Search
  • Follow NativePlanet
Share
» »ವಿಗ್ರಹಕ್ಕೆ ಚರ್ಮ, ಕೂದಲು: ಪ್ರಪಂಚದಲ್ಲಿನ ಏಕೈಕ ವಿಗ್ರಹ ಇದೆ....

ವಿಗ್ರಹಕ್ಕೆ ಚರ್ಮ, ಕೂದಲು: ಪ್ರಪಂಚದಲ್ಲಿನ ಏಕೈಕ ವಿಗ್ರಹ ಇದೆ....

By Sowmyabhai

ಭಾರತ ದೇಶ ಅನೇಕ ದೇವಾಲಯಗಳ ನಿಲಯ. ಇಲ್ಲಿ ಶೈವರು, ವೈಷ್ಣವರ ಜೊತೆ ಜೊತೆಗೆ ಜೈನರು ಬೌದ್ಧರು ಕೂಡ ನೆಲೆಸಿದ್ದಾರೆ. ಈ ಕ್ರಮದಲ್ಲಿ ನಿರ್ಮಾಣ ಮಾಡಿದ ದೇವಾಲಯಗಳು, ಸ್ವಯಂ ಭೂವಾಗಿ ಹೇಳಿಕೊಳ್ಳುವ ವಿಗ್ರಹಗಳಲ್ಲಿ ಕೆಲವು ದೇವಾಲಯಗಳ ಮರ್ಮಗಳನ್ನು ತಿಳಿದುಕೊಳ್ಳುವುದು ಅಸಾಧ್ಯವಾದುದು. ಸಾವಿರಾರು ವರ್ಷಗಳಿಂದ ಆ ರಹಸ್ಯವನ್ನು ತಿಳಿದುಕೊಳ್ಳಲು ಎಷ್ಟು ಮಂದಿ ಪ್ರಯತ್ನ ಪಟ್ಟರು ಕೂಡ ಸಫಲವಾಗಲಿಲ್ಲ ಎಂದೇ ಹೇಳಬಹುದು. ಇನ್ನು ಭಕ್ತರು ಮಾತ್ರವೇ ಇದೆಲ್ಲಾ ದೇವರ ಮಹಿಮೆ ಎಂದೇ ಭಾವಿಸುತ್ತಾ ಅನೇಕ ಕಾಲದಿಂದಲೂ ದೇವರನ್ನು ಆರಾಧಿಸುತ್ತಿರುತ್ತಾರೆ.

ಕೋರಿದ ಕೋರಿಕೆಗಳು ತೀರಿದ ನಂತರ ಮುಡುಪನ್ನು ಸಲ್ಲಿಸುತ್ತಾ, ಹೀಗೆಯೇ ತಮ್ಮನ್ನು ಹಾಗು ತಮ್ಮ ಮಕ್ಕಳನ್ನು ಚೆನ್ನಾಗಿ ಹರಸಬೇಕು ಎಂದು ಬೇಡಿಕೊಳ್ಳುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ ಒಂದು ಸ್ವಯಂ ಭೂವಾಗಿ ಹೇಳಿಕೊಳ್ಳುವ ನರಸಿಂಹ ಸ್ವಾಮಿ ವಿಗ್ರಹವಿದೆ. ಆಶ್ಚರ್ಯ ಏನಪ್ಪ ಎಂದರೆ ಈ ವಿಗ್ರಹಕ್ಕೆ ಚರ್ಮ, ಕೂದಲು ಇರುವುದು. ಈ ಪ್ರಮುಖವಾದ ಪುಣ್ಯಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವರಗಳನ್ನು ನೇಟಿವ್ ಪ್ಲಾನೆಟ್‍ನ ಮೂಲಕ ತಿಳಿದುಕೊಳ್ಳೊಣ.

1.ದಶಾವತಾರಗಳಲ್ಲಿ ಒಂದು...

1.ದಶಾವತಾರಗಳಲ್ಲಿ ಒಂದು...

Image source

ವಿಷ್ಣುವಿನ ದಶಾವತಾರಗಳಲ್ಲಿ ಒಂದು ಎಂದು ಹೇಳಲಾಗುವ ನರಸಿಂಹ ಅವತಾರವು ಉಗ್ರಸ್ವರೂಪವಾಗಿದೆ. ಸಿಂಹದ ತಲೆ, ಮನುಷ್ಯನ ದೇಹ ಹೊಂದಿರುವ ರೂಪವನ್ನು ನರಸಿಂಹನು ನಮಗೆ ದರ್ಶನವನ್ನು ನೀಡುತ್ತಾರೆ. ಪುರಾಣದ ಪ್ರಕಾರ ಲೋಕ ಕಂಟಕವಾಗಿದ್ದ ಹಿರಣ್ಯ ಕಶ್ಯಪನನ್ನು ಸಂಹಾರ ಮಾಡುವ ಸಲುವಾಗಿ ಹೀಗೆ ವಿಚಿತ್ರವಾದ ರೂಪದಲ್ಲಿ ಈ ನರಸಿಂಹನು ಭೂಮಿಯ ಮೇಲೆ ಅವತರಿಸಿದನು ಎಂದು ತಿಳಿದುಬಂದಿದೆ. ಅತ್ತ ಮನುಷ್ಯನಂತೆ ಅಲ್ಲದೇ, ಇತ್ತ ಜಂತುವಿನಂತೆ ಅಲ್ಲದೆ, ಹಗಲು ಅಥವಾ ರಾತ್ರಿ ಅಲ್ಲದೇ, ಮನೆಯ ಹೊರಗೆ ಅಥವಾ ಒಳಗೆ, ಭೂಮಿಯ ಮೇಲೆಯೇ ಆಗಲಿ, ಆಕಾಶದಲ್ಲಿಯೇ ಆಗಲಿ, ಯಾವುದೇ ಆಯುಧದಲ್ಲಿಯೇ ಆಗಲಿ ಹಿರಣ್ಯನಿಗೆ ಮರಣವಿರುವುದಿಲ್ಲ. ಇದರಿಂದ ಆತನ ಹಿಂಸಾಚಾರಕ್ಕೆ ಅಂತ್ಯವೇ ಇರುವುದಿಲ್ಲ. ಮುಖ್ಯವಾಗಿ ವಿಷ್ಣು ಭಕ್ತರನ್ನು ಅತ್ಯಂತ ಹಿಂಸೆಸುತ್ತಿದ್ದನು. ತನ್ನ ಸ್ವಂತ ಕುಮಾರನಾದ ಪ್ರಹ್ಲಾದನನ್ನು ಕೂಡ ಬಿಡಲಿಲ್ಲ.

2.ಹಾಗಾಗಿಯೇ ನರ....ಸಿಂಹ ರೂಪ...

2.ಹಾಗಾಗಿಯೇ ನರ....ಸಿಂಹ ರೂಪ...

Image source

ಈ ಕ್ರಮದಲ್ಲಿ ವಿಷ್ಣುವು ನರಸಿಂಹನ (ಮಾನವನ, ಜಂತುವಿನ ರೂಪವನ್ನು ಹೊಂದಿರುವ) ರೂಪವನ್ನು ಹೊಂದಿ ಸಂಜೆ (ಹಗಲು, ರಾತ್ರಿಯಲ್ಲದ ಸಮಯ) ಸಮಯದಲ್ಲಿ ಬಾಗಿಲ ಸಮೀಪದಲ್ಲಿ (ಮನೆಯ ಹೊರಗೂ-ಒಳಗೂ ಅಲ್ಲದೇ) ತನ್ನ ತೊಡೆಯ ಮೇಲೆ ಹಿರಣ್ಯಕಶ್ಯಪನನ್ನು ಅಡ್ಡವಾಗಿ ಹಿಡಿದುಕೊಂಡು (ಭೂಮಿ ಹಾಗು ಆಕಾಶಕ್ಕೆ ಮಧ್ಯದ ಸಂಕೇತ) ತನ್ನ ಕೈಯಲ್ಲಿನ ಉಗುರುಗಳಿಂದ (ಯಾವ ವಸ್ತುವಿನಿಂದ ಮಾಡಿದ ಆಯುಧವು ಅಲ್ಲ) ಹೊಟ್ಟೆಯನ್ನು ಬಗೆದು ವಿಷ್ಣು ಮೂರ್ತಿಯು ಹಿರಣ್ಯ ಕಶ್ಯಪನನ್ನು ಸಂಹಾರ ಮಾಡುತ್ತಾನೆ. ಇದು ಪುರಾಣದ ಪ್ರಕಾರ ನರಸಿಂಹನ ಅವತಾರದ ಹಿಂದೆ ಇರುವ ಕಥೆಯೇ ಆಗಿದೆ.

3.ದೇಶದಲ್ಲಿನ ಅನೇಕ ಪ್ರದೇಶದಲ್ಲಿನ ಈ ವಿಗ್ರಹಗಳು

3.ದೇಶದಲ್ಲಿನ ಅನೇಕ ಪ್ರದೇಶದಲ್ಲಿನ ಈ ವಿಗ್ರಹಗಳು

Image source

ದೇಶದಲ್ಲಿ ಅನೇಕ ಪ್ರದೇಶಗಳಲ್ಲಿ ನರಸಿಂಹನ ವಿಗ್ರಹಗಳು ಕಾಣಿಸುತ್ತವೆ. ಇಂತಹ ವಿಗ್ರಹಗಳನ್ನು ಅತಿ ಹೆಚ್ಚಾಗಿ ಬೆಟ್ಟಗಳಲ್ಲಿ, ಗುಟ್ಟಗಳ ಮೇಲೆ ಇರುತ್ತವೆ. ಮುಖ್ಯವಾಗಿ ನರಸಿಂಹನ ದೇವಾಲಯವೆಲ್ಲಾ ಗುಹಾಲಯಗಳೇ. ಆದರೆ ನಾವು ಇಂದು ಹೇಳಿಕೊಳ್ಳಲು ಹೊರಟಿರುವ ವಿಗ್ರಹ ಮಾತ್ರ ಹಚ್ಚ-ಹಸಿರಿನ ಅರಣ್ಯದಲ್ಲಿ ಇದೆ. ಈ ವಿಗ್ರಹದ ರೂಪವು ಪ್ರತಿಯೊಂದು ವಿಶೇಷತೆಯನ್ನು ಹೊಂದಿದೆ.

4.ಸ್ವಯಂಭೂ

4.ಸ್ವಯಂಭೂ

Image source

ಇಲ್ಲಿನ ಸ್ವಾಮಿಯು ಸ್ವಯಂ ಭೂವಾಗಿದ್ದು, ಸ್ವಾಮಿಯ ವಿಗ್ರಹದ ಚರ್ಮವು ಅತ್ಯಂತ ಮೆತ್ತಗೆ ಇರುತ್ತದೆ. ಇತನನ್ನು ಹೇಮಾಲಚಲ ನರಸಿಂಹನು ಎಂದು ಕರೆಯುತ್ತಾರೆ. ಅನೇಕ ಸ್ಥಳಗಳಲ್ಲಿ ನರಸಿಂಹನು ಲಕ್ಷ್ಮೀ ಸಮೇತನಾಗಿ ಇರುತ್ತಾನೆ. ಇಲ್ಲಿ ಮಾತ್ರ ನರಸಿಂಹನು ಒಬ್ಬನೇ ಸ್ವಯಂ ಭೂವಾಗಿ ನೆಲೆಸಿದ್ದಾನೆ. ವಿಗ್ರಹವು ಪೂರ್ತಿ ಕಪ್ಪು ಬಣ್ಣದಲ್ಲಿ ಕಾಣಬಹುದು.

5.ಶಿಲೆಯ ರೂಪ..

5.ಶಿಲೆಯ ರೂಪ..

Image source

ಎಲ್ಲಾ ಸ್ಥಳಗಳಲ್ಲಿ ಶಿಲಾ ರೂಪದಲ್ಲಿ ಕಾಣಿಸಿದರೆ ಇಲ್ಲಿ ಮಾತ್ರ ಶಿಲಾಜಿತ್ತು ರೂಪದಲ್ಲಿ ಕಾಣಿಸುತ್ತಾನೆ. ಅಂದರೆ ದೇಹಕ್ಕೆ ಚರ್ಮ ಇದ್ದ ಹಾಗೆ ಶಿಲೆಯನ್ನು ತಾಕಿದರೆ ಮೆತ್ತಗೆ ಇರುತ್ತದೆ. ವಿಗ್ರಹ ಅಲಂಕಾರವನ್ನು ಅನುಸರಿಸಿ ಮೀಸೆಗಳು, ಕಿವಿಗಳು, ಮೂಗು, ತದಿತರವನ್ನು ಗುರುತಿಸಬಹುದು. ಉದರದಿಂದ ಪಾದದವರೆವಿಗೂ ಎಲ್ಲಿ ಮುಟ್ಟಿದರೂ ಮೆತ್ತಗೆ ಇರುತ್ತದೆ.

6.ಕೂದಲು

6.ಕೂದಲು

Image source

ಹೀಗೆ ಚರ್ಮವನ್ನು ಹೊಂದಿರುವ ನರಸಿಂಹಸ್ವಾಮಿ ವಿಗ್ರಹವೇ ಅಲ್ಲದೇ ಇಂತಹ ದೇವರ ವಿಗ್ರಹಗಳು ಪ್ರಪಂಚದಲ್ಲಿ ಬೇರೆ ಎಲ್ಲೂ ಇಲ್ಲ. ಅಭಿಷೇಕ ಮಾಡುವ ಸಮಯದಲ್ಲಿ ಸ್ವಾಮಿಯವರ ವಿಗ್ರಹದಿಂದ ಕೂದಲುಗಳು ಉದುರುವ ಅನುಭೂತಿ ಉಂಟಾಗುತ್ತದೆ ಎಂದು ಅಲ್ಲಿನ ಪೂಜಾರಿಗಳು ಹೇಳುತ್ತಾರೆ.

7.ನಾಭಿ

7.ನಾಭಿ

Image source

ಇನ್ನು ಸ್ವಾಮಿಯ ನಾಭಿಯಿಂದ ನೀರು ಸುರಿಯುತ್ತಿರುತ್ತದೆಯಂತೆ. ಅದನ್ನು ಸ್ವಾಮಿಯ ಸ್ವೇದ ಎಂದೇ ಅಲ್ಲಿ ಕರೆಯುತ್ತಾರೆ. ಆ ನೀರು ಹಾಗೆ ಸುರಿಯದೇ ಇರಲು ಸ್ವಾಮಿಯ ನಾಭಿಗೆ ಚಂದನವನ್ನು ಲೇಪಿಸುತ್ತಾರೆ. ಪ್ರತಿ ಶನಿವಾರ, ಭಾನುವಾರ, ಸೋಮವಾರದಂದು ಈ ಚಂದನವನ್ನು ಭಕ್ತರಿಗೆ ನೀಡುತ್ತಾರೆ. ಈ ಚಂದನ ಪ್ರಸಾದವಾಗಿ ತೆಗೆದುಕೊಂಡರೆ ಸಂತಾನ ಇಲ್ಲದೇ ಇರುವವರಿಗೆ ಸಂತಾನವಾಗುತ್ತದೆ ಎಂದು ಭಕ್ತರು ಪ್ರಬಲವಾದ ವಿಶ್ವಾಸವಾಗಿದೆ.

8.ಎಲ್ಲಾ ಕಾಲದಲ್ಲೂ ಒಂದೇ ವಿಧವಾಗಿ ಪ್ರವಹಿಸುವ ಜಲಧಾರೆ

8.ಎಲ್ಲಾ ಕಾಲದಲ್ಲೂ ಒಂದೇ ವಿಧವಾಗಿ ಪ್ರವಹಿಸುವ ಜಲಧಾರೆ

Image source

ಇನ್ನು ಸ್ವಾಮಿಯವರ ಪಾದಗಳಿಂದ ನೀರು ಯಾವಾಗಲೂ ಪ್ರವಹಿಸುತ್ತಿರುತ್ತದೆ. ಇದು ಜಲಧಾರೆಯಾಗಿ ಮಾರ್ಪಾಟಾಗುತ್ತದೆ. ಇದನ್ನೇ ಚಿಂತಾಮಣಿ ಜಲಧಾರೆ ಎಂದು ಕರೆಯುತ್ತಾರೆ. ಆದರೆ ಸ್ವಾಮಿಯವರ ಪಾದಗಳಿಂದ ಸ್ವಲ್ಪ ದೂರದಲ್ಲಿರುವ ಜಲಧಾರೆಗೆ ನೀರು ಹೇಗೆ ಹೋಗಿ ಸೇರುತ್ತದೆ ಎಂಬುದು ಮಾತ್ರ ಎಂದಿಗೂ ಯಾರು ಕೂಡ ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಮತ್ತೊಂದು ವಿಚಿತ್ರವೆನೆಂದರೆ ಅಷ್ಟು ಕಾಲದಲ್ಲಿಯೂ ಈ ಜಲಧಾರೆಯಲ್ಲಿನ ನೀರಿನ ವೇಗ ಮಾತ್ರ ಒಂದೇ ವಿಧವಾಗಿ ಇರುವುದು ಆಶ್ಚರ್ಯವೇ ಸರಿ.

9.ವಿದೇಶಗಳಿಗೂ ಕೂಡ..

9.ವಿದೇಶಗಳಿಗೂ ಕೂಡ..

Image source

ಇದರಲ್ಲಿನ ಜಲವು ಎಲ್ಲಾ ರೋಗಗಳಿಗೂ ಗುಣ ಪಡಿಸುವ ಶಕ್ತಿ ಇದೆ ಎಂದು ಭಕ್ತರು ನಂಬುತ್ತಾರೆ. ರಾಣಿ ರುದ್ರಮ್ಮ ದೇವಿ ದೇಶದಲ್ಲಿ ಯಾರಿಗೂ ಬಾರದ ಖಾಯಿಲೆಯಿಂದ ತೀವ್ರವಾಗಿ ಬಳಲುತ್ತಿದ್ದ ಸಂದರ್ಭದಲ್ಲಿ ರಾಜವೈದ್ಯರ ಸೂಚನೆಯ ಮೇರೆಗೆ ಈ ಜಲಧಾರೆಯನ್ನು ಕುಡಿದು ಆಕೆಯ ರೋಗವನ್ನು ಗುಣಪಡಿಸಿಕೊಂಡಳಂತೆ ಎಂದು ಹೇಳುತ್ತಾರೆ. ಇದೇ ವಿಷಯವನ್ನು ಭಕ್ತರು ಕೂಡ ನಂಬುತ್ತಾರೆ. ಮತ್ತೊಂದು ವಿಷಯವೆನೆಂದರೆ ಈ ಪವಿತ್ರವಾದ ಜಲವನ್ನು ವಿದೇಶಗಳಿಗೂ ಕೂಡ ಕಳುಹಿಸುತ್ತಾರಂತೆ.

10.ಕಾಲಕ್ಕೆ ತಕ್ಕಂತೆ ವಿಗ್ರಹದ ರೂಪ

10.ಕಾಲಕ್ಕೆ ತಕ್ಕಂತೆ ವಿಗ್ರಹದ ರೂಪ

Image source

ಇಲ್ಲಿನ ವಿಗ್ರಹವು ಬೇಸಿಗೆಯ ಕಾಲದಲ್ಲಿ ಒಂದು ರೀತಿಯಲ್ಲಿ, ಉಳಿದ ಕಾಲದಲ್ಲಿ ಮತ್ತೊಂದು ರೀತಿ ರೂಪವನ್ನು ಹೊಂದಿರುತ್ತದೆಯಂತೆ. ಬೇಸಿಗೆಯ ಕಾಲದಲ್ಲಿ ಹರಿಶಿನ ಬಣ್ಣದಲ್ಲಿರುವ ವಿಗ್ರಹವು ಉಳಿದ ಕಾಲದಲ್ಲಿ ಹಿಂದೆ ಇರುವ ಕಲ್ಲಿನ ನಿರ್ಮಾಣದ ಬಣ್ಣವನ್ನು ಹೊಂದಿರುತ್ತದೆಯಂತೆ. ಇದನ್ನು ಕೂಡ ಸ್ವಾಮಿಯ ಮಹತ್ವ ಎಂದು ಕರೆಯುತ್ತಾರೆ.

11.ಸ್ಥಳ ಪುರಾಣ

11.ಸ್ಥಳ ಪುರಾಣ

Image source

6 ನೇ ಶತಮಾನದಲ್ಲಿ ದಿಲಿಪಕುಲಕರ್ಣಿ ಎಂಬ ಮಹಾರಾಜನು ಈ ಪ್ರದೇಶವನ್ನು ಆಳ್ವಿಕೆ ಮಾಡುತ್ತಿದ್ದನು. ಆ ಸಮಯದಲ್ಲಿ ಇಲ್ಲಿ ಅವಶೇಷಗಳ ಹುಡುಕಾಟ ಮಾಡುತ್ತಿದ್ದರು. ಈ ಕ್ರಮದಲ್ಲಿ ಸ್ವಾಮಿಯು ರಾಜನ ಕನಸ್ಸಿನಲ್ಲಿ ಕಾಣಿಸಿಕೊಂಡು ವಿಗ್ರಹವು ಎಲ್ಲಿದೆ ಎಂಬುದನ್ನು ತಿಳಿಸಿದರು. ಭೂಮಿಯ ಒಳಭಾಗದಲ್ಲಿರುವ ತನ್ನ ವಿಗ್ರಹವನ್ನು ಭಕ್ತರು ದರ್ಶಿಸಲು ಏರ್ಪಾಟು ಮಾಡು ಎಂದು ಹೇಳುತ್ತಾರೆ. ಸ್ವಾಮಿ ಆದೇಶದ ಮೇರೆಗೆ ಅಲ್ಲಿ ರಾಜನು ಒಂದು ಸುಂದರವಾದ ದೇವಾಲಯವನ್ನು ನಿರ್ಮಾಣ ಮಾಡುತ್ತಾನೆ.

12.ಎಲ್ಲಿದೆ?

12.ಎಲ್ಲಿದೆ?

Image source

ಈ ಮಹಿಮಾನ್ವಿತವಾದ ದೇವಾಲಯವು ತೆಲಂಗಾಣ ರಾಜ್ಯದಲ್ಲಿನ ಜೈ ಶಂಕರ್ ಭೂಪಾಲ್ ಜಿಲ್ಲೆ, ಮಂಗಂ ಪೇಟ ಮಂಡಲ, ಮಲ್ಲೂರು ಗ್ರಾಮಕ್ಕೆ ಸಮೀಪದ ಹೇಮಾಚಲ ನರಸಿಂಹನ ದೇವಾಲಯವಿದೆ. ಅರಣ್ಯದಲ್ಲಿ ವೃಕ್ಷಗಳ ಹಾಗು ಪೊದೆಗಳ ಮಧ್ಯೆ ದಾಟಿಕೊಂಡು ಈ ಸ್ವಾಮಿಯ ದೇವಾಲಯಕ್ಕೆ ತೆರಳಬೇಕು. ಹಚ್ಚ ಹಸಿರಿನ ಅರಣ್ಯದಲ್ಲಿ ಪ್ರಶಾಂತವಾದ ವಾತಾವರಣದಲ್ಲಿ ಪ್ರಯಾಣ ಮಾಡಬೇಕಾಗುತ್ತದೆ. ಈ ಪ್ರದೇಶವನ್ನು ಮಲ್ಲೂರು ಗುಟ್ಟ ಎಂದು ಸ್ಥಳೀಯರು ಕರೆಯುತ್ತಾರೆ.

13.ಹೇಗೆ ತೆರಳಬೇಕು?

13.ಹೇಗೆ ತೆರಳಬೇಕು?

ಬೆಂಗಳೂರಿನಿಂದ ಮೊದಲು ಹೈದ್ರಾಬಾದ್‍ಗೆ ತೆರಳಿ. ಹೈದ್ರಾಬಾದ್‍ನಿಂದ ಮಲ್ಲೂರು ಗ್ರಾಮಕ್ಕೆ 145 ಕಿ.ಮೀ ದೂರದಲ್ಲಿದೆ. ಪ್ರಯಾಣ ಸಮಯವು ಸುಮಾರು 3:30 ಗಂಟೆಗಳು ತೆಗೆದುಕೊಳ್ಳುತ್ತದೆ. ದೇಶದ ಅನೇಕ ಸ್ಥಳಗಳಿಂದ ಹೈದ್ರಾಬಾದ್‍ಗೆ ಪ್ರಯಾಣ ಸೌಕರ್ಯಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X