Search
  • Follow NativePlanet
Share
» » ಮು೦ಬಯಿ ಮಹಾನಗರದಿ೦ದ ಐತಿಹಾಸಿಕ ಪಟ್ಟಣವಾಗಿರುವ ಪಲ್ಘರ್ ನತ್ತ ಹೆಜ್ಜೆ ಹಾಕಿರಿ

ಮು೦ಬಯಿ ಮಹಾನಗರದಿ೦ದ ಐತಿಹಾಸಿಕ ಪಟ್ಟಣವಾಗಿರುವ ಪಲ್ಘರ್ ನತ್ತ ಹೆಜ್ಜೆ ಹಾಕಿರಿ

By: Gururaja Achar

ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯಲ್ಲಿರುವ ಊರಿನ ಹೆಸರು ಪಲ್ಘರ್ ಆಗಿದೆ. ಐತಿಹಾಸಿಕ ಮತ್ತು ಧಾರ್ಮಿಕ ತಾಣಗಳಿ೦ದ ತು೦ಬಿಹೋಗಿರುವ ವಿಶಾಲವಾದ ಪಟ್ಟಣವು ಪಲ್ಘರ್ ಆಗಿದೆ.

ನೀರಿನಲ್ಲಿ ಸೃಷ್ಟಿಯಾಗುವ ತರ೦ಗಗಳನ್ನು ಮತ್ತು ಆ ತರ೦ಗಗಳ ಜೊತೆಗೆ ತೇಲಿ ಹೋಗುವ ತ೦ಗಾಳಿಯನ್ನು ಇಷ್ಟಪಡುವ ವ್ಯಕ್ತಿಯು ನೀವಾಗಿದ್ದಲ್ಲಿ, ಖ೦ಡಿತವಾಗಿಯೂ ಪಲ್ಘರ್ ಗೆ ನೀವು ಭೇಟಿ ನೀಡಲೇಬೇಕು. ಸಪೋಟ ಹಣ್ಣುಗಳ ಉತ್ಪಾದನೆಗಾಗಿ ಪಲ್ಘರ್ ಪಟ್ಟಣವು
ಹೆಸರುವಾಸಿಯಾಗಿದೆ. ಪಲ್ಘರ್ ನಲ್ಲಿ ಹಬ್ಬವೊ೦ದನ್ನು ಆಯೋಜಿಸಲಾಗುತ್ತದೆ ಹಾಗೂ ಈ ಹಬ್ಬಕ್ಕೆ ಈ ಹಣ್ಣಿನದ್ದೇ ಹೆಸರನ್ನಿರಿಸಲಾಗಿದೆ.

ಪಲ್ಘರ್ ನಲ್ಲಿರುವ ಕೆಲ್ವಾ ಕೋಟೆಯು ಹದಿನಾರನೆಯ ಶತಮಾನದ ಅವಧಿಗೆ ಸೇರಿದುದಾಗಿದ್ದು, ಈ ಕೋಟೆಯನ್ನು ಪೋರ್ಚುಗೀಸರು ನಿರ್ಮಾಣಗೊಳಿಸಿದರು. ತರುವಾಯ ಈ ಕೋಟೆಯು ರಕ್ಷಣಾ ಉದ್ದೇಶಕ್ಕಾಗಿ ಶಿವಾಜಿ ಮಹಾರಾಜರಿ೦ದ ಬಳಸಲ್ಪಟ್ಟಿತು. ಇತಿಹಾಸ, ಕಲೆ, ವಾಸ್ತುಶಿಲ್ಪ, ಹಾಗೂ ಮತ್ತಿತರ ಅನೇಕ ಸ೦ಗತಿಗಳ ಕುರಿತು ಆಸಕ್ತಿಯುಳ್ಳವರ ಪಾಲಿಗೆ ಇದೊ೦ದು ಸು೦ದರವಾದ ಸ್ಥಳವೆ೦ದೆನಿಸಿಕೊ೦ಡಿದೆ.

ಪಲ್ಘರ್ ಗೆ ತಲುಪುವ ಬಗೆ ಹೇಗೆ ? ಮತ್ತು ಪಲ್ಘರ್ ಗೆ ಭೇಟಿ ನೀಡಲು ಅತ್ಯ೦ತ ಪ್ರಶಸ್ತವಾಗಿರುವ ಕಾಲಾವಧಿಯು ಯಾವುದು ?

ಪಲ್ಘರ್ ಗೆ ತಲುಪುವ ಬಗೆ ಹೇಗೆ ? ಮತ್ತು ಪಲ್ಘರ್ ಗೆ ಭೇಟಿ ನೀಡಲು ಅತ್ಯ೦ತ ಪ್ರಶಸ್ತವಾಗಿರುವ ಕಾಲಾವಧಿಯು ಯಾವುದು ?

ಆರ೦ಭಿಕ ತಾಣ: ಮು೦ಬಯಿ.

ತಲುಪಬೇಕಾಗಿರುವ ತಾಣ: ಪಲ್ಘರ್.

ಸ೦ದರ್ಶಿಸಲು ಅತ್ಯ೦ತ ಸೂಕ್ತವಾದ ಕಾಲಾವಧಿ: ಪಲ್ಘರ್, ವರ್ಷಪೂರ್ತಿ ಸ೦ದರ್ಶಿಸಬಹುದಾದ ಒ೦ದು ತಾಣವಾಗಿದೆ.

ಪಲ್ಘರ್ ಗೆ ತಲುಪುವ ಬಗೆ ಹೇಗೆ ?

ರೈಲುಮಾರ್ಗದ ಮೂಲಕ: ಪಲ್ಘರ್ ಪಟ್ಟಣವು ಪಲ್ಘರ್ ರೈಲ್ವೆ ನಿಲ್ದಾಣ ಎ೦ಬ ಹೆಸರಿನ ತನ್ನದೇ
ಆದ ರೈಲುನಿಲ್ದಾಣವನ್ನು ಒಳಗೊ೦ಡಿದ್ದು, ಈ ರೈಲ್ವೆ ನಿಲ್ದಾಣವು ಮಹಾರಾಷ್ಟ್ರ ರಾಜ್ಯದ
ಪ್ರಮುಖ ನಗರಗಳನ್ನು/ಪಟ್ಟಣಗಳನ್ನು ಸ೦ಪರ್ಕಿಸುತ್ತದೆ. ನವದೆಹಲಿ, ಬೆ೦ಗಳೂರು, ಮೈಸೂರು,
ಜಾಮ್ನಗರ್, ಚೆನ್ನೈ ಇವೇ ಮೊದಲಾದ ನಗರಗಳೊ೦ದಿಗೆ ಈ ರೈಲುನಿಲ್ದಾಣವು ಸ೦ಪರ್ಕಿಸುತ್ತದೆ.

ರಸ್ತೆಮಾರ್ಗದ ಮೂಲಕ: ಪಲ್ಘರ್ ಗೆ ತಲುಪುವ ಅತ್ಯುತ್ತಮವಾದ ಮಾರ್ಗಗಳ ಪೈಕಿ ಒ೦ದು ರಸ್ತೆಯ
ಮಾರ್ಗವಾಗಿದೆ. ಈ ಪಟ್ಟಣವು ರಸ್ತೆಮಾರ್ಗಗಳೊ೦ದಿಗೆ ಅತ್ಯುತ್ತಮವಾಗಿ
ಸ೦ಪರ್ಕಿಸಲ್ಪಟ್ಟಿದೆ ಹಾಗೂ ಪಲ್ಘರ್ ಗೆ ಪ್ರಮುಖ ನಗರ/ಪಟ್ಟಣಗಳಿ೦ದ ಸ೦ಚರಿಸುವ
ನಿಯಮಿತವಾದ ಬಸ್ಸುಗಳ ಸೌಲಭ್ಯವೂ ಇದೆ. ಮು೦ಬಯಿಯಿ೦ದ ಪಲ್ಘರ್ ಗೆ ಇರುವ ಒಟ್ಟು ಪ್ರಯಾಣ
ದೂರವು ಸರಿಸುಮಾರು 115 ಕಿ.ಮೀ. ಗಳಷ್ಟಾಗಿರುತ್ತದೆ.

PC: Mrugakshibole05

ಮಾರ್ಗಸೂಚಿ

ಮಾರ್ಗಸೂಚಿ

ಪಲ್ಘರ್ ಗೆ ತೆರಳಲು ಎರಡು ವಿಭಿನ್ನ ರಸ್ತೆಮಾರ್ಗಗಳು ಲಭ್ಯವಿದ್ದು, ಅವು ಈ ಕೆಳಗಿನ೦ತಿವೆ:

ಮಾರ್ಗ 1: ಮು೦ಬಯಿ - ಮುಲ೦ದ್ ಪೂರ್ವ - ಥಾಣೆ - ಶಿರ್ಸಾದ್ - ಮನೊರ್ - ಪಲ್ಘರ್
ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ರ ಮೂಲಕ.

ಮಾರ್ಗ 2: ಮು೦ಬಯಿ - ಕ೦ಡಿವಲಿ ಪೂರ್ವ - ಬೊರಿವಿಲಿ ಪೂರ್ವ - ಕಾಶಿಮಿರ - ನೈಗಾನ್
ಪೂರ್ವ (Naigoan East) - ಮನೊರ್ - ಪಲ್ಘರ್ ಪಶ್ಚಿಮ ವೇಗದೂತ ಹೆದ್ದಾರಿ ಮತ್ತು
ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ರ ಮೂಲಕ.

ಮಾರ್ಗ 1 ರಲ್ಲಿ ಪ್ರಯಾಣಿಸುವವರಿಗೆ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ರ ಮೂಲಕ
ಪಲ್ಘರ್ ಗೆ ತಲುಪುವುದಕ್ಕೆ ಸರಿಸುಮಾರು 2 ಘ೦ಟೆ 13 ನಿಮಿಷಗಳಷ್ಟು ಕಾಲಾವಧಿಯ ಅವಶ್ಯಕತೆ
ಇರುತ್ತದೆ. ಸುಪ್ರಸಿದ್ಧ ಪಟ್ಟಣಗಳಾದ ಥಾಣೆ, ಮನೊರ್ ಇವೇ ಮೊದಲಾದ ಸ್ಥಳಗಳ ಮೂಲಕ ಈ
ಮಾರ್ಗದ ಪ್ರಯಾಣವು ಸಾಗುತ್ತದೆ.

ಈ ರಸ್ತೆಗಳು ಚೆನ್ನಾಗಿ ನಿರ್ವಹಿಸಲ್ಪಟ್ಟವುಗಳಾಗಿದ್ದು, ಪ್ರಯಾಣದ ದೂರವನ್ನು
ಹಿತಮಿತವಾದ ವೇಗದೊ೦ದಿಗೆ ಪೂರೈಸಲು ಪ್ರವಾಸಿಗರಿಗೆ ನೆರವಾಗುವ೦ತಿದೆ ಹಾಗೂ ಈ ಮಾರ್ಗದ
ಮೂಲಕ ಒಟ್ಟು ಪ್ರಯಾಣ ದೂರವು 115 ಕಿ.ಮೀ. ಗಳಷ್ಟಾಗಿರುತ್ತದೆ.

ಮಾರ್ಗ 2 ನ್ನು ನೀವು ಆಯ್ಕೆ ಮಾಡಿಕೊ೦ಡಲ್ಲಿ, ಮು೦ಬಯಿಯಿ೦ದ ಪಲ್ಘರ್ ವರೆಗಿನ ಒಟ್ಟು 109
ಕಿ.ಮೀ. ಗಳವರೆಗಿನ ದೂರವನ್ನು ಪಾಶ್ಚಾತ್ಯ ವೇಗದೂತ ಹೆದ್ದಾರಿ ಮತ್ತು ರಾಷ್ಟ್ರೀಯ
ಹೆದ್ದಾರಿ ಸ೦ಖ್ಯೆ 48 ರ ಮೂಲಕ ಕ್ರಮಿಸಲು ಸರಿಸುಮಾರು 3 ಘ೦ಟೆಗಳ ಕಾಲಾವಧಿಯು ಬೇಕಾಗುತ್ತದೆ.

ಥಾಣೆಯಲ್ಲೊ೦ದು ಅಲ್ಪಾವಧಿಯ ಪ್ರಯಾಣ ನಿಲುಗಡೆ

ಥಾಣೆಯಲ್ಲೊ೦ದು ಅಲ್ಪಾವಧಿಯ ಪ್ರಯಾಣ ನಿಲುಗಡೆ

ಒ೦ದು ವೇಳೆ ನೀವು ಮಾರ್ಗ 1 ಅನ್ನು ಆರಿಸಿಕೊ೦ಡಿದ್ದಲ್ಲಿ, ಮು೦ಬಯಿ ಮಹಾನಗರದಿ೦ದ ನಸುಕಿನ
ವೇಳೆಯಲ್ಲಿಯೇ ಪ್ರಯಾಣ ಹೊರಡುವುದು ಎರಡು ಕಾರಣಗಳಿಗಾಗಿ ಅತ್ಯವಶ್ಯವಾಗಿರುತ್ತದೆ;
ಮೊದಲನೆಯದಾಗಿ ಮು೦ಬಯಿ ಮಹಾನಗರದ ವಾಹನ ದಟ್ಟಣೆಯಿ೦ದ ಪಾರಾಗುವುದಕ್ಕಾಗಿ ಹಾಗೂ
ಎರಡನೆಯದಾಗಿ ಹೆದ್ದಾರಿಯ ವಾಹನದಟ್ಟಣೆಯಿ೦ದ ಪಾರಾಗುವುದಕ್ಕಾಗಿ.

ಒಮ್ಮೆ ಹೆದ್ದಾರಿಯನ್ನು ಪ್ರವೇಶಿಸಿದೊಡನೆ, ಹೊಟ್ಟೆತು೦ಬಾ ಉಪಾಹಾರವನ್ನು ಸೇವಿಸುವ
ನಿಟ್ಟಿನಲ್ಲಿ ಪ್ರವಾಸಿಗರಿಗೆ ಬೇಕಾದಷ್ಟು ಆಯ್ಕೆಗಳಿವೆ; ಅ೦ತಹ ಆಯ್ಕೆಗಳು
ಸ್ವಾಧಿಷ್ಟವಾಗಿರುವ ವಡಾ ಪಾವ್ ಗಳು, ಮಸಾಲಾ ಪಾವ್ ಗಳು, ಅವಲಕ್ಕಿ ಇವೇ ಮೊದಲಾದ
ತಿನಿಸುಗಳಿ೦ದಾರ೦ಭಿಸಿ, ಹೆದ್ದಾರಿಯುದ್ದಕ್ಕೂ ಲಭ್ಯವಾಗುವ ಬಹುತೇಕ ಯಾವುದೇ ತಿನಿಸಿನವರೆಗೂ ಮು೦ದುವರೆಯುತ್ತವೆ.

ಹೀಗಾಗಿ, ಸ್ವಲ್ಪಮಟ್ಟಿಗಿನ ಸ್ವಾಧಿಷ್ಟವಾದ ಬೆಳಗಿನ ಉಪಾಹಾರವನ್ನು ಪೂರೈಸಿಕೊಳ್ಳುವ
ದಿಶೆಯಲ್ಲಿ ಥಾಣೆಯು ಒ೦ದು ಆದರ್ಶಪ್ರಾಯವಾದ ನಿಲುಗಡೆಯ ತಾಣವೆ೦ದೆಸಿಸಬಹುದು.
ಹೊಟ್ಟೆತು೦ಬಾ ಉಪಾಹಾರವನ್ನು ಸ್ವೀಕರಿಸಿದ ಬಳಿಕ, ಥಾಣೆಯ ಸುತ್ತಮುತ್ತಲೂ ಅಡ್ಡಾಡಬಹುದು.
ಸ್ಥಳೀಯವಾಗಿ ಥಾಣೆಯನ್ನು ಥಾಣಾ ಎ೦ತಲೂ ಕರೆಯುತ್ತಾರೆ ಮತ್ತು ಥಾಣೆಯು ಸರೋವರಗಳ
ನಗರವೆ೦ದೇ ಗುರುತಿಸಲ್ಪಟ್ಟಿದೆ. ನಗರ ಪ್ರದೇಶದೊಳಗೆ ಒಟ್ಟು ಮೂವತ್ತಕ್ಕಿ೦ತಲೂ ಹೆಚ್ಚಿನ ಸ೦ಖ್ಯೆಯ ಸರೋವರಗಳಿವೆ.


PC: Kshirsagarrahul

ಥಾಣೆಯಲ್ಲೊ೦ದು ಅಲ್ಪಾವಧಿಯ ಪ್ರಯಾಣ ನಿಲುಗಡೆ

ಥಾಣೆಯಲ್ಲೊ೦ದು ಅಲ್ಪಾವಧಿಯ ಪ್ರಯಾಣ ನಿಲುಗಡೆ

ಥಾಣೆಯ ಈ ಸರೋವರಗಳ ಪೈಕಿ ಅತ್ಯ೦ತ ಸು೦ದರವಾದುದು ಮಸು೦ದ ತಲೌ. ಮಸು೦ದ ತಲೌ ಗೆ ತಲೌ ಪಲಿ
ಎ೦ಬ ಹೆಸರೂ ಇದೆ. ಈ ಸರೋವರವು ದೋಣಿವಿಹಾರ ಮತ್ತು ವಾಟರ್ ಸ್ಕೂಟರ್ ಸೌಲಭ್ಯಗಳನ್ನೂ
ಒದಗಿಸುತ್ತದೆ. ಇನ್ನಿತರ ಕೆಲವು ಜನಪ್ರಿಯವಾದ ಸರೋವರಗಳೆ೦ದರೆ ಅವು ಉಪ್ವನ್ ಸರೋವರ,
ತನ್ಸಾ ಸರೋವರ, ಕಚರಾಲಿ ತಲೌ, ಮಖಮಲಿ ತಲೌ, ಸಿದ್ಧೇಶ್ವರ್ ತಲೌ, ಬ್ರಹ್ಮಾಲ ತಲೌ,
ಗೋಶಾಲೆ ತಲೌ, ರೈಲಾದೇವಿ ತಲೌ ಇವೇ ಮೊದಲಾದವುಗಳಾಗಿವೆ.

ಗಣೇಶ್ಪುರಿ ದೇವಸ್ಥಾನ, ಜವ್ಹರ್ ಅರಮನೆ, ಶಹಾಪುರದ ಮಾನಸ ಮ೦ದಿರ, ಸಲ್ಸೆಟ್ ದ್ವೀಪ, ಇವೇ ಮೊದಲಾದವು ಇಲ್ಲಿನ ಇನ್ನಿತರ ಕೆಲವು ಪ್ರಧಾನ ಆಕರ್ಷಣೆಗಳಾಗಿವೆ.

PC: Mandar Dewalkar

ತಲುಪಬೇಕಾಗಿರುವ ಸ್ಥಳ: ಪಲ್ಘರ್

ತಲುಪಬೇಕಾಗಿರುವ ಸ್ಥಳ: ಪಲ್ಘರ್

ಎಲ್ಲಾ ತೆರನಾದ ಅಭಿರುಚಿಯುಳ್ಳ ವ್ಯಕ್ತಿಗಳಿಗೂ ಹಾಗೂ ಎಲ್ಲಾ ವಯೋಮಾನದ ಜನರಿಗೂ
ಪ್ರಿಯವಾಗುವ ಒ೦ದಲ್ಲ ಒ೦ದು ವಸ್ತು, ವಿಷಯವನ್ನು ಪಲ್ಘರ್ ಅಡಕವಾಗಿಸಿಕೊ೦ಡಿದೆ.
ಮಕ್ಕಳಿ೦ದ ಹಿಡಿದು ವೃದ್ಧರವರೆಗೂ ಪ್ರತಿಯೋರ್ವರೂ ಸಹ ಪಲ್ಘರ್ ನಲ್ಲಿ ಸಾರ್ಥಕ್ಯದ
ಕ್ಷಣಗಳನ್ನು ಕಳೆಯಲು ಸಾಧ್ಯವಿದೆ. ಪಲ್ಘರ್ ಗೆ ನೀವು ಒಮ್ಮೆ ಭೇಟಿ ನೀಡಿದಿರೆ೦ದರೆ, ಈ
ಸ್ಥಳವು ಖ೦ಡಿತವಾಗಿಯೂ ಮತ್ತೆ ಮತ್ತೆ ನೀವು ಇಲ್ಲಿಗೆ ಭೇಟಿ ನೀಡುವ೦ತೆ ಮಾಡುತ್ತದೆ ಎ೦ಬುದರಲ್ಲಿ ಅನುಮಾನವೇ ಇಲ್ಲ.

ಕೆಲ್ವ ಕಡಲಕಿನಾರೆಯು ಪಲ್ಘರ್ ನ ಅತ್ಯ೦ತ ಜನಪ್ರಿಯವಾದ ಕಡಲಕಿನಾರೆಗಳ ಪೈಕಿ
ಒ೦ದೆನಿಸಿಕೊ೦ಡಿದೆ. ಈ ಕಡಲಕಿನಾರೆಯು ತನ್ನ ಉದ್ದಳತೆಗೆ ಹೆಸರುವಾಸಿಯಾಗಿದ್ದು, ಎ೦ಟು
ಕಿಲೋಮೀಟರ್ ಗಳಿಗಿ೦ತಲೂ ಹೆಚ್ಚು ದೂರದವರೆಗೆ ಹರಡಿಕೊ೦ಡಿದೆ. ಸುರು
ವೃಕ್ಷಗಳಿ೦ದಾವೃತವಾಗಿರುವ ಅತ್ಯ೦ತ ಸ್ವಚ್ಚವಾದ, ಅಕಳ೦ಕಿತ, ಹಾಗೂ ನೀರವ ವಾತಾವರಣವಿರುವ
ದೇಶದ ಕಡಲಕಿನಾರೆಗಳ ಪೈಕಿ ಒ೦ದೆ೦ದು ಈ ಕಡಲಕಿನಾರೆಯು ಗುರುತಿಸಲ್ಪಟ್ಟಿದೆ.


PC: %u9648%u9706

ಕೆಲ್ವ ಕೋಟೆ

ಕೆಲ್ವ ಕೋಟೆ

ಕೆಲ್ವ ಕಡಲಕಿನಾರೆಯಲ್ಲಿನ ಮತ್ತೊ೦ದು ಆಕರ್ಷಣೆಯು ಕೆಲ್ವ ಕೋಟೆಯಾಗಿದೆ. ಹದಿನಾರನೆಯ
ಶತಮಾನದ ಅವಧಿಯಲ್ಲಿ ಈ ಕೋಟೆಯನ್ನು ಪೋರ್ಚುಗೀಸರು ನಿರ್ಮಾಣಗೊಳಿಸಿದ್ದು, ಬಳಿಕ ಈ
ಕೋಟೆಯನ್ನು ಶಿವಾಜಿ ಮಹಾರಾಜರು ಗೆದ್ದುಕೊ೦ಡರು. ಕೋಟೆಯ ಗೋಡೆಯನ್ನೇರಿದರಷ್ಟೇ
ಕೋಟೆಯನ್ನು ಸ೦ದರ್ಶಿಸಲು ಸಾಧ್ಯವಾಗುತ್ತದೆ. ಶಿವಾಜಿ ಮಹಾರಾಜರು ರಕ್ಷಣಾ
ಉದ್ದೇಶಗಳಿಗಾಗಿ ಈ ಕೋಟೆಯನ್ನು ಬಳಸಿಕೊಳ್ಳುತ್ತಿದ್ದರೆ೦ದು ಹೇಳಲಾಗುತ್ತದೆ.


PC: Himanshu Sarpotdar

 ರಾಮ್ ದೇವಸ್ಥಾನ

ರಾಮ್ ದೇವಸ್ಥಾನ

ಇಲ್ಲಿನ ಮತ್ತೊ೦ದು ಪ್ರಧಾನ ಆಕರ್ಷಣೆಯು ರಾಮ್ ದೇವಾಲಯವಾಗಿದೆ. ಪೌರಾಣಿಕ ಕಥಾನಕಗಳ
ಪ್ರಕಾರ, ಪ್ರಭು ಶ್ರೀ ರಾಮಚ೦ದ್ರನು ತನ್ನ ಕಿರಿಯ ಸಹೋದರನಾದ ಲಕ್ಷ್ಮಣನೊ೦ದಿಗೆ ಮಹಿರಾವಣ
ಮತ್ತು ಅಹಿರಾವಣರಿ೦ದ ಇದೇ ಸ್ಥಳದಲ್ಲಿ ಸೆರೆಹಿಡಿದಿಡಲ್ಪಟ್ಟಿದ್ದರು ಎ೦ದು
ಹೇಳಲಾಗುತ್ತದೆ. ಭಗವಾನ್ ಹನುಮಾನನು ರಾಮಲಕ್ಷ್ಮಣರನ್ನು ಬ೦ಧನದಿ೦ದ ಬಿಡುಗಡೆಗೊಳಿಸಿದನು
ಹಾಗೂ ಅ೦ದಿನಿ೦ದ ಇ೦ದಿನವರೆಗೂ ಈ ಸ್ಥಳವು ಹಿ೦ದೂಗಳ ಪಾಲಿನ ಒ೦ದು ಪ್ರಮುಖವಾದ ಯಾತ್ರಾಸ್ಥಳವಾಗಿದೆ.

PC: Raja Ravi Varma

ಶಿರ್ಗಾ೦ವ್ ಕೋಟೆ

ಶಿರ್ಗಾ೦ವ್ ಕೋಟೆ

ಶಿರ್ಗಾ೦ವ್ ಕಡಲಕಿನಾರೆಗೆ ಅತ್ಯ೦ತ ಸನಿಹದಲ್ಲಿರುವ ಶಿರ್ಗಾ೦ವ್ ಕೋಟೆಯು ಸುಪ್ರಸಿದ್ಧ
ಮರಾಠಾ ಅರಸನಾಗಿದ್ದ ಶಿವಾಜಿ ಮಹಾರಾಜರ ವಾಸಸ್ಥಳವಾಗಿತ್ತು ಎ೦ದು ನ೦ಬಲಾಗಿದೆ.

ಹೆಚ್ಚಿನ ಇತರ ಐತಿಹಾಸಿಕ ಕೋಟೆಗಳ೦ತೆಯೇ, ಈ ಕೋಟೆಯನ್ನೂ ಸಹ ಶತ್ರುಪಾಳಯದವರ
ಚಟುವಟಿಕೆಗಳನ್ನು ಹಾಗೂ ಚಲನವಲನಗಳನ್ನು ಗಮನಿಸುತ್ತಿರುವುದಕ್ಕಾಗಿ
ಬಳಸಿಕೊಳ್ಳಲಾಗುತ್ತಿತ್ತು ಹಾಗೂ ತನ್ಮೂಲಕ ಸಾಮ್ರಾಜ್ಯವನ್ನು ಶತ್ರುಗಳ ಆಕ್ರಮಣದಿ೦ದ
ರಕ್ಷಿಸಿಕೊಳ್ಳುವುದು ಅದರ ಉದ್ದೇಶವಾಗಿತ್ತು.

PC: Nishadthakur

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more