Search
  • Follow NativePlanet
Share
» »ಕಾರ್‌ ಟ್ಯಾಕ್ಸಿ ಇರೋ ಹಾಗೆ ಹೆಲಿಕಾಫ್ಟರ್ ಟ್ಯಾಕ್ಸಿ ಬರುತ್ತಂತೆ...ಎಲ್ಲಿ ಗೊತ್ತಾ?

ಕಾರ್‌ ಟ್ಯಾಕ್ಸಿ ಇರೋ ಹಾಗೆ ಹೆಲಿಕಾಫ್ಟರ್ ಟ್ಯಾಕ್ಸಿ ಬರುತ್ತಂತೆ...ಎಲ್ಲಿ ಗೊತ್ತಾ?

ಬಸ್‌ನಲ್ಲಿ ಓಡಾಡೋದಕ್ಕಿಂತ ಟ್ಯಾಕ್ಸಿಯಲ್ಲಿ ಓಡಾಡೋದನ್ನ ಹೆಚ್ಚಿನವರು ಇಷ್ಟಪಡ್ತಾರೆ. ಆ ನೂಕುನುಗ್ಗಲಿನಲ್ಲಿ ಸಿಟಿ ಬಸ್‌ನಲ್ಲಿ ಓಡಾಡೋದಂದ್ರೆ ಒಂದು ತಲೆನೋವಾಗಿರುತ್ತದೆ. ಓಲಾ ಟ್ಯಾಕ್ಸಿ ಬಂದ ನಂತರವಂತೂ ಜನರು ಬಸ್‌ನಲ್ಲಿ ಓಡಾಡೋದನ್ನೇ ಕಡಿಮೆ ಮಾಡಿದ್ದಾರೆ. ಈಗಂತೂ ಓಲಾ ಆಟೋ ಬೇರೆ ಬಂದಿದೆ. ಟ್ಯಾಕ್ಸಿಗಿಂತಲೂ ಕಡಿಮೆ ಬೆಲೆಯಲ್ಲಿ ನೀವು ಓಡಾಡಬಹುದಾಗಿದೆ.

ಹೆಲಿ-ಟ್ಯಾಕ್ಸಿ

ಹೆಲಿ-ಟ್ಯಾಕ್ಸಿ

PC: Raimond Spekking

ಟ್ಯಾಕ್ಸಿಯಲ್ಲಿ ಆದಷ್ಟು ಬೇಗನೇ ನೀವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬಹುದು. ಬಸ್‌ನಂತೆ ಅಲ್ಲಲ್ಲಿ ಸ್ಟಾಪ್ ಕೂಡಾ ಇರೋದಿಲ್ಲ. ಇಡೀ ಟ್ಯಾಕ್ಸಿ ನಿಮಗಾಗಿಯೇ ಇರುತ್ತದೆ. ನೀವು ಟ್ಯಾಕ್ಸಿಗಿಂತಲೂ ಬೇಗವಾಗಿ ತಲುಪಬೇಕೆಂದಿದ್ದರೆ. ಅಥವಾ ರಾಜ್ಯದ ಒಳಗಡೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬೇಕೆಂದಿದ್ದರೆ ವಿಮಾನದಲ್ಲಿ ಹೋಗುವಷ್ಟು ತಾಕತ್ತು ಎಲ್ಲರಲ್ಲೂ ಇರೋದಿಲ್ಲ. ಹಾಗಾಗಿ ಅವರು ಬಸ್‌ನ್ನೇ ಅವಲಂಭಿಸ್ತಾರೆ. ಆದರೆ ಇದೀಗ ಜನಸಾಮಾನ್ಯರಿಗೂ ಸಹಾ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವೇಗವಾಗಿ ಓಡಾಡುವ ಅವಕಾಶ ಮಾಡುವ ಆಲೋಚನೆಯಲ್ಲಿದೆ ಹಿಮಾಚಲ ಪ್ರದೇಶ ಸರ್ಕಾರ.

ಹಿಮಾಚಲ ಪ್ರದೇಶ ಸರ್ಕಾರದ ನಿರ್ಣಯ

ಹಿಮಾಚಲ ಪ್ರದೇಶ ಸರ್ಕಾರದ ನಿರ್ಣಯ

PC:Wiki-observer

ಹಿಮಾಚಲ ಪ್ರದೇಶ ಸರ್ಕಾರವು ಪ್ರವಾಸೋಧ್ಯಮವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಹೆಲಿಕಾಫ್ಟರ್ ಟ್ಯಾಕ್ಸಿಯನ್ನು ಚಾಲನೆ ಮಾಡುವ ನಿರ್ಧಾರ ತೆಗೆದುಕೊಂಡಿದೆ. ಹಿಮಾಚಲ ಪ್ರದೇಶ ಸರ್ಕಾರವು ರಾಜ್ಯದಾದ್ಯಂತ ಉಚಿತ ಹೆಲಿ ಆಂಬ್ಯುಲೆನ್ಸ್ ಸೇವೆಗಳನ್ನು ಪ್ರಾರಂಭಿಸಿದ ಎರಡು ವಾರಗಳ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲು ನಿರ್ಧರಿಸಿದೆ.

ಪ್ರವಾಸಿ ತಾಣಗಳಲ್ಲಿ ಹೆಲಿ ಟ್ಯಾಕ್ಸಿ

ಪ್ರವಾಸಿ ತಾಣಗಳಲ್ಲಿ ಹೆಲಿ ಟ್ಯಾಕ್ಸಿ

PC:Jackie

ರಾಜ್ಯ ಸರ್ಕಾರವು ಹಲವಾರು ಪ್ರವಾಸಿ ತಾಣಗಳಲ್ಲಿ ಹೆಲಿ-ಟ್ಯಾಕ್ಸಿ ಸೇವೆಗಳನ್ನು ಲಭ್ಯವಾಗುವಂತೆ ಮಾಡುವ ಯೋಜನೆಯನ್ನು ಹಾಕಲು ಯೋಚಿಸಿರುವುದಾಗಿ ಪ್ರವಾಸೋದ್ಯಮ ಮತ್ತು ಸಿವಿಲ್ ಏವಿಯೇಷನ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನೀಶಾ ನಂದಾ ತಿಳಿಸಿದ್ದಾರೆ.

ಇಲ್ಲಿ ಆಯುರ್ವೇದಿಕ್ ಎಣ್ಣೆ ಮಸಾಜ್‌ಗೆ ತುಂಬಾನೇ ಡಿಮ್ಯಾಂಡ್

ಪ್ರವಾಸೋಧ್ಯಮ ಉತ್ತಮಗೊಳಿಸಲು

ಪ್ರವಾಸೋಧ್ಯಮ ಉತ್ತಮಗೊಳಿಸಲು

PC:Photnart

ಹಿಮಾಚಲ ಪ್ರದೇಶಕ್ಕೆ ರಸ್ತೆ ಮೂಲಕ ಪ್ರಯಾಣಿಸುವುದು ಉತ್ತಮವಾಗಿದೆ, ಇನ್ನು ಅಲ್ಲಿನ ಬೆಟ್ಟ ಗುಡ್ಡಗಳ ಸೌಂದರ್ಯವನ್ನು ಹೆಲಿಕಾಫ್ಟರ್ ಮೂಲಕ ನೋಡಬಹುದು. ಹೆಲಿಕಾಫ್ಟರ್ ಸೌಲಭ್ಯದಿಂದಾಗಿ ಅಲ್ಲಿ ಇನ್ನಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಹಿಮಾಚಲ ಪ್ರದೇಶ ಸಫಲವಾಗಲಿದೆಯೋ ಅನ್ನೋದನ್ನು ನೋಡಬೇಕು.

ಉಡಾನ್-2ಸ್ಲೀಮ್

ಉಡಾನ್-2ಸ್ಲೀಮ್

PC:Lacen

ಸದ್ಯಕ್ಕೆ ಹಿಮಾಚಲ ಪ್ರದೇಶದಲ್ಲಿ ಮೂರು ಏರ್‌ಪೋರ್ಟ್‌ಗಳಿವೆ. ಶಿಮ್ಲಾ, ಗ್ಯಾಗ್ಗಲ್, ಮತ್ತು ಭುಂತರ್. ರಾಂಪುರ್‌, ಜಾಕ್ರಿ ಹಾಗು ಸೋಲನ್ ಜಿಲ್ಲೆಯ ಬಡ್ಡಿ, ಪನೋದ್ ಹಾಗೂ ಮನಾಲಿಯಲ್ಲಿ ಉಡಾನ್‌-2 ಸ್ಕೀಮ್ ಅಡಿಯಲ್ಲಿ ಹೆಲಿಪ್ಯಾಡ್‌ ಕಾರ್ಯಗಳು ಆರಂಭವಾಗಿವೆ ಎನ್ನಲಾಗುತ್ತದೆ.

63 ಹೆಲಿಪ್ಯಾಡ್‌ನ ಅವಶ್ಯಕತೆ

63 ಹೆಲಿಪ್ಯಾಡ್‌ನ ಅವಶ್ಯಕತೆ

PC:David Monniaux

ರಾಜ್ಯ ಸರ್ಕಾರವು ಹೆಲಿ-ಟ್ಯಾಕ್ಸಿ ಕಂಪನಿಗಳಿಗೆ ಪೂರ್ಣ ಸಹಕಾರವನ್ನು ಒದಗಿಸುತ್ತದೆ.ಈ ಮಧ್ಯೆ ಖಾಸಗಿ ಕಂಪೆನಿಗಳ ಪ್ರತಿನಿಧಿಗಳು ರಾಜ್ಯ ಸರ್ಕಾರದೊಂದಿಗೆ ಕೈ ಜೋಡಿಸಿ ರಾಜ್ಯದಲ್ಲಿ ಹೆಲಿ-ಟ್ಯಾಕ್ಸಿಗಳನ್ನು ನಿರ್ವಹಿಸಲು ಒಪ್ಪಿಕೊಂಡಿದ್ದಾರೆ.

ಹಿಮಾಚಲಪ್ರದೇಶದಲ್ಲಿ ಒಟ್ಟು 63 ಹೆಲಿಪ್ಯಾಡ್‌ಗಳ ಅಗತ್ಯವಿದೆ. ಒಮ್ಮೆ ಈ ಟೆಲಿಟ್ಯಾಕ್ಸಿ ಯೋಜನೆ ಆರಂಭವಾದಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದೆ ಎನ್ನಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more