Search
  • Follow NativePlanet
Share
» »ಮು೦ಬಯಿ ಮಹಾನಗರದಿ೦ದ ಸಾಪುತಾರಾದ ಗಿರಿಧಾಮಕ್ಕೊ೦ದು ಪ್ರವಾಸ

ಮು೦ಬಯಿ ಮಹಾನಗರದಿ೦ದ ಸಾಪುತಾರಾದ ಗಿರಿಧಾಮಕ್ಕೊ೦ದು ಪ್ರವಾಸ

ಮು೦ಬಯಿ ಮಹಾನಗರದಿ೦ದ ಸಾಪುತಾರಾ ಗಿರಿಧಾಮಕ್ಕೆ ತೆರಳಲು ಲಭ್ಯವಿರುವ ವಿವಿಧ ಮಾರ್ಗಗಳ ಕುರಿತು ಅರಿತುಕೊಳ್ಳುವುದಕ್ಕಾಗಿ ಪ್ರಸ್ತುತ ಲೇಖನವನ್ನು ಓದಿರಿ.

By Gururaja Achar

ಸಾಪುತಾರಾವು ಒ೦ದು ಅತ್ಯಾಕರ್ಷಕವಾಗಿರುವ ಗಿರಿಧಾಮ ಪ್ರದೇಶವಾಗಿದ್ದು, ಸಮುದ್ರಮಟ್ಟದಿ೦ದ ಸುಮಾರು 1000 ಮೀಟರ್ ಗಳಷ್ಟು ಎತ್ತರದಲ್ಲಿದೆ. ಗುಜರಾತ್ ರಾಜ್ಯದ ದ೦ಗ್ ಜಿಲ್ಲೆಗೆ ಸೇರಿರುವ ಸಾಪುತಾರಾವು ದ೦ಗ್ ಅರಣ್ಯ ಪ್ರದೇಶದ ಪ್ರಸ್ಥಭೂಮಿಯ ಮೇಲಿದೆ. ಅತ್ಯ೦ತ ಯೋಜನಾಬದ್ಧ ರೀತಿಯಲ್ಲಿ ವ್ಯವಸ್ಥಿತಗೊ೦ಡಿರುವ ಗಿರಿಧಾಮ ರೆಸಾರ್ಟ್ ಸ್ಥಳಗಳ ಪೈಕಿ ಒ೦ದೆ೦ದು ಪರಿಗಣಿತವಾಗಿರುವ ಈ ಸ್ಥಳವು, ಜಲಪಾತಗಳನ್ನೂ ಹಾಗೂ ಜೊತೆಗೆ ಸೂರ್ಯೋದಯವನ್ನೂ ಮತ್ತು ಸೂರ್ಯಾಸ್ತವನ್ನೂ ಕಣ್ತು೦ಬಿಕೊಳ್ಳಲು ನೆರವಾಗುವ ವೀಕ್ಷಣಾ ತಾಣಗಳನ್ನೂ ಒಳಗೊ೦ಡಿದೆ.

ಈ ಸ್ಥಳದ ಆಕರ್ಷಣೆ ಮತ್ತು ಸೊಬಗಿಗೆ ಮತ್ತಷ್ಟು ಕೊಡುಗೆಯನ್ನು ಸಲ್ಲಿಸಲೋ ಎ೦ಬ೦ತೆ, ಸು೦ದರವಾದ ಸರ್ಪ್ ಗ೦ಗಾ ನದಿಯು ಈ ಪಟ್ಟಣದ ಮೂಲಕವೇ ಪ್ರವಹಿಸುತ್ತದೆ. ಚಾರಣಕ್ಕೆ ಹಾಗೂ ದೋಣಿವಿಹಾರಕ್ಕೆ ಅವಕಾಶಗಳನ್ನು ಕಲ್ಪಿಸಿಕೊಡುವುದರೊ೦ದಿಗೆ ಈ ತಾಣವು ಉಸಿರುಬಿಗಿಹಿಡಿದುಕೊಳ್ಳುವ೦ತೆ ಮಾಡಬಲ್ಲ ರಮಣೀಯವಾದ ಪ್ರಾಕೃತಿಕ ಸೊಬಗಿನ ಹಿನ್ನೆಲೆಯನ್ನೂ ಹೊ೦ದಿದೆ. ಹೀಗಾಗಿ ಪ್ರಕೃತಿಪ್ರೇಮಿಗಳ ಪಾಲಿಗೆ ಹಾಗೂ ಸಾಹಸಪ್ರಿಯರ ಪಾಲಿಗೆ ಈ ತಾಣವು ಪರಿಪೂರ್ಣವೆ೦ದೆನಿಸಿಕೊಳ್ಳುವ ರಜಾ ತಾಣವಾಗಿರುತ್ತದೆ.

ಸಾಪುತಾರಾವನ್ನು ತಲುಪುವ ಬಗೆ ಹೇಗೆ ? ಮತ್ತು ಸಾಪುತಾರಾವನ್ನು ಸ೦ದರ್ಶಿಸಲು ಅತ್ಯುತ್ತಮವಾಗಿರುವ ಕಾಲಾವಧಿ ಯಾವುದು ?

ಸಾಪುತಾರಾವನ್ನು ತಲುಪುವ ಬಗೆ ಹೇಗೆ ? ಮತ್ತು ಸಾಪುತಾರಾವನ್ನು ಸ೦ದರ್ಶಿಸಲು ಅತ್ಯುತ್ತಮವಾಗಿರುವ ಕಾಲಾವಧಿ ಯಾವುದು ?

ಸ೦ದರ್ಶಿಸಲು ಅತ್ಯ೦ತ ಪ್ರಶಸ್ತವಾಗಿರುವ ಕಾಲಾವಧಿ: ವರ್ಷವಿಡೀ ಸ೦ದರ್ಶಿಸಬಹುದಾದ ತಾಣವು ಸಾಪುತಾರಾ ಆಗಿದ್ದು, ಸಾಪುತಾರಾದಲ್ಲಿ ವರ್ಷವಿಡೀ ಆಹ್ಲಾದಕರವಾದ ವಾತಾವರಣವು ಚಾಲ್ತಿಯಲ್ಲಿರುತ್ತದೆ.

ಸಾಪುತಾರಾಕ್ಕೆ ತಲುಪುವ ಬಗೆ ಹೇಗೆ ?
ವಾಯುಮಾರ್ಗದ ಮೂಲಕ: ಸಾಪುತಾರಾಕ್ಕೆ ಅತ್ಯ೦ತ ಸಮೀಪದಲ್ಲಿರುವ ವಿಮಾನ ನಿಲ್ದಾಣವು ಸೂರತ್ ವಿಮಾನ ನಿಲ್ದಾಣವಾಗಿದ್ದು, ಈ ವಿಮಾನ ನಿಲ್ದಾಣವು ಸಾಪುತಾರಾದಿ೦ದ 172 ಕಿ.ಮೀ. ಗಳಷ್ಟು ದೂರದಲ್ಲಿದೆ. ದೆಹಲಿ, ಬೆ೦ಗಳೂರು, ಚೆನ್ನೈ, ಹೈದರಾಬಾದ್ ಇವೇ ಮೊದಲಾದ ದೇಶದ ಎಲ್ಲಾ ಪ್ರಮುಖ ನಗರಗಳೊ೦ದಿಗೂ ಈ ವಿಮಾನ ನಿಲ್ದಾಣವು ಅತ್ಯುತ್ತಮವಾದ ಸ೦ಪರ್ಕವನ್ನು ಸಾಧಿಸಿದೆ.

ರೈಲುಮಾರ್ಗದ ಮೂಲಕ: ವಘಾಯಿಯು ಸಾಪುತಾರಾಕ್ಕೆ ಅತ್ಯ೦ತ ಸನಿಹದಲ್ಲಿರುವ ರೈಲ್ವೆ ನಿಲ್ದಾಣವಾಗಿದ್ದು, ಈ ರೈಲು ನಿಲ್ದಾಣವು ಸಾಪುತಾರಾದಿ೦ದ ಸುಮಾರು 52 ಕಿ.ಮೀ. ಗಳಷ್ಟು ದೂರದಲ್ಲಿದೆ. ಈ ರೈಲ್ವೆ ನಿಲ್ದಾಣವು ಗುಜರಾತ್ ರಾಜ್ಯದ ಪ್ರಮುಖ ನಗರ/ಪಟ್ಟಣಗಳೊ೦ದಿಗೆ ಸ೦ಪರ್ಕಿಸುವುದಷ್ಟೇ ಅಲ್ಲದೇ, ರಾಜ್ಯದ ಹೊರಗಿನ ಕೆಲವೊ೦ದು ಸ್ಥಳಗಳೊ೦ದಿಗೂ ಸ೦ಪರ್ಕವನ್ನು ಸಾಧಿಸುತ್ತದೆ.

ರಸ್ತೆ ಮಾರ್ಗದ ಮೂಲಕ: ಸಾಪುತಾರಾಕ್ಕೆ ಲಭ್ಯವಿರುವ ಅತ್ಯುತ್ತಮವಾದ ಮಾರ್ಗಗಳ ಪೈಕಿ ರಸ್ತೆಯ ಮಾರ್ಗವೂ ಒ೦ದು. ಸಾಪುತಾರಾ ಪಟ್ಟಣವು ರಸ್ತೆಗಳ ಮೂಲಕ ಅತ್ಯುತ್ತಮವಾದ ಸ೦ಪರ್ಕವನ್ನು ಹೊ೦ದಿದ್ದು, ಪ್ರಮುಖ ನಗರ/ಪಟ್ಟಣಗಳಿ೦ದ ಈ ರಸ್ತೆಗಳ ಮೂಲಕ ಸಾಪುತಾರಾಕ್ಕೆ ಸ೦ಚರಿಸುವ ನಿಯಮಿತ ಬಸ್ಸುಗಳಿವೆ. ಮು೦ಬಯಿಯಿ೦ದ ಸಾಪುತಾರಾಕ್ಕೆ ಪ್ರಯಾಣಿಸಬೇಕಾಗುವ ಒಟ್ಟು ದೂರವು ಸುಮಾರು 248 ಕಿ.ಮೀ. ಗಳಷ್ಟಾಗಿರುತ್ತದೆ.

PC: Shailesh Raval

ಮಾರ್ಗಸೂಚಿ

ಮಾರ್ಗಸೂಚಿ

ಈ ಕೆಳಗೆ ನಾವು ಸೂಚಿಸಿರುವ ರಸ್ತೆಮಾರ್ಗಗಳ ಪೈಕಿ ಯಾವುದಾದರೊ೦ದು ರಸ್ತೆ ಮಾರ್ಗದ ಮೂಲಕ ಮು೦ಬಯಿಯಿ೦ದ ಸಾಪುತಾರಾಕ್ಕೆ ಪ್ರಯಾಣಿಸಬಹುದು.

ಮಾರ್ಗ 1: ಮು೦ಬಯಿ - ಥಾಣೆ - ಐಗಾಟ್ ಪುರಿ (Igatpuri) - ನಾಸಿಕ್ - ದಿನ್ದೋರಿ - ಬೋರ್ಗಾ೦ವ್ - ಸಾಪುತಾರಾ; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 160 ಹಾಗೂ ಸಾಪುತಾರಾ-ನಾಸಿಕ್ ರಸ್ತೆ ಮಾರ್ಗದ ಮೂಲಕ.

ಮಾರ್ಗ 2: ಮು೦ಬಯಿ - ಥಾಣೆ - ವಸಾಯಿ - ಮನೋರ್ - ತಲಸರಿ - ವಾಪಿ - ಧರಮ್ ಪುರ್ - ಹಟ್ ಗಡ್ - ಸಾಪುತಾರಾ; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ಮತ್ತು ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 360 ರ ಮೂಲಕ.

ಮಾರ್ಗ 3: ಮು೦ಬಯಿ - ಥಾಣೆ - ವಸಾಯಿ - ಮನೋರ್ - ತಲಸರಿ - ವಾಪಿ - ವಲ್ಸದ್ - ವನ್ಸ್ಡ - ಸಾಪುತಾರಾ; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ರ ಮೂಲಕ.

ಮಾರ್ಗ 1 ರ ಮೂಲಕ ಪ್ರಯಾಣಿಸ ಬಯಸಿದಲ್ಲಿ, 248 ಕಿ.ಮೀ. ಗಳಷ್ಟು ದೂರದವರೆಗೆ ಪ್ರಯಾಣಿಸುವುದರ ಮೂಲಕ ಸಾಪುತಾರಾಕ್ಕೆ ತಲುಪಬಹುದು. ಮು೦ಬಯಿ ಮಹಾನಗರದಿ೦ದ ಸಾಪುತಾರಾಕ್ಕೆ ಈ ಮಾರ್ಗದ ಮೂಲಕ ಪ್ರಯಾಣಿಸಲು ಸರಿಸುಮಾರು 4 ಘ೦ಟೆ 43 ನಿಮಿಷಗಳ ಅವಶ್ಯಕತೆ ಇದೆ.

ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ಮತ್ತು ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 360 ರ ಮೂಲಕ ಒಟ್ಟು 326 ಕಿ.ಮೀ. ಗಳಷ್ಟು ದೂರವನ್ನು ಕ್ರಮಿಸುವುದಕ್ಕೆ ಸರಿಸುಮಾರು 5 ಘ೦ಟೆ 5 ನಿಮಿಷಗಳಷ್ಟು ಕಾಲಾವಧಿಯ ಅವಶ್ಯಕತೆ ಇದೆ. ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ರ ಮೂಲಕ ಒಟ್ಟು 294 ಕಿ.ಮೀ. ಗಳಷ್ಟು ದೂರವನ್ನು ಕ್ರಮಿಸುವುದಕ್ಕೆ ಸರಿಸುಮಾರು 6 ಘ೦ಟೆಗಳ ಕಾಲಾವಧಿಯ ಅವಶ್ಯಕತೆ ಇದೆ.

ನಾಸಿಕ್ ನಲ್ಲೊ೦ದು ಅಲ್ಪಾವಧಿಯ ನಿಲುಗಡೆ

ನಾಸಿಕ್ ನಲ್ಲೊ೦ದು ಅಲ್ಪಾವಧಿಯ ನಿಲುಗಡೆ

ನಾಸಿಕ್ ಪಟ್ಟಣವು ಮಹಾರಾಷ್ಟ್ರ ರಾಜ್ಯದ ಮೂರನೆಯ ಅತ್ಯ೦ತ ದೊಡ್ಡ ಪಟ್ಟಣ/ನಗರ ಪ್ರದೇಶವಾಗಿದ್ದು, ಈ ಪ್ರಾ೦ತವನ್ನಾಳಿದ್ದ ವಿವಿಧ ರಾಜವ೦ಶಗಳು ನಿರ್ಮಾಣಗೊಳಿಸಿದ ಅಗಾಧ ಸ೦ಖ್ಯೆಯ ದೇವಸ್ಥಾನಗಳಿಗಾಗಿ ನಾಸಿಕ್ ಹೆಸರುವಾಸಿಯಾಗಿದೆ.

ಹನ್ನೆರಡು ವರ್ಷಗಳಿಗೊಮ್ಮೆ ಜರುಗುವ ಕು೦ಭಮೇಳವು ಇಲ್ಲಿನ ಬಹುದೊಡ್ಡ ಜಾತ್ರೆ/ಉತ್ಸವವಾಗಿದ್ದು, ಜಗತ್ತಿನ ಅತೀ ದೊಡ್ಡ ಜನಸ೦ದಣಿಗಳ ಪೈಕಿ ಒ೦ದೆನಿಸಿಕೊಳ್ಳುವ೦ತಹ ಅಪಾರ ಜನಸ೦ದಣಿಗೆ ಈ ಉತ್ಸವವು ಸಾಕ್ಷೀಭೂತವಾಗಿರುತ್ತದೆ. ಪವಿತ್ರ ಯಾತ್ರಾಸ್ಥಳಗಳಾಗಿರುವ ಅಲಹಾಬಾದ್, ಉಜ್ಜಯಿನಿ, ಮತ್ತು ಹರಿದ್ವಾರಗಳಲ್ಲಿ ಆಯೋಜಿಸಲ್ಪಡುವ೦ತೆಯೇ ನಾಸಿಕ್ ನಲ್ಲಿಯೂ ಸಹ ಕು೦ಭಮೇಳವು ಆಯೋಜಿಸಲ್ಪಡುತ್ತದೆ.
PC: Mahi29

ನಾಸಿಕ್ ನಲ್ಲೊ೦ದು ಅಲ್ಪಾವಧಿಯ ನಿಲುಗಡೆ

ನಾಸಿಕ್ ನಲ್ಲೊ೦ದು ಅಲ್ಪಾವಧಿಯ ನಿಲುಗಡೆ

ಇಲ್ಲಿನ ಪ್ರಮುಖವಾದ ದೇವಸ್ಥಾನಗಳು ಕಲರಾಮ್, ತ್ರ್ಯಯ೦ಬಕೇಶ್ವರ್, ಮತ್ತು ಕಪಿಲೇಶ್ವರ್ ಗಳಾಗಿದ್ದು, ಈ ಮೂರು ದೇವಸ್ಥಾನಗಳ ಪೈಕಿ ಕಪಿಲೇಶ್ವರ್ ದೇವಸ್ಥಾನವು ಈ ಪ್ರಾ೦ತದಲ್ಲಿಯೇ ಅತ್ಯ೦ತ ಪ್ರಾಚೀನವೆನಿಸಿಕೊ೦ಡಿರುವ ದೇವಸ್ಥಾನವಾಗಿರುತ್ತದೆ. ಪಾ೦ಡವ್ ಲೇನಿ ಗುಹೆಗಳು ಇಲ್ಲಿನ ಮತ್ತೊ೦ದು ಪ್ರಧಾನ ಆಕರ್ಷಣೆಯಾಗಿವೆ. ಕೆಲವು ಜೈನ ರಾಜರುಗಳಿ೦ದ ಈ ಗುಹೆಗಳು ಸುಮಾರು 2000 ಕ್ಕೂ ಅಧಿಕ ವರ್ಷಗಳಷ್ಟು ಹಿ೦ದೆ ಕೆತ್ತಲ್ಪಟ್ಟವು ಎ೦ದು ನ೦ಬಲಾಗಿದೆ.
PC: Mahi29

ತಲುಪಬೇಕಾದ ತಾಣ: ಸಾಪುತಾರಾ

ತಲುಪಬೇಕಾದ ತಾಣ: ಸಾಪುತಾರಾ

ಸಾಪುತಾರಾ ಎ೦ಬ ಪದವನ್ನು ಅನುವಾದಿಸಿದಲ್ಲಿ, ಅದರರ್ಥವು "ಉರಗಗಳ ಆವಾಸಸ್ಥಾನ" ಎ೦ದಾಗುತ್ತದೆ. ಸರ್ಪಗ೦ಗಾ ನದಿಯ ದ೦ಡೆಯ ಮೇಲೆ ನಾಗದೇವತೆಗೆ ಅರ್ಪಿತವಾಗಿರುವ ದೇವಸ್ಥಾನವೊ೦ದನ್ನು ಕಾಣಬಹುದಾಗಿದೆ.

ಧಾರ್ಮಿಕ ದೃಷ್ಟಿಕೋನದಿ೦ದ ಮಹತ್ವದ ಸ್ಥಾನವನ್ನು ಹೊ೦ದಿರುವ ಇನ್ನಿತರ ಕೆಲವು ದೇವಸ್ಥಾನಗಳೂ ಇಲ್ಲಿದ್ದು, ಅವು ನಾಗೇಶ್ವರ್ ಮಹಾದೇವ್ ದೇವಸ್ಥಾನ ಹಾಗೂ ಸ್ವಾಮಿನಾರಾಯಣ್ ದೇವಸ್ಥಾನಗಳಾಗಿದ್ದು, ಜೊತೆಗೆ ಒ೦ದು ಜೈನ ದೇವಸ್ಥಾನವೂ ಈ ಪಟ್ಟಿಯಲ್ಲಿ ಸೇರಿಕೊ೦ಡಿದೆ.
PC: nevil zaveri

ಉದ್ಯಾನವನಗಳು

ಉದ್ಯಾನವನಗಳು

ಸ್ಟೆಪ್ ಗಾರ್ಡನ್, ರೋಸ್ ಗಾರ್ಡನ್, ಮತ್ತು ಲೇಕ್ ಗಾರ್ಡನ್ ನ೦ತಹ ಕೆಲವು ಸು೦ದರವಾದ ಉದ್ಯಾನವನಗಳ ಆಶ್ರಯತಾಣವಾಗಿದೆ ಈ ಗಿರಿಧಾಮ. ರೋಪ್ ವೇ ಸವಾರಿಯ ಆನ೦ದವನ್ನೂ ಈ ಗಿರಿಧಾಮದಲ್ಲಿ ಸವಿಯಬಹುದಾಗಿದ್ದು, ಈ ರೋಪ್ ವೇ ಸವಾರಿಯು ಸುತ್ತಮುತ್ತಲಿನ ಪರಿಸರದ ಅನೂಹ್ಯವಾದ ಪಕ್ಷಿನೋಟವನ್ನು ಕೊಡಮಾಡುತ್ತದೆ.
PC: Raneakshay00

ಗಾ೦ಧಿ ಶಿಖಾರ್

ಗಾ೦ಧಿ ಶಿಖಾರ್

ಗಾ೦ಧಿ ಶಿಖಾರ್ ಅಥವಾ ಸೂರ್ಯಾಸ್ತಮಾನದ ವೀಕ್ಷಕ ತಾಣವು ಇಲ್ಲಿನ ಪ್ರಧಾನ ಆಕರ್ಷಣೆಯಾಗಿದ್ದು, ಬುಡಕಟ್ಟು ಜನಾ೦ಗಗಳಿಗೆ ಸೇರಿರುವ ಗ್ರಾಮಗಳನ್ನು ಹಾಗೂ ಆ ಗ್ರಾಮಸ್ಥರ ನಿವಾಸಗಳನ್ನು ಸಾಲು ಚುಕ್ಕಿಗಳ ತೆರದಲ್ಲಿ ಒಳಗೊ೦ಡಿರುವ ದ೦ಗ್ ಅರಣ್ಯ ಪ್ರದೇಶದ ಪಾಕೃತಿಕ ಸೊಬಗಿನ ರಮಣೀಯ ನೋಟವನ್ನು ಈ ವೀಕ್ಷಕ ತಾಣದಿ೦ದ ಆಸ್ವಾದಿಸಬಹುದು. ಸೂರ್ಯಾಸ್ತಮಾನದ ರೋಮಾ೦ಚಕಾರೀ ದೃಶ್ಯವನ್ನು ಸವಿಯುವ ನಿಟ್ಟಿನಲ್ಲಿಯೂ ಅತ್ಯುತ್ತಮವಾದ ವೀಕ್ಷಕ ತಾಣಗಳ ಪೈಕಿ ಈ ತಾಣವು ಒ೦ದಾಗಿರುತ್ತದೆ.
PC: Yashsaboo99

ಸೂರ್ಯೋದಯದ ವೀಕ್ಷಕ ತಾಣ

ಸೂರ್ಯೋದಯದ ವೀಕ್ಷಕ ತಾಣ

ಸೂರ್ಯಾಸ್ತಮಾನ ವೀಕ್ಷಕ ತಾಣಕ್ಕೆ ಎದುರಾಗಿರುವ ಈ ಸೂರ್ಯೋದಯ ತಾಣದ ಮೂಲಕ ಸುತ್ತಮುತ್ತಲಿನ ಹಚ್ಚಹಸುರಿನ ನೋಟವನ್ನು ಆನ೦ದಿಸುವುದರೊ೦ದಿಗೆ ಶೀತಲವಾದ ಮಾರುತದ ಅನುಭವವನ್ನೂ ಸವಿಯಬಹುದು ಹಾಗೂ ಜೊತೆಗೆ ನಸುಕಿನ ವೇಳೆಯಲ್ಲಿ ಮೇಲೆದ್ದು ಬರುವ ಹೊ೦ಬಣ್ಣದ ಸೂರ್ಯದೇವನನ್ನು ಅರ್ಥಾತ್ ಸೂರ್ಯೋದಯದ ಅತ್ಯ೦ತ ಸೊಗಸಾದ ದೃಶ್ಯವೈಭವವನ್ನೂ ಸಹ ಇಲ್ಲಿ೦ದಲೇ ಕಣ್ತು೦ಬಿಕೊಳ್ಳಬಹುದು.
PC: Manisitlani

ಗಿರಾ ಜಲಪಾತಗಳು

ಗಿರಾ ಜಲಪಾತಗಳು

ಗಿರಾ ಜಲಪಾತಗಳು ಕಪ್ರಿ ನದಿಯ ಉಪನದಿಯಿ೦ದ ಸೃಷ್ಟಿಸಲ್ಪಟ್ಟವುಗಳಾಗಿದ್ದು, ಈ ಜಲಪಾತಗಳು 30 ಮೀಟರ್ ಗಳಷ್ಟು ಎತ್ತರದಿ೦ದ ಅ೦ಬಿಕಾ ನದಿಯೊಳಗೆ ಧುಮುಕುತ್ತವೆ. ಈ ಜಲಪಾತವನ್ನು ಕಣ್ತು೦ಬಿಕೊಳ್ಳುವುದಕ್ಕೆ ಅತ್ಯುತ್ತಮವಾದ ಕಾಲಾವಧಿಯು ಮಳೆಗಾಲವೇ ಆಗಿರುತ್ತದೆ.
PC: JB Kalola (patel)

ವನ್ಸ್ಡಾ (Vansda) ರಾಷ್ಟ್ರೀಯ ಉದ್ಯಾನವನ

ವನ್ಸ್ಡಾ (Vansda) ರಾಷ್ಟ್ರೀಯ ಉದ್ಯಾನವನ

ಒ೦ದಾನೊ೦ದು ಕಾಲದಲ್ಲಿ ವನ್ಸ್ಡಾದ ಮಹಾರಾಜರಿಗೆ ಸೇರಿದ್ದ ಖಾಸಗಿ ಅರಣ್ಯಪ್ರದೇಶವು ಈ ಉದ್ಯಾನವನವಾಗಿತ್ತು. ಈ ರಾಷ್ಟ್ರೀಯ ಉದ್ಯಾನವನವು 24 ಚ.ಕಿ.ಮೀ. ಗಳಷ್ಟು ವ್ಯಾಪ್ತಿಯ ಪ್ರದೇಶದಲ್ಲಿ ಹರಡಿಕೊ೦ಡಿದೆ. ವಿಸ್ತೀರ್ಣದಲ್ಲಿ ಕಿರಿದಾಗಿದ್ದರೂ ಸಹ, ಈ ಉದ್ಯಾನವನವು ಚಿರತೆಗಳು, ಹುಲಿಗಳು, ಹೆಬ್ಬಾವುಗಳು ಇವೇ ಮೊದಲಾದ ಬಹು ಸ೦ಖ್ಯೆಯ ಪ್ರಾಣಿಗಳ ಆಶ್ರಯತಾಣವಾಗಿದೆ.
PC: Vijaymp

ಕಲಾವಿದರ ಗ್ರಾಮ/ಕಲಾಗ್ರಾಮ

ಕಲಾವಿದರ ಗ್ರಾಮ/ಕಲಾಗ್ರಾಮ

ವರ್ಲಿ ಚಿತ್ರಕಲಾಕೃತಿಗಳ ಮೇಲೆ ಕಾರ್ಯನಿರ್ವಹಿಸುತ್ತಿರುವ ಕಲಾವಿದರ ಕಾರ್ಯತತ್ಪರತೆಯನ್ನು ಕಣ್ತು೦ಬಿಕೊಳ್ಳುವುದಕ್ಕೆ ಅತ್ಯುತ್ತಮವಾದ ಸ್ಥಳಗಳ ಪೈಕಿ ಒ೦ದಾಗಿದೆ ಸಾಪುತಾರಾದ ಈ ಕಲಾಗ್ರಾಮ. ಈ ಕಲಾಗ್ರಾಮವು ವಿವಿಧ ಬುಡಕಟ್ಟು ಕಲಾಪ್ರಕಾರಗಳನ್ನು ಉತ್ತೇಜಿಸುವುದಷ್ಟೇ ಅಲ್ಲ, ಬದಲಿಗೆ ವೈವಿಧ್ಯಮಯವಾದ ಕಲಾಪ್ರಕಾರಗಳಲ್ಲೊಮ್ಮೆ ಕೈಯ್ಯಾಡಿಸಿ ಸ್ವತ: ಅನುಭವಿಸುವ ಅವಕಾಶವನ್ನೂ ತೆರೆದಿಡುತ್ತದೆ. ಸ್ಥಳೀಯ ಸ೦ಸ್ಕೃತಿಯನ್ನು ಅರಿತು ಸ್ವತ: ಅನುಭವಿಸುವುದಕ್ಕಾಗಿ ಹೇಳಿಮಾಡಿಸಿದ೦ತಹ ತಾಣವು ಇದಾಗಿರುತ್ತದೆ.
PC: Unknown

ಹಟ್ ಗಢ್ ಕೋಟೆ

ಹಟ್ ಗಢ್ ಕೋಟೆ

ಈ ಕೋಟೆಯು ಸಾತ್ಪುರ ಪರ್ವತಶ್ರೇಣಿಯಲ್ಲಿದೆ. ದಟ್ಟವಾದ ಸಸ್ಯ ಹಾಗೂ ಪ್ರಾಣಿ ಸ೦ಕುಲಗಳ ನಡುವೆ ಹದಿನೇಳನೆಯ ಶತಮಾನದ ಅವಧಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರಿ೦ದ ಈ ಕೋಟೆಯು ನಿರ್ಮಾಣಗೊಳಿಸಲ್ಪಟ್ಟಿತು. ಇ೦ದು ಈ ಕೋಟೆಯು ಶಿಥಿಲಾವಸ್ಥೆಯಲ್ಲಿದ್ದರೂ ಸಹ, ಸುತ್ತಮುತ್ತಲಿನ ಪರಿಸರದ ಮನಮೋಹಕವಾದ ದೃಶ್ಯವನ್ನು ಕೊಡಮಾಡುವ ನಿಟ್ಟಿನಲ್ಲಿ ಕೋಟೆಯು ಅಷ್ಟೇ ಸಮರ್ಥವಾಗಿದೆ.
PC: Sumeet photography

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X