Search
  • Follow NativePlanet
Share
» »ರಾಣಿ ಶಾಪಕ್ಕೆ ಮರಳಿನಿಂದ ಸಮಾಧಿಯಾದ ನಗರ ಯಾವುದು ಗೊತ್ತ?

ರಾಣಿ ಶಾಪಕ್ಕೆ ಮರಳಿನಿಂದ ಸಮಾಧಿಯಾದ ನಗರ ಯಾವುದು ಗೊತ್ತ?

ಒಂದು ಸುಂದರವಾದ ಪ್ರದೇಶವನ್ನು ರಾಣಿಯ ಶಾಪದಿಂದಾಗಿ ಆ ಪ್ರದೇಶವು ಶಾಪಗ್ರಸ್ತವಾಗಿ ಪರಿವರ್ತನೆಗೊಂಡಿದೆ. ಸಾಮಾನ್ಯವಾಗಿ ನಾವು ಮಾಡುವ ಪಾಪಗಳೇ ಶಾಪವಾಗಿ ಮಾರ್ಪಾಟಾಗುತ್ತದೆ. ಕೆಲವು ಸಂಘಟನೆಗಳನ್ನು ಕಂಡಾಗ ಅದು ನಿಜ ಎಂದು ಅನಿಸುತ್ತದೆ. ನಂಬದೇ ಇರುವವರು ಕೂಡ ನಂಬಲೇಬೇಕಾದ ಪರಿಸ್ಥಿತಿ ಏರ್ಪಡುತ್ತದೆ.

ಆ ನಗರ ಯಾವುದೆಂದರೆ ಅದು ಕರ್ನಾಟಕ ರಾಜ್ಯದ ಪ್ರಸಿದ್ಧವಾದ ನಗರ ತಲಕಾಡು. ಈ ಪ್ರದೇಶದಲ್ಲಿರುವ ದೇವಾಲಯಗಳು ಮರಳಿನಿಂದ ಮುಚ್ಚಿ ಹೋಗಿರುತ್ತದೆ. ವಿಚಿತ್ರವೆನೆಂದರೆ ಎಷ್ಟೇ ಬಾರಿ ಪುರಾತತ್ವ ಇಲಾಖೆಯವರು ಬೆಳಕಿಗೆ ತಂದರೂ ಮತ್ತೇ ಅದು ಮರಳಿನಲ್ಲಿ ಸೇರುತ್ತದೆ. ಈ ಆಶ್ಚರ್ಯಕರವಾದ ಘಟನೆಯ ಹಿಂದೆ ರಾಣಿಯ ಶಾಪವಿದೆ ಎಂದು ಚಾರಿತ್ರಿಕ ಕಥನವಿದೆ.

ಪ್ರಸ್ತುತ ಲೇಖನದ ಮೂಲಕ ತಲಕಾಡುವಿನಲ್ಲಿ ಹೀಗೆ ದೇವಾಲಯಗಳೆಲ್ಲಾ ಸಮಾಧಿಯಾಗುವ ಕಾರಣದ ಬಗ್ಗೆ ತಿಳಿಯೋಣ.

ಎಲ್ಲಿದೆ?

ಎಲ್ಲಿದೆ?

ಪ್ರಸಿದ್ಧವಾದ ತಲಕಾಡು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯಲ್ಲಿದೆ. ಮೈಸೂರಿನಿಂದ ಸುಮಾರು 45 ಕಿ,ಮೀ ದೂರ ಹಾಗೂ ಬೆಂಗಳೂರಿನಿಂದ 133 ಕಿ,ಮೀ ಅಂತರದಲ್ಲಿದೆ. ಮೈಸೂರು ಜಿಲ್ಲೆಯಲ್ಲಿನ ಪ್ರಮುಖವಾದ ಯಾತ್ರಾಸ್ಥಳಗಳಲ್ಲಿ ಇದು ಕೂಡ ಒಂದಾಗಿದೆ.

PC:Likhith N.P

ಪ್ರವಾಸಿಗರು

ಪ್ರವಾಸಿಗರು

ಇಲ್ಲಿನ ವೈಭವಯುತವಾದ ದೇವಾಲಯಗಳು, ಪವಿತ್ರವಾದ ಕಾವೇರಿ ನದಿ, ಮರಳು ಇವೆಲ್ಲವೂ ಜನರನ್ನು ಆಕರ್ಷಿಸುತ್ತದೆ. ಇಲ್ಲಿರುವ ದೇವಾಲಯವನ್ನು ಕಾಣಲು ದೇಶ ವಿದೇಶಗಳಿಂದ ಇಲ್ಲಿನ ಪ್ರವಾಸಿ ತಾಣಕ್ಕೆ ಭೇಟಿ ನೀಡುತ್ತಾರೆ.

PC:RAVINDRA

ಶಾಪ ಚರಿತ್ರೆ

ಶಾಪ ಚರಿತ್ರೆ

ರಂಗಾರಾಯ ಎಂಬ ಅರಸ (ಶ್ರೀ ರಂಗ ಪಟ್ಟಣದ ವಿಜಯ ನಗರದ ವಂಶದ ಮುಖ್ಯಸ್ಥ) ಅನಾರೋಗ್ಯದಿಂದಾಗಿ ಬಳಲುತ್ತಿರುತ್ತಾರೆ. ವೈದ್ಯೇಶ್ವರ ಸ್ವಾಮಿಗೆ ಹರಕೆ ತೀರಿಸಿ ಪೂಜೆಯನ್ನು ಮಾಡಿದರೆ ರೋಗವು ಮಾಯವಾಗುತ್ತದೆ ಎಂದು ರಂಗಾರಾಯ ಈ ಪ್ರದೇಶಕ್ಕೆ ಭೇಟಿ ನೀಡಿದರಂತೆ.

PC:Likhith N.P

ರಾಜ್ಯದ ಪರಿಪಾಲನೆ

ರಾಜ್ಯದ ಪರಿಪಾಲನೆ

ರಂಗಾರಾಯ ಈ ಪ್ರದೇಶಕ್ಕೆ ಬಂದ ಕಾರಣದಿಂದಾಗಿ ರಾಜ್ಯಭಾರದ ಜವಾಬ್ದಾರಿಯನ್ನು ಆತನ ಪತ್ನಿ ಅಲವೇಲಮ್ಮನಿಗೆ ವಹಿಸುತ್ತಾನೆ.

PC:RAVINDRA

ರಾಜ

ರಾಜ

ರಾಜನ ಅನಾರೋಗ್ಯ ಮತ್ತಷ್ಟು ಕ್ಷೀಣವಾದ್ದರಿಂದ ರಾಣಿ ಅಲವೇಲಮ್ಮ ಕೂಡ ತನ್ನ ಪತಿಯನ್ನು ಕಾಣಲು ಈ ಪ್ರದೇಶಕ್ಕೆ ಬರುತ್ತಾಳೆ. ಬರುವ ಸಮಯದಲ್ಲಿ ಶ್ರೀರಂಗ ಪಟ್ಟಣದ ಅಧಿಕಾರವನ್ನು ರಾಜ ಒಡೆಯಾರ್‍ಗೆ ಒಪ್ಪಿಸುತ್ತಾಳೆ.

PC:RAVINDRA

ಒಡೆಯಾರ್

ಒಡೆಯಾರ್

ಆದರೆ ಒಡೆಯಾರ್ ಶ್ರೀ ರಂಗ ಪಟ್ಟಣವನ್ನು ತನ್ನ ಅಧೀನದಲ್ಲಿಯೇ ಇಟ್ಟು ಕೊಂಡು ರಾಣಿ ಅಲಮೇಲಮ್ಮಯ ಮೂಗುತಿ, ವಸ್ತ್ರಾಭರಣಕ್ಕಾಗಿ ರಾಣಿಯ ಮೇಲೆಯೇ ಸೈನ್ಯವನ್ನು ಕಳಿಸುತ್ತಾನೆ.

PC:RAVINDRA

ಕಾವೇರಿನದಿ

ಕಾವೇರಿನದಿ

ಈ ಪ್ರದೇಶವೆಲ್ಲಾ ಮರಳಿನಿಂದ ಮುಚ್ಚಿ ಹೋಗಲಿ ಎಂದು ಶಪಿಸುತ್ತ ಪವಿತ್ರವಾದ ನದಿ ಕಾವೇರಿಯಲ್ಲಿ ತನ್ನ ಒಡವೆಯ ಸಮೇತ ಬಿದ್ದು ಅಲುಮೇಲಮ್ಮ ತನ್ನ ಪ್ರಾಣವನ್ನು ತ್ಯಾಗ ಮಾಡುತ್ತಾಳೆ. ಅದಕ್ಕೆ ಇದನ್ನು ಕರ್ಸ್ ಆಪ್ ತಲಕಾಡು ಎಂದು ಕರೆಯುತ್ತಾರೆ.

PC:Dineshkannambadi

ಶಾಪ

ಶಾಪ

ಅಲುಮೇಲಮ್ಮ ತನ್ನ ಪ್ರಾಣ ಅರ್ಪಣೆ ಮಾಡುವ ಮೊದಲು ತಲಕಾಡು ಮರಳಾಗಿ, ಮಾಲಿಂಗಿ ಮಡುವಾಗಿ, ಮೈಸೂರು ಒಡೆಯರಿಗೆ ಮಕ್ಕಳಾಗದೆ ಹೋಗಲಿ ಎಂದು ಶಾಪ ನೀಡಿದಳು ಎಂದು ಇತಿಹಾಸವಿದೆ.

PC:Dineshkannambadi

30 ಕ್ಕಿಂತ ಹೆಚ್ಚು ದೇವಾಲಯಗಳು

30 ಕ್ಕಿಂತ ಹೆಚ್ಚು ದೇವಾಲಯಗಳು

ರಾಣಿ ಅಲುಮೇಲಮ್ಮ ಶಾಪಕ್ಕೆ 30 ಕ್ಕಿಂತ ಅಧಿಕವಾಗಿದ್ದ ದೇವಾಲಯಗಳೇಲ್ಲಾ ಮರಳಿನಲ್ಲಿ ಮುಚ್ಚಿ ಹೋಗಿದೆ. 16 ನೇ ಶತಮಾನದಿಂದ ಐತಿಹಾಸಿಕ ತಲಾಕಾಡು ಬರೀ ಮರುಳುಗಾಡಾಯಿತು. ಮೈಸೂರು ಅರಸರಿಗೆ ಮಕ್ಕಳಾಗದೇ ತೊಂದರೆ ಆಯಿತು.

PC:Dineshkannambadi

ಕೀರ್ತಿ ನಾರಾಯಣ ದೇವಾಲಯ

ಕೀರ್ತಿ ನಾರಾಯಣ ದೇವಾಲಯ

30 ದೇವಾಲಯಗಳು ಮರಳಿನಲ್ಲಿ ಅಡಗಿದೆ. ಆದರೆ ಕೀರ್ತಿ ನಾರಾಯಣ ದೇವಾಲಯ ಮಾತ್ರ ಯಶಸ್ವಿಯಾಗಿ ಉತ್ಖನನವಾಗಿದೆ. ಮರಳಿನ ಮೂಲಕ ತೆರೆದ ಅತ್ಯಂತ ಭವ್ಯವಾದ ದೇವಾಲಯ ವೈಧ್ಯನಾಥೇಶ್ವರ.

PC:Dineshkannambadi

ಸಮೀಪದ ಪ್ರಸಿದ್ಧವಾದ ಸ್ಥಳಗಳು

ಸಮೀಪದ ಪ್ರಸಿದ್ಧವಾದ ಸ್ಥಳಗಳು

ಕೀರ್ತಿ ನಾರಾಯಣ ದೇವಾಲಯ, ಮಲ್ಲಿಕಾರ್ಜುನ ದೇವಾಲಯ, ಅರಕೇಶ್ವರ ದೇವಾಲಯ, ವಿದ್ಯಾನಾಥೇಶ್ವರ ದೇವಾಲಯ, ಮರುಳೇಶ್ವರ ದೇವಾಲಯ ಇನ್ನೂ ಇತ್ಯಾದಿ.

PC:Dineshkannambadi

ಉತ್ತಮವಾದ ಸಮಯ

ಉತ್ತಮವಾದ ಸಮಯ

ತಲಕಾಡಿಗೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ಅದು ಬೇಸಿಗೆ ಕಾಲ ಏಪ್ರಿಲ್‍ನಿಂದ ಜುಲೈನವರೆಗೆ ಹಾಗೂ ಚಳಿಗಾಲ ನಂವೆಂಬರ್‍ನಿಂದ ಮಾರ್ಚ್‍ನವರೆಗೆ.

PC:Harijibhv

ರೈಲ್ವೆ ಮಾರ್ಗದ ಮೂಲಕ

ರೈಲ್ವೆ ಮಾರ್ಗದ ಮೂಲಕ

ತಲಕಾಡುವುಗೆ ರೈಲ್ವೆ ಮಾರ್ಗದ ಮೂಲಕ ತಲುಪಲು ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಮೈಸೂರು. ಮೈಸೂರಿಗೆ ಹಲವಾರು ರೈಲುಗಳು ಇದ್ದು ಸುಲಭವಾಗಿ ತಲುಪಬಹುದು.

PC:Harijibhv

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X