ಅನುಭವಿಸದೆ ಜೈಲಿಗೆ ಹೋಗೋ ನಿಮ್ಮ ಕನಸು ಈಗ ನನಸಾಗಲು ಸಾಧ್ಯ

By Manjula Balaraj Tantry

ಜೀವನದಲ್ಲಿ ಒಮ್ಮೆಯೂ ಹೋಗಬಾರದೆಂದು ತಿಳಿಯುವು ಸ್ಥಳಗಳಲ್ಲಿ ಜೈಲೂ ಒಂದು. ಜೈಲಿನ ಜೀವನ ಯಾರಿಗೆ ತಾನೇ ಇಷ್ಟವಾಗುತ್ತದೆ ಹೇಳಿ. ಆದರೆ ಕೆಲವರಿಗೆ ಜೈಲಿನೊಳಗೆ ಹೇಗಿರುತ್ತದೆ ಎನ್ನುವುದನ್ನು ತಿಳಿಯುವ ಕುತೂಕಲ ಇದ್ದೇ ಇರುತ್ತದೆ. ಇಂತಹುದೇ ಒಂದು ಅನಿರೀಕ್ಷಿತ ಅನುಭವಗಳಲ್ಲಿ ಜೈಲಿನ ಒಳಗಿನ ಜೀವನದ ಅನುಭವದ ಬಗ್ಗೆ ತಿಳಿಯುವುದೂ ಆಗಿದೆ. ನಾವು ಯಾವಾಗಲೂ ಈ ಜೈಲಿನ ಒಳಗಿನ ಜೀವನ ಅಲ್ಲಿಯ ವಾತಾವರಣದ ಬಗ್ಗೆ ತಿಳಿಯುವ ಒಂದು ಸೆಳವನ್ನು ಹೊಂದಿರುವುದು ಸಹಜ.

ಜೈಲಿನ ಅನುಭವ ಪಡೆಯಬಹುದು

ಜೈಲಿನ ಅನುಭವ ಪಡೆಯಬಹುದು

ಇದಕ್ಕಾಗಿ ಯಾವುದೇ ದೋಷಾರೋಪಣೆ ಮಾಡದೆ ಈ ಅನಪೇಕ್ಷಿತ ಅನುಭವಕ್ಕಾಗಿ ಹಾತೊರೆಯುತ್ತೇವೆ. ಶಿಕ್ಷೆಗೆ ಒಳಪಡದೆಯೇ ನೀವು ಜೈಲಿನ ಪರಿಸರವನ್ನು ಅನುಭವಿಸಬಹುದು ಎಂದು ನಾವು ಹೇಳಿದರೆ ನಂಬುವಿರಾ? ಹೌದು, ನೀವು ಭಾರತದಲ್ಲಿಯ ಜೈಲುಗಳ ಇತಿಹಾಸ ಮತ್ತು ಅಲ್ಲಿಯ ವಾತಾವರಣಗಳ ಬಗ್ಗೆ ಕಲಿಯುವ ಆಸಕ್ತಿಯನ್ನು ಹೊಂದಿದ್ದರೆ ನೀವು ಈ ಲೇಖನವನ್ನು ಓದಿ ತಿಳಿಯಿರಿ. ಇಲ್ಲಿ ನಾವು ಭಾರತದಲ್ಲಿಯ ಪ್ರವಾಸಿಗರಿಗಾಗಿ ತೆರೆಯಲ್ಪಡುವ ಅಗ್ರ ಮಾನ್ಯ 5ಜೈಲುಗಳ ಪಟ್ಟಿಯನ್ನು ನೀಡಿದ್ದೇವೆ.

ಹಿಜ್ಲಿ ಡಿಟೆಂನ್ಶನ್( ಬಂಧನ ಕೇಂದ್ರ) ಕ್ಯಾಂಪ್

ಹಿಜ್ಲಿ ಡಿಟೆಂನ್ಶನ್( ಬಂಧನ ಕೇಂದ್ರ) ಕ್ಯಾಂಪ್

Biswarup Ganguly

ಇದು ಪಶ್ಚಿಮ ಬಂಗಾಳದ ಮಿಡ್ನಾಪುರ್ ಜಿಲ್ಲೆಯಲ್ಲಿದೆ. ಹಿಜ್ಲಿ ಡಿಟೆಂನ್ಶನ್ (ಬಂಧನ ಕೇಂದ್ರದ) ಕ್ಯಾಂಪ್ ಇದು ಒಂದು ಪ್ರಾಚೀನ ಸೆರೆಮನೆಯಾಗಿದ್ದು ಬ್ರಿಟಿಷ್ ಸೇನೆಯವರು ಇಲ್ಲಿ ಅಪರಾಧಿಗಳು, ಕ್ರಾಂತಿಕಾರಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಶಿಕ್ಷಿಸಲು ಬಳಸುತ್ತಿದ್ದರು. ನಂತರದ ದಿನಗಳಲ್ಲಿ ಈ ಸೆರೆಮನೆಯು ಬ್ರಿಟಿಷ್ ಆಡಳಿತವನ್ನು ವಿರೋಧಿಸುವ ತಾಣವಾಗಿ ಮಾರ್ಪಟ್ಟಿತು. ಹಿಜ್ಲಿ ಡೆಂಟೆಂನ್ಶನ್ ಕ್ಯಾಂಪ್ ಇದನ್ನು 20 ನೇ ಶತಮಾನಗಳಲ್ಲಿ ನಿರ್ಮಿಸಲಾಯಿತು. ಈ ಜೈಲಿನ ಆವರಣದ ಒಳಗೆ ಪೋಲಿಸ್ ಗುಂಡಿನ ದಾಳಿ ಸಂಭವಿಸಿದ ಕಾರಣಕ್ಕಾಗಿ ಇತಿಹಾಸಕಾರರಲ್ಲಿ ಜನಪ್ರಿಯವಾಗಿದೆ.

ಈ ಗುಂಡಿನ ದಾಳಿಯು ಹಿಜ್ಲಿ ದಾಳಿಯೆಂದು ಕರೆಯಲಾಗುತ್ತದೆ ಮತ್ತು ಈ ಗುಂಡಿನ ದಾಳಿಯು ಈ ಜೈಲಿನ ಒಳಗೆ ದಾಖಲೆಯಾದ ಏಕೈಕ ಘಟನೆಯಾಗಿದೆ. ಇಂದು ಇದು ಖರಗ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆವರಣದಲ್ಲಿದೆ ಮತ್ತು ಇದನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ಆದರೂ ಇನ್ನೂ ಇಲ್ಲಿ ಜೈಲಿನ ಗೋಡೆಗಳನ್ನು ಮತ್ತು ಬಂಧೀಖಾನೆಗಳನ್ನು ಕಾಣಬಹುದಾಗಿದೆ ಆದುದರಿಂದ ನೀವು ಪಶ್ಚಿಮ ಬಂಗಾಳದಲ್ಲಿ ಇದ್ದಲ್ಲಿ ಮತ್ತು ಭಾರತದ ಜೈಲುಗಳ ಬಗ್ಗೆ ತಿಳಿಯುವ ಇಚ್ಚೆ ಇದ್ದಲ್ಲಿ, ನೀವು ಖಂಡಿತವಾಗಿಯೂ ಹಿಜ್ಲಿ ಡಿಟೆಂನ್ಶನ್ ಕ್ಯಾಂಪ್ ಗೆ ಭೇಟಿ ಕೊಡಲೇ ಬೇಕು ಇದನ್ನು ಇಂದು ಶಹೀದ್ (ಹುತಾತ್ಮರ) ಭವನ ಎಂದು ಕರೆಯಲಾಗುತ್ತದೆ.

ಸೆಲ್ಯೂಲಾರ್ ಜೈಲು

ಸೆಲ್ಯೂಲಾರ್ ಜೈಲು

Jpatokal

ಭಾರತದ ಜೈಲು ವ್ಯವಸ್ಥೆಗಳ ಬಗ್ಗೆ ಯಾರಿಗಾದರೂ ಸ್ವಲ್ಪ ಮಟ್ಟಿನ ತಿಳುವಳಿಕೆ ಹೊಂದಿದ್ದರೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿರುವ ಸೆಲ್ಯೂಲಾರ್ ಜೈಲಿನ ಬಗ್ಗೆ ತಿಳಿದಿರುತ್ತಾರೆ. ಕಾಲಾಪಾನಿ ಎಂದು ಹೆಸರಾಗಿರುವ ಸೆಲ್ಯೂಲಾರ್ ಜೈಲು 1906ರಲ್ಲಿ ನಿರ್ಮಿಸಲಾಯಿತು ಮತ್ತು ಇದನ್ನು ಬ್ರಿಟಿಷ್ ಸೇನೆಯಿಂದ ಉಪಯೋಗಿಸಲ್ಪಡುತ್ತಿದು ಭಾರತೀಯ ಸ್ವಾತಂತ್ಯ್ರ ಹೋರಾಟಗಾರರು ಮತ್ತು ರಾಜಕೀಯ ಸೆರೆಯಾಳುಗಳಿಗೆ ಜೀವಾವಧಿ ಶಿಕ್ಷೆಯನ್ನು ನೀಡುವ ಸಲುವಾಗಿ ಇದನ್ನು ಬಳಸಲಾಗುತ್ತಿತ್ತು.

ಇದು ಬ್ರಿಟಿಷ್ ಯುಗದ ಒಂದು ಅತೀ ದೊಡ್ಡ ಜೈಲಾಗಿತ್ತು. ಬಟುಕೇಶ್ವರ್ ದತ್, ಯೋಗೇಂದ್ರ ಶುಕ್ಲಾ ಮತ್ತು ವಿನಾಯಕ ಸಾವರ್ಕರ್ ಮುಂತಾದ ಕ್ರಾಂತಿಕಾರಿಗಳು ಮತ್ತು ಭಾರತೀಯ ರಾಜಕಾರಣಿಗಳು ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಭಾರತದ ಪ್ರಮುಖ ಪ್ರದೇಶದಿಂದ ನೂರಾರು ಮೈಲಿ ದೂರದಲ್ಲಿ ಈ ದೂರದ ಪ್ರದೇಶಕ್ಕೆ ಕಳುಹಿಸಲಾಯಿತು. ಇಂದು ಈ ಸೆಲ್ಯೂಲಾರ್ ಜೈಲಿನ ಕಟ್ಟಡವು ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಗಳಿಸಿದ್ದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಒಂದು ಮಹತ್ವದ ಪ್ರವಾಸೀ ಕೇಂದ್ರವಾಗಿದೆ. ಈ ಒಂದು ಸ್ಮರಣೀಯವೆನಿಸುವಂತಹ ಸ್ಮಾರಕಕ್ಕೆ ಭೇಟಿ ಕೊಟ್ಟು ಇಲ್ಲಿಯ ಬಂಧನಕ್ಕೊಳಗಾಗುತ್ತಿದ್ದ ಬಂಧಿಗಳ ಜೀವನದ ಬಗ್ಗೆ ತಿಳಿದರೆ ಹೇಗಿರಬಹುದು?

ತಿಹಾರ್ ಜೈಲು

ತಿಹಾರ್ ಜೈಲು

ತಿಹಾರ್ ಜೈಲು ಭಾರತದಲ್ಲಿಯ ಒಂದು ಅತ್ಯಂತ ಪ್ರಸಿದ್ದ ಜೈಲುಗಳಲ್ಲಿ ಒಂದೆನಿಸಿದೆ. ತಿಹಾರ್ ಜೈಲ್ ದೆಹಲಿಯಲ್ಲಿದೆ ಮತ್ತು ದಕ್ಷಿಣ ಏಷ್ಯಾದ ಅತ್ಯಂತ ದೊಡ್ಡ ಬಂದೀಖಾನೆಗಳ ಸಂಕೀರ್ಣವನ್ನು ಹೊಂದಿರುವುದಾಗಿದೆ. ಇದನ್ನು 1957 ರಲ್ಲಿ ನಿರ್ಮಿಸಲಾಗಿದ್ದು ಈ ಜೈಲಿನ ಉದ್ದೇಶವೇನೆಂದರೆ ಕೈದಿಗಳಿಗೆ ಉತ್ತಮ ಶಿಕ್ಷಣ ನೀಡಿ ಅವರಿಗೆ ಸಮಾಜದ ಬಗ್ಗೆ ತಿಳುವಳಿಕೆ ಮೂಡಿಸಿ ಭಾರತದ ಸಾಮಾನ್ಯ ಪ್ರಜೆಗಳನ್ನಾಗಿಸುವುದಾಗಿದೆ.

ತಿಹಾರ್ ಜೈಲಿನಲ್ಲಿ ಕೈದಿಯಾಗಿದ್ದವರನ್ನು ಯಶಸ್ವಿಯಾಗಿ ಸಾಮಾನ್ಯ ಮನುಷ್ಯರಾಗಿ ಪರಿವರ್ತಿಸುವಲ್ಲಿ ಮತ್ತು ನಂತರದ ದಿನಗಳಲ್ಲಿ ಐಏ ಎಸ್ ಪ್ರವೇಶ ಪರೀಕ್ಷೆಯಲ್ಲಿ ಬರೆಯಲು ಅನುಮತಿ ದೊರೆತಿದೆಯೆಂದರೆ ನಂಬುವಿರಾ? ನಿಜವಾಗಿಯೂ ಈ ಅಸಾಮಾನ್ಯ ಕಠಿಣ ಭದ್ರತೆಗೆ ಹೆಸರುವಾಸಿಯಾಗಿರುವ ಜೈಲಿನ ವಿಸ್ಮಯಕಾರಿ ಸತ್ಯವೆನಿಸಿದೆ. ಈ ಜೈಲಿನ ಕೆಲವು ಭಾಗಗಳು ಅಂದರೆ ಕ್ಯಾಂಟೀನ್, ಸಭೆ ನಡೆಸುವ ಕೋಣೆಗಳು ಇತ್ಯಾದಿಗಳು ಪ್ರವಾಸಿಗರ ಭೇಟಿಗೆ ತೆರೆದಿರುತ್ತದೆ ಅಲ್ಲದೆ ನೀವು ಇದರ ಕಾಂಪೌಂಡಿಗೂ ಭೇಟಿ ನೀಡಬಹುದಾಗಿದೆ.

ಸಂಗಾರೆಡ್ಡಿ ಜೈಲು

ಸಂಗಾರೆಡ್ಡಿ ಜೈಲು

ಇಡೀ ಜಗತ್ತಿನಲ್ಲಿಯೇ ಒಂದು ವಿಭಿನ್ನವಾದ ರೀತಿಯಿಂದ ಕೂಡಿದ ಸಂಗಾರೆಡ್ಡಿ ಜೈಲಿಗೆ 220 ವರ್ಷಗಳ ಹಿಂದಿನ ಇತಿಹಾಸವಿದೆ ಮತ್ತು ಇದನ್ನು 18 ನೇ ಶತಮಾನದಲ್ಲಿ ಹೈದರಾಬಾದಿನ ನಿಜಾಮನಿಂದ ನಿರ್ಮಿಸಲ್ಪಟ್ಟಿತು. ಇಂದು ಈ ಪ್ರಾಚೀನ ಜೈಲು ಇಂದು, ಈ ಪ್ರಾಚೀನ ಜೈಲು 'ಫೀಲ್ ದಿ ಜೈಲ್' ( 'ಜೈಲನ್ನು ಅನುಭವಿಸಿ') ಯೋಜನೆಯನ್ನು ಉತ್ತೇಜಿಸಲು ಪ್ರಸಿದ್ಧವಾಗಿದೆ, ಇದು ಸಾಮಾನ್ಯ ಮನುಷ್ಯನಿಗೆ ಜೈಲಿನಲ್ಲಿ ಜೀವನವನ್ನು ಅನುಭವಿಸಲು ತೆಲಂಗಾಣ ಸರ್ಕಾರವು ಅನುವುಮಾಡಿಕೊಟ್ಟಿದೆ. ಇದಕ್ಕಾಗಿ ನೀವು 500 ರೂಪಾಯಿಗಳನ್ನು ಒಂದು ರಾತ್ರಿ ಜೈಲಿನ ಒಳಗೆ ಕಳೆಯಲು ಖರ್ಚು ಮಾಡಬೇಕಾಗುತ್ತದೆ ಮತ್ತು ಒಂದು ಕೈದಿಯ ಜೀವನವನ್ನು ಅನುಭವಿಸ ಬಹುದಾಗಿದೆ. ನಿಮಗೆ ಒಬ್ಬ ಕೈದಿಗೆ ಕೊಡಲಾಗುವ ಸೌಕರ್ಯತೆಗಳನ್ನು ಮಾತ್ರ ಕೊಡಲಾಗುವುದು. ಇಂತಹ ಒಂದು ಅನುಭವವನ್ನು ಪಡೆಯಲು ನೀವು ಇಷ್ಟ ಪಡುವುದಿಲ್ಲವೆ? ಸಂಗಾರೆಡ್ಡಿ ಜೈಲು ತೆಲಂಗಾಣದ ಮೇದಕ್ ನಲ್ಲಿದೆ.

ವೈಪರ್ ದ್ವೀಪಗಳ ಸೆರೆಮನೆಗಳು

ವೈಪರ್ ದ್ವೀಪಗಳ ಸೆರೆಮನೆಗಳು

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಇನ್ನೊಂದು ಪ್ರವಾಸಿಗಳನ್ನು ಆಕರ್ಷಿಸುವ ಬಂಧೀಖಾನೆಯೆಂದರೆ ವೈಪರ್ ದ್ವೀಪಗಳ ಸೆರೆಮನೆಗಳಾಗಿದ್ದು, ಇವು ಹೆಸರೇ ಸೂಚಿಸುವಂತೆ ವೈಪರ್ ದ್ವೀಪದಲ್ಲಿದ್ದು ರಾಜಧಾನಿ ಪೊರ್ಟ್ ಬ್ಲೇರ್ ನಿಂದ ಸುಮಾರು 4 ಕಿಮೀ ಅಂತರದಲ್ಲಿದೆ. ವೈಪರ್ ದ್ವೀಪವು ಒಂಡು ಮಹತ್ವದ ಪ್ರವಾಸೀ ಕೇಂದ್ರವಾಗಿದೆ ಮತ್ತು ಇದರ ಪ್ರಾಚೀನ ಸೆರೆಮನೆಗಳನ್ನು ಬ್ರಿಟಿಷರು ಸೆಲ್ಯೂಲಾರ್ ಜೈಲು ಅಸ್ತಿತ್ವಕ್ಕೆ ಬರುವ ಮೊದಲು ತಪ್ಪಿತಸ್ಥರನ್ನು ಶಿಕ್ಷಿಸಲು ಉಪಯೋಗಿಸುತ್ತಿದ್ದರು . ಇದು ಇಲ್ಲಿಯ ಸಂದರ್ಶಕರ ಗಮನ ಸೆಳೆಯುತ್ತದೆ.

ವೈಪರ್ ದ್ವೀಪಗಳ ಸೆರೆಮನೆಗಳು ಇಂದು ಶಿಥಿಲವಾದ ಸ್ಥಿತಿಯಲ್ಲಿದೆಯಾದರೂ, ಇದು ಹಲವಾರು ಇತಿಹಾಸ ಪ್ರೇಮಿಗಳಿಗೆ ಇನ್ನೂ ಒಂದು ಪ್ರವಾಸಿ ತಾಣವಾಗಿದೆ. ನೀವೇನಾದರೂ ಭಾರತದ ಜೈಲುಗಳ ಬಗ್ಗೆ ಮತ್ತು ತಪ್ಪಿತಸ್ಥರು ಇಲ್ಲಿ ಯಾವ ರೀತಿಯಲ್ಲಿ ಶಿಕ್ಷೆಗೊಳಗಾಗುತ್ತಿದ್ದರು ಎಂಬುವುದನ್ನು ತಿಳಿಯಬೇಕಾದಲ್ಲಿ ಈ ಪ್ರಾಚೀನ ಭವ್ಯತೆಗಳನ್ನು ಪ್ರತಿಬಿಂಬಿಸುವ ಜೈಲುಗಳಿಗೆ ಒಮ್ಮೆ ಭೇಟಿ ಕೊಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X