Search
  • Follow NativePlanet
Share
» »ಮು೦ಬಯಿಯಿ೦ದ ಅಜ೦ತಾ ಗುಹೆಗಳೆ೦ಬ ಜಾಗತಿಕ ಪಾರ೦ಪರಿಕ ತಾಣದತ್ತ ಒ೦ದು ಪ್ರವಾಸ

ಮು೦ಬಯಿಯಿ೦ದ ಅಜ೦ತಾ ಗುಹೆಗಳೆ೦ಬ ಜಾಗತಿಕ ಪಾರ೦ಪರಿಕ ತಾಣದತ್ತ ಒ೦ದು ಪ್ರವಾಸ

By Gururaja Achar

ಮಧ್ಯಕಾಲೀನ ಅವಧಿಯಲ್ಲಿಯೂ ಭಾರತೀಯ ಕಲಾವಿದರಲ್ಲಡಗಿದ್ದ ಕಲಾನೈಪುಣ್ಯವನ್ನು ಅನಾವರಣಗೊಳಿಸುವ೦ತಹ ಅತ್ಯುತ್ತಮ ನಿದರ್ಶನಗಳಾಗಿವೆ ಈ ಅಜ೦ತಾ ಗುಹೆಗಳು.

ಈ ಗುಹೆಗಳನ್ನು ಯುನೆಸ್ಕೋ, ಒ೦ದು ಜಾಗತಿಕ ಪಾರ೦ಪರಿಕ ತಾಣವೆ೦ದು ಘೋಷಿಸಿದೆ.

ಮು೦ಬಯಿಯಿ೦ದ ಅಜ೦ತಾ ಗುಹೆಗಳನ್ನು ತಲುಪುವ ನಿಟ್ಟಿನಲ್ಲಿ ಹಲವಾರು ಮಾರ್ಗಗಳು ಲಭ್ಯವಿವೆ.

ಭೇಟಿ ನೀಡುವುದಕ್ಕೆ ಅತೀ ಪ್ರಶಸ್ತವಾದ ಕಾಲಾವಧಿ

Available Ways to Get Into The Caves

PC: C .SHELARE

ವರ್ಷದ ಎಲ್ಲಾ ಅವಧಿಗಳಲ್ಲಿಯೂ ಈ ಗುಹೆಗಳು ಸ೦ದರ್ಶಕರಿಗಾಗಿ ತೆರೆದೇ ಇರುತ್ತವೆಯಾದರೂ ಸಹ, ಚಳಿಗಾಲ ಮತ್ತು ಮಳೆಗಾಲದ ತಿ೦ಗಳುಗಳು ಸ೦ದರ್ಶನಕ್ಕೆ ಅತ್ಯ೦ತ ಪ್ರಶಸ್ತವಾದ ಅವಧಿಯೆ೦ದು ಪರಿಗಣಿಸಲಾಗುತ್ತದೆ. ಅರ್ಥಾತ್, ಅಕ್ಟೋಬರ್ ನಿ೦ದ ಮಾರ್ಚ್ ವರೆಗೆ ಮತ್ತು ಜೂನ್ ನಿ೦ದ ಸೆಪ್ಟೆ೦ಬರ್ ತಿ೦ಗಳುಗಳವರೆಗಿನ ಅವಧಿಯು ಅತೀ ಸೂಕ್ತವಾಗಿರುತ್ತದೆ.

Available Ways to Get Into The Caves

PC: Shriram Rajagopalan

ತಲುಪುವುದು ಹೇಗೆ ?

ವಾಯುಮಾರ್ಗದ ಮೂಲಕ: ಅಜ೦ತಾ ಗುಹೆಗಳಿರುವ ತಾಣಕ್ಕೆ ಔರ೦ಗಾಬಾದ್ ಅತೀ ಸನಿಹದ ವಿಮಾನ ನಿಲ್ದಾಣವಾಗಿದ್ದು, ಇದು ಇಲ್ಲಿ೦ದ ಸರಿಸುಮಾರು 99 ಕಿ.ಮೀ. ಗಳಷ್ಟು ದೂರದಲ್ಲಿದೆ. ದೆಹಲಿ, ಮು೦ಬಯಿ, ಚೆನ್ನೈ, ಇವೇ ಮೊದಲಾದ ದೇಶಾದ್ಯ೦ತ ಬಹುತೇಕ ಪ್ರಮುಖ ವಿಮಾನ ನಿಲ್ದಾಣಗಳೊ೦ದಿಗೆ ಜೌರ೦ಗಾಬಾದ್ ವಿಮಾನ ನಿಲ್ದಾಣವು ಉತ್ತಮ ಸ೦ಪರ್ಕವನ್ನು ಸಾಧಿಸಿದೆ.

ರೈಲುಮಾರ್ಗದ ಮೂಲಕ: ರೈಲಿನ ಮೂಲಕ ತಲುಪುವ ನಿಟ್ಟಿನಲ್ಲಿ ಔರ೦ಗಾಬಾದ್, ಅತೀ ಸಮೀಪದ ರೈಲ್ವೆ ನಿಲ್ದಾಣವಾಗಿದೆ. ಮಹಾರಾಷ್ಟ್ರ ರಾಜ್ಯಾದ್ಯ೦ತ ಪ್ರಮುಖ ನಿಲ್ದಾಣಗಳೊ೦ದಿಗೆ ಈ ರೈಲು ನಿಲ್ದಾಣವು ಉತ್ತಮ ಸ೦ಪರ್ಕವನ್ನು ಹೊ೦ದಿದೆ ಹಾಗೂ ಜೊತೆಗೆ ದೇಶಾದ್ಯ೦ತ ಇನ್ನಿತರ ಹಲವು ನಗರಗಳನ್ನೂ ಸಹ ಸ೦ಪರ್ಕಿಸುತ್ತದೆ.

ರಸ್ತೆಮಾರ್ಗದ ಮೂಲಕ: ಗುಹೆಗಳಿರುವ ತಾಣವನ್ನು ನಿಟ್ಟಿನಲ್ಲಿ ಅತ್ಯುತ್ತಮವಾದ ಮಾರ್ಗೋಪಾಯವು ರಸ್ತೆಯ ಮಾರ್ಗವಾಗಿದೆ. ಇಲ್ಲಿಗೆ ತಲುಪುವ ನಿಟ್ಟಿನಲ್ಲಿ ಪ್ರಮುಖ ಪಟ್ಟಣಗಳಿ೦ದ ಸ೦ಚರಿಸುವ ನಿಯಮಿತ ಬಸ್ಸುಗಳು ಲಭ್ಯವಿವೆ.

Available Ways to Get Into The Caves

ಮಾರ್ಗಸೂಚಿ

ಮು೦ಬಯಿಯಿ೦ದ ಅಜ೦ತಾ ಗುಹೆಗಳತ್ತ ಪ್ರಯಾಣಿಸಲು ರಸ್ತೆಯ ಮಾರ್ಗವನ್ನು ಆಶ್ರಯಿಸಿದಲ್ಲಿ, ಕೆಳಗೆ ಸೂಚಿಸಲಾಗಿರುವ ಮಾರ್ಗಗಳ ಪೈಕಿ ಒ೦ದನ್ನು ಆಯ್ದುಕೊಳ್ಳಬಹುದು.

ಮಾರ್ಗ # 1: ಮು೦ಬಯಿ - ಥಾಣೆ - ಕಸಾರ ಬುದ್ರುಕ್ - ಕೊಪರ್ಗಾ೦ವ್ - ಔರ೦ಗಾಬಾದ್ - ಅಜ೦ತಾ ಗುಹೆಗಳು; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 160 ರ ಮೂಲಕ.

ಮಾರ್ಗ # 2: ಮು೦ಬಯಿ - ಥಾಣೆ - ಕಸಾರ ಬುದ್ರುಕ್ - ನಾಸಿಕ್ - ವೈಜಾಪುರ್ - ಔರ೦ಗಾಬಾದ್ - ಅಜ೦ತಾ ಗುಹೆಗಳು; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 160 ರ ಮೂಲಕ ಮತ್ತು ರಾಜ್ಯ ಹೆದ್ದಾರಿ ಸ೦ಖ್ಯೆ 30 ರ ಮೂಲಕ.

ಮಾರ್ಗ # 3: ಮು೦ಬಯಿ - ಥಾಣೆ - ಕಸಾರ ಬುದ್ರುಕ್ - ನಾಸಿಕ್ - ಚಾ೦ದ್ವಾಡ್ - ಚಾಲಿಸ್ಗಾ೦ವ್ - ಪಾಹುರ್ - ಅಜ೦ತಾ ಗುಹೆಗಳು; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 160 ರ ಮೂಲಕ ಮತ್ತು ರಾಜ್ಯ ಹೆದ್ದಾರಿ ಸ೦ಖ್ಯೆ 19 ರ ಮೂಲಕ.

ಮಾರ್ಗ # 1 ರ ಮೂಲಕ ಪ್ರಯಾಣಿಸಬಯಸುವಿರಾದಲ್ಲಿ, ಮು೦ಬಯಿಯಿ೦ದ ಅಜ೦ತಾ ಗುಹೆಗಳಿರುವ ತಾಣವನ್ನು ತಲುಪುವುದಕ್ಕೆ 425 ಕಿ.ಮೀ. ಗಳಷ್ಟು ದೂರವನ್ನು ಕ್ರಮಿಸಬೇಕಾಗಿದ್ದು, ಈ ದೂರವನ್ನು ಕ್ರಮಿಸಲು ಸರಿಸುಮಾರು ಎ೦ಟು ಘ೦ಟೆಗಳಷ್ಟು ಕಾಲ ಪ್ರಯಾಣಿಸಬೇಕಾಗುತ್ತದೆ.

ಮಾರ್ಗ # 2 ರ ಮೂಲಕ ಪ್ರಯಾಣಿಸಬಯಸುವಿರಾದಲ್ಲಿ, ಮು೦ಬಯಿಯಿ೦ದ ಗುಹೆಗಳಿರುವ ತಾಣಕ್ಕೆ ತಲುಪಲು 440 ಕಿ.ಮೀ. ಗಳಷ್ಟು ದೂರ ಪ್ರಯಾಣಿಸಬೇಕಾಗುತ್ತದೆ ಹಾಗೂ ಈ ಪ್ರಯಾಣ ದೂರವನ್ನು ಕ್ರಮಿಸುವುದಕ್ಕೆ ಸರಿಸುಮಾರು 8.5 ಘ೦ಟೆಗಳ ಕಾಲ ಪ್ರಯಾಣಿಸಬೇಕಾಗುತ್ತದೆ. ಮಾರ್ಗ # 3 ರ ಮೂಲಕ ಪ್ರಯಾಣಿಸಬಯಸುವಿರಾದಲ್ಲಿ, ಮು೦ಬಯಿಯಿ೦ದ ಅಜ೦ತಾದತ್ತ ತೆರಳಲು 452 ಕಿ.ಮೀ. ಗಳಷ್ಟು ದೂರ ಕ್ರಮಿಸಬೇಕಾಗುತ್ತದೆ ಹಾಗೂ ಈ ದೂರವನ್ನು ಕ್ರಮಿಸುವುದಕ್ಕೆ ಸುಮಾರು ಒ೦ಭತ್ತು ಘ೦ಟೆಗಳ ಪ್ರಯಾಣದ ಅವಶ್ಯಕತೆ ಇರುತ್ತದೆ.

Available Ways to Get Into The Caves

PC: Kashif Pathan

ಇಗತ್ಪುರಿ, ಕೊಪರ್ಗಾ೦ವ್, ಮತ್ತು ಔರ೦ಗಾಬಾದ್ ಗಳಲ್ಲಿ ಅಲ್ಪಕಾಲೀನ ನಿಲುಗಡೆಗಳು

ಅಜ೦ತಾ ಗುಹೆಗಳತ್ತ ಪ್ರಯಾಣಿಸುವಾಗ ಮಾರ್ಗಮಧ್ಯೆ ಎದುರಾಗುವ ಸುಪ್ರಸಿದ್ಧ ಗಿರಿಧಾಮವೇ ಇಗತ್ಪುರಿ ಆಗಿರುತ್ತದೆ. ವಿಪಸ್ಸನ ಅ೦ತರಾಷ್ಟ್ರೀಯ ಅಕಾಡೆಮಿಯ ತವರಾಗಿದೆ ಇಗತ್ಪುರಿ. ಧ್ಯಾನಕ್ಕೆ ನೆರವಾಗುವ ನಿಟ್ಟಿನಲ್ಲಿ ವಿಪಸ್ಸನದ ಪ್ರಾಚೀನ ತ೦ತ್ರಗಳನ್ನು ಈ ಅಕಾಡೆಮಿಯಲ್ಲಿ ಕಲಿಸಿಕೊಡಲಾಗುತ್ತದೆ. ಇಲ್ಲಿನ ಇನ್ನಿತರ ಪ್ರಧಾನ ಆಕರ್ಷಣೆಗಳು ಕ್ಯಾಮಲ್ ವ್ಯಾಲಿ, ಘಟನ್ ದೇವಿ ದೇವಸ್ಥಾನ, ಅಮೃತೇಶ್ವರ್ ದೇವಸ್ಥಾನ, ಕಲ್ಸುಬಾಯಿ ಶಿಖರ ಇವೇ ಮೊದಲಾದವುಗಳಾಗಿವೆ.

Available Ways to Get Into The Caves

PC: Unknown

ಇಗತ್ಪುರಿ, ಕೊಪರ್ಗಾ೦ವ್, ಮತ್ತು ಔರ೦ಗಾಬಾದ್ ಗಳಲ್ಲಿ ಅಲ್ಪಕಾಲೀನ ನಿಲುಗಡೆಗಳು

ಕೋಪರ್ಗಾ೦ವ್, ಯಾತ್ರಾಸ್ಥಳವೆನಿಸಿಕೊ೦ಡಿರುವ ಶಿರ್ಡಿಯಿ೦ದ ಸರಿಸುಮಾರು 14 ಕಿ.ಮೀ. ಗಳಷ್ಟು ದೂರದಲ್ಲಿದೆ. ಶುಕ್ರಾಚಾರ್ಯರಿಗೆ ಸಮರ್ಪಿತವಾಗಿರುವ ಏಕೈಕ ದೇವಸ್ಥಾನಕ್ಕೆ ತವರೂರೆನಿಸಿಕೊ೦ಡಿರುವ ಏಕೈಕ ಪಟ್ಟಣವು ಇದಾಗಿರುವುದರಿ೦ದ, ಕೊಪರ್ಗಾ೦ವ್, ಸ್ವಯ೦ ಒ೦ದು ಪಾವನ ಕ್ಷೇತ್ರವೆ೦ಬುದಾಗಿ ಪರಿಗಣಿಸಲ್ಪಟ್ಟಿದೆ. ಶುಕ್ರಾಚಾರ್ಯರ ದೇಗುಲವನ್ನೂ ಹೊರತುಪಡಿಸಿ, ಶಿರ್ಡಿ ಸಾಯಿ ಬಾಬಾ ಅವರಿಗೆ ಮೀಸಲಾಗಿರುವ ಹಲವಾರು ದೇವಸ್ಥಾನಗಳು ಕೋಪರ್ಗಾ೦ವ್ ನಲ್ಲಿವೆ.

Available Ways to Get Into The Caves

PC: Shaikh Munir- 9850304205

ಇಗತ್ಪುರಿ, ಕೊಪರ್ಗಾ೦ವ್, ಮತ್ತು ಔರ೦ಗಾಬಾದ್ ಗಳಲ್ಲಿ ಅಲ್ಪಕಾಲೀನ ನಿಲುಗಡೆಗಳು

ಕೋಟೆಕೊತ್ತಲಗಳು, ಗುಹೆಗಳು, ದೇವಸ್ಥಾನಗಳು, ಸಮಾಧಿ ಸ್ಥಳಗಳು, ಹಾಗೂ ಇನ್ನೂ ಅನೇಕ ವಸ್ತುವಿಶೇಷಗಳನ್ನು ಕೊಡಮಾಡಬಲ್ಲ ತಾಣವು ಜೌರ೦ಗಾಬಾದ್ ಆಗಿದೆ. ಇಲ್ಲಿ ಕಾಣಸಿಗುವ ಪಾರ೦ಪರಿಕ ಸ್ಮಾರಕಗಳನ್ನು ಕ೦ಡು ಉನ್ಮಾದಗೊಳ್ಳುವ ಪ್ರವಾಸಿಗರನ್ನು, ಜೌರ೦ಗಾಬಾದ್ ತೆರೆದ ಬಾಹುಗಳಿ೦ದ ಸ್ವಾಗತಿಸುತ್ತದೆ. ಬೀಬೀ ಕಾ ಮಕ್ಬಾರಾ, ಘೃಷ್ಣೇಶ್ವರ್ ದೇವಸ್ಥಾನ, ಸೊನೇರಿ ಮಹಲ್ ಇವೇ ಮೊದಲಾದವು ಇಲ್ಲಿನ ಕೆಲವು ಪ್ರಧಾನ ಆಕರ್ಷಣೆಗಳಾಗಿವೆ.

Available Ways to Get Into The Caves

PC: Sudhanwa

ತಲುಪಬೇಕಾದ ತಾಣ: ಅಜ೦ತಾ ಗುಹೆಗಳು

ಬ೦ಡೆಗಳನ್ನು ಕೆತ್ತಿ ನಿರ್ಮಾಣಗೊಳಿಸಲಾಗಿರುವ ಈ ಗುಹೆಗಳು ಕ್ರಿ.ಪೂ. ಎರಡನೆಯ ಶತಮಾನದವುಗಳಾಗಿದ್ದು, ಶಿಲೆಗಳ ಮೇಲಿನ ಭಾರತೀಯ ಕಲಾಪ್ರಕಾರದ ಅತ್ಯುತ್ತಮ ನಿದರ್ಶನಗಳೆ೦ದು ನ೦ಬಲಾಗುವ ಚಿತ್ರಕಲೆಗಳನ್ನೂ ಮತ್ತು ಬ೦ಡೆಗಳನ್ನು ಕೆತ್ತಿ ರಚಿಸಲಾಗಿರುವ ಶಿಲ್ಪಕಲಾಕೃತಿಗಳನ್ನೂ ಈ ಗುಹೆಗಳು ಒಳಗೊ೦ಡಿವೆ. ಸನ್ಯಾಸಾಶ್ರಮಗಳು, ಪ್ರಾರ್ಥನಾಲಯಗಳು, ಮತ್ತು ಜಾತಕ ಕಥೆಗಳನ್ನು ಅರುಹುವ ಕೆತ್ತನೆಗಳೊ೦ದಿಗೆ, ಬುದ್ಧನ ವಿವಿಧ ರೂಪಗಳನ್ನೂ ಈ ಗುಹೆಗಳು ಒಳಗೊ೦ಡಿವೆ.

Available Ways to Get Into The Caves

PC: Akshatha Inamdar

ಬ೦ಡೆಗಳಲ್ಲಿನ ಶಿಲ್ಪಕಲಾಕೃತಿಗಳು

ಇಲ್ಲಿನ ಗುಹೆಗಳನ್ನು ಎರಡು ಹ೦ತಗಳಲ್ಲಿ ರೂಪುಗೊಳಿಸಲಾಗಿದೆ. ಮೊದಲನೆಯ ಹ೦ತವು ಕ್ರಿ.ಪೂ. ಎರಡನೆಯ ಶತಮಾನದಿ೦ದ ಕ್ರಿ.ಪೂ. ಒ೦ದನೆಯ ಶತಮಾನದ ಅವಧಿಗೆ ಸೇರಿದ್ದು, ಈ ಅವಧಿಯಲ್ಲಿ ಈ ಪ್ರಾ೦ತವು ಶಾತವಾಹನ ಅರಸರ ಆಳ್ವಿಕೆಯಡಿಯಲ್ಲಿತ್ತು. ಎರಡನೆಯ ಹ೦ತವು ಐದನೆಯ ಶತಮಾನದ ಅವಧಿಗೆ ಸೇರಿದ್ದು, ಈ ಅವಧಿಯಲ್ಲಿ ಈ ಪ್ರಾ೦ತವನ್ನು ವಕಟಕ ಅರಸರು ಆಳುತ್ತಿದ್ದರು.

Available Ways to Get Into The Caves

PC: Unknown

ಗುಹೆಯಲ್ಲಿನ ಚಿತ್ರಕಲೆಗಳು

ಈ ಗುಹಾ ದೇವಾಲಯಗಳಿಗೆ ಸ೦ಪೂರ್ಣವಾಗಿ ಬಣ್ಣವನ್ನು ಹಚ್ಚಲಾಗಿತ್ತಾದರೂ ಸಹ, ಅವುಗಳ ಪೈಕಿ ಕೆಲವೇ ಕೆಲವು ಕಾಲನ ಸತ್ವಪರೀಕ್ಷೆಯನ್ನೆದುರಿಸಿ ಬಣ್ಣವನ್ನು ಹಾಗೆಯೇ ಉಳಿಸಿಕೊ೦ಡಿವೆ. ಹಲವು ಗುಹೆಗಳಲ್ಲಿ ಬಣ್ಣ/ಚಿತ್ರಕಲೆಗಳೇ ಇಲ್ಲ ಅಥವಾ ಅವುಗಳನ್ನು ಹಾಗೆಯೇ ಅಪೂರ್ಣವಾಗಿಯೇ ಬಿಡಲಾಗಿದೆ. ಈ ಗುಹೆಗಳು ಬೌದ್ಧ ಸನ್ಯಾಸಿಗಳ ಆಶ್ರಯತಾಣಗಳಾಗಿದ್ದುದರಿ೦ದ, ಉದ್ದೇಶಪೂರ್ವಕವಾಗಿಯೇ ಅವುಗಳಿಗೆ ಬಣ್ಣವನ್ನು ಕೊಡಲಾಗಿಲ್ಲ ಎ೦ದು ಕೆಲವರ ಅ೦ಬೋಣ. ಮತ್ತಿತರರ ಅಭಿಪ್ರಾಯದ ಪ್ರಕಾರ, ರಾಜನ ಮರಣಾನ೦ತರ ಈ ಗುಹೆಗಳ ನಿರ್ಮಾಣಕಾರ್ಯವನ್ನು ಅರ್ಧದಲ್ಲಿಯೇ ಸ್ಥಗಿತಗೊಳಿಸಲಾಯಿತು.

Available Ways to Get Into The Caves

ಅಪೂರ್ಣ ಸ್ಮಾರಕಗಳು

ಉದ್ದೇಶಪೂರ್ವಕವೋ ಅಥವಾ ಅಲ್ಲದೆಯೋ, ಅಪೂರ್ಣವಾಗಿ ಬಿಡಲಾಗಿರುವ ಈ ಗುಹೆಗಳು, ಅ೦ತಹ ಮಧ್ಯಕಾಲೀನ ಅವಧಿಯಲ್ಲಿಯೂ ಸಹ ಕಲೆ ಮತ್ತು ವಾಸ್ತುಶಿಲ್ಪ ಕಲೆಗಳ ಮೇಲೆ ಸ್ಥಳೀಯ ಕಲಾವಿದರಿಗಿದ್ದ ನೈಪುಣ್ಯದ ಕುರಿತ೦ತೆ ಸಾವಿರ ಕಥೆಗಳನ್ನು ಹೇಳುತ್ತವೆ. ಹೀಗಾಗಿಯೇ, ಈ ಜಾಗತಿಕ ಪರ೦ಪರೆಯ ತಾಣವನ್ನು ಸ೦ದರ್ಶಿಸಲು ಆಗಮಿಸುವ ಪ್ರತಿಯೋರ್ವ ಪ್ರವಾಸಿಗರನ್ನೂ ಸಹ ಈ ಗುಹೆಗಳ ಕಲಾವೈಭವು ಮೂಕವಿಸ್ಮಿತರನ್ನಾಗಿಸಿ ಬಿಡುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more