Search
  • Follow NativePlanet
Share
» »ರುದ್ರರಮಣೀಯ ಗೋಪಾಲಸ್ವಾಮಿ ಬೆಟ್ಟಕ್ಕೆ ಒಮ್ಮೆ ಭೇಟಿ ಕೊಡಿ

ರುದ್ರರಮಣೀಯ ಗೋಪಾಲಸ್ವಾಮಿ ಬೆಟ್ಟಕ್ಕೆ ಒಮ್ಮೆ ಭೇಟಿ ಕೊಡಿ

ಕರ್ನಾಟಕದ ಚಾಮರಾಜನಗರದಲ್ಲಿ ನೆಲೆಸಿರುವ ಗೋಪಾಲಸ್ವಾಮಿ ಬೆಟ್ಟವು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅತ್ಯಂತ ಎತ್ತರದ ಶಿಖರವೂ ಆಗಿದೆ. ಈ ಬೆಟ್ಟವು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ದಟ್ಟಾವಾದ ಕಾಡಿನ ಮಧ್ಯೆ ನೆಲೆಸಿದ್ದು ಹಲವಾರು ಜಾತಿಯ ವನ್ಯಜೀವಿಗಳಿಗೆ ನೆಲೆಯಾಗಿದೆ.

ಮೈಸೂರಿನಿಂದ ಊಟಿಗೆ ಖಾಸಗಿ ವಾಹನದಲ್ಲಿ ಪ್ರಯಾಣ ಮಾಡಬೇಕೆಂದು ಯೋಚಿಸುತ್ತಿರುವ ಪ್ರಯಾಣಿಕರು ಈ ಸುಂದರ ಸ್ಥಳವನ್ನೂ ಪ್ರಯಾಣದ ಪಟ್ಟಿಯಲ್ಲಿ ಸೇರಿಸಬಹುದಾಗಿದೆ.

gopalaswamyhill

ಬೆಟ್ಟದ ರಮಣೀಯ ನೋಟ

ಈ ಪ್ರಶಾಂತವಾದ ಸ್ಥಳವು ಬೆಂಗಳೂರಿನಿಂದ ಸುಮಾರು 220 ಕಿಮೀ ಮತ್ತು ಮೈಸೂರಿನಿಂದ ಸುಮಾರು 75 ಕಿಮೀ ದೂರದಲ್ಲಿದೆ. ಈ ಬೆಟ್ಟವು ಗುಂಡ್ಲುಪೇಟೆಯಿಂದ 16 ಕಿ.ಮೀ ದೂರದಲ್ಲಿದೆ. ಪ್ರಯಾಣಿಕರು ಊಟಿ-ಮೈಸೂರು ಮಾರ್ಗವಾಗಿ ಬಂಡೀಪುರ ಕಡೆಗೆ ಪ್ರಯಾಣವನ್ನು ಮುಂದುವರಿಸಬಹುದು. ಗುಂಡ್ಲುಪೇಟೆ ತಲುಪಿದ ನಂತರ, ಗುಂಡ್ಲುಪೇಟೆಯಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಹಂಗಳಕ್ಕೆ ಪ್ರಯಾಣಿಸಿ.

ಹಂಗಾಳದಿಂದ 16 ಕಿಲೋಮೀಟರ್ ಗಳಷ್ಟು ದೂರ ಪ್ರಯಾಣಿಸಿದಲ್ಲಿ ಸುಂದರವಾದ ಗೋಪಾಲಸ್ವಾಮಿ ಬೆಟ್ಟವನ್ನು ತಲುಪಬಹುದಾಗಿದೆ. ಈ ಬೆಟ್ಟಕ್ಕೆ ಉತ್ತಮವಾದ ಮಾರ್ಗವಿರುವುದರಿಂದ ತುದಿಯವರೆಗೆ ಸುಲಭವಾಗಿ ಪ್ರಯಾಣಿಸಬಹುದಾಗಿದೆ.

ಪ್ರಯಾಣಿಕರು ಮುಂದೆ ಚಲಿಸಲು ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ನಲ್ಲಿ ಪ್ರವೇಶ ದರವನ್ನು ನೀಡಬೇಕಾಗುತ್ತದೆ. ಹಾಗೂ ಪ್ರಯಾಣಿಕರಿಗೆ ಈ ಬೆಟ್ಟಕ್ಕೆ ಭೇಟಿ ಕೊಡಲು ಬೆಳಿಗ್ಗೆ 8 ರಿಂದ ಸಾಯಂಕಾಲ 4.30 ರ ವರೆಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಈ ಬೆಟ್ಟವು ತನ್ನಲ್ಲಿರುವ ಸುಂದರವಾದ ಭೂದೃಶ್ಯಗಳನ್ನು ಮಾತ್ರ ಒಳಗೊಂಡಿರುವುದಲ್ಲದೆ ಹಿಮವದ್ ಗೋಪಾಲಸ್ವಾಮಿ ಎಂದೂ ಕರೆಯಲ್ಪಡುವ ಶ್ರೀಕೃಷ್ಣ ದೇವರಿಗೆ ಅರ್ಪಿತವಾದ ದೇವಾಲಯವನ್ನೂ ಒಳಗೊಂಡಿದೆ.

gopalaswamyhill

ದೇವಾಲಯದ ಮೇಲ್ನೋಟ

ಈ ದೇವಾಲಯದ ಇತಿಹಾಸದ ಬಗ್ಗೆ ಹೇಳಬೇಕೆಂದರೆ, ಇದು ಕಿ.ಶ 1315 ರಲ್ಲಿ ಹೊಯ್ಸಳರ ರಾಜನಾಗಿದ್ದ ಬಲ್ಲಾಳನಿಂದ ನಿರ್ಮಿಸಲ್ಪಟ್ಟಿತು. ಈ ದೇವಾಲಯವು ಬಂಡೀಪುರ ಅರಣ್ಯದ ಹೃದಯಭಾಗದಲ್ಲಿದೆ ಆದ್ದರಿಂದ ಸುತ್ತಮುತ್ತಲಿನ ಮನಮೋಹಕ ನೋಟಗಳನ್ನು ನೀಡುತ್ತಾ ಈ ದೇವಾಯವು ಅಸಂಖ್ಯಾತ ಜನ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.

gopalaswamyhill

ಬೆಟ್ಟದ ಮೇಲೆ ನೆಲೆಸಿರುವ ದೇವಾಲಯ

ಗೋಪಾಲ ಸ್ವಾಮಿ ಬೆಟ್ಟವನ್ನು ಪ್ರವೇಶಿಸುವುದಕ್ಕೆ ಹಲವಾರು ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕಾಗುತ್ತದೆ. ಈ ಬೆಟ್ಟಕ್ಕೆ ಹೋಗುವ ಪ್ರವಾಸಿಗರು ಆಲ್ಕೋಹಾಲ್ ಸೇವನೆ ಅಥವಾ ಅಲ್ಲಿಗೆ ಒಯ್ಯುವಂತಿಲ್ಲ ಅಲ್ಲದೆ ಸಿಗರೇಟು ಸೇವನೆಯನ್ನೂ ಇಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಅಷ್ಟೇ ಅಲ್ಲದೆ ಈ ಸಂಪೂರ್ಣ ಪ್ರದೇಶವು ಪ್ಲಾಸ್ಟಿಕ್ ರಹಿತ ಪ್ರದೇಶವಾಗಿದ್ದು, ಬೆಟ್ಟದ ಮೇಲೆ ಯಾವುದೇ ಆಹಾರವೂ ಸಿಗುವುದಿಲ್ಲ ಆದ್ದರಿಂದ ಪ್ರಯಾಣಿಕರು ತಮ್ಮ ಜೊತೆ ಆಹಾರವನ್ನೂ ಕೊಂಡೊಯ್ಯಲು ಶಿಫಾರಸು ಮಾಡಲಾಗಿದೆ ಆದರೆ ಯಾವುದೇ ಕಸವನ್ನು ತ್ಯಾಜ್ಯವನ್ನು ಹಾಕಲು ಮತ್ತು ಸುಂದರ ಸ್ಥಳವನ್ನು ಮಲಿನ ಮಾಡಲು ಇಲ್ಲಿ ಅನುಮತಿಸಲಾಗುವುದಿಲ್ಲ. ಅರಣ್ಯ ಇಲಾಖೆಯಿಂದ ಪೂರ್ವಾನುಮತಿ ಪಡೆದರೆ ಮಾತ್ರ ಚಾರಣ ಮತ್ತು ವೀಡಿಯೋಗ್ರಫಿಗೆ ಅವಕಾಶವಿದ್ದು, ಪ್ರಯಾಣಿಕರು ಅರಣ್ಯ ಇಲಾಖೆಯ ಗೈಡ್‌ಗಳ ಜೊತೆಗಿರಬೇಕು.

gopalaswamyhill

ಬೆಟ್ಟಗಳಿಗೆ ದಾರಿ

ಗೋಪಾಲಸ್ವಾಮಿ ಬೆಟ್ಟದಲ್ಲಿ ತಂಗಲು ಇಚ್ಛಿಸುವ ಪ್ರವಾಸಿಗರು ತಮ್ಮ ವಸತಿಯನ್ನು ಮುಂಚಿತವಾಗಿ ಕಾಯ್ದಿರಿಸಬೇಕು ಮತ್ತು ಬುಕ್ ಮಾಡುವ ಮೊದಲು ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಾಗುತ್ತದೆ. ಬೆಟ್ಟದ ತುದಿಯಲ್ಲಿ ಅರಣ್ಯ ಇಲಾಖೆಯಿಂದ ನಿರ್ವಹಿಸಲ್ಪಡುವ ಅತಿಥಿ ಗೃಹವಿದ್ದು, ಪ್ರಯಾಣಿಕರು ಬಂಡೀಪುರ ಅರಣ್ಯಾಧಿಕಾರಿಗಳ ಮೂಲಕ ಮುಂಗಡವಾಗಿ ತಮ್ಮ ವಸತಿಯನ್ನು ಕಾಯ್ದಿರಿಸಬಹುದಾಗಿದೆ.

ಅತಿಥಿ ಗೃಹವು ಮೂಲಭೂತ ಸೌಕರ್ಯಗಳನ್ನು ನೀಡುತ್ತದೆ ಮತ್ತು ಪ್ರಯಾಣಿಕರು ಆಹಾರ ಮತ್ತು ಇತರ ಮೂಲಭೂತ ಅಗತ್ಯಗಳನ್ನು ತಮ್ಮೊಂದಿಗೆ ಕೊಂಡೊಯ್ಯಬೇಕು ಏಕೆಂದರೆ ಅತಿಥಿ ಗೃಹದಲ್ಲಿ ಆಹಾರದ ವ್ಯವಸ್ಥೆ ಇರುವುದಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X