Search
  • Follow NativePlanet
Share
» »ಹಿಮಾಲಯದ 10 ಬಜೆಟ್‌ ಸ್ನೇಹಿ ಟ್ರೆಕ್ ತಾಣಗಳಿವು

ಹಿಮಾಲಯದ 10 ಬಜೆಟ್‌ ಸ್ನೇಹಿ ಟ್ರೆಕ್ ತಾಣಗಳಿವು

ಹಿಮಾಲಯದ ಶ್ರೇಣಿಗಳು ದೇಶದ ಉತ್ತರ ಭಾಗದದುದ್ದಕ್ಕೂ ಎತ್ತರಕ್ಕೆ ಬೆಳೆದು ನಿಂತಿದೆ ಮತ್ತು ಇವು ನೆರೆಹೊರೆಯ ದೇಶಗಳವರೆಗೂ ಹಬ್ಬಿವೆ. ಈ ಬೃಹತ್ ಹಿಮಾಲಯವು ಜಗತ್ತಿನಲ್ಲಿಯೇ ಅತ್ಯಂತ ಎತ್ತರವಾದ ಕೆಲವು ಶಿಖರಗಳಿಗೆ ನೆಲೆಯಾಗಿವೆ. ಈ ಪರ್ವತ ಶ್ರೇಣಿಗಳು ಒಂದು ಉತ್ತಮವಾದ ತಾಣಗಳಾಗಿ ಮಾರ್ಪಟ್ಟಿದ್ದು ಇವು ಅಸಂಖ್ಯಾತ ಚಟುವಟಿಕೆಗಳನ್ನು ನಮಗೆ ಒದಗಿಸುತ್ತದೆ. ಅವುಗಳಲ್ಲಿ ಟ್ರಕ್ಕಿಂಗ್, ಪ್ಯಾರಾಗೈಡ್ಲಿಂಗ್, ರಿವರ್ ರಾಫ್ಟಿಂಗ್ ಮತ್ತು ಇನ್ನೂ ಅನೇಕ ವಿಷಯಗಳನ್ನು ಪಟ್ಟಿ ಮಾಡಬಹುದಾಗಿದೆ.

ಈ ಬೃಹತ್ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿಯ ಅರಳುತ್ತಿರುವ ಹೂವುಗಳನ್ನೊಳಗೊಂಡ ದಟ್ಟವಾದ ಹಸಿರು ಪ್ರಕೃತಿಯ ಜೊತೆಯಲ್ಲಿ ನಡೆದಾಡುತ್ತಿರಬೇಕಾದರೆ ನಮಗೆ ಶಾಂತಿಯುತವಾದ ಮತ್ತು ಪ್ರಶಾಂತತೆಯ ಅನುಭವವನ್ನು ಕೊಡುವುದರಲ್ಲಿ ಸಂಶಯವೇ ಇಲ್ಲ.

ಇದಕ್ಕೆ ಸರಿಸಾಟಿ ಎನ್ನುವಂತೆ ಅಲ್ಪೈನ್ ಕಾಡುಗಳ ಉದುರಿಕೊಳ್ಳುವ ಕಂದು ಎಲೆಗಳು ಕೂಡಾ ಸೇರಿಕೊಳ್ಳುತ್ತದೆ. ಇಲ್ಲಿ ಕೆಲವನ್ನು ನಿಮ್ಮ ಸಂಶೋಧನೆಯೊಳಗೆ ಬರುವಂತೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ನಾವು ನಿಮಗೆ ನಿಮಗೆ ಅನುಕೂಲವಾಗುವಂತಹ ನಿಮಗೆ ಎಟುಕಬಹುದಾದಂತಹ ಮತ್ತು ಹಿಮಾಲಯದ ಸೌಂದರ್ಯತೆಗಳನ್ನು ಸೆರೆಹಿಡಿಯಬಹುದಾದಂತಹ ಪಾಕೆಟ್ ಸ್ನೇಹಿ ತಾಣಗಳ ಪಟ್ಟಿ ಮಾಡಿದ್ದೇವೆ.

ಚಂದ್ರಾಖನಿ ಪಾಸ್

ಚಂದ್ರಾಖನಿ ಪಾಸ್

ಚಂದ್ರಾಖನಿ ಪಾಸ್ ಮಲಾನಾ ಹಳ್ಳಿಯ ಮೇಲ್ಚಾವಣಿಯಂತೆ ಇದೆ. ಇದು ಇತ್ತೀಚೆಗಷ್ಟೇ ಪ್ರವಾಸಿಗರಿಗೆ ಭೇಟಿ ನೀಡುವ ಅವಕಾಶವನ್ನು ಒದಗಿಸಿದೆ. ಇದು ಸಣ್ಣ ತೊರೆಗಳ ಮೂಲಕ ಹಾದು ಹೋಗುತ್ತದೆ ಮತ್ತು ಇದರ ಕಿರಿದಾದ ತುದಿಗಳು ಟ್ರಕ್ಕಿಂಗ್ ಮಾಡಲು ಇನ್ನೂ ಹೆಚ್ಚು ಉತ್ತೇಜನವನ್ನು ನೀಡುತ್ತದೆ. ಈ ಜಾಗದಲ್ಲಿ ಸಪ್ತ ಋಷಿ ಜಮದಗ್ನಿಯು ಹಲವಾರು ವರ್ಷಗಳ ಕಾಲ ಧ್ಯಾನ ಮಾಡಿದ್ದರೆಂದು ನಂಬಲಾಗುತ್ತದೆ ಆದುದರಿಂದ ಈ ಸ್ಥಳಕ್ಕೆ ಧಾರ್ಮಿಕ ಮಹತ್ವವನ್ನೂ ಕೊಡಲಾಗಿದೆ. ಈ ಪಾಸ್ ನಲ್ಲಿ ಅತ್ಯಂತ ಉತ್ತಮವಾದ ಸುಂದರ ದೃಶ್ಯವನ್ನು ಒಳಗೊಂಡ ಟ್ರಕ್ಕಿಂಗ್ ದಾರಿಗಳನ್ನು ಒಳಗೊಂಡಿದೆ ಇವುಗಳಲ್ಲಿ ದೇವದಾರು, ಆಲ್ಪೈನ್ಗಳು, ಗೋಲ್ಡನ್ ಓಕ್ಸ್ ಗಳು ಅನೇಕ ಗಿಡಮೂಲಿಕೆಗಳು ಮತ್ತು ಹಣ್ಣುಗಳನ್ನು ಒಳಗೊಂಡಿವೆ.

ಡಿಯೋ ಟಿಬ್ಬಾ ಬೇಸ್

ಡಿಯೋ ಟಿಬ್ಬಾ ಬೇಸ್

ಇದು ಹಿಮಾಲಯ ಶ್ರೇಣಿಗಳಲ್ಲಿಯ ಅತ್ಯಂತ ಸುಂದರವಾದ ದೃಶ್ಯಾವಳಿಗಳನ್ನೊಳಗೊಂಡ ಟ್ರಕ್ಕಿಂಗ್ ತಾಣಗಳಲ್ಲೊಂದಾಗಿದೆ. ಇದು ನಿಮ್ಮನ್ನು ಸುಂದರವಾದ ಓಕ್ ಮತ್ತು ದೇವದಾರು ಮರಗಳಿಂದ ರಚಿಸಲಾದ ಹಸಿರು ಹುಲ್ಲುಗಾವಲುಗಳ ಮೂಲಕ ಬೆರಗುಗೊಳಿಸುತ್ತದೆ. ಇದೇ ಡಿಯೋ ಟಿಬ್ಬಾ ಪಾಸ್ ಇದು ಪೀರ್ ಪ್ರಾಂಜಲ್ ಸಮೂಹದಲ್ಲಿಯ ಅತ್ಯಂತ ಎತ್ತರವಾದುದರಲ್ಲಿ ಒಂದಾಗಿದೆ. ಈ ಟ್ರಕ್ ಹುಲ್ಲುಗಾವಲುಗಳು, ಭೂದೃಶ್ಯಗಳು ಆಲ್ಪೈನ್ ಕಾಡುಗಳು ದೃಶ್ಯಾವಳಿಗಳು ಮತ್ತು ಎತ್ತರದಿಂದ ಬೀಳುವ ಜಲಪಾತಗಳು ಇವೆಲ್ಲದರ ಒಂದು ಪರಿಪೂರ್ಣ ಸಂಯೋಜನೆಯಾಗಿದೆ. ಅಲ್ಲದೆ ಇಲ್ಲಿ ಹಿಮಚ್ಚಾದಿತ ಪರ್ವತ ಶಿಖರಗಳನ್ನೂ ಕೂಡಾ ನೋಡಬಹುದಾಗಿದೆ ಇದರಿಂದಾಗಿ ಇದಕ್ಕೆ ಮಿನಿಚಂದ್ರಾತಲ್ ಎಂಬ ಅಡ್ಡ ಹೆಸರನ್ನೂ ನೀಡಲಾಗಿದೆ.

ಭೃಗು ಸರೋವರ

ಭೃಗು ಸರೋವರ

ಭೃಗುವಿಗೆ ಹೋಗುವ ಹಾದಿಯು ಕಿರಿದಾದ ಮಾರ್ಗಗಳ ನೆಲೆಯಾಗಿದೆ ಇವು ಹಿಮಗಳ ಬೃಹತ್ ಬಂಡೆಗಳಿಂದ ಆವರಿಸಲ್ಪಟ್ಟಿದ್ದು ಕೆಲವು ಸಮಯಗಳಲ್ಲಿ ಇಲ್ಲಿಗೆ ಹೋಗುವುದು ಕಷ್ಟಕರವಾಗಿರುತ್ತದೆ. ಈ ಜಾಡು ಕೆಲವು ಯಾವ ಮಾಲಿನ್ಯವೂ ಸೋಕದೇ ಇರುವ ಕಾಡುಗಳಲ್ಲಿ ಹಾಗೂ ಪ್ರಕೃತಿ ತಾಯಿಯ ಒಂದು ನಿಷ್ಕಲ್ಮಶ ಪ್ರದರ್ಶನದೊಂದಿಗೆ ಹಾದು ಹೋಗುತ್ತದೆ. ಈ ಸ್ಥಳದಲ್ಲಿ ಭೃಗು ಮುನಿಯು ಧ್ಯಾನ ಮಾಡಿದುದರಿಂದ ಈ ಕೊಳಕ್ಕೆ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಈ ಜಾಡಿನಲ್ಲಿ ಮುಂದೆ ಹೋದಂತೆ ಕುಲ್ಲು ಮತ್ತು ಸೋಲಾಂಗ್ ಕಣಿವೆಗಳ ಸೌಂದರ್ಯತೆಗಳನ್ನೂ ಕೂಡಾ ನೋಡಿ ಆನಂದಿಸಬಹುದು.

ಪಂಗರ್ಚುಲ್ಲಾ ಶಿಖರ

ಪಂಗರ್ಚುಲ್ಲಾ ಶಿಖರ

ಹಿಮಾಲಯದ ಕಡಿಮೆ ಪ್ರಸಿದ್ದಿ ಹೊಂದಿದ ಶಿಖರಗಳಲ್ಲೊಂದು ಎಂದರೆ ಅದು ಪಂಗರ್ಚುಲ್ಲ ಶಿಖರ. ಈ ಶಿಖರಕ್ಕೆ ಚಾರಣವು ಪ್ರಸಿದ್ದ ಕೌರಿ ಪಾಸ್ ನ ಹಾದಿಯ ಮೂಲಕ ಪ್ರಾರಂಭವಾಗುತ್ತದೆ ಮತ್ತು ಇದು ನಂದಾದೇವಿ ಶಿಖರದ ಅತ್ಯಂತ ಬೆರಗುಗೊಳಿಸುವ ದೃಶ್ಯಗಳನ್ನು ನೋಡುವ ಅವಕಾಶಗಳನ್ನು ಒದಗಿಸುತ್ತದೆ. ಅಲ್ಲದೆ ಈ ಹಾದಿಯಲ್ಲಿ ರಕ್ತ-ಕೆಂಪು ಬಣ್ಣದ ರೋಡೋಡೆಂಡ್ರೋನ್ಸ ಗಳಿರುವ ಹಾದಿಯಲ್ಲಿ, ಹಸಿರಿನಿಂದ ಆವೃತವಾದ ಕಣಿವೆಗಳು ಮತ್ತು ಓಕ್ಸ್, ಸಿಲ್ವರ್ ಬಿರ್ಚ್ ನೀಲಿಪೈನ್ ಮತ್ತು ಇನ್ನೂ ಅನೇಕ ಮರಗಳ ಕಣಿವೆಗಳ ಮೂಲಕ ಹಾದುಹೋಗುತ್ತದೆ.

ಇಂದ್ರಹಾರ್ ಪಾಸ್

ಇಂದ್ರಹಾರ್ ಪಾಸ್

ದೇವದಾರಿನ ತೋಟಗಳಿಂದ ತುಂಬಿರುವ ಇಂದ್ರಹಾರ್ ಪಾಸ್ ನೀರಿನಿಂದ ಕೂಡಿದ ಅದ್ಬುತಗಳನ್ನು, ಹಸಿರು ಹುಲ್ಲುಗಾವಲು, ಮತ್ತು ರೊಡೋಡೆಂಡ್ರೊನ್ ಕಾಡುಗಳಿಂದ ತುಂಬಿಕೊಂಡಿದೆ. ಈ ಹಾದಿಯು ನಿಮಗೆ ದೌಲಾಧಾರ್ ಮತು ಪಿರ್ ಪ್ರಾಂಜಲ್ ಪರ್ವತ ಶ್ರೇಣಿಗಳ ನೋಟವನ್ನು ನೋಡುವ ಅವಕಾಶ ಒದಗಿಸುತ್ತದೆ. ಧರಂಶಾಲಾದ ಹತ್ತಿರವಿರುವ ಗಲ್ಲು ದೇವಿ ದೇವಾಲಯದಿಂದ ಪ್ರಾರಂಭವಾಗುವ ಪ್ರಕೃತಿಯ ಈ ಸುಂದರ ದೃಶ್ಯಗಳು ಭೇಟಿ ಕೊಡುವವರು ಮಾರುಹೋಗುವಂತೆ ಮಾಡುತ್ತದೆ.

ಸಂದಕ್ಪು

ಸಂದಕ್ಪು

ಸಂದಕ್ಫು ವಿನ ತಾಣವು ಸ್ವರ್ಗವೇ ಧರೆಗೆ ಇಳಿದಂತ ಅನುಭವವನ್ನು ನೀಡುವ ಸ್ಥಳವಾಗಿದೆ. ಈ ಜಾಗವು ಜಗತ್ತಿನ ಅತ್ಯಂತ ಎತ್ತರದ ಎರಡು ಶಿಖರಗಳ ನೆಲೆಯಾಗಿದೆ ಮತ್ತು ಇಲ್ಲಿ ಕ್ಯಾಂಪ್ ಮಾಡಲು ಹಲವಾರು ಆಯ್ಕೆಗಳನ್ನು ನೀಡುತ್ತದೆ. ಇಲ್ಲಿಯ ಚಾರಣವು ಮುಂದುವರಿಯುತ್ತಾ ಹೋಗುತ್ತದೆ.

ಈ ಪರ್ವತಗಳು ಗಡಿಯನ್ನು ಹೊಂದಿರದ ಕಾರಣದಿಂದಾಗಿ ನೇಪಾಳದ ಕೆಲವು ಭಾಗಗಳಿಗೆ ಭಾರತವು ಜೊತೆಗೆ ಚಾರಣ ವಿಸ್ತರಿಸಿದೆ. ಸಂದಕ್ಪುವಿನ ತಪ್ಪಲಿನಿಂದ ಮತ್ತು ರೊಡೊಡೆಂಡ್ರೋನ್ಸ್ ಕಾಡುಗಳ ಅರಳುವ ಮ್ಯಾಗ್ನೋಲಿಯಾಗಳ ಮಧ್ಯದಲ್ಲಿ ಎವರೆಸ್ಟ್ , ಕಾಂಚನಜುಂಗಾ ಲೋಟ್ಸೆ ಮತ್ತು ಮಾಕಲು ಪರ್ವತ ಶಿಖರಗಳನ್ನು ನೋಡಬಹುದಾಗಿದೆ.

ಕೌರಿ ಪಾಸ್

ಕೌರಿ ಪಾಸ್

ಹಿಮಾಲಯ ಪ್ರಾಂತ್ಯದ ಕೌರಿಪಾಸ್ ನ ಲ್ಲಿ ಟ್ರಕ್ಕಿಂಗ್ ಮಾಡುವುದು ಒಂದು ಅತ್ಯಂತ ಆಕರ್ಷಕ ಸಣ್ಣ ಟ್ರಕ್ ಗಳಲ್ಲಿ ಒಂದಾಗಿದೆ ಇದು ಟ್ರಕ್ಕಿಂಗ್ ಪ್ರಾರಂಭಿಕ ಹಂತದಲ್ಲಿರುವವರಿಗೆ ಹೇಳಿ ಮಾಡಿಸಿದಂತಿದೆ. ಇಲ್ಲಿಯ ಟ್ರಕ್ಕಿಂಗ್ ದಾರಿಗಳು ಕುರಿಕಾಯುವ ಸ್ಥಳೀಯರಿಂದ ತಮ್ಮ ಜಾನುವಾರುಗಳನ್ನು ಕಾಯುವ ಕಾರಣಕ್ಕಾಗಿ ಹೆಚ್ಚಾಗಿ ಉಪಯೋಗಿಸಲ್ಪಟ್ಟಿದೆ . ನೀವು ಒಮ್ಮೆ ಇದರ ತಪ್ಪಲಿಗೆ ತಲುಪಿದಲ್ಲಿ ನಂದಾದೇವಿ ಶಿಖರದ ಮಂತ್ರಮುಗ್ದಗೊಳಿಸುವ ಸುಂದರ ನೋಟಗಳನ್ನು ನೋಡಲು ತಯಾರಾಗಿ.

ಕೇದಾರ್ ಕಾಂತಾ

ಕೇದಾರ್ ಕಾಂತಾ

ತನ್ನ ಮೂಲ ಸೌಂದರ್ಯತೆ ಹಾಗೂ ಅದ್ಬುತವಾದ ಕ್ಯಾಂಪಿಗ್ ತಾಣಗಳನು ಹೊಂದಿರುವ ಹಿಮಾಲಯದ ಟ್ರಕ್ಕಿಂಗ್ ತಾಣಗಳಲ್ಲಿ ಕೇದಾರ್ ಕಾಂತಾ ಕೂಡಾ ಒಂದಾಗಿದೆ. ಇಲ್ಲಿ ಹಿಮಚ್ಚಾದಿತ ಶಿಖರಗಳ ನೋಟವನ್ನು ಸೆರೆಹಿಡಿಯಬಹುದು ಮತ್ತು ನೀವು 360 ಡಿಗ್ರಿಗಳಷ್ಟು ಸುಂದರವಾದ ಶಿಖರಗಳ ತಪ್ಪಲಿನ ಸುಂದರವಾದ ದವಡೆಯಿಂದ ಬೀಳುವಂತಹ ನೋಟದೊಂದಿಗೆ ಕೊನೆಗೊಳ್ಳುವ ಟ್ರೆಕ್ಕಿಂಗ್ ಹಾದಿಯಲ್ಲಿ ನಿಮ್ಮ ದಾರಿ ಮಾಡಿಕೊಂಡು ಹಿಮದ ಮುಚ್ಚಿದ ಶಿಖರಗಳ ದೃಶ್ಯವನ್ನು ಸೆರೆ ಹಿಡಿಯಬಹುದು.

ರೂಪ್ ಕುಂಡ್

ರೂಪ್ ಕುಂಡ್

ಈ ಚಾರಣವು ನಿಮ್ಮನ್ನು ರೂಪ್ ಕುಂಡ್ ನ ಕೊಳದ ಕಡೆಗೆ ಕೊಂಡೊಯ್ಯುತ್ತದೆ ಇದನ್ನು ರಹಸ್ಯಗಳ ಸರೋವರ ಮತ್ತು ಸ್ಕೆಲಿಟನ್ ಲೇಕ್ (ಅಸ್ಥಿಪಂಜರಗಳ ಕೊಳ) ಎಂದೂ ಕೂಡಾ ಕರೆಯಲಾಗುತ್ತದೆ. ಈ ಹಿಮಭರಿತ ಚಾರಣದ ಸ್ಥಳವು ಅನೇಕ ನೈಸರ್ಗಿಕ ಹಾಗೂ ಹುಲ್ಲುಗಾವಲುಗಳನ್ನು ಒಳಗೊಂಡ ಅದ್ಬುತಗಳಿಗೆ ನೆಲೆಯಾಗಿದೆ.

ಈ ಲೇಕ್ ನ ಕೊನೆಗಳಲ್ಲಿ ಅಸ್ಥಿಪಂಜರಗಳನ್ನು ನೋಡಬಹುದಾಗಿದ್ದು ಇದು 9ನೇ ಶತಮಾನದ ಒಬ್ಬ ರಾಜ ಮತ್ತುಅವನ ಸೇನೆಯವರದ್ದಾಗಿದೆ ಎಂದು ನಂಬಲಾಗುತ್ತದೆ.

ಹೂವುಗಳ ಕಣಿವೆ (ವ್ಯಾಲಿ ಆಫ್ ಫ಼್ಲವರ್ಸ್)

ಹೂವುಗಳ ಕಣಿವೆ (ವ್ಯಾಲಿ ಆಫ್ ಫ಼್ಲವರ್ಸ್)

ಹೆಸರೇ ಸೂಚಿಸುವಂತೆ ಈ ಸ್ಥಳವು ಅರಳುವ ಸುಂದರವಾದ ಹೂವುಗಳಿಗೆ ಹೆಸರುವಾಸಿಯಾಗಿದೆ. ಈ ಸ್ಥಳವು ಒಂದು ಕಡೆಯಲ್ಲಿ ಹಿಮಚ್ಚಾದಿತ ಪರ್ವತಗಳಿಂದ ಹತ್ತಿರದಲ್ಲಿ ಕಾವಲು ಕಾಯುವಂತಿದ್ದರೆ ಇನ್ನೊಂದು ಕಡೆಯಲ್ಲಿ ಕಣಿವೆಯುದ್ದಕ್ಕೂ ಹೂವುಗಳಿಂದ ಆವರಿಸಲ್ಪಟ್ಟಿದ್ದು ಈ ತಾಣವನ್ನು ಸುಂದರವಾಗಿ ಚಿತ್ರಿಸುತ್ತದೆ. ನಿಮ್ಮನ್ನು ಇದು ಸೆಳೆಯುವಲ್ಲಿ ಸಂಶಯವೇ ಇಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X