Search
  • Follow NativePlanet
Share
» »ಏಷ್ಯಾದ ದೊಡ್ಡ ಏಕಶಿಲಾ ಸಾವನದುರ್ಗ ಬೆಟ್ಟದ ಕಡೆಗೆ ಪಯಣ

ಏಷ್ಯಾದ ದೊಡ್ಡ ಏಕಶಿಲಾ ಸಾವನದುರ್ಗ ಬೆಟ್ಟದ ಕಡೆಗೆ ಪಯಣ

By Manjula Balaraj Tantry

ಬೆಂಗಳೂರಿನಿಂದ ಅರವತ್ತು ಕಿ.ಮೀ ಪಶ್ಚಿಮಕ್ಕಿರುವ ಸಾವನದುರ್ಗ ಬೆಟ್ಟ ಏಷ್ಯಾದ ಅತ್ಯಂತ ದೊಡ್ಡ ಏಕಶಿಲಾ ಬೆಟ್ಟ ಎಂದೇ ಹೆಸರುವಾಸಿ, ಇಲ್ಲಿರುವ ಅವಳಿ ಬೆಟ್ಟಗಳನ್ನು ಬಿಳಿಗುಡ್ಡ ಮತ್ತು ಕರಿಗುಡ್ಡ ಎಂದು ಕರೆಯಲಾಗುತ್ತದೆ. ಹಿಂದೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕ್ರಿ.ಶ.1340ರಲ್ಲಿ ಹೊಯ್ಸಳ ಬಳ್ಳಾಲರು ಈ ಬೆಟ್ಟಕ್ಕೆ ಸಾವಂದಿ ಎಂದು ಹೆಸರು ಇಟ್ಟಿದ್ದರು.

From Bangalore to Savandurga

ಈ ಬೆಟ್ಟವು ಸರಾಸರಿ ಸಮುದ್ರ ಮಟ್ಟದಿಂದ 1226 ಮೀ ಎತ್ತರದಲ್ಲಿದೆ ಮತ್ತು ಇದು ಡೆಕ್ಕನ್ ಪ್ರಸ್ಥಭೂಮಿಯ ಭಾಗವಾಗಿದೆ. ಈ ಪರ್ವತವು ಪೆನಿನ್ಸುಲರ್ ನೈಸ್, ಗ್ರಾನೈಟ್ಸ್, ಮೂಲ ಡೈಕ್ಸ್ ಮತ್ತು ಲ್ಯಾಟೈಟ್ಸ್ಗಳನ್ನು ಒಳಗೊಂಡಿದೆ. ಅರ್ಕಾವಾತಿ ನದಿಯನ್ನು ಈ ಭಾಗದಿಂದ ನೋಡಬಹುದಾಗಿದೆ, ಇಲ್ಲಿ ಚಾರಣ ಸುಲಭವಾದ ಮತ್ತು ಸುಂದರವಾದದ್ದು, ಇಲ್ಲಿ ಕಮಲದ ಕೊಳವು ಕಾಣಸಿಗುತ್ತದೆ ಮತ್ತು ಟ್ರೆಕಿಂಗ್, ಕ್ಯಾಂಪಿಂಗ್ ಮತ್ತು ರಾಕ್ ಕ್ಲೈಂಬಿಂಗ್ ಗಳನ್ನು ಪ್ರೀತಿಸುವ ಜನರು ಆಗಾಗ ಭೇಟಿ ನೀಡುತ್ತಿರುತ್ತಾರೆ.

From Bangalore to Savandurga

PC: Pavithrah

ಹೋಗುವ ದಾರಿ, ಸ್ಟಾರ್ಟ್ ಪಾಯಿಂಟ್: ಬೆಂಗಳೂರು ತಲುಪುವ ಸ್ಥಳ, ಸಾವನದುರ್ಗಕ್ಕೆ ಭೇಟಿ ನೀಡಲು ಸೂಕ್ತ ಸಮಯ: ನವೆಂಬರ್ ನಿಂದ ಜೂನ್

ವಿಮಾನದ ಮೂಲಕ ತಲುವುದು ಹೇಗೆ: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣ ಇಲ್ಲಿಗೆ ಹತ್ತಿರದ ವಿಮಾನನಿಲ್ದಾಣ, ಇದು ಸುಮಾರು 91 ಕಿ.ಮೀ ದೂರದಲ್ಲಿದೆ. ಈ ವಿಮಾನನಿಲ್ದಾಣಕ್ಕೆ ದೇಶದ ಮತ್ತು ವಿದೇಶದ ಪ್ರಮುಖ ನಗರಗಳಿಂದ ಉತ್ತಮ ಸಂಪರ್ಕವಿದೆ.

ರೈಲಿನ ಮೂಲಕ: ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಹತ್ತಿರದ ರೈಲೆ ನಿಲ್ದಾಣವಾಗಿದೆ. ಇದು 66 ಕಿ.ಮೀದೂರದಲ್ಲಿದೆ. ಈ ರೈಲ್ವೆ ನಿಲ್ದಾಣದಿಂದ ದೇಶದ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕವಿದೆ.

ರಸ್ತೆಯ ಮೂಲಕ: ಸಾವನದುರ್ಗಕ್ಕೆ ತಲುಪಲು ಅತ್ಯುತ್ತಮ ಮಾರ್ಗವೆಂದರೆ ಅದು ರಸ್ತೆಯ ಮೂಲಕ. ಮಾಗಡಿ ನಗರಕ್ಕೆ ರಸ್ತೆಯ ಮೂಲಕ ಉತ್ತಮ ಸಂಪರ್ಕವಿದೆ, ಅಲ್ಲದೇ ಬಸ್ ವ್ಯವಸ್ಥೆ ಧಾರಾಳವಾಗಿದೆ. ಬೆಂಗಳೂರಿನಿಂದ ಮಾಗಡಿಗೆ ಬೆಟ್ಟದಿಂದ ಇಪ್ಪತ್ತು ಕಿ,ಮೀ.

ವಾಹನದ ಮೂಲಕ ಹೋಗುವುದಾದರೆ ಬೆಂಗಳೂರಿನಿಂದ ಸಾವನದುರ್ಗಕ್ಕೆ 56 ಕಿ.ಮೀ. ಸಾವನದುರ್ಗಕ್ಕೆ ಬೆಂಗಳೂರಿನಿಂದ ಹೋಗಲು ಎರಡು ಮಾರ್ಗವಿದೆ:

From Bangalore to Savandurga

PC: Shyamal

ರೂಟ್ 1: ಬೆಂಗಳೂರು - ಕೆಂಗೇರಿ-ಕುಂಬಳಗೋಡು-ಮಂಚನಬೆಲೆ- ಸಾವನದುರ್ಗ ವಯಾ ಸಾವನದುರ್ಗ - ಮಂಚನಬೆಲೆ

ರೂಟ್ 2: ಬೆಂಗಳೂರು - ವಿಶ್ವೇಶ್ವರಪುರ - ಗುಡೇಮಾರನಹಳ್ಳಿ, ಮಾಗಡಿ, ಸಾವನದುರ್ಗ, ರಾಜ್ಯ ಹೆದ್ದಾರಿ ಮೂರರ ಮೂಲಕ ಸಾವನದುರ್ಗ.

ಮೊದಲನೇ ಮಾರ್ಗದಲ್ಲಿ ಹೋಗಲು ಬಯಸುವವರು - ಬೆಂಗಳೂರಿನಿಂದ ರಾ.ಹೆ. 75ರ ಮೂಲಕ ಸರಿಸುಮಾರು ಎರಡು ಗಂಟೆಯ ಪ್ರಯಾಣ ಸಾವನದುರ್ಗಕ್ಕೆ. ಈ ಮಾರ್ಗದಲ್ಲಿ ಕೆಂಗೇರಿ, ಮಂಚನಬೆಲೆ ಮುಂತಾದ ಪ್ರದೇಶಗಳನ್ನು ಹಾದುಹೋಗಬೇಕಾಗಿದೆ.

ಈ ರಸ್ತೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗಿದೆ, ಬೆಂಗಳೂರಿನಿಂದ 56 ಕಿ.ಮೀ ದೂರದಲ್ಲಿರುವ ಸಾವನದುರ್ಗವನ್ನು, ಈ ರಸ್ತೆ ಚೆನ್ನಾಗಿರುವ ಕಾರಣ ಬೇಗ ಕ್ರಮಿಸಬಹುದಾಗಿದೆ.

ಎರಡನೇ ಮಾರ್ಗದಲ್ಲಿ ಹೋಗಲು ಬಯಸುವವರು - ಬೆಂಗಳೂರಿನಿಂದ ರಾ.ಹೆ. 3ರ ಮೂಲಕ ಸರಿಸುಮಾರು ಎರಡುವರೆ ಗಂಟೆಯ ಪ್ರಯಾಣ ಸಾವನದುರ್ಗಕ್ಕೆ, ಇದು ಎಪ್ಪತ್ತು ಕಿ.ಮೀ ವ್ಯಾಪ್ತಿಯದ್ದು.

From Bangalore to Savandurga

PC: Manoj M Shenoy

ಮಂಚನಬೆಲೆ ಬೆಂಗಳೂರು ನಗರಕ್ಕೆ ಹತ್ತಿರವಿರುವ ಕಾರಣದಿಂದ ಇಲ್ಲೊಂದು ಸ್ವಲ್ಪಹೊತ್ತು ತಂಗಬಹುದು, ಸಾವನದುರ್ಗ ಎನ್ನುವ ಅತ್ಯುತ್ತಮ ಪ್ರದೇಶಕ್ಕೆ ಸಾಮಾನ್ಯವಾಗಿ ವಾರಾಂತ್ಯದಲ್ಲಿ ಪ್ರಯಾಣಿಸುತ್ತಾರೆ. ತುಂಬಾ ಪ್ರಯಾಣಿಕರು ಅತ್ಯುದ್ಭುತ ಸೂರ್ಯೋದಯವನ್ನು ನೋಡುವ ಸಲುವಾಗಿ ಮತ್ತು ಹಚ್ಚಹಸುರನ್ನು ನೋಡುವ ಸಲುವಾಗಿ ಬೆಳಗ್ಗೆನೇ ಪ್ರಯಾಣಿಸುತ್ತಾರೆ.

ಉಪಹಾರಕ್ಕೆ ಮಂಚನಬೆಲೆ ಉತ್ತಮ ಆಯ್ಕೆ, ಯಾಕೆಂದರೆ ವಿವಿಧ ರೀತಿಯ ಹೊಟೇಲ್ ಗಳು ಇಲ್ಲಿ ಲಭ್ಯವಿರುತ್ತದೆ, ಇಲ್ಲಿಂದ ಹೆದ್ದಾರಿಯ ಮೂಲಕ ಪ್ರಯಾಣಿಸಿ ಸಾವನದುರ್ಗ ತಲುಪಬಹುದು. ಇಲ್ಲಿಂದ ಸುಮಾರು ಹದಿಮೂರು ಕಿ.ಮೀ ದೂರದಲ್ಲಿ ಸಾವನದುರ್ಗವಿದೆ. ಇದನ್ನು ಸುಮಾರು ಮೂವತ್ತು ನಿಮಿಷದಲ್ಲಿ ಕ್ರಮಿಸಬಹುದು.

From Bangalore to Savandurga

PC: L. Shyamal

ಅರ್ಕಾವತಿ ನದಿಗೆ ಕಟ್ಟಿರುವ ಅಣೆಕಟ್ಟು ಇಲ್ಲಿನ ಪ್ರಮುಖ ಆಕರ್ಷಣೆಯಲ್ಲೊಂದು, ಇದರ ಸಂಪೂರ್ಣ ಮಾಹಿತಿ ಕಾಯಕಿಂಗ್ ಅವರಿಂದ ಸಿಗುತ್ತದೆ. ಆವಿಷ್ಕಾರಯುತವಾದ ರಿಸಾರ್ಟುಗಳು ಇಲ್ಲಿ ಲಭ್ಯ. ಆದರೆ, ಈ ಜಲಾಶಯ ತುಂಬಾ ಅಪಾಯದಿಂದ ಕೂಡಿದ್ದು, ಎಷ್ಟೇ ಉತ್ತಮ ಈಜುಗಾರರಾದರೂ ಇಲ್ಲಿ ಈಜುವುದರಿಂದ ದೂರವಿರುವುದು ಉತ್ತಮ. ಎಷ್ಟೋ ಜನ, ನದಿಯಲ್ಲಿನ ಸುಳಿ, ಬಂಡೆ ಮುಂತಾದವರಿಂದ ಸಾವನ್ನಪ್ಪಿದ ಉದಾಹರಣೆಗಳಿವೆ.

ಸ್ಥಳ: ಸಾವನದುರ್ಗ ಬೇರೆ ಪ್ರವಾಸದ ಸ್ಥಳದಂತಲ್ಲ, ಇಲ್ಲಿನ ಚಾರಣ ಉತ್ತಮ ಅನುಭವವನ್ನು ನೀಡುತ್ತದೆ, ಚಾರಣ ಮುಗಿಯುವವರೆಗೂ ಎಲ್ಲೂ ಸಮತೋಲನ ನಡೆಸಲು ಆಧಾರ ಸಿಗುವುದಿಲ್ಲ, ಇದು ನಿಜವಾಗಲೂ ರೋಮಾಂಚನ ತಂದುಕೊಡುತ್ತದೆ ಬೆಟ್ಟ ತುಂಬಾ ಸಂಕೀರ್ಣವಾಗಿರುವುದರಿಂದ, ಉತ್ತಮ ಪಾದರಕ್ಷೆಯನ್ನು ಧರಿಸುವುದು ಸೂಕ್ತ. ಸಾವಂದಿ ವೀರಭದ್ರೇಶ್ವರ ಸ್ವಾಮಿ ಮತ್ತು ನರಸಿಂಹಸ್ವಾಮಿ ದೇವಾಲಯಕ್ಕೆ ಬರುವವರೂ ಸಾವನದುರ್ಗಕ್ಕೆ ಭೇಟಿ ನೀಡುತ್ತಾರೆ.

ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more