Search
  • Follow NativePlanet
Share
» »ಸಿಂಹವು ತನ್ನ ಬಾಲದಿಂದ ಶುಭ್ರಗೊಳಿಸುವ ಸ್ಥಳವಿದು!!

ಸಿಂಹವು ತನ್ನ ಬಾಲದಿಂದ ಶುಭ್ರಗೊಳಿಸುವ ಸ್ಥಳವಿದು!!

ಪ್ರಾಣಿ, ಪಕ್ಷಿಗಳಿಗೂ ನಮ್ಮ ಭಾರತದೇಶದಲ್ಲಿ ದೇವತೆಗಳ ಸ್ಥಾನವನ್ನು ನೀಡಿ ಗೌರವಿಸುತ್ತೇವೆ. ಅದೇ ರೀತಿ ಸಿಂಹವು ತನ್ನ ಬಾಲದಿಂದ ಒಂದು ಪವಿತ್ರವಾದ ಸ್ಥಳವನ್ನು ಶುಭ್ರಗೊಳಿಸುತ್ತಿತ್ತು ಎಂಬ ಹಲವಾರು ಅಜ್ಜಿ, ತಾತ ಕಥೆಯನ್ನು ಕೇಳಿದ್ದೇವೆ. ಅದರೆ ಆ ಸ್ಥಳಗಳು ಯಾವುವು ಎಂಬ ಮಾಹಿತಿ ಮಾತ್ರ ಸ್ಪಷ್ಟವಾಗಿ ತಿಳಿದಿಲ್ಲ. ಸಿಂಹ ತನ್ನ ಬಾಲದಿಂದ ಶುಚಿಗೊಳಿಸುತ್ತಿದ್ದ ಪವಿತ್ರ ಸ್ಥಳವಾದರೂ ಯಾವುದು ಎಂಬ ಪ್ರೆಶ್ನೆಗೆ ಉತ್ತರ ಲೇಖನದಲ್ಲಿ ತಿಳಿಸಲಾಗುವ ಸ್ಥಳವು ಅವುಗಳಲ್ಲಿ ಒಂದಾಗಿದೆ.

ಆ ಸ್ಥಳ ಯಾವುದೆಂದರೆ ದರ್ಗಾ. ಇದೇನಪ್ಪ ದರ್ಗಾನ ಎಂದು ಆಶ್ಚರ್ಯ ಪಡುತಿದ್ದೀರಾ? ಹಾಗಾದರೆ ಕೇಳಿ ಇದು ನಿಜ. ದರ್ಗಾ ಎಂದರೆ ಸಾಮಾನ್ಯವಾಗಿ ತಿಳಿದಿರುವ ವಿಚಾರವೆನೆಂದರೆ ಅದು ಸೂಫಿ ಸಮಾಧಿ. ಈ ಸ್ಥಳದಲ್ಲಿ ಅತ್ಯಂತ ಪ್ರಶಾಂತವಾದ ವಾತಾವರಣವಿರುತ್ತದೆ. ಹಾಗಾಗಿಯೇ ಸೂಫಿಗಳು ಇಲ್ಲಿ ಜೀವ ಸಮಾಧಿಗೊಂಡಿರುತ್ತಾರೆ. ಈ ದರ್ಗಾಗಳಿಗೆ ಕೇವಲ ಇಸ್ಲಾಂ ಧರ್ಮದವರೆ ಅಲ್ಲದೇ, ಹಿಂದೂಗಳು ಕೂಡ ಆಗಾಗ ಭೇಟಿ ನೀಡುತ್ತಿರುತ್ತಾರೆ.

ಹಾಗಾದರೆ ಆ ದರ್ಗಾದ ವಿಶೇಷತೆ ಏನು ಎಂಬ ಕುತೂಹಲ ಉಂಟಾಗುವುದು ಸಾಮಾನ್ಯ. ಪ್ರಸ್ತುತ ಲೇಖನದಲ್ಲಿ ಆ ದರ್ಗಾ ಎಲ್ಲಿದೆ? ಆ ದರ್ಗಾದ ಕುರಿತು ಸಂಕ್ಷೀಪ್ತವಾದ ಮಾಹಿತಿಯನ್ನು ಪಡೆಯೋಣ.

ಹಜ್ರತ್ ಜಹಾಂಗೀರ್ ಪಿರ್ ದರ್ಗಾ

ಹಜ್ರತ್ ಜಹಾಂಗೀರ್ ಪಿರ್ ದರ್ಗಾ

ಆ ಪವಿತ್ರವಾದ ದರ್ಗಾ ಯಾವುದು ಗೊತ್ತ? ಅದೇ ಹಜ್ರತ್ ಜಹಾಂಗೀರ್ ಪೀರ್ ದರ್ಗಾ. ಇದು ಮೆಹಬೂಬ್ ನಗರದ ಕೊತ್ತೂರ್ ಮಂಡಲದ ಒಂದು ಗ್ರಾಮದಲ್ಲಿದೆ. ಈ ದರ್ಗಾ ಕೇವಲ ಜಿಲ್ಲೆಯಲ್ಲಿಯೇ ಅಲ್ಲದೇ ಪಕ್ಕದ ತೆಲಂಗಾಣ ರಾಜ್ಯದಲ್ಲಿಯೂ ಕೂಡ ಅತ್ಯಂತ ಪ್ರಸಿದ್ಧವಾದುದು.

pc: Naidugari Jayanna

2 ಸಮಾಧಿಗಳು

2 ಸಮಾಧಿಗಳು

ಸುಮಾರು 700 ವರ್ಷಗಳ ಹಿಂದೆ ಬಾಗ್ಧಾದ್‍ನಿಂದ ಗೌಸ್ ಮೊಹಿನೊದ್ದೀನ್, ಬುರಾನೋದ್ದೀನ್ ಎಂಬ ಇಬ್ಬರು ದೊಡ್ಡ ಗುರುಗಳು ಇದ್ದರು. ಅವರು ದೇಶ ಸಂಚಾರ ಮಾಡಿ ಈ ಸ್ಥಳಕ್ಕೆ ಬಂದು ಕೆಲವು ಕಾಲದ ನಂತರ ಮರಣ ಹೊಂದಿದರು. ಅವರ ಇಬ್ಬರ ಸಮಾಧಿಗಳನ್ನೇ ಜಹಾಂಗೀರ್ ಪಿರ್ ದರ್ಗಾ ಎಂಬ ಹೆಸರಿನಿಂದ ಹೆಸರುವಾಸಿಯಾಯಿತು. 400 ವರ್ಷಗಳ ಹಿಂದೆ ಗೋಲ್ಕಂಡ ಕೋಟೆಯ ಮೇಲೆ ವಿಜಯ ಸಾಧಿಸಿದ ನಂತರ ಈ ದರ್ಗಾಕ್ಕೆ ಭೇಟಿ ನೀಡಿ ಪೂಜೆಗಳನ್ನು ಮಾಡುತ್ತಿದ್ದರು ಎಂದು ಪ್ರತೀತಿ.

pc: Imam Hussain


ಸಂರಕ್ಷಣಾ ಭಾದ್ಯತೆ

ಸಂರಕ್ಷಣಾ ಭಾದ್ಯತೆ

ದರ್ಗಾದ ನಿರ್ವಹಣೆ ಮಾಡುವುದಕ್ಕೆ ಜಹಾಂಗೀರ್ ಪಿರ್ ದರ್ಗಾನ ಸಿಪಾಯಿಯಲ್ಲಿ ಒಬ್ಬನಾದ ಸಯ್ಯದ್ ಇಬ್ರಾಹಿಂ ಅಲಿಯನ್ನು ದರ್ಗಾ ಸಂರಕ್ಷನಾಗಿ ನೇಮಿಸಿದನು. 1948 ರವರೆವಿಗೂ ಇಬ್ರಾಹಿಂ ಅಲಿ ವಾರಸುದಾರರು ಸಂರಕ್ಷಿಸುತ್ತಿದ್ದರು.

pc: Imam Hussain

ಜಾನಪದ ಕಥೆಗಳು

ಜಾನಪದ ಕಥೆಗಳು

ಈ ದರ್ಗಾ ಪ್ರದೇಶದ ಮೊದಲು ದಡ್ಡವಾದ ಅರಣ್ಯವಿತ್ತಂತೆ. ರಾತ್ರಿಯ ಸಮಯದಲ್ಲಿ ದರ್ಗಾ ದಾರಿಯಲ್ಲಿ ಯಾರು ಕೂಡ ಸಂಚಾರ ಮಾಡುತ್ತಿರಲಿಲ್ಲ. ಸಮೀಪದಲ್ಲಿ ಸಿಂಹಗಳು ಮಾತ್ರ ಸಂಚಾರ ಮಾಡುತ್ತಿದ್ದವಂತೆ. ಬೆಳಗಿನ ಜಾವದ ಸಮಯ ಅಗುವ ಮುಂಚೆಯೇ ದರ್ಗಾವನ್ನು ಶುಭ್ರಗೊಳಿಸುತ್ತಿದ್ದವಂತೆ ಎಂಬುದು ಒಂದು ಜಾನಪದ ಕಥೆಯಾಗಿದೆ.

pc: Lauren Elyse Lynskey

ಉತ್ಸವಗಳು

ಉತ್ಸವಗಳು

ಪ್ರತಿ ವರ್ಷದ ಮಕರ ಸಂಕ್ರಾಂತಿಯ ದಿನದಂದು 3 ದಿನಗಳ ಕಾಲ ದರ್ಗಾದಲ್ಲಿ ಉತ್ಸವಗಳು ನಡೆಯುತ್ತವೆ. ಹಾಗಾಗಿ ಇಲ್ಲಿ ಹಲವಾರು ಭಕ್ತರು ಭಾಗವಹಿಸುತ್ತಾರೆ. ಈ ಉತ್ಸವಕ್ಕೆ ರಾಜ್ಯದಲ್ಲಿನ ಎಲ್ಲಾ ಮುಸ್ಲಿಂ ಭಾಂದವರು ಕೂಡ ಭಾಗವಹಿಸುತ್ತಾರೆ. ಕೇವಲ ದೇಶದವರೆ ಅಲ್ಲದೇ ವಿದೇಶಿಯರು ಕೂಡ ಭೇಟಿ ಮಾಡುತ್ತಾರೆ. ಮುಖ್ಯವಾಗಿ ಅರಬ್ ದೇಶದಲ್ಲಿನ ಮುಸ್ಲಿಂರು.

pc: Telangna in Kuwait

ಹಿಂದುಗಳ ನಂಬಿಕೆ

ಹಿಂದುಗಳ ನಂಬಿಕೆ

ದರ್ಗಾ ಸ್ಥಾನದಲ್ಲಿ ಪೂರ್ವ ಕಾಲದಲ್ಲಿ ನರಸಿಂಹ ಸ್ವಾಮಿ ದೇವಾಲಯವಿತ್ತು ಎಂದು ಹಿಂದೂಗಳು ಭಾವಿಸುತ್ತಾರೆ. ಆ ವಿಶ್ವಾಸದಿಂದಾಗಿಯೇ ಈ ದರ್ಗಾಗೆ ಹಿಂದೂಗಳು ಕೂಡ ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

pc: Dargah Awlia

ಐಕ್ಯಮತ್ಯ

ಐಕ್ಯಮತ್ಯ

ಈ ದರ್ಗಾ ಧರ್ಮದ ಐಕ್ಯಮತ್ಯಕ್ಕೆ ಒಂದು ದೊಡ್ಡ ಪ್ರತೀಕವಾಗಿದೆ. ಇಲ್ಲಿಗೆ ಮುಸ್ಲಿಂರು, ಹಿಂದೂಗಳ ಜೊತೆ ಜೊತೆಗೆ ಸಿಕ್ಕರು ಕೂಡ ಭೇಟಿ ನೀಡುವ ಪುಣ್ಯ ಸ್ಥಳವಾಗಿದೆ. ಸಮೀಪ ಪ್ರಾಂತ್ಯದಲ್ಲಿನ ಲಂಬಾಡ ಕುಟುಂಬಿಕರು ಕೂಡ ಪ್ರತ್ಯೇಕವಾಗಿ ಹೋಗುತ್ತಾರೆ.

pc: Shahnoor Habib

ಬೆಂಗಳೂರಿನಿಂದ

ಬೆಂಗಳೂರಿನಿಂದ

ಈ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಬಯಸುವವರು ಮೊದಲು ಬೆಂಗಳೂರಿನಿಂದ ಹೈದ್ರಾಬಾದ್‍ಗೆ ತೆರಳಬೇಕು. ಅಲ್ಲಿಂದ ಕೇವಲ 45 ಕಿ.ಮೀ ದೂರದಲ್ಲಿ ಈ ದರ್ಗಾ ಇದೆ. ಇಲ್ಲಿ ಸರ್ಕಾರಿ ಬಸ್ಸುಗಳ ವ್ಯವಸ್ಥೆ ಇದೆ. ಮುಖ್ಯವಾಗಿ ಪ್ರತಿ ಭಾನುವಾರ ಹಾಗು ಗುರುವಾರದ ದಿನದಂದು ಪ್ರತ್ಯೇಕವಾದ ಬಸ್ಸುಗಳ ಸೌಲಭ್ಯವಿರುತ್ತದೆ. ಹಾಗೆಯೇ ಆಟೋಗಳು, ಜೀಪ್‍ಗಳಲ್ಲಿಯೂ ಕೂಡ ತೆರಳಬಹುದಾಗಿದೆ.

ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more