Search
  • Follow NativePlanet
Share
» »ತಲೆ ತುಂಡಾದ ದೇವಿಯನ್ನು ಪೂಜಿಸುವ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?

ತಲೆ ತುಂಡಾದ ದೇವಿಯನ್ನು ಪೂಜಿಸುವ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?

ಸಾಮಾನ್ಯವಾಗಿ ದೇವಸ್ಥಾನದಲ್ಲಿ ಮೂರ್ತಿಗೆ ಸ್ವಲ್ಪ ಹಾನಿಯಾಗಿದ್ದರೆ, ಮೂರ್ತಿಯ ಕೈ ಕಾಲು ಏನಾದರೂ ಡ್ಯಾಮೆಜ್ ಆಗಿದ್ದರೆ ಅದನ್ನು ಅಪಶಕುನ ಎನ್ನಲಾಗುತ್ತದೆ. ಆದರೆ ನೀವು ತಲೆ ತುಂಡಾದ ದೇವಿಯನ್ನು ಪೂಜಿಸುವ ಬಗ್ಗೆ ನೀವು ಕೇಳಿದ್ದೀರಾ? ಇಲ್ಲಾ ತಾನೆ. ಅಂತಹದ್ದೊಂದು ದೇವಸ್ಥಾನ ಜಾರ್ಖಂಡ್‌ನಲ್ಲಿದೆ.

ಭಾರತವು ಅಸಾಮಾನ್ಯ ಸಂಸ್ಕೃತಿಗಳು, ಸಂಪ್ರದಾಯಗಳು, ಆಚರಣೆಗಳನ್ನು ಹೊಂದಿರುವಂತಹ ಒಂದು ಪುಣ್ಯ ಭೂಮಿಯಾಗಿದೆ. ಪ್ರತಿದಿನವೂ ಇಲ್ಲಿ ಒಂದಲ್ಲ ಒಂದು ಚಿತ್ರ ವಿಚಿತ್ರ ಘಟನೆಗಳು ಕಾಣಸಿಗುತ್ತದೆ. ಅನೇಕ ದೇವಾಲಯಗಳಿವೆ. ವಿ‍ಶೇಷ ಆಚರಣೆಗಳು ಎಲ್ಲವೂ ಒಂದು ಹೊಸ ಅನುಭವವನ್ನು ಹೊಸ ಮಾಹಿತಿಯನ್ನು ನೀಡುತ್ತದೆ. ನಮ್ಮ ದೇಶದಲ್ಲಿ ಅನೇಕ ಚಿತ್ರ ವಿಚಿತ್ರ ದೇವಾಲಯಗಳಿವೆ. ಅಂತಹದ ದೇವಾಲಯಗಳಲ್ಲಿ ಇಂದು ನಾವು ತಲೆ ಇಲ್ಲದ ದೇವಿಯ ದೇವಾಲಯದ ಬಗ್ಗೆ ತಿಳಿಸಲಿದ್ದೇವೆ.

ಎಲ್ಲಿದೆ ಈ ತಲೆ ಇಲ್ಲದ ದೇವಿಯ ದೇವಸ್ಥಾನ?

ಎಲ್ಲಿದೆ ಈ ತಲೆ ಇಲ್ಲದ ದೇವಿಯ ದೇವಸ್ಥಾನ?

PC: Kuarun

ತಲೆ ತುಂಡಾದ ದೇವಿಯ ದೇವಸ್ಥಾನ ಇರುವುದು ಜಾರ್ಖಂಡ್ ರಾಜ್ಯದಲ್ಲಿ. ಜಾರ್ಖಂಡ್‌ನ ರಾಮ್‌ಘಡ್ ಜಿಲ್ಲೆಯಲ್ಲಿರುವ ರಾಜ್ರಪ್ಪ ಎನ್ನುವ ಸಣ್ಣ ಹಳ್ಳಿಯಲ್ಲಿ ಈ ಚಿನ್ನಮಾಸ್ತ ದೇವಸ್ಥಾನವಿದೆ. ಪ್ರತೀ ವರ್ಷ ಲಕ್ಷಾಂತರ ಭಕ್ತರು ಚಿನ್ನಮಾಸ್ತ ದೇವಿಯನ್ನು ಆರಾಧಿಸುತ್ತಾರೆ.

ತ್ರಿವರ್ಣ ಧ್ವಜವನ್ನು ತಯಾರಿಸುವ ದೇಶದ ಏಕೈಕ ಘಟಕ ಕರ್ನಾಟಕದ ಎಲ್ಲಿದೆ ಗೊತ್ತಾ? ತ್ರಿವರ್ಣ ಧ್ವಜವನ್ನು ತಯಾರಿಸುವ ದೇಶದ ಏಕೈಕ ಘಟಕ ಕರ್ನಾಟಕದ ಎಲ್ಲಿದೆ ಗೊತ್ತಾ?

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC:Kuarun

ಇದೊಂದು ಧಾರ್ಮಿಕ ಸ್ಥಳವಾಗಿರುವುದರಿಂದ ವರ್ಷಪೂರ್ತಿ ಭಕ್ತಾದಿಗಳು ಭೇಟಿ ನೀಡುತ್ತಾರೆ. ನೀವು ಜಾರ್ಖಂಡ್‌ನ ಬಿಸಿಲನ್ನು ತಪ್ಪಿಸಬೇಕೆಂದಿದ್ದರೆ ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಈ ದೇವಾಲಯಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯವಾಗಿದೆ. ಲಕ್ಷಾಂತರ ಮಂದಿ ದೇವಸ್ಥಾನಕ್ಕೆ ಬರುವ ಭಕ್ತರ ಗುಂಪನ್ನು ವೀಕ್ಷಿಸಲು ನೀವು ಬಯಸಿದರೆ, ಮಕರ ಸಂಕ್ರಾಂತಿ ಮತ್ತು ಮಹಾ ಶಿವರಾತ್ರಿಗಳ ಹಬ್ಬದ ಸಮಯದಲ್ಲಿ ನೀವು ಅದನ್ನು ಭೇಟಿ ನೀಡಬಹುದು.

ತಲೆ ತುಂಡಾದ ದೇವಿ

ತಲೆ ತುಂಡಾದ ದೇವಿ

PC:Jonoikobangali

ಈ ಸ್ಥಳವು ಜಾರ್ಖಂಡ್‌ನ ಧಾರ್ಮಿಕ ಸ್ಥಳಗಳಲ್ಲೊಂದಾಗಿದೆ. ದುರ್ಗಾ ದೇವಿಯ ರೂಪದಲ್ಲಿರುವ ಚಿನ್ನಮಾಸ್ತ ದೇವಿಗೆ ತಲೆ ಇಲ್ಲ. ಇದು ಶಕ್ತಿಪೀಠಗಳಲ್ಲಿ ಒಂದಾಗಿದೆ. ಸ್ಥಳೀಯ ಪುರಾಣದ ಪ್ರಕಾರ ಈ ದೇವಸ್ಥಾನವನ್ನು ಸಾವಿರ ವರ್ಷಗಳ ಹಿಂದೆಯೇ ನಿರ್ಮಿಸಲಾಗಿದೆ. ದುರ್ಗಾ ದೇವಿಯು ತಾವರೆಯ ಮೇಲೆ ನಗ್ನಳಾಗಿ ನಿಂತಿರುವ ಮೂರ್ತಿಯನ್ನು ಇಲ್ಲಿ ಕಾಣಬಹುದು. ದೇವಿಯ ಕುತ್ತಿಗೆಯಿಂದ ರಕ್ತವು ಹರಿದುಹೋಗುವಂತೆ ಕಾಣುತ್ತದೆ. ಈ ದೇವಾಲಯವು ತನ್ನ ತಾಂತ್ರಿಕ ಶೈಲಿಯ ವಾಸ್ತುಶೈಲಿಗೆ ಜನಪ್ರಿಯವಾಗಿದೆ.

ಕೇರಳದಲ್ಲಿ ಬಾರೀ ಮಳೆ; ಮುಂದೂಡಲಾದ ಬೋಟ್‌ ರೇಸಿಂಗ್ಕೇರಳದಲ್ಲಿ ಬಾರೀ ಮಳೆ; ಮುಂದೂಡಲಾದ ಬೋಟ್‌ ರೇಸಿಂಗ್

ರಾಜ್ರಾಪ್ಪ ಜಲಪಾತ

ರಾಜ್ರಾಪ್ಪ ಜಲಪಾತ

PC: Prabhakar Banerjee

ಲಕ್ಷಾಂತರ ಹಿಂದೂ ಭಕ್ತರು ಮತ್ತು ಸ್ಥಳೀಯ ಪ್ರವಾಸಿಗರಿಂದ ಭೇಟಿ ನೀಡಲ್ಪಡುವ ಈ ದೇವಸ್ಥಾನದ ಸೌಂದರ್ಯವನ್ನು ನೋಡಲು ನೀವು ಚಿನ್ನಮಾಸ್ತ ದೇವಸ್ಥಾನಕ್ಕೆ ಭೇಟಿ ನೀಡಲೇ ಬೇಕು. ನೀವು ರಾಜ್ರಾಪ್ಪ ಪಟ್ಟಣದ ಸೌಂದರ್ಯವನ್ನು ಅನ್ವೇಷಿಸಬಹುದು ಮತ್ತು ಪಟ್ಟಣದಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆಯಾದ ರಾಜ್ರಾಪ್ಪ ಜಲಪಾತವನ್ನು ಭೇಟಿ ಮಾಡಬಹುದು. ಭೈರವಿ ಮತ್ತು ದಾಮೋದರ ನದಿಗಳ ಸಂಗಮವು ದೇವಾಲಯದ ಸುತ್ತಮುತ್ತಲ ಪ್ರದೇಶದ ಸಂಗಮವನ್ನು ಸಹ ಆಸ್ವಾದಿಸಬಹುದು.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Akash Guruji

ವಿಮಾನದ ಮೂಲಕ: ಚಿನ್ನಮಾಸ್ತ ದೇವಸ್ಥಾನಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಅದು ರಾಂಚಿ. ಇದು ಸುಮಾರು 70 ಕಿ.ಮೀ ದೂರದಲ್ಲಿದೆ. ಒಮ್ಮೆ ನೀವು ರಾಂಚಿಯನ್ನು ತಲುಪಿದರೆ, ಕ್ಯಾಬ್ ಬಾಡಿಗೆಗೆ ತೆಗೆದುಕೊಳ್ಳಬಹುದು ಅಥವಾ ರಾಜ್ರಾಪ್ಪಕ್ಕೆ ಬಸ್ ಅನ್ನು ಹಿಡಿಯಬಹುದು.
ರೈಲು ಮೂಲಕ: ರಾಜ್ರಾಪ್ಪ ರೈಲಿನ ಮೂಲಕ ತಲುಪಲು ಉತ್ತಮ ಮಾರ್ಗವೆಂದರೆ ರಮಗಢ ರೈಲು ನಿಲ್ದಾಣಕ್ಕೆ ನೇರ ರೈಲು ತೆಗೆದುಕೊಳ್ಳುವುದು. ಇದು ದೇವಾಲಯದಿಂದ ಸುಮಾರು 28 ಕಿ.ಮೀ ದೂರದಲ್ಲಿದೆ. ನಿಲ್ದಾಣದಿಂದ ನೀವು ನೇರ ಬಸ್ ಅಥವಾ ನೇರ ಕ್ಯಾಬ್ ಅನ್ನು ಬಾಡಿಗೆಗೆ ಪಡೆಯಬಹುದು.
ರಸ್ತೆಯ ಮೂಲಕ: ಚಿನ್ನಮಾಸ್ತ ದೇವಸ್ಥಾನದ ಪ್ರದೇಶವು ಉತ್ತಮ ರಸ್ತೆ ವ್ಯವಸ್ಥೆಯನ್ನು ಹೊಂದಿದೆ ಮತ್ತು ಆದ್ದರಿಂದ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X